Homeಮುಖಪುಟಮೌಢ್ಯ ವಿರೋಧಿಸಿ ಸೂರ್ಯಗ್ರಹಣ ವೀಕ್ಷಿಸಿದ ಲಕ್ಷಾಂತರ ಮಂದಿ, ಆಹಾರ ಸೇವನೆ

ಮೌಢ್ಯ ವಿರೋಧಿಸಿ ಸೂರ್ಯಗ್ರಹಣ ವೀಕ್ಷಿಸಿದ ಲಕ್ಷಾಂತರ ಮಂದಿ, ಆಹಾರ ಸೇವನೆ

- Advertisement -
- Advertisement -

ಮೌಢ್ಯಾಚರಣೆಯ ನಡುವೆಯು ಜೂನ್ 21ರಂದು ಸಂಭವಿಸಿದ ಸೂರ್ಯಗ್ರಹಣವನ್ನು ದೇಶದ ವಿವಿಧ ಭಾಗಗಳಲ್ಲಿ ಲಕ್ಷಾಂತರ ಜನರು ವೀಕ್ಷಿಸಿ ಆನಂದ ವ್ಯಕ್ತಪಡಿಸಿದರು. ಪ್ರಮುಖ ನಗರಗಳಲ್ಲಿ ಸೂರ್ಯಗ್ರಹಣ ವೀಕ್ಷಿಸಲು ಸೌರಕನ್ನಡಗಳು, ದೂರದರ್ಶಕಗಳನ್ನು ವ್ಯವಸ್ಥೆ ಮಾಡಲಾಗಿತ್ತು.

ಉತ್ತರ ಭಾರತದ ರಾಜಸ್ಥಾನ್‍ನಿಂದ ಹರಿಯಾಣದ ಶಿರ್ಸಾ, ಕುರುಕ್ಷೇತ್ರ, ಉತ್ತರಖಂಡದ ಡೆಹರಾಡೂನ್ ಹಾಗೂ ಜೋಶಿಮಟ ಮೂಲಕ ಚಂದ್ರನ ನೆರಳು ಭೂಮಿ ಮೇಲೆ ಹಾದುಹೋಯಿತು. ದೇಶದ ಕೆಲವು ಭಾಗಗಳಲ್ಲಿ ಶೇ. 99.7ರಷ್ಟು ಪ್ರಮಾಣದ ಸೂರ್ಯಗ್ರಹಣ ಗೋಚರವಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಬೆಂಗಳೂರಿನ ನೆಹರು ತಾರಾಲಯದಲ್ಲಿ ಕಂಕಣ ಸೂರ್ಯಗ್ರಹಣ ವೀಕ್ಷಿಸಲು ಸೂಕ್ತ ವ್ಯವಸ್ಥೆ ಮಾಡಿದ್ದರು. ವಿಜ್ಞಾನಿಗಳು, ವಿಜ್ಞಾನ ಚಳವಳಿಯ ಕಾರ್ಯಕರ್ತರು, ಮೌಢ್ಯಾಚರಣೆಯ ವಿರೋಧಿಗಳು, ವಿದ್ಯಾರ್ಥಿಗಳು ಕಂಕಣ ಸೂರ್ಯ ಗ್ರಹಣವನ್ನು ವೀಕ್ಷಿಸಿದರು.

ಖಗೋಳದಲ್ಲಿ ನಡೆಯಲಿರುವ ನೆರಳು ಬೆಳಕಿನ ಆಟವನ್ನು ನೋಡಿದ ಲಕ್ಷಾಂತರ ಜನರು ಗ್ರಹಣ ವೀಕ್ಷಣೆಯಿಂದ ಯಾವುದೇ ಜೀವಿಗಳ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ. ಮನೆಯಿಂದ ಹೊರಬಂದದು ಖಗೋಳದಲ್ಲಿ ನಡೆಯುವ ವಿಸ್ಮಯವನ್ನು ನೋಡಬಹುದು ಎಂಬುದನ್ನು ಸಾರಿಹೇಳಿದರು.

ಕೆಲವು ಭಾಗಗಳಲ್ಲಿ ಸೂರ್ಯ ಗ್ರಹಣ ವೀಕ್ಷಣೆಗೆ ಮೋಡಗಳು ಅಡ್ಡಿಯಾದವು. ಉತ್ತರ ಬಾರತದಲ್ಲಿ ಕಂಕಣ ಗ್ರಹಣ ಕಂಡುಬಂದರೆ ದಕ್ಷಿಣ ಭಾರತದ ನಗರಗಳಲ್ಲಿ ಪಾರ್ಶ್ವ ಸೂರ್ಯಗ್ರಹಣ ಕಂಡುಬಂತು ಎಂದು ವರದಿಗಳು ತಿಳಿಸಿವೆ.

ತುಮಕೂರಿನ ವಿಜ್ಞಾನ ಕೇಂದ್ರ ಮತ್ತು ಜನಚಳವಳಿ ಕೇಂದ್ರದಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಿತ್ತು. ಸೌರಕನ್ನಡಗಳಿಂದ ನೂರಾರು ಮಂದಿ ಗ್ರಹಣ ನೋಡಿ ಆನಂದಪಟ್ಟರು. ಮಕ್ಕಳೂ ಕೂಡ ಪಾರ್ಶ್ವ ಗ್ರಹಣ ವೀಕ್ಷಿಸಿ ಸಂತೋಷಗೊಂಡರು. ತುಮಕೂರು ವಿಜ್ಞಾನ ಕೇಂದ್ರದಲ್ಲಿ ಮೌಢ್ಯಾಚರಣೆ ವಿರೋಧಿಸಿ ಗ್ರಹಣ ಸಮಯದಲ್ಲಿ ಮಂಡಕ್ಕಿ ಪುರಿ ಹಂಚಿಕೊಂಡು ತಿಂದರು.

ಜನಚಳವಳಿ ಕೇಂದ್ರದಲ್ಲಿ ಸೌರಕನ್ನಡಗಳನ್ನು ಬಳಸಿ ವಿವಿಧ ವಿಭಾಗಗಳ ಕಾರ್ಮಿಕರು ಸೂರ್ಯಗ್ರಹಣ ನೋಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಗ್ರಹಣ ಕಾಲದಲ್ಲಿ ಏನನ್ನೂ ತಿನ್ನಬಾರದು ಎಂಬ ಮೂಢ ನಂಬಿಕೆ ಮುರಿಯಲು ಕಾರ್ಮಿಕರೆಲ್ಲರೂ ಉಪ್ಪಿಟ್ಟು ಮತ್ತು ಕೇಸರಿ ಬಾತ್ ಸೇವಿಸಿ ಸಂಪ್ರದಾಯ ಮುರಿದರು.

ಟಿವಿ ಮಾಧ್ಯಮಗಳಲ್ಲಿ ಜ್ಯೋತಿಷಿಗಳು ಸೂರ್ಯಗ್ರಹಣದಿಂದ ವಿವಿಧ ರಾಶಿಯ ಜನರಿಗೆ ತೊಂದರೆಗಳಾಗಲಿವೆ ಎಂದು ಸುಳ್ಳು ಸುದ್ದಿ ಹರಡಿದ ಹಿನ್ನೆಲೆಯಲ್ಲಿ ಬಹುತೇಕರು ಮನೆಯಲ್ಲೇ ಉಳಿದು ಮೌಢ್ಯತೆಯನ್ನು ಆಚರಿಸಿದರು. ಅಲ್ಲದೆ ಖಗೋಳದಲ್ಲಾಗುವ ವಿಸ್ಮಯವನ್ನು ನೋಡಲು ವಂಚಿತರಾದರು.


ಇದನ್ನೂ ಓದಿ: ಕೊರೊನಾ ಕಾಲದಲ್ಲಿಯೂ ಬಡ್ಡಿಗೆ ಬಡ್ಡಿ ಸೇರಿಸಿ ಹಣ ವಸೂಲಿ: ಮುತ್ತೂಟ್ ಫೈನಾನ್ಸ್‌ನಿಂದ ಗ್ರಾಹಕರಿಗೆ ಕಿರುಕುಳ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...