Homeಕರ್ನಾಟಕಪ್ರಾಣ ಹೋದರೂ ಭೂಮಿ ಬಿಡೆವು: ಸಂಕ್ರಾಂತಿಯಂದು ಗೋವುಗಳೊಂದಿಗೆ ಬೀದಿಗಿಳಿದ ಬೆಂಗಳೂರು ರೈತರು

ಪ್ರಾಣ ಹೋದರೂ ಭೂಮಿ ಬಿಡೆವು: ಸಂಕ್ರಾಂತಿಯಂದು ಗೋವುಗಳೊಂದಿಗೆ ಬೀದಿಗಿಳಿದ ಬೆಂಗಳೂರು ರೈತರು

- Advertisement -
- Advertisement -

ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಸುತ್ತಮುತ್ತಲ 17 ಗ್ರಾಮಗಳ ರೈತರು, ದಲಿತರು, ಹಿಂದುಳಿದ ವರ್ಗಗಳ ಜನರಿಗೆ ಸೇರಿದ ಭೂಮಿ ಹಾಗೂ ಮನೆಗಳನ್ನು ಹಳೆ ಭೂಸ್ವಾಧೀನ ಕಾಯ್ದೆ ಅಡಿಯಲ್ಲಿ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಪೂರ್ಣಕುಂಭ ಕಳಶ ಹಾಗೂ ಗೋವುಗಳೊಂದಿಗೆ ಬೀದಿಗಿಳಿದು ಆಕ್ರೋಶ ಹೊರಹಾಕಿದ್ದಾರೆ.

“ಯಾವುದೇ ಜನಪ್ರತಿನಿಧಿಗಳು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ” ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. 17 ಗ್ರಾಮಗಳ ಮಹಿಳೆಯರು ಪೂರ್ಣಕುಂಭ ಕಳಶಗಳೊಂದಿಗೆ ಪ್ರತಿಭಟನೆಗೆ ಆಗಮಿಸಿದ್ದರು. ಗೋವುಗಳನ್ನು ಅಲಂಕರಿಸಿಕೊಂಡು ರಾಮಗೊಂಡನಹಳ್ಳಿಯಿಂದ ಬಿಡಿಎ ಕಚೇರಿಯವರೆಗೆ ಗೋವುಗಳ ಬೃಹತ್‌ ಜಾಥಾ ನಡೆಸಲಾಯಿತು.

ಮುಖಂಡರಾದ ರಮೇಶ್ ರಾಮಗೊಂಡನಹಳ್ಳಿ ಮಾತನಾಡಿ, “ಮುಖ್ಯಮಂತ್ರಿ, ಪ್ರಧಾನಮಂತ್ರಿ, ಕೇಂದ್ರ ಸಚಿವರು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯವರು, ಸ್ಥಳೀಯ ರಾಜಕಾರಣಿಗಳು- ಎಲ್ಲರಿಗೂ ಮನವಿಯನ್ನು ಸಲ್ಲಿಸಿದ್ದೇವೆ. ನಮ್ಮ ಮನವಿಗೆ ಜನಪ್ರತಿನಿಧಿಗಳು ಕಿವಿಗೊಡುತ್ತಿಲ್ಲ. ನಮ್ಮ ಭೂಮಿಯನ್ನು ಆಕ್ರಮಿಸಲು ಮುಂದಾಗಿರುವುದನ್ನು ಖಂಡಿಸಿ ಸಂಕ್ರಾಂತಿ ದಿನದಂದು ಬೀದಿಗೆ ಇಳಿದಿದ್ದೇವೆ” ಎಂದಿದ್ದಾರೆ.

“ಗೋರಕ್ಷಕ ಸರ್ಕಾರ ಎನ್ನುವ ಬಿಜೆಪಿಯ ವಿರುದ್ಧ ಹೋರಾಡುತ್ತಿದ್ದೇವೆ. ನಾವೇನು ಪಾಕಿಸ್ತಾನಿಗಳಾ? ನಾವು ಹಿಂದೂಗಳಲ್ಲವಾ? ನಮ್ಮ ಗೋವುಗಳನ್ನು ರಕ್ಷಿಸಬಾರದಾ? ನಮಗೆ ಹೈನುಗಾರಿಕೆ ಮತ್ತು ಬೇರ್‍ಯಾವುದೇ ಉದ್ಯೋಗ ಗೊತ್ತಿಲ್ಲ. ಹೀಗಿರುವ ನಮ್ಮ ಜಾಗವನ್ನು ಆಕ್ರಮಿಸಿಕೊಳ್ಳಲು ಬಿಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

“ನಮ್ಮ ರೈತರ ಜೊತೆಗೆ ಚರ್ಚೆ ಮಾಡಬೇಕು. ಯೋಜನೆ ಮಾಡಲೇಬೇಕಾದರೆ 2013ರ ಕಾಯ್ದೆಯ ಪ್ರಕಾರ ನಮಗೆ ಪುನರ್‌ವಸತಿ ಕಲ್ಪಿಸಬೇಕು. ಬದಲಿ ಭೂಮಿಯನ್ನು ನೀಡಬೇಕು. ಇಲ್ಲವಾದರೆ ನಮ್ಮ ಪ್ರಾಣಹೋದರೂ  ನಮ್ಮ ಭೂಮಿಯನ್ನು ಬಿಟ್ಟುಕೊಡುವುದಿಲ್ಲ” ಎಂದು ಎಚ್ಚರಿಸಿದರು.

ಏನಿದು ವಿವಾದ?

17 ಗ್ರಾಮಗಳ ಸುಮಾರು 2,000ಕ್ಕೂ ಹೆಚ್ಚು ಕುಟುಂಬಗಳು ಇರುವ ತುಂಡು ಭೂಮಿಯನ್ನು ನಂಬಿಕೊಂಡು ಕೃಷಿ ಮಾಡಿ ಜೀವನ ಕಟ್ಟಿಕೊಂಡಿದ್ದಾರೆ. ಸಣ್ಣ ಪುಟ್ಟ ಮನೆಗಳನ್ನು ನಿರ್ಮಿಸಿಕೊಂಡು, ಹೈನುಗಾರಿಕೆ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಭೂ ಸ್ವಾಧೀನ ಹೆಸರಿನಲ್ಲಿ ನಮ್ಮನ್ನು ಒಕ್ಕಲೆಬ್ಬಿಸಿ ತಬ್ಬಲಿಗಳಾಗಿ ಮಾಡಬೇಡಿ, ಬೀದಿಪಾಲು ಮಾಡಬೇಡಿ ಎಂದು ಕಳೆದ 3 ವರ್ಷಗಳಿಂದಲೂ ಇಲ್ಲಿನ ನಿವಾಸಿಗಳು ಹೋರಾಟ ನಡೆಯುತ್ತಿದೆ.

ಬೆಂಗಳೂರು ಅಭಿವೃದ್ದಿಯ ಹೆಸರು ಹೇಳಿ ಇರುವ ಮನೆಗಳನ್ನು ಹೊಡೆದುಹಾಕಿ ಲೇಔಟ್ ನಿರ್ಮಾಣ ಮಾಡಿ ಇನ್ನೊಬ್ಬರಿಗೆ ಸೈಟ್‌ ಕೊಡುವಂತಹದ್ದು ಯಾವ ನ್ಯಾಯ? ನಮ್ಮನ್ನು ನಮ್ಮ ಮೂಲಸ್ಥಳದಿಂದ ದಯವಿಟ್ಟು ಒಕ್ಕಲೆಬ್ಬಿಸಬೇಡಿ ಎಂದು ಜನರು ಬೇಡಿಕೊಂಡರೂ ಸರ್ಕಾರ ಅವರ ಗೋಳು ಕೇಳಲು ಸಿದ್ದವಿಲ್ಲ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.

ಕೆ.ಶಿವರಾಮ ಕಾರಂತ ಬಡಾವಣೆಯನ್ನು ಅಭಿವೃದ್ಧಿಪಡಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA)ವು ಡಿಸೆಂಬರ್ 30, 2008ರಲ್ಲಿ ಹೊರಡಿಸಲಾಗಿದ್ದ ಪೂರ್ವಭಾವಿ ಅಧಿಸೂಚನೆಯ ಅವಧಿ ಮುಗಿದಿದ್ದರೂ ಅದನ್ನೇ ಮುಂದುಮಾಡಿ LAA 1894ರ ಅಡಿಯಲ್ಲಿ 3546 ಎಕರೆ ಮತ್ತು 12 ಗುಂಟೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಆದರೆ ಭೂಮಿಯನ್ನು ಕಳೆದುಕೊಂಡವರಿಗೆ, ʼಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕ ಮತ್ತು ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ- 2013ʼ (LARR 2013)ರ ಅನ್ವಯ ಪರಿಹಾರವನ್ನು ಒದಗಿಸಬೇಕು ಎಂದು ದಿನಾಂಕ 03.11.2022 ರಂದು ತನ್ನ ತೀರ್ಪಿತ್ತು ಸರ್ವೋಚ್ಛ ನ್ಯಾಯಲಯವು ಭೂಮಿಯನ್ನು ಕಳೆದುಕೊಳ್ಳುವವರ ಹಕ್ಕುಗಳನ್ನು ಎತ್ತಿಹಿಡಿದಿದೆ. ಆ ಪ್ರಕಾರ LARR 2013ಯು ಜಾರಿಗೆ ಬಂದ ನಂತರ  LAA 1894 ಅನ್ನು ಅನ್ವಯಿಸಲಾಗುವುದಿಲ್ಲ. ಆದರೂ ಹಳೆಯ ಕ್ರೂರ ಮತ್ತು ಶೋಷಣೆಯ ಪ್ರತೀಕವಾಗಿರುವ, ವಸಾಹತುಶಾಹಿ ಪಳೆಯುಳಿಕೆ ಭೂಸ್ವಾಧೀನ ಕಾಯಿದೆ- 1894ರಡಿಯಲ್ಲಿ ಭೂಮಿ ವಶಪಡಿಸಿಕೊಂಡು ನಮ್ಮನ್ನು ಬೀದಿಗೆ ತಳ್ಳಲಾಗುತ್ತಿದೆ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಸದರಿ ಲೇಔಟ್‌ ನಿರ್ಮಾಣಕ್ಕೆ ತೀರ ಅಗತ್ಯವಿದಲ್ಲಿ ಮಾತ್ರವೇ ನಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕು ಮತ್ತು ಈ ಪ್ರಕ್ರಿಯೆಯು LARR 2013 ಕಾಯ್ದೆಯಡಿಯಲ್ಲಿ ಉಲ್ಲೇಖಿಸಲಾಗಿರುವ ಕಾರ್ಯವಿಧಾನಗಳನ್ನು ಅನುಸರಿಸಿಯೇ ಭೂಸ್ವಾಧೀನ ಪಡಿಸಿಕೊಳ್ಳಬೇಕೆಂಬ ಮನವಿಯನ್ನು ರಾಜ್ಯ ಸರ್ಕಾರದ ಬಳಿ ಸಲ್ಲಿಸುತ್ತಲೇ ಬಂದಿದ್ದೇವೆ. ಆಶ್ಚರ್ಯವೆಂಬಂತೆ ಹಾಗೂ ಗೊಂದಲಕಾರಿಯಾಗಿ BDA ಯು ದಿನಾಂಕ 30.10.2018 ರಂದು LARR 2013ರ ನಿಬಂಧನೆಗಳಡಿ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆಯನ್ನು ಹೊರಡಿಸಿತು. ಆದರೂ ನ್ಯಾಯಮೂರ್ತಿ ಅಬ್ದುಲ್ ನಜೀರ್ ನೇತೃತ್ವದ ಸರ್ವೋಚ್ಛ ನ್ಯಾಯಾಲಯದ ಪೀಠವು ದಿನಾಂಕ 03.12.2020ರಂದು ನೀಡಿದ ಆದೇಶದ ಮೂಲಕ ಭೂಮಿಯ ಡಿನೋಟಿಫಿಕೇಶನ್‌ಗಾಗಿ ಅರ್ಜಿಗಳನ್ನು ಪರಿಗಣಿಸಲು ನ್ಯಾಯಮೂರ್ತಿ ಚಂದ್ರಶೇಖರ್ ಸಮಿತಿಯನ್ನು ಸ್ಥಾಪಿಸಿತು ಮಾತ್ರವಲ್ಲ ವಸಾಹತುಶಾಹಿ ಕಾಲದ LAA 1894ರ ಪ್ರಕಾರವೇ ಪರಿಹಾರ ನೀಡಬೇಕೆಂದು ತೀರ್ಪಿತ್ತಿತು. ಸರ್ವೋಚ್ಛ ನ್ಯಾಯಾಲದ ಈ ಪೀಠವು ನಮ್ಮ ಮನವಿಯನ್ನು ಆಲಿಸದೆಯೇ ಇಂದಿಗೂ ವಿವಿಧ ಆದೇಶಗಳನ್ನು ನೀಡುತ್ತಲಿದೆ. ಯಾವ ಕಾರಣಕ್ಕೆ ಹೀಗೆ ಎಂದು ನಾವು ಅರಿಯಲು ಸಾಧ್ಯವಾಗುತ್ತಿಲ್ಲವಾದರೂ, ಇದರರ್ಥ LARR, 2013ರ ಅಡಿಯಲ್ಲಿ ನಾವು ಪರಿಹಾರವನ್ನು ಪಡೆದುಕೊಳ್ಳುವ ನಮ್ಮ ಕಾನೂನಾತ್ಮಕ ಹಕ್ಕನ್ನು ವ್ಯವಸ್ಥಿತವಾಗಿ ನಿರಾಕರಿಸಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಮಹಾನದಿ ಕೋಲ್‌ ಫೀಲ್ಡ್ಸ್‌ ಪ್ರಕರಣದಲ್ಲಿ ಅಂದಿನ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ನೇತೃತ್ವದ ಸರ್ವೋಚ್ಛ ನ್ಯಾಯಾಲಯದ ತ್ರಿಸದಸ್ಯ ಪೀಠ ನೀಡಿದ ತೀರ್ಪೇ ದೇಶದ ಕಾನೂನು. ಇದರನ್ವಯ ಸದರಿ ಪ್ರಕರಣ ಸೇರಿದಂತೆ, ಭೂಸ್ವಾಧೀನ ಪ್ರಕರಣಗಳೆಲ್ಲವುಗಳಲ್ಲಿಯೂ ಭೂಮಿ ಕಳೆದುಕೊಳ್ಳುವವರ ಹಿತಾಸಕ್ತಿಗಳನ್ನೂ – ಹಕ್ಕುಗಳನ್ನೂ ರಕ್ಷಿಸಲಾಗಿದೆ ಎಂಬುದನ್ನು ಕರ್ನಾಟಕ ರಾಜ್ಯ ಸರ್ಕಾರವು ಖಚಿತಪಡಿಸಿಕೊಳ್ಳಬೇಕಿದೆ. ಹಾಗಾಗಿ  ಸದ್ಯ ಚಾಲ್ತಿಯಲ್ಲಿರುವ ಆದೇಶಗಳ ತುರ್ತು ಮರು-ಪರಿಶೀಲನೆಗೆ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಬೇಕೆಂದು ಕೂಡ ನಾವು ಒತ್ತಾಯಿಸುತ್ತೇವೆ ಎಂದು ನಿವಾಸಿಗಳು ಮನವಿ ಮಾಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...