Homeಮುಖಪುಟಇಂದು ವರ್ಷದ ಕೊನೆಯ ಸೂರ್ಯಗ್ರಹಣ: ಎಲ್ಲಿಲ್ಲಿ ಗೋಚರ? ನೋಡುವುದು ಹೇಗೆ ಇಲ್ಲಿದೆ ಮಾಹಿತಿ

ಇಂದು ವರ್ಷದ ಕೊನೆಯ ಸೂರ್ಯಗ್ರಹಣ: ಎಲ್ಲಿಲ್ಲಿ ಗೋಚರ? ನೋಡುವುದು ಹೇಗೆ ಇಲ್ಲಿದೆ ಮಾಹಿತಿ

- Advertisement -
- Advertisement -

2021 ರ ಎರಡನೇಯ ಮತ್ತು ಕೊನೆಯ ಸಂಪೂರ್ಣ ಸೂರ್ಯಗ್ರಹಣವು ಇಂದು (ಡಿ.4) ಸಂಭವಿಸುತ್ತಿದೆ. ಸುಮಾರು ನಾಲ್ಕು ಗಂಟೆಗಳ ಕಾಲ ಸೂರ್ಯಗ್ರಹಣ ಇರಲಿದೆ. ಆದರೆ ಈ ಸೂರ್ಯಗ್ರಹಣವು ಭಾರತದಲ್ಲಿ ಗೂಚರಿಸುವುದಿಲ್ಲ.

ಇಂದು ಅಮಾವಾಸ್ಯೆಯ ದಿನ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಈ ಗ್ರಹಣವನ್ನು ಅಂಟಾರ್ಟಿಕಾ ಮತ್ತು ದಕ್ಷಿಣ ಅಮೆರಿಕಾ, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ದಕ್ಷಿಣ ತುದಿಯಲ್ಲಿರುವವರು ಗ್ರಹಣದ ಭಾಗಶಃ ಹಂತಗಳನ್ನು ನೋಡಬಹುದು.

ಈ ವರ್ಷದ ಕೊನೆಯ ಸೂರ್ಯಗ್ರಹಣದ ಅವಧಿ4 ತಾಸು 8 ನಿಮಿಷ. ಬೆಳಗ್ಗೆ 10:59 ಕ್ಕೆ ಗ್ರಹಣ ಪ್ರಾರಂಭವಾಗುತ್ತದೆ. ಸಂಪೂರ್ಣ ಗ್ರಹಣವು ಮಧ್ಯಾಹ್ನ 12:30 ಕ್ಕೆ ಮತ್ತು ಗರಿಷ್ಠ ಗ್ರಹಣವು ಮಧ್ಯಾಹ್ನ 1:03 ಕ್ಕೆ ಸಂಭವಿಸುತ್ತದೆ. ಮಧ್ಯಾಹ್ನ 3.07ಕ್ಕೆ ಸೂರ್ಯಗ್ರಹಣ ಮುಕ್ತಾಯವಾಗುತ್ತದೆ.

ಇದನ್ನೂ ಓದಿ: ರಾತ್ರಿಯ ಹೊತ್ತಿನಲ್ಲಿ ಸೂರ್ಯಗ್ರಹಣ ಮಾಡಿಸುವ ಮಾಧ್ಯಮಗಳು!

ಎಲ್ಲಿ ನೋಡಬಹುದು…?

ಅಂಟಾರ್ಕ್ಟಿಕಾದಿಂದ ಸಂಪೂರ್ಣ ಸೂರ್ಯಗ್ರಹಣವನ್ನು NASAದ YouTube ಚಾನಲ್ ಮತ್ತು nasa.gov/live ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಈ ಚಾನೆಲ್‌ಗಳ ಮೂಲಕ ನೋಡಬಹುದು.

ಇನ್ನು ಸಂಪೂರ್ಣ ಸೂರ್ಯಗ್ರಹಣದ ಸಮಯದಲ್ಲಿ ಕಣ್ಣಿನ ಸುರಕ್ಷತೆ ಬಗ್ಗೆ ನಿಗಾ ವಹಿಸಬೇಕು. ಸೂರ್ಯನನ್ನು ನೇರವಾಗಿ ನೋಡಬೇಡಬಾರದು. ಎಲ್ಲ ಸಮಯದಲ್ಲೂ ವಿಶೇಷ ಗ್ರಹಣ ಕನ್ನಡಕವನ್ನು ಬಳಸಬೇಕು. ಸೂರ್ಯನನ್ನು ನೋಡಲು ಪಿನ್‌ಹೋಲ್ ಬಾಕ್ಸ್ ಮತ್ತು ಪ್ರೊಜೆಕ್ಷನ್ ವಿಧಾನಗಳನ್ನು ಬಳಸಬೇಕು.

“ಭೂಮಿ ಸೂರ್ಯನ ಸುತ್ತ, ಚಂದ್ರ ಭೂಮಿಯ ಸುತ್ತ ಸುತ್ತುತ್ತಿರಬೇಕಾದರೆ, ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಹಾದುಹೋಗುವಾಗ, ಈ ಮೂರೂ ಆಕಾಶಕಾಯಗಳು ಒಂದೇ ಸರಳ ರೇಖೆಯಲ್ಲಿ ಬರುತ್ತವೆ. ಇಂತಹ ಸಂದರ್ಭದಲ್ಲಿ ಚಂದ್ರ ಸೂರ್ಯನನ್ನು ಮರೆಮಾಚುತ್ತದೆ, ಆಗ ಸೂರ್ಯನ ಬೆಳಕು ಭೂಮಿಯ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಬೀಳುವುದಿಲ್ಲ. ಇದು ಸೂರ್ಯಗ್ರಹಣ. ಸೂರ್ಯಗ್ರಹಣ ಅಮಾವಾಸ್ಯೆಯ ದಿನದಂದೇ ನಡೆಯುತ್ತದೆ.

——————–

ಇದನ್ನೂ ಓದಿ: ಮೌಢ್ಯ ವಿರೋಧಿಸಿ ಸೂರ್ಯಗ್ರಹಣ ವೀಕ್ಷಿಸಿದ ಲಕ್ಷಾಂತರ ಮಂದಿ, ಆಹಾರ ಸೇವನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...