Homeಮುಖಪುಟಮೋದಿ ಸರ್ಕಾರ ಭಾರತದ ಬಹುತ್ವವನ್ನು ಧ್ವಂಸಗೊಳಿಸುತ್ತಿದೆ: ಅಮರ್ತ್ಯ ಸೇನ್

ಮೋದಿ ಸರ್ಕಾರ ಭಾರತದ ಬಹುತ್ವವನ್ನು ಧ್ವಂಸಗೊಳಿಸುತ್ತಿದೆ: ಅಮರ್ತ್ಯ ಸೇನ್

- Advertisement -
- Advertisement -

1999 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಿಂದ ‘ಭಾರತ ರತ್ನ’ ಪ್ರಶಸ್ತಿ ಪಡೆದ ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಅವರು, “ಕೇಂದ್ರ ಸರ್ಕಾರವು ವಿಶ್ವದ ಅತ್ಯಂತ ಭಯಾನಕವಾಗಿದೆ.ಮೋದಿ ಸರ್ಕಾರ ಭಾರತದ ಬಹುತ್ವವನ್ನು ಧ್ವಂಸಗೊಳಿಸುತ್ತಿದೆ” ಎಂದು ಮೋದಿ ಸರ್ಕಾರದ ದುರಾಡಳಿತದ ಬಗ್ಗೆ ‘ದಿ ವೈರ್‌’ಗಾಗಿ ಕರಣ್ ಥಾಪರ್‌ ನಡೆಸಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಸಂದರ್ಶನದಲ್ಲಿ ಅಮರ್ತ್ಯ ಸೇನ್ ಅವರು, “ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಜನರನ್ನು ತುಂಬಾ ಅಸಹ್ಯಕರ ರೀತಿಯಲ್ಲಿ ನಡೆಸಿಕೊಳ್ಳುತ್ತದೆ. ಈ ಭಾರತ ಸರ್ಕಾರದ ದಾಖಲೆಯು ನಿಜವಾಗಿಯೂ ಭಯಾನಕವಾಗಿದೆ” ಎಂದರು.

“ಮೋದಿ ಸರ್ಕಾರವು ಮುಸ್ಲಿಮರನ್ನು ಕೆಟ್ಟ ರೀತಿಯಲ್ಲಿ ನಡೆಸಿಕೊಳ್ಳುತ್ತಿದೆ ಮತ್ತು ಸಂಸತ್ತಿನ ಎರಡೂ ಸದನಗಳಲ್ಲಿ ಯಾವುದೇ ಮುಸ್ಲಿಂ ಸಂಸದರನ್ನು ಹೊಂದಿಲ್ಲದಿರುವುದು ಸ್ವೀಕಾರಾರ್ಹವಲ್ಲದ ಅನಾಗರಿಕವಾಗಿರುವಂತಹದ್ದು. ಅನಾಗರಿಕ ಪದವು ನನ್ನ ನಾಲಿಗೆಗೆ ಬರುತ್ತದೆ ಏಕೆಂದರೆ ಅದು ಕೇವಲ ಅನ್ಯಾಯ ಮತ್ತು ತಪ್ಪುಗಳನ್ನು ಮಾಡುತ್ತಿಲ್ಲ. ಇದು ಜನರ ಜೀವನವನ್ನು ಸಂಪೂರ್ಣವಾಗಿ ಅಸ್ಥಿರಗೊಳಿಸುತ್ತಿದೆ ಮತ್ತು ಭಾರತದ ಸಂಸ್ಕೃತಿಯನ್ನು ಸೀಮಿತಗೊಳಿಸುತ್ತದೆ” ಎಂದು ಅವರು ಹೇಳಿದರು.

ಈ ವೇಳೆ ಪ್ರೊಫೆಸರ್ ಸೇನ್ ಅವರು, ಡಿಸೆಂಬರ್ 19 ರಂದು ಫ್ರೆಂಚ್ ಪತ್ರಿಕೆ ಲೆ ಮಾಂಡೆಗೆ ಮಾಡಿದ ಹೇಳಿಕೆ ಕುರಿತು ಚರ್ಚಿಸಿದರು ಮತ್ತು ಆ ಬಗ್ಗೆ ವಿಸ್ತಾರವಾಗಿ ವಿವರಿಸಿದರು. “ಇದೀಗ ಭಾರತ ಸರ್ಕಾರ ಎನ್ನುವ ಪದ ಸಂಕುಚಿತ ಅರ್ಥದಲ್ಲಿ ‘ಕೋಮುವಾದಿ’ ಎಂದಾಗಿದೆ. ಈ ಸರ್ಕಾರ ಮುಸ್ಲಿಮರ ಮೇಲೆ ದಾಳಿ ಮಾಡುತ್ತದೆ ಜೊತೆಗೆ ಇದು ಹಿಂದೂಗಳ ರಾಷ್ಟ್ರ ಎಂಬ ಕಲ್ಪನೆಯನ್ನು ಪ್ರಚಾರ ಮಾಡುತ್ತಿದೆ ಎಂದರು.

“ಭಾರತವು ಯಾವಾಗಲೂ ಬಹು-ಜನಾಂಗೀಯ ದೇಶವಾಗಿದೆ,” ಮೋದಿ ಸರ್ಕಾರದ ಸಾಮುದಾಯಿಕ ಮತ್ತು ಬಹುಸಂಖ್ಯಾತ ನೀತಿಗಳು ಭಾರತವನ್ನು ಒಡೆಯುತ್ತವೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿದೆ. ಇದು ದೇಶವನ್ನು ಧ್ವಂಸಗೊಳಿಸುವಂತಿದೆ. ಸಧ್ಯದ ದೇಶದ ಪರಿಸ್ಥಿತಿಯನ್ನು “ರಾಷ್ಟ್ರೀಯ ವಿಪತ್ತು” ಎಂದು ಹೇಳಿದರು.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ; ಭಾರತದ ಬಹುತ್ವದ ಉಳಿವಿಗೆ ದಾರಿ ಮಾಡಿಕೊಡಬಲ್ಲುದೇ?

ಈ ವೇಳೆ ಸಂದರ್ಶಕರು, ಭಾರತದಲ್ಲಿ ಮುಸ್ಲಿಂ ವಿರೋಧಿ ಪೂರ್ವಾಗ್ರಹ ಬೆಳೆಯುತ್ತಿದೆ ಮತ್ತು ಮುಸ್ಲಿಮರು ಎರಡನೇ ದರ್ಜೆಯ ಪ್ರಜೆಗಳಾಗುತ್ತಿದ್ದಾರೆ ಎಂದು ನಂಬುತ್ತೀರಾ? ಈ ಬಗ್ಗೆ ಚಿಂತಿತರಾಗಿದ್ದೀರಾ? ಎಮದು ಕೇಳಿದಾಗ ಸೇನ್ ಅವರು, “ನಾನು ಈ ಬಗ್ಗೆ ಕೇವಲ ಚಿಂತಿಸುತ್ತಿಲ್ಲ, ವಿಭಿನ್ನತೆಯಲ್ಲಿ ಏಕತೆ ಹೊಂದಿರುವ ಈ ರಾಷ್ಟ್ರದಲ್ಲಿ ಇದ್ದಕ್ಕಿದ್ದಂತೆ ಪ್ರತ್ಯೇಕತೆ ತರುತ್ತಿರುವ ಬಗ್ಗೆ ನಾನು ಭಯಪಡುತ್ತೇನೆ. ಇದ್ದಕ್ಕಿದ್ದಂತೆ ದುರಂತದ ಪ್ರತ್ಯೇಕತೆಯ ಸ್ಥಿತಿಗೆ ಬರುತ್ತಿದೆಲ್ಲಾ” ಎಂದು ಆತಂಕ ವ್ಯಕ್ತಪಡಿಸಿದರು.

“ಅಲ್ಪಸಂಖ್ಯಾತರನ್ನು ಕೆಟ್ಟದಾಗಿ ನಡೆಸಿಕೊಳ್ಳುವುದು ಮೂರ್ಖತನವಾಗಿದೆ. ಮುಸ್ಲಿಮರ ಮೇಲಿನ ಈ ದೌರ್ಜನ್ಯ ದೇಶದ ಇತಿಹಾಸ, ವರ್ತಮಾನದ ಅವಹೇಳನ ಮತ್ತು ಧ್ವಂಸಗೊಳಿಸುವುದಾಗಿದೆ. ನಮ್ಮ ದೇಶದ ಬಹುತ್ವವನ್ನು ದ್ವೇಷಿಸುವುದು ಬಹುದೊಡ್ಡ ಮೂರ್ಖತನವಾಗಿದೆ” ಎಂದು ಅವರು ಹೇಳಿದರು.

ಕ್ಯಾಬಿನೆಟ್ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳು ಕೂಡ ಮುಸ್ಲಿಮರನ್ನು “ಟರ್ಮಿಟ್ಸ್” ಮತ್ತು “ಬಾಬರ್ ಕಿ ಔಲಾದ್” ಎಂದು ಕರೆಯುತ್ತಾರೆ ಎಂಬ ಅಂಶವನ್ನು ನೀವು ಹೇಗೆ ನೋಡುತ್ತೀರಿ ಎಂದು ಸಂದ‍ರ್ಶಕರು ಕೇಳಿದಾಗ, ಸೇನ್ ಅವರು, ‘ಅಬ್ಬಾ ಜಾನ್’ ಎಂದು ಉಲ್ಲೇಖಿಸಿ, ಪಾಕಿಸ್ತಾನಕ್ಕೆ ಹೋಗುವಂತೆ ಪದೇ ಪದೇ ಹೇಳುತ್ತಾರೆ ಇದು ಭಾರತೀಯ ರಾಷ್ಟ್ರದ ವಿಕೃತ ತಿಳುವಳಿಕೆಯ ಪ್ರತಿಬಿಂಬವಾಗಿದೆ. “ಮೋದಿ ಸರ್ಕಾರಕ್ಕೆ ರಾಷ್ಟ್ರ ಎಂದರೆ ಏನು ಎಂದು ಅರ್ಥವಾಗುತ್ತಿಲ್ಲ” ಎಂದು ಪ್ರತಿಕ್ರಿಯಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸೇವೆಗಳಾದ ಐಎಎಸ್, ಐಎಫ್‌ಎಸ್, ಐಪಿಎಸ್, ಮತ್ತು ಸೇನೆಯಂತಹ ಸರ್ಕಾರಿ ಸೇವೆಗಳಲ್ಲಿ ಮುಸ್ಲಿಮರಿಗೆ ಕಡಿಮೆ ಪ್ರಾತಿನಿಧ್ಯ ಮತ್ತು ಸಂಸತ್ತಿನಲ್ಲಿ ಅವರ ಪ್ರಾತಿನಿಧ್ಯದ ಕೊರತೆಯ ಬಗ್ಗೆ ಸಂದರ್ಶಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೇನ್, “28 ರಾಜ್ಯಗಳಲ್ಲಿ ಯಾವುದೇ ಮುಸ್ಲಿಂ ಮುಖ್ಯಮಂತ್ರಿಗಳು ಮತ್ತು 15 ರಾಜ್ಯಗಳಲ್ಲಿ ಯಾವುದೇ ಮುಸ್ಲಿಂ ಮಂತ್ರಿಗಳಿಲ್ಲ. “15% ಮುಸ್ಲಿಮರು ಈ ದೇಶದ ಭಾಗವಾಗಿದ್ದಾರೆ ಅಷ್ಟೇ ಆದರೆ ಅವರಿಗೆ ತಮ್ಮ ಸ್ವಂತ ಹಕ್ಕುಗಳಿಲ್ಲ. ಬಹುಸಂಖ್ಯಾತರ ಜೊತೆ ಸಹಿಷ್ಣುತೆಯಿಂದ ಬದುಕುತ್ತಿದ್ದಾರೆ ಅಷ್ಟೇ” ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಸ್ತುತ ಭಾರತ ಸರ್ಕಾರವು ಇರಾನ್, ಅಫ್ಘಾನಿಸ್ತಾನ ಮತ್ತು ರಷ್ಯಾದಂತಹ ರಾಷ್ಟ್ರಗಳ ಸರ್ಕಾರಗಳೊಂದಿಗೆ ಹೋಲಿಸಿಕೊಂಡು ತಮ್ಮ ಶ್ರೇಷ್ಠತೆ ಬಗ್ಗೆ ಹೇಳಿಕೊಳ್ಳುವುದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದಾಗ, ಸೇನ್ ಅವರು, ಇತರ ಸರ್ಕಾರಗಳು ಕೆಟ್ಟದಾಗಿರಬಹುದು ಎಂಬ ಅಂಶವು ಭಾರತದ ಜನರಿಗೆ ದೊಡ್ಡ ಸಮಾಧಾನವಲ್ಲ ಎಂದು ಸೇನ್ ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...