ಬಂಧಿತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಮತ್ತು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅವರನ್ನು ವೈಭವೀಕರಿಸುವ ಟೀ-ಶರ್ಟ್‌ಗಳನ್ನು ಮಾರಾಟ ಮಾಡಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರ ಸೈಬರ್ ವಿಭಾಗವು ಕೆಲವು ಆನ್‌ಲೈನ್ ಮಾರುಕಟ್ಟೆಗಳು ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
“ಕ್ರಿಮಿನಲ್ ವ್ಯಕ್ತಿಗಳನ್ನು ಆರಾಧಿಸುವ ಉತ್ಪನ್ನಗಳು ಯುವ ಮನಸ್ಸುಗಳನ್ನು ಋಣಾತ್ಮಕವಾಗಿ ಪ್ರಭಾವಿಸುತ್ತದೆ. ಇಂತಹ ವಿಕೃತ ಮೌಲ್ಯಗಳ ಪ್ರಚಾರ ಮಾಡಿದರೆ ಸಮಾಜಕ್ಕೆ ಭಾರಿ ಅಪಾಯ ಇವೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಲಾರೆನ್ಸ್ ಬಿಷ್ಣೋಯ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸೈಬರ್ ಭದ್ರತಾ ಅಧಿಕಾರಿಗಳ ಆನ್‌ಲೈನ್ ಪರಿಶೀಲನೆಯ ಸಮಯದಲ್ಲಿ, ಫ್ಲಿಪ್‌ಕಾರ್ಟ್, ಅಲೈಕ್ಸ್‌ಪ್ರೆಸ್ ಸೇರಿದಂತೆ ಹಲವಾರು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ಟೀಶಾಪರ್ ಮತ್ತು ಇಟ್ಸಿಯಂತಹ ಮಾರುಕಟ್ಟೆ ಸ್ಥಳಗಳಲ್ಲಿ ಲಾರೆನ್ಸ್ ಬಿಷ್ಣೋಯ್ ಮತ್ತು ದಾವೂದ್ ಇಬ್ರಾಹಿಂ ಅವರಂತಹ ದರೋಡೆಕೋರರನ್ನು ವೈಭವೀಕರಿಸುವ ಟೀ-ಶರ್ಟ್‌ಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕ್ರಿಮಿನಲ್ ಜೀವನಶೈಲಿಯನ್ನು ವೈಭವೀಕರಿಸುವ ಸಂದೇಶಗಳನ್ನು ಹರಡಲು ಉಡುಪುಗಳನ್ನು ಬಳಸುವ ಮೂಲಕ ಯುವಕರ ಮೌಲ್ಯಗಳನ್ನು ಭ್ರಷ್ಟಗೊಳಿಸಲು ಪ್ರಯತ್ನಿಸುತ್ತಿರುವುದರಿಂದ ಇದನ್ನು ಹಾನಿಕಾರಕ ವಸ್ತುವೆಂದು ಪರಿಗಣಿಸುವುದಾಗಿ ಮಹಾರಾಷ್ಟ್ರ ಸೈಬರ್ ಪ್ರಕಟಣೆಯಲ್ಲಿ ತಿಳಿಸಿದೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಮಹಾರಾಷ್ಟ್ರ ಸೈಬರ್ ಪೊಲೀಸರು, ಈ ಆಕ್ಷೇಪಾರ್ಹ ಉತ್ಪನ್ನಗಳ ಪಟ್ಟಿಗೆ ಜವಾಬ್ದಾರರಾಗಿರುವ ಮಾರಾಟಗಾರರ ವಿರುದ್ಧ ವಿವಿಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್‌ಗಳ ಅಡಿಯಲ್ಲಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದೆ ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಕೋಲ್ಕತ್ತಾ ಅತ್ಯಾಚಾರ – ಕೊಲೆ ಪ್ರಕರಣ | ವಿಚಾರಣೆಯನ್ನು ಪ.ಬಂಗಾಳದಿಂದ ವರ್ಗಾಯಿಸಲು ಸುಪ್ರೀಂ ನಕಾರ
ಕೋಲ್ಕತ್ತಾ ಅತ್ಯಾಚಾರ – ಕೊಲೆ ಪ್ರಕರಣ | ವಿಚಾರಣೆಯನ್ನು ಪ.ಬಂಗಾಳದಿಂದ ವರ್ಗಾಯಿಸಲು ಸುಪ್ರೀಂ ನಕಾರ


