Homeಮುಖಪುಟಕೊನೆ ಕ್ಷಣದಲ್ಲಿ ಸಂಪರ್ಕ ಕಡಿದುಕೊಂಡ ಲ್ಯಾಂಡರ್ ವಿಕ್ರಮ್ : ಇಸ್ರೋದೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದ...

ಕೊನೆ ಕ್ಷಣದಲ್ಲಿ ಸಂಪರ್ಕ ಕಡಿದುಕೊಂಡ ಲ್ಯಾಂಡರ್ ವಿಕ್ರಮ್ : ಇಸ್ರೋದೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದ ಭಾರತ

- Advertisement -
- Advertisement -

ಭಾರತದ ಬಹುನಿರೀಕ್ಷೆಯ ಚಂದ್ರಯಾನ 2 ರ ಲ್ಯಾಂಡರ್ ವಿಕ್ರಮ್ ಚಂದ್ರನ ನೆಲ ಸ್ಪರ್ಶ ಮಾಡುವ ಕೆಲವೇ ಕ್ಷಣದ ಮೊದಲು ಸಂಪರ್ಕ ಕಡಿತಗೊಂಡಿದೆ. ಇದರಿಂದ ಚಂದ್ರಯಾನ ಯಶಸ್ವಿಯಾಯಿತೆ, ಇಲ್ಲವೇ ಎಂಬುದರ ಕುರಿತು ಮಾಹಿತಿಯ ಕೊರತೆವುಂಟಾಗಿದೆ. ಇಂದು ಬೆಳಗಿನ ಜಾವ 1.50ಕ್ಕೆ ಇನ್ನು ಕೇವಲ 2.1ಕಿ.ಮೀ ಇರುವಂತೆ ಈ ಘಟನೆ ಜರುಗಿದೆ.

ಲ್ಯಾಂಡರ್ ವಿಕ್ರಮ್ ಸಂಪರ್ಕ ಕಡಿತಗೊಂಡ ತಕ್ಷಣವೇ ಆಘಾತಗೊಂಡ ಇಸ್ರೋ ಅಧ್ಯಕ್ಷ ಕೆ.ಶಿವನ್ ಬೆಳಗಿನ ಜಾವ 2.17ರ ಸಮಯಕ್ಕೆ ಇದನ್ನು ಘೋಷಿಸಿದರು. ಚಂದ್ರಯಾನದ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವುದರ ವೀಕ್ಷಣೆಗಾಗಿ ಬೆಂಗಳೂರಿನ ಇಸ್ರೋ ಕಚೇರಿಗೆ ಆಗಮಿಸಿದ್ದ ಪ್ರಧಾನಿ ಮೋದಿ, ಎದೆಗುಂದಬೇಡಿ ಧೈರ್ಯದಿಂದಿರಿ ಎಂದರು.

ನಂತರ ಇಸ್ರೋ ಅಧ್ಯಕ್ಷ ಕೆ.ಶಿವನ್ ಈ ಸಣ್ಣ ವೈಫಲ್ಯದಿಂದಾಗಿ ದುಃಖಿತರಾದಗ ಪ್ರಧಾನಿ ನರೇಂದ್ರ ಮೋದಿಯವರು ಅವರನ್ನು ಅಪ್ಪಿಕೊಂಡು ಸಂತೈಸಿದರು. ಭಾರತದ ವಿಜ್ಞಾನಿಗಳ ಸಾಧನೆ ಅನನ್ಯವಾದುದು. ನೀವು ಇಡೀ ಭಾರತ ಹೆಮ್ಮೆಪಡುವಂತೆ ಮಾಡಿದ್ದೀರಿ. ಸಣ್ಣ ಪುಟ್ಟ ತಪ್ಪುಗಳಾದಾಗ ನಾವು ಧೃತಿಗೆಡಬಾರದು. ಎಲ್ಲವನ್ನು ಕಲಿಯೋಣ ಮತ್ತು ಆಶಾವಾದದಿಂದ ಮುನ್ನುಗ್ಗೋಣ, ಕಠಿಣ ಶ್ರಮ ಹಾಕೋಣ. ನಿಮ್ಮೊಡನೆ ನಾನಿದ್ದೇನೆ, ಧೈರ್ಯದಿಂದಿರಿ ಎಂದು ಪ್ರಧಾನಿ ಮಾತನಾಡಿದ್ದಾರೆ.

ಚಂದ್ರಯಾನ 2ರ ಅದ್ಭುತ ಕಾರ್ಯಕ್ಕಾಗಿ ISRO ತಂಡಕ್ಕೆ ಅಭಿನಂದನೆಗಳು. ನಿಮ್ಮ ಉತ್ಸಾಹ ಮತ್ತು ಸಮರ್ಪಣೆ ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿಯಾಗಿದೆ. ನಿಮ್ಮ ಕೆಲಸ ವ್ಯರ್ಥವಾಗಿಲ್ಲ. ಇದು ಇನ್ನೂ ಅನೇಕ ಸವಾಲುಗಳನ್ನು ಮೀರಲು ಮತ್ತು ಭಾರತೀಯ ಬಾಹ್ಯಾಕಾಶದ ಮಹತ್ವಾಕಾಂಕ್ಷೆಯ ಯಾತ್ರೆಗಳಿಗೆ ಅಡಿಪಾಯ ಹಾಕಿದೆ ಎಂದು ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಪ್ರೀತಿಯ isro, ಈ ವೈಫಲ್ಯವು ನಿಮ್ಮನ್ನು ಹಿಂದಕ್ಕೆ ತಳ್ಳುವುದಿಲ್ಲ. ನಿಮ್ಮ 50 ವರ್ಷಗಳ ಇತಿಹಾಸವನ್ನು ಅಧ್ಯಯನ ಮಾಡಿದ ಯಾರಿಗಾದರೂ ನೀವು ಪ್ರತಿಯೊಂದು ಹಂತದಲ್ಲೂ ವೈಫಲ್ಯವನ್ನು ನೋಡಿದ್ದೀರಿ ಎಂದು ತಿಳಿದಿದೆ … ಮತ್ತು ಪ್ರತಿ ಸಮಯದಲ್ಲೂ ನೀವು ಬಲವಾಗಿ ಪುಟಿದೆದ್ದೀರಿ ಕೂಡ.. ಎಂದು ಖ್ಯಾತ ಯೂಟ್ಯೂಬರ್ ಆಕಾಶ್ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

ನಮ್ಮ ವಿಜ್ಞಾನಿಗಳ ಜೊತೆ ಬಲವಾಗಿ ನಿಂತಿದ್ದಕ್ಕಾಗಿ ಪ್ರಧಾನಿಯವರಿಗೆ ಧನ್ಯವಾದಗಳು. ನೀವು ಎಲ್ಲಾ ಭಾರತೀಯರ ಭಾವನೆಗಳನ್ನು ವ್ಯಕ್ತಪಡಿಸಿದ್ದೀರಿ. ನಾವೆಲ್ಲರೂ ನಮ್ಮ ವಿಜ್ಞಾನಿಗಳ ಬಗ್ಗೆ ಹೆಮ್ಮೆ ಪಡುತ್ತೇವೆ. ನಾವು ಜಯಿಸುತ್ತೇವೆ! ಎಂದು ಯೋಗೆಂದ್ರ ಯಾದವ್ ಟ್ವೀಟ್ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಕಲಾವಿದರು, ವಿಜ್ಞಾನಿಗಳು ದೇಶವೊಂದರ ಒಳಗಣ್ಣುಗಳು. ರೈತ , ಸೈನಿಕ ಹೊರಗಣ್ಣುಗಳು. ಇವರು ಬಿದ್ದಾಗ ದೇಶ ಕೈ ಹಿಡಿಯದೆ ಇನ್ನಾರು ಆತುಗೊಳ್ಳಬೇಕು ? ದೇಶ ಎಂದರೆ ಪ್ರಧಾನಿಯೂ ಸೇರಿ ದೇಶದ ಸಮಸ್ತ ಪ್ರಜೆ. ನಮ್ಮ ವಿಜ್ಞಾನಿಗಳು ಎಡವಿದ್ದಾರೆ ಸೋತಿಲ್ಲ.

    ಶಿವನ್ ಅವರೂ ಕಣ್ಣೀರು ಹಾಕಿದರು. ಈ ವಾರದಿಂದ ಅನೇಕರೂ ಕಣ್ಣೀರಿಟ್ಟರು, ವ್ಯತ್ಯಾಸ ?

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...