Homeರಂಜನೆಕ್ರೀಡೆಅತಿಹೆಚ್ಚು ರನ್‌ಗಳ ಅಂತರದಲ್ಲಿ ಗೆದ್ದು ಏಕದಿನ ಪಂದ್ಯದಲ್ಲಿ ಇತಿಹಾಸ ಬರೆದ ಭಾರತ

ಅತಿಹೆಚ್ಚು ರನ್‌ಗಳ ಅಂತರದಲ್ಲಿ ಗೆದ್ದು ಏಕದಿನ ಪಂದ್ಯದಲ್ಲಿ ಇತಿಹಾಸ ಬರೆದ ಭಾರತ

- Advertisement -
- Advertisement -

ತಿರುವನಂತಪುರಂನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಬೃಹತ್ ಅಂತರದಿಂದ ಗೆಲುವು ಪಡೆದ ಭಾರತ ತಂಡವು ಏಕದಿನ ಪಂದ್ಯದಲ್ಲಿ ಇತಿಹಾಸ ಬರೆದಿದೆ.

317ರನ್‌ಗಳ ಅಂತರದಿಂದ ಗೆದ್ದು ಅತಿ ಹೆಚ್ಚು ರನ್‌ಗಳ ಅಂತರದಿಂದ ವಿಜಯ ಸಾಧಿಸಿದ ಮೊದಲ ತಂಡವೆಂಬ ಕೀರ್ತಿಗೆ ಭಾರತ ಪಾತ್ರವಾಗಿದೆ. 50 ಓವರ್‌ಗಳಲ್ಲಿ 390 ರನ್‌ ಗಳಿಸಿ 391 ರನ್‌ಗಳ ಟಾರ್ಗೆಟ್ ನೀಡಿದ್ದ ಭಾರತ, ಶ್ರೀಲಂಕಾವನ್ನು 22 ಓವರ್‌ಗಳಲ್ಲಿ 73 ರನ್‌ಗಳಿಗೆ ಆಲ್‌ಔಟ್ ಮಾಡುವ ಮೂಲಕ ಗೆಲುವು ಪಡೆಯಿತು. ಜೊತೆಗೆ 3-0 ಅಂತರದಿಂದ ಸರಣಿಯನ್ನು ಗೆದ್ದುಕೊಂಡಿತು.

2008ರಲ್ಲಿ ನ್ಯೂಜಿಲಾಂಡ್ ತಂಡವು ಐರ್ಲೆಂಡ್ ವಿರುದ್ಧ 290ರನ್‌ಗಳ ಅಂತರದಿಂದ ಗೆದ್ದದ್ದು ಈವರೆಗಿನ ಅತಿ ಹೆಚ್ಚು ಅಂತರದ ಗೆಲುವಿನ ಸಾಧನೆಯಾಗಿತ್ತು. ಆಫಘಾನಿಸ್ತಾನದ ವಿರುದ್ಧ ಆಸ್ಟ್ರೆಲಿಯಾ 275 ರನ್‌ಗಳ ಅಂತರದಿಂದ 2015ರಲ್ಲಿ ಗೆದ್ದಿತ್ತು.

ಭಾರತ ತಂಡದ ಪರವಾಗಿ ಹತ್ತು ಓವರ್‌ ಬೌಲಿಂಗ್ ಮಾಡಿದ ಮೊಹಮ್ಮದ್ ಸಿರಾಜ್ 32 ರನ್ ನೀಡಿ 4 ವಿಕೆಟ್ ಕಬಳಿಸಿದರು. ಐದು ಓವರ್‌ ಬೌಲಿಂಗ್ ಮಾಡಿದ ಕುಲದೀಪ್ ಯಾದವ್ 16 ರನ್‌ ನೀಡಿ 2 ವಿಕೆಟ್ ಪಡೆದರು. ಮೊಹಮ್ಮದ್ ಶಮಿ 6 ಓವರ್‌ ಎಸೆದು 20 ರನ್‌ ನೀಡಿ 2 ವಿಕೆಟ್ ಗಳಿಸಿದರು.

ಅತಿ ಹೆಚ್ಚು ಅಂತರದಿಂದ ಗೆದ್ದ ತಂಡಗಳ ವಿವರ

ದಾಖಲೆ ಬರೆದ ಕೊಹ್ಲಿ

ಸ್ವದೇಶದಲ್ಲಿ ಅತಿ ಹೆಚ್ಚು ಏಕದಿನ ಶತಕ ಬಾರಿಸಿದ ಸಚಿನ್‌ ತೆಂಡೂಲ್ಕರ್‌ರವರ ದಾಖಲೆಯನ್ನು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮುರಿದಿದ್ದಾರೆ. ತಿರುವನಂತಪುರಂನಲ್ಲಿ ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 85 ಎಸೆತಗಳಲ್ಲಿ ಶತಕ ಪೂರೈಸಿದ ವಿರಾಟ್ ಕೊಹ್ಲಿ ಭಾರತದ ನೆಲದಲ್ಲಿ 21ನೇ ಏಕದಿನ ಶತಕ ಸಿಡಿಸುವ ಮೂಲಕ ವಿಶ್ವದಾಖಲೆಗೆ ಪಾತ್ರರಾದರು.

ಸಚಿನ್ ತೆಂಡೂಲ್ಕರ್ ಭಾರತದಲ್ಲಿ ಆಡಿದ 164 ಪಂದ್ಯಗಳಲ್ಲಿ 20 ಶತಕಗಳನ್ನು ಬಾರಿಸಿದರೆ, ವಿರಾಟ್ ಕೊಹ್ಲಿ 104 ಪಂದ್ಯಗಳಲ್ಲಿ 21 ಶತಕ ಬಾರಿಸಿದ್ದಾರೆ.

ಅಲ್ಲದೆ ತಂಡವೊಂದರ ವಿರುದ್ಧ ಅತಿ ಹೆಚ್ಚು ಶತಕ ಗಳಿಸಿದ ವಿಶ್ವದಾಖಲೆ ಸಹ ಕೊಹ್ಲಿ ಪಾಲಾಯಿತು. ಸಚಿನ್ ಮತ್ತು ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಲಾ 9 ಶತಕ ಸಿಡಿಸಿದ್ದರೆ, ಇಂದಿನ ಪಂದ್ಯದಲ್ಲಿನ ಶತಕದ ಮೂಲಕ ಕೊಹ್ಲಿ ಶ್ರೀಲಂಕಾ ತಂಡದ ವಿರುದ್ಧ 10 ಶತಕಗಳನ್ನು ಸಿಡಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಶ್ರೀಲಂಕಾ ವಿರುದ್ಧ 8 ಶತಕಗಳನ್ನು ಬಾರಿಸಿದ್ದಾರೆ.

ಒಟ್ಟಾರೆ ಏಕದಿನ ಶತಕಗಳಲ್ಲಿ ಸಚಿನ್ 49 ಶತಕ ಬಾರಿಸಿದರೆ ಕೊಹ್ಲಿ 46 ಶತಕಗಳನ್ನು ಬಾರಿಸಿ 2ನೇ ಸ್ಥಾನದಲ್ಲಿದ್ದಾರೆ.

ಕೊಹ್ಲಿ ಮೂರು ಪಂದ್ಯಗಳ ಈ ಸರಣಿಯಲ್ಲಿ ಎರಡನೇ ಶತಕ ಗಳಿಸಿದ್ದಾರೆ. ಅಲ್ಲದೆ ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರನೇ ಶತಕ ಇದಾಗಿದೆ. ಈ ಪಂದ್ಯದಲ್ಲಿ ಅಜೇಯರಾಗಿ ಉಳಿದ ಕೊಹ್ಲಿ 110 ಬಾಲ್‌ಗಳಲ್ಲಿ 166 ರನ್ ಸಿಡಿಸಿದರು. ಅವರ ಬ್ಯಾಟ್ ಮೂಲಕ 13 ಫೋರ್‌, 8 ಸಿಕ್ಸ್‌ ಮೂಡಿಬಂದವು.

ಶುಭ್‌ಮನ್‌ ಗಿಲ್ ಶತಕ

ಮೊದಲ ಬ್ಯಾಟ್ ಮಾಡಿದ ಭಾರತಕ್ಕೆ ಆರಂಭಿಕ ಆಟಗಾರರು ಭದ್ರಬುನಾದಿ ಹಾಕಿಕೊಟ್ಟರು. 49 ಬಾಲ್‌ಗಳಲ್ಲಿ 42 ರನ್‌ಗಳನ್ನು (2 ಫೋರ್‌, 3 ಸಿಕ್ಸ್‌) ಕ್ಯಾಪ್ಟನ್‌ ರೋಹಿತ್‌ ಶರ್ಮ ಗಳಿಸಿದರೆ, ಆರಂಭಿಕ ಆಟಗಾರ ಶುಭಮನ್‌ ಗಿಲ್‌ ಶತಕ ಸಿಡಿಸಿದರು. 97 ಎಸೆಗಳಲ್ಲಿ 116 ರನ್‌ ಗಳಿಸಿದ ಗಿಲ್‌, 14 ಫೋರ್‌, 2 ಸಿಕ್ಸ್‌ ಭಾರಿಸಿದರು. ಆ ನಂತರ ಬಂದ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್‌ (38 ರನ್‌, 32 ಬಾಲ್‌, 2 ಫೋರ್‌, 1 ಸಿಕ್ಸ್‌) ತಂಡ ಉತ್ತಮ ಮೊತ್ತ ಗಳಿಸಲು ಕಾರಣವಾದರು. ಕೆ.ಎಲ್‌.ರಾಹು‌ಲ್ 7 ರನ್‌, ಸೂರ್ಯಕುಮಾರ್‌ ಯಾದವ್‌ 4 ರನ್‌, ಅಕ್ಸರ್ ಪಟೇಲ್‌ ಅಜೇಯ 2 ರನ್‌ ಗಳಿಸಿದರು. ಅಂತಿಮವಾಗಿ ಭಾರತ ಐದು ವಿಕೆಟ್ ನಷ್ಟಕ್ಕೆ 390 ರನ್‌ ಗಳಿಸಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...