Homeಮುಖಪುಟಬೆಂಗಳೂರು ಲ್ಯಾಂಡ್‌ಮಾರ್ಕ್ಸ್; ಓರೆಕೋರೆಗಳ ಕಲರವಕ್ಕೆ ವ್ಯಂಗ್ಯ ಚಿತ್ರಗಳ ಚಾವಡಿ

ಬೆಂಗಳೂರು ಲ್ಯಾಂಡ್‌ಮಾರ್ಕ್ಸ್; ಓರೆಕೋರೆಗಳ ಕಲರವಕ್ಕೆ ವ್ಯಂಗ್ಯ ಚಿತ್ರಗಳ ಚಾವಡಿ

- Advertisement -
- Advertisement -

“ಚಿತ್ರ ಕಲಾವಿದರಿಗೆ ಲಲಿತಕಲಾ ಅಕಾಡೆಮಿಯಿದೆ, ಬರಹಗಾರ-ಲೇಖಕರಿಗೆ ಸಾಹಿತ್ಯ ಅಕಾಡೆಮಿ ಇದೆ, ಹಾಗಾದರೆ, ಕಾರ್ಟೂನಿಸ್ಟ್‌ಗಳಿಗೆ ಯಾಕೆ ಅಂತದ್ದೇ ಒಂದು ಸಂಸ್ಥೆ ಇರಬಾರದು” ಎನ್ನುತ್ತಾರೆ ಖ್ಯಾತ ವ್ಯಂಗ್ಯಚಿತ್ರಕಾರರಾದ ವಿ.ಜಿ. ನರೇಂದ್ರ ಅವರು. ತಮ್ಮ ಈ ಕನಸನ್ನು ಬೆನ್ನುಬಿಡದೆ, ’ಇಂಡಿಯನ್
ಇನ್‌ಸ್ವಿಟ್ಯೂಟ್ ಆಫ್ ಕಾರ್ಟೂನಿಸ್ಟ್ಸ್’ ಎಂಬ ಸಂಸ್ಥೆಯ ಮೂಲಕ ’ಇಂಡಿಯನ್ ಕಾರ್ಟೂನ್ ಗ್ಯಾಲರಿ’ಯನ್ನು ಪ್ರಾರಂಭಿಸಿ ಅದರ ಮೇಲ್ವಿಚಾರಕರಾಗಿ ಮುನ್ನಡೆಸುತ್ತಿದ್ದಾರೆ.

ಬೆಂಗಳೂರಿನ ಎಂ.ಜಿ.ರೋಡ್‌ನ ಟ್ರಿನಿಟಿ ಸರ್ಕಲ್‌ಗೆ ಲಂಬದಲ್ಲಿರುವ ಮಿಡ್‌ಫೋರ್ಡ್ ಗಾರ್ಡನ್ ರಸ್ತೆಯಲ್ಲಿರುವ ಮಿಡ್‌ಫೋರ್ಡ್ ಹೌಸ್‌ನ ನೆಲಮಾಳಿಗೆಯಲ್ಲಿರುವ ’ಇಂಡಿಯನ್ ಕಾರ್ಟೂನ್ ಗ್ಯಾಲರಿ’ ದೇಶದ ಮೊದಲ ಕಾರ್ಟೂನ್ ಗ್ಯಾಲರಿ. ಇದೀಗ ಈ ಕಾರ್ಟೂನ್ ಗ್ಯಾಲರಿಗೆ 15ನೇ ವರ್ಷದ ಸಂಭ್ರಮ. 2007ರ ಆಗಸ್ಟ್ 16ರಂದು ಇದನ್ನು ರಾಜ್ಯದ ರಾಜ್ಯಪಾಲರಾಗಿದ್ದ ಟಿ.ಎನ್ ಚತುರ್ವೇದಿ ಅವರು ಉದ್ಘಾಟಿಸಿದ್ದರು. ಆ ವೇಳೆ ರಾಜ್ಯದ ಖ್ಯಾತ ವ್ಯಂಗ್ಯಚಿತ್ರಕಾರರಾದ ಬಿ.ವಿ. ರಾಮಮೂರ್ತಿ, ವಿ.ಜಿ. ನರೇಂದ್ರ ಮತ್ತು ಬಿ.ಜಿ. ಗುಜ್ಜಾರಪ್ಪ ಅವರ ವ್ಯಂಗ್ಯಚಿತ್ರಗಳನ್ನು ಪ್ರದರ್ಶನ ಮಾಡಲಾಗಿತ್ತು.

ಅದರ ನಂತರವೂ ಗ್ಯಾಲರಿಯಲ್ಲಿ ನಿರಂತರವಾಗಿ ಪ್ರದರ್ಶನಗಳನ್ನು ನಡೆಸುತ್ತಲೇ ಬರಲಾಗುತ್ತಿದೆ. ತಿಂಗಳಿಗೆ ಒಂದು ಪ್ರದರ್ಶನದಂತೆ ಇದುವರೆಗೂ ಸುಮಾರು 180ಕ್ಕಿಂತಲೂ ಹೆಚ್ಚಿನ ವ್ಯಂಗ್ಯ ಪ್ರದರ್ಶನಗಳನ್ನು ನಡೆಸಲಾಗಿದೆ. “ಇದೀಗ 181ನೇ ವ್ಯಂಗ್ಯಚಿತ್ರ ಪ್ರದರ್ಶನ ಪ್ರಾರಂಭವಾಗಿದ್ದು, ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಪ್ರಧಾನ ವ್ಯಂಗ್ಯಚಿತ್ರಕಾರ ಇ.ಪಿ. ಉನ್ನಿ ಅವರ ವ್ಯಂಗ್ಯಚಿತ್ರಗಳನ್ನು ಪ್ರದರ್ಶನ ಮಾಡಲಾಗುತ್ತಿದೆ” ಎಂದು ವಿ.ಜಿ. ನರೇಂದ್ರ ಅವರು ಹೇಳುತ್ತಾರೆ. “ಉನ್ನಿ ಅವರು ಈ ಪ್ರದರ್ಶನಕ್ಕೆಂದೇ ಬೆಂಗಳೂರಿನ ವಿಶೇಷ ಸ್ಥಳಗಳ ಸುಮಾರು 12 ಚಿತ್ರಗಳನ್ನು ರಚಿಸಿದ್ದು, ಆ ಚಿತ್ರಗಳನ್ನೂ ಈ ಪ್ರದರ್ಶನಕ್ಕೆ ಇಟ್ಟಿದ್ದೇವೆ” ಎಂದು ಅವರು ಮಾಹಿತಿ ನೀಡಿದ್ದಾರೆ.

ಮುಂಬರುವ ಆಗಸ್ಟ್ ತಿಂಗಳಲ್ಲಿ ’ಇಂಡಿಯನ್ ಕಾರ್ಟೂನ್’ ಗ್ಯಾಲರಿ ತನ್ನ ಯಶಸ್ವಿ ಹದಿನೈದನೇ ವಾರ್ಷಿಕೋತ್ಸವವನ್ನು ಆಚರಿಸಲಿದೆ. ಈ ವೇಳೆ ಭಾರತದ ಎಲ್ಲಾ ವ್ಯಂಗ್ಯಚಿತ್ರಕಾರರ ವ್ಯಂಗ್ಯಚಿತ್ರಗಳ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತದೆ.

ತನ್ನ ಹೆಸರು ’ಇಂಡಿಯನ್ ಕಾರ್ಟೂನ್ ಗ್ಯಾಲರಿ’ ಎಂದಿದ್ದರೂ ಇದು ಕೇವಲ ಭಾರತೀಯ ವ್ಯಂಗ್ಯ ಚಿತ್ರಕಾರರಿಗೆ ಮಾತ್ರ ಸೀಮಿತವಾಗಿಲ್ಲ. ಅಮೆರಿಕ, ಇಂಗ್ಲೆಂಡ್, ಚೀನಾ ಸೇರಿದಂತೆ ವಿದೇಶಿ ವ್ಯಂಗ್ಯಚಿತ್ರಕಾರರ ಪ್ರದರ್ಶನಗಳನ್ನೂ ನಡೆಸುತ್ತಿದೆ. ಗ್ಯಾಲರಿಗೆ ದೇಶದ ವಿವಿಧ ಭಾಗಗಳಿಂದ ಮಾತ್ರವಲ್ಲದೆ, ವಿದೇಶಗಳಿಂದಲೂ ವ್ಯಂಗ್ಯಚಿತ್ರ ಪ್ರಿಯರು ಭೇಟಿ ನೀಡುತ್ತಾರೆ ಎನ್ನುತ್ತಾರೆ ವಿ.ಜಿ. ನರೇಂದ್ರ.

ಗ್ಯಾಲರಿಯಲ್ಲಿ ಕೇವಲ ವ್ಯಂಗ್ಯಚಿತ್ರ ಪ್ರದರ್ಶನ ಮಾಡುವುದಲ್ಲದೆ ವ್ಯಂಗ್ಯಚಿತ್ರಕಾರ್ತಿ ಮಾಯಾ ಕಾಮತ್ ಅವರ ನೆನಪಿನಲ್ಲಿ ಪ್ರತಿವರ್ಷ ’ಅಂತಾರಾಷ್ಟ್ರೀಯ ಕಾರ್ಟೂನ್ ಸ್ಪರ್ಧೆ’ಯನ್ನೂ ನಡೆಸಲಾಗುತ್ತಿದೆ. ಈ ಸ್ಪರ್ಧಾರ್ಥಿಗಳಿಗೆ ಒಟ್ಟು ಒಂದು ಲಕ್ಷ ರೂಪಾಯಿ ಬಹುಮಾನಗಳನ್ನು ವಿತರಿಸಲಾಗುತ್ತದೆ. ಇದನ್ನು ಕಳೆದ 14 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಈ ವೇಳೆ ಆಯಾ ವರ್ಷದ ಉದಯೋನ್ಮುಖ ವ್ಯಂಗ್ಯಚಿತ್ರಕಾರರನ್ನು ಗುರುತಿಸಿ ಅವರಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ವಿ.ಜಿ. ನರೇಂದ್ರ ಹೇಳುತ್ತಾರೆ.

ಇಷ್ಟೇ ಅಲ್ಲದೆ ಗ್ಯಾಲರಿಯಲ್ಲಿ ಕಾರ್ಟೂನ್ ರಚಿಸುವ ಕಾರ್ಯಾಗಾರಗಳನ್ನು ಕೂಡಾ ನಡೆಸಲಾಗುತ್ತದೆ. ಈವರೆಗೆ ಇಲ್ಲಿ ಸುಮಾರು 30 ಯಶಸ್ವಿ ಕಾರ್ಯಾಗಾರಗಳು ನಡೆದಿದ್ದು, ಅದರಲ್ಲಿ ದೇಶದ ಎಲ್ಲಾ ರಾಜ್ಯಗಳ ಜನರು ಭಾಗವಹಿಸಿದ್ದಾರೆ. ಕಾರ್ಯಾಗಾರಗಳ ಬಗ್ಗೆ ಮಾತನಾಡುವ ವಿ.ಜಿ.ನರೇಂದ್ರ, “ವ್ಯಂಗ್ಯಚಿತ್ರ ಜಗತ್ತಿನಲ್ಲಿ ಮಹಿಳಾ ಕಾರ್ಟೂನಿಸ್ಟ್‌ಗಳು ಕಡಿಮೆ ಇದ್ದಾರೆ ಎಂಬ ಅಪವಾದವಿದೆ. ಇದು ನಿಜ ಕೂಡಾ ಆಗಿದೆ. ಆದರೆ ನಮ್ಮ ಕಾರ್ಯಾಗಾರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಲ್ಲಿ ಅರ್ಧಕ್ಕರ್ಧ ಜನರು ಮಹಿಳೆಯರಾಗಿದ್ದರು. ಇದು ತುಂಬಾ ಆಶಾದಾಯಕ ಬೆಳವಣಿಗೆಯಾಗಿದೆ” ಎಂದು ಸಂತಸ ವ್ಯಕ್ತಪಡಿಸುತ್ತಾರೆ.

ಇಂಡಿಯನ್ ಕಾರ್ಟೂನ್ ಗ್ಯಾಲರಿ ಕೇವಲ ವ್ಯಂಗ್ಯಚಿತ್ರಗಳ ಪ್ರದರ್ಶನ ಮಾತ್ರ ಮಾಡುವುದಲ್ಲದೆ, ವ್ಯಂಗ್ಯಚಿತ್ರಗಳ ಬಗೆಗಿನ ಸುಮಾರು 3 ಸಾವಿರ ಅತೀ ಅಪರೂಪದ ಪುಸ್ತಕಗಳ ಗ್ರಂಥಾಲಯವನ್ನೂ ಹೊಂದಿದೆ. “ಇಲ್ಲಿರುವ ಪುಸ್ತಕಗಳು ಭಾರತದ ಬೇರೆಲ್ಲೂ ಸಿಗದಿರುವಷ್ಟು ಅಪರೂಪದ್ದಾಗಿದ್ದು, ಅದಕ್ಕೆ ಸಾಕ್ಷಿ ಎಂಬಂತೆ ದೇಶದ ಅನೇಕ ವಿಶ್ವವಿದ್ಯಾಲಯಗಳಿಂದ ವ್ಯಂಗ್ಯಚಿತ್ರಗಳ ಬಗ್ಗೆ ಅಧ್ಯಯನ ನಡೆಸುವ ವಿದ್ಯಾರ್ಥಿಗಳು ಗ್ಯಾಲರಿಗೆ ಭೇಟಿ ನೀಡುತ್ತಾರೆ” ಎಂದು ನರೇಂದ್ರ ಹೇಳುತ್ತಾರೆ. ಗ್ರಂಥಾಲಯಗಳ ಜೊತೆಗೆ ವ್ಯಂಗ್ಯಚಿತ್ರ ಪುಸ್ತಕಗಳ ಮಾರಾಟವನ್ನೂ ಗ್ಯಾಲರಿ ಮಾಡುತ್ತಿದೆ.

“ಗ್ಯಾಲರಿಗೆ ಎಲ್ಲರಿಗೂ ಉಚಿತ ಪ್ರವೇಶವಿದ್ದು, ಗ್ಯಾಲರಿಯ ಸದಸ್ಯತನವನ್ನೂ ಪಡೆದುಕೊಳ್ಳಬಹುದಾಗಿದೆ. ತಿಂಗಳಿಗೆ ಸುಮಾರು 2 ಸಾವಿರಕ್ಕಿಂತಲೂ ಹೆಚ್ಚಿನ ಜನರು ಗ್ಯಾಲರಿಗೆ ಭೇಟಿ ನೀಡುತ್ತಿದ್ದು ಅದರಲ್ಲೂ ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದುಹೋಗುತ್ತಾರೆ” ಎನ್ನುತ್ತಾರೆ ನರೇಂದ್ರ ಅವರು. “ಕೊರೊನಾ ಸಮಯದಲ್ಲಿ ಗ್ಯಾಲರಿಯಲ್ಲಿ ಜನರ ಓಡಾಟ ಇದ್ದಿರಲಿಲ್ಲ ಎನ್ನುವುದನ್ನು ಬಿಟ್ಟರೆ, ಉಳಿದ ಎಲ್ಲಾ ಸಮಯದಲ್ಲೂ ಗ್ಯಾಲರಿಗೆ ವ್ಯಂಗ್ಯಚಿತ್ರ ಪ್ರಿಯರು ಭೇಟಿ ನೀಡುತ್ತಲೇ ಇದ್ದಾರೆ” ಎಂದು ಖುಷಿ ವ್ಯಕ್ತಪಡಿಸುತ್ತಾರೆ ಅವರು.

ನೈಸ್ ಕಂಪೆನಿಯ ಮುಖ್ಯಸ್ಥರಾದ ಅಶೋಕ್ ಖೇಣಿ ಇಂಡಿಯನ್ ಕಾರ್ಟೂನ್ ಗ್ಯಾಲರಿಗೆ ಜಾಗವನ್ನು ನೀಡಿ ನೆರವಾಗಿದ್ದಾರೆ ಎಂದು ನರೇಂದ್ರ ಅವರು ನೆನಪಿಸಿಕೊಳ್ಳತ್ತಾರೆ. ”ಅಶೋಕ್ ಅವರಿಗೆ ಇಂಡಿಯನ್ ಇನ್ಸ್‌ಟ್ಯೂಟ್ ಆಫ್ ಕಾರ್ಟೂನಿಸ್ಟ್ ತುಂಬಾ ಋಣಿಯಾಗಿದೆ. ಈ ಕಲೆಯನ್ನು ಬೆಳೆಸಲು ಅವರು ನೀಡಿರುವ ಕೊಡುಗೆ ಶ್ಲಾಘನೀಯ” ಎಂದು ಅವರು ಹೇಳುತ್ತಾರೆ.

ಪ್ರಸ್ತುತ ಬೆಳವಣಿಗೆಗಳ ಬಗ್ಗೆ ಮಾತನಾಡುವ ನರೇಂದ್ರ ಅವರು, “ವ್ಯಂಗ್ಯಚಿತ್ರ ಕಲೆ ಎನ್ನುವುದು ಆಂಟಿ ಎಸ್ಟಾಬ್ಲಿಷ್‌ಮೆಂಟ್ ಆದದ್ದು. ವ್ಯಂಗ್ಯಚಿತ್ರಕಾರರ ಪ್ರಮುಖ ಕೆಲಸವೇ ಅಧಿಕಾರದಲ್ಲಿ ಇರುವವರನ್ನು ಪ್ರಶ್ನೆ ಮಾಡುವುದು. ಆಡಳಿತಕ್ಕೆ ಚಾಟಿ ಬೀಸಿ ಅವರನ್ನು ಮತ್ತು ಜನರನ್ನು ಎಚ್ಚರಿಸುವುದು. ಇದೇ ಕಾರ್ಟೂನಿಸ್ಟ್‌ಗಳ ಕರ್ತವ್ಯ. ಕೇವಲ ಅಧಿಕಾರದಲ್ಲಿ ಇರುವವರು ಮಾತ್ರವಲ್ಲ, ವಿರೋಧ ಪಕ್ಷಗಳನ್ನೂ ನಾವು ಟೀಕಿಸುತ್ತೇವೆ. ಹಿಂದಿನಿಂದಲೂ ಅದು ನಡೆದುಕೊಂಡು ಬಂದಿದೆ” ಎಂದು ಹೇಳುತ್ತಾರೆ.

“ಸರ್ಕಾರದ ವಿರುದ್ಧ ಕಾರ್ಟೂನ್ ಬರೆದಾಗ ಅದರ ಅಭಿಮಾನಿಗಳು ಕಾರ್ಟೂನಿಸ್ಟ್‌ಗಳ ಮೇಲೆ ಮುಗಿಬೀಳುತ್ತಿದ್ದರು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇದು ಹೆಚ್ಚಾಗಿದೆ. ಅದಾಗಿಯೂ ಕಾರ್ಟೂನಿಸ್ಟ್‌ಗಳು ತಮ್ಮ ಕೆಲಸವನ್ನು ಮಾಡುತ್ತಾ, ಕಾರ್ಟೂನ್‌ಗಳನ್ನು ಬರೆಯುತ್ತಾ, ಚಾಟಿ ಬೀಸುತ್ತಲೇ ಇದ್ದಾರೆ. ಪತ್ರಿಕೆಗಳನ್ನು ಬೇಕಾದರೆ ಪ್ರಭುತ್ವಕ್ಕೆ ಬಗ್ಗು ಬಡಿಯಬಹುದು, ಆದರೆ ವ್ಯಂಗ್ಯಚಿತ್ರಕಾರರನ್ನು ಬಗ್ಗುಬಡಿಯಲು ಆಗುವುದಿಲ್ಲ, ವ್ಯಂಗ್ಯಚಿತ್ರಗಳ ಹಿರಿಮೆ ಇದು” ಎಂದು ವಿ.ಜಿ. ನರೇಂದ್ರ ಅವರು ಹೆಮ್ಮೆಯಿಂದ ಹೇಳುತ್ತಾರೆ.

ನಗರದ ಮಧ್ಯಭಾಗದಲ್ಲಿರುವ ’ಇಂಡಿಯನ್ ಕಾರ್ಟೂನ್ ಗ್ಯಾಲರಿ’ಗೆ ನೀವೂ ಬೇಟಿ ಕೊಡಿ.


ಇದನ್ನೂ ಓದಿ: ಪಠ್ಯ ಪರಿಷ್ಕರಣೆ ವಿವಾದಕ್ಕೆ ಕಾರ್ಟೂನ್‌ಗಳು ಸ್ಪಂದಿಸಿದ್ದು ಹೀಗೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...