HomeUncategorizedದೀಪ ಹಚ್ಚಲು ಅಭ್ಯಂತರವಿಲ್ಲ, ಆದರೆ ಪ್ರಧಾನಿ ತಾವು ಮಾಡುವ ಕೆಲಸದ ಬಗ್ಗೆ ಗಮನ ಹರಿಸಲಿ...!!

ದೀಪ ಹಚ್ಚಲು ಅಭ್ಯಂತರವಿಲ್ಲ, ಆದರೆ ಪ್ರಧಾನಿ ತಾವು ಮಾಡುವ ಕೆಲಸದ ಬಗ್ಗೆ ಗಮನ ಹರಿಸಲಿ…!!

’ಕೊರೊನಾ ಅವಧಿ’ಯಲ್ಲಿ ಪ್ರಧಾನಿಯವರು ದೇಶವನ್ನುದ್ದೇಶಿಸಿ ಮಾಡಿದ ಮೂರನೇ ಭಾಷಣದ ಕುರಿತು ನಾನುಗೌರಿ.ಕಾಂ ಕೆಲವು ವ್ಯಕ್ತಿಗಳನ್ನು ಮಾತಾಡಿಸಿದಾಗ ಬಂದ ಅಭಿಪ್ರಾಯಗಳನ್ನು ಆಧರಿಸಿ ಬರೆದ ವಿಶೇಷ ವರದಿ.

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿಯವರ ಇಂದಿನ ಕರೆಯ ಕುರಿತು ಕೊರೊನಾ ಸೋಂಕು ತಡೆ ಮತ್ತು ಲಾಕ್‌ಡೌನ್‌ ಪರಿಹಾರ ಕಾರ್ಯಗಳಲ್ಲಿ ತೊಡಗಿರುವ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಧಾನಿಯವರು ಕೊರೊನ ವೈರಸ್ ವಿರುದ್ದ ರಾಷ್ಟ್ರದ ಸಾಮೂಹಿಕ ಒಗ್ಗಟ್ಟಿನ ಮನೋಭಾವವನ್ನು ಪ್ರದರ್ಶಿಸಲು ಬಾಲ್ಕನಿಗಳಲ್ಲಿ ಆದಿತ್ಯವಾರ ರಾತ್ರಿ ದೀಪ ಹಚ್ಚುವಂತೆ ದೇಶದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕೊರೊನ ವೈರಸ್ ಸ್ಫೋಟದ ನಂತರ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ತನ್ನ ಮೂರನೇ ಭಾಷಣದಲ್ಲಿ, ಏಪ್ರಿಲ್ 5 ರ ಆದಿತ್ಯವಾರದಂದು ರಾತ್ರಿ 9 ಗಂಟೆಗೆ ಒಂಬತ್ತು ನಿಮಿಷಗಳ ಕಾಲ ತಮ್ಮ ಮನೆಗಳ ದೀಪಗಳನ್ನು ಸ್ವಿಚ್ ಆಫ್ ಮಾಡಿ, ದೀಪಗಳು, ಮೇಣದ ಬತ್ತಿಗಳು, ಮೊಬೈಲ್ ಬ್ಯಾಟರಿ ದೀಪಗಳನ್ನು ಬೆಳಗಿಸಬೇಕೆಂದು ಮನವಿ ಮಾಡಿದರು.

ಹೆಸರು ಹೇಳಲಿಚ್ಛಿಸದ ತುಮಕೂರು ಜಿಲ್ಲೆಯ ವೈದ್ಯರೊಬ್ಬರು ’ಪ್ರಧಾನಿಯ ಮಾತು ಒಪ್ಪಿಕೊಳ್ಳುತ್ತೇನೆ, ಸಾಂಕ್ರಾಮಿಕ ರೋಗದ ವಿರುದ್ದ ರಾಷ್ಟ್ರದ ಜನತೆ ಒಗ್ಗಟ್ಟು ಪ್ರದರ್ಶಿಸಬೇಕು, ದೀಪವನ್ನೂ ಹಚ್ಚುತ್ತೇವೆ ಸಮಸ್ಯೆ ಇಲ್ಲ. ಆದರೆ ಪ್ರಸ್ತುತ ಸಮಯದಲ್ಲಿ ಜನತೆ ಪ್ರಧಾನಿಯಿಂದ ಇನ್ನೂ ಹೆಚ್ಚಿನದ್ದನ್ನು ನಿರೀಕ್ಷಿಸಿದ್ದರು. ಕೊರೊನ ಲಾಕ್‌ಡೌನ್‌ನಿಂದಾಗಿ ದೇಶದ ಸಂಪತ್ತು ಉತ್ಪಾದಿಸುವ ಕಾರ್ಮಿಕರು ಅನುಭವಿಸುತ್ತಿರುವ ಕಷ್ಟದ ಬಗ್ಗೆ ಹಾಗೂ ಅವರ ಸಮಸ್ಯೆ ಪರಿಹಾರಮಾಡುವ ಬಗ್ಗೆ ದೇಶದ ಪ್ರಧಾನಿಯಗಿ ಮೋದಿ ಮಾತನಾಡುತ್ತಿರಬೇಕಿತ್ತು. ವೈರಸನ್ನು ಹಿಡಿದು ಕೋಮುವಾದೀಕರಣ ಮಾಡುವವರ ಬಗಗೆ ಪ್ರಧಾನಿ ಮಾತನಾಡಬೇಕಿತ್ತು. ಆದರೆ ನಮ್ಮ ಪ್ರಧಾನಿ ಮಾಡಿದ್ದೇನು? ಅದೇ ಹಳೆಯ ಭಾಯಿಯೋಂ ಬೆಹನಿಂದ ಹಿಡಿದು ಕೊನೆಯವರೆಗೂ ಬರಿಯ ಸಪ್ಪೆ ಮಾತುಗಳನ್ನು. ಅವರ ಮಾತುಗಳು ಭಾರತದಂತಹ ಬೃಹತ್ ದೇಶವನ್ನು ಆಳುತ್ತಿರುವ ಒಬ್ಬ ಪ್ರಧಾನಿಯ ಮಾತಿನಂತೆ ಇರಲೇ ಇಲ್ಲ. ನನಗೆ ಕೇಳಿಸಿದ್ದು ಕೇವಲ ಹೊಸ ಸಿನೆಮಾ ಬಂದಾಗ ಚಿತ್ರ ನಟನೊಬ್ಬ ತನ್ನ ಅಭಿಮಾನಿಗಳೊಂದಿಗೆ ಮಾತನಾಡಿದಂತೆ ಅನಿಸುತ್ತಿತ್ತು” ಎಂದು ಹೇಳಿದ್ದಾರೆ.

’ಕೊರೊನ ರೋಗಕ್ಕೆ ಈಗಾಗಲೆ 70 ಕ್ಕಿಂತಲೂ ಹೆಚ್ಚು ಜನರು ಸತ್ತಿದ್ದರೂ ದೇಶದಲ್ಲಿ ಇನ್ನೂ ಆಸ್ಪತ್ರೆಗಳು ಸರಿಯಾಗಿ ಸಜ್ಜುಗೊಂಡಿಲ್ಲ. ಆರೋಗ್ಯ ಸಲಕರಣೆಗಳು ಇನ್ನು ಸಿಗುತ್ತಿಲ್ಲ ಎಂದು ಸುದ್ದಿಗಳು ಬರುತ್ತಿವೆ. ಈ ಬಗ್ಗೆ ತೆಗೆದುಕೊಂಡ ಕಾರ್ಯಗಳ ಬಗ್ಗೆ ಮಾತನಾಡಬಹುದಿತ್ತು. ಅದೂ ಇಲ್ಲವೆಂದರೆ ದೇಶದ ಜನರಿಗೆ ಕೊರೊನ ಬಗ್ಗೆ ಇರುವ ತಪ್ಪು ಅಭಿಪ್ರಾಯಗಳನ್ನು ಹೋಗಲಾಡಿಸಬಹುದಿತ್ತು. ಯಾಕೆಂದರೆ ಇಂತಹಾ ಸಮಯದಲ್ಲಿ ದೇಶದ ಪ್ರಧಾನಿಗಳ ಮಾತನ್ನು ದೇಶವೇ ಕೇಳಿಸಿಕೊಳ್ಳುತ್ತಿರುತ್ತವೆ, ಇದರಿಂದ ಜನರ ನೆಡುವೆ ಇದ್ದ ಭಯ ಹೋಗಿ ತುಸು ಧೈರ್ಯವಾದರೂ ಬರುತ್ತಿತ್ತು’ ಅವರು ಹೇಳಿದ್ದಾರೆ.

ಗಡಿ ಪ್ರದೇಶವಾದ ಮಧುಗಿರಿ ತಾಲೂಕಿನ ಅನಿಲ್ ಕುಮಾರ್ ಅವರನ್ನು ಮಾತಾಡಿಸಿದಾಗ ಅವರು ಆಂಧ್ರದ ಸ್ಥಿತಿಗೆ ಸಂಬಂಧಿಸಿದ ಫೋಟೋವೊಂದನ್ನು ಕಳಿಸಿ, ಈ ರೀತಿ ಹೇಳಿದರು. ’ದೇಶದಲ್ಲಿ ಪರಿಸ್ಥಿತಿ ಹೇಗಿದೆಯೆಂದರೆ ಈ ಚಿತ್ರದಲ್ಲೇ ನೋಡಿ ಆಂಧ್ರ ಪ್ರದೆಶದ ಎಮ್.ಎಲ್.ಎ ಒಬ್ಬರು, ಕುಂದುರ್ಪಿ ಎಂಬ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾವು ಮಾತ್ರ  N95 ಮಾಸ್ಕನ್ನು ಹಾಕಿದ್ದಾರೆ, ಅವರ ಹಾಗೂ ಅವರ ಗನ್‌ಮ್ಯಾನ್‌ಗಳು ಕೈಗೆ ಗ್ಲೌಸ್ ಹಾಕಿ ಹಾಕಿದ್ದಾರೆ. ಆದರೆ ಸರಿಯಾಗಿ ಗಮನಿಸಿ ರೋಗಿಗಳನ್ನು ಶುಶ್ರೂಷೆ ಮಾಡುವ ಡಾಕ್ಟರುಗಳು ತನ್ನ ಮುಖಕ್ಕೆ ಕರ್ಚೀಫ್ ಕಟ್ಟಿಕೊಂಡಿದ್ದಾರೆ. ಇದು ನಮ್ಮ ದೇಶದ ಪರಿಸ್ಥಿತಿ. ಬೆಂಗಳೂರಿನ ಹಲವಾರು ಮೆಡಿಕಲ್ ಸ್ಟೋರುಗಳಲ್ಲಿ ಈಗಾಗಲೇ ಮಾಸ್ಕುಗಳು, ಸೋಪುಗಳು ಹಾಗೂ ಹ್ಯಾಂಡ್ ಸ್ಯಾನಿಟೈಝ್ ಇಲ್ಲ ಎಂದು ಬೋರ್ಡುಗಳನ್ನು ಹಾಕಿಕೊಂಡಿವೆ. ಇಂತಹ ಸಂದರ್ಭದಲ್ಲಿ ಸರ್ಕಾರಗಳು ಇವುಗಳ ಬೇಡಿಕೆಗಳನ್ನು ಪೂರೈಸುವುದನ್ನು ಬಿಟ್ಟು ಚಪ್ಪಾಳೆ, ದೀಪ ಹಚ್ಚುವುದು, ಮೆರವಣಿಗೆ ಮಾಡುವ ಬಗ್ಗೆ ಮಾತನಾಡುತ್ತಾ ಕೂತಿದೆ. ಖಂಡಿತವಾಗಿಯೂ ಇದು ಜವಾಬ್ದಾರಿಯುತ ಸರ್ಕಾರ ಅಲ್ಲವೇ ಅಲ್ಲ.’ ಎಂದು ಅನಿಲ್ ಕುಮಾರ್ ತಿಳಿಸಿದರು.

ಈ ಬಗ್ಗೆ ಪಬ್ಲಿಕ್ ಹೆಲ್ತ್ ಎಕ್ಸ್‌ಪರ್ಟ್‌  ಡಾ. ಸಿಲ್ವಿಯ ಅವರು ಪ್ರತಿಕ್ರಿಯಿಸುತ್ತಾ “ದೇಶವನ್ನು ಲಾಕ್‌ಡೌನ್‌ ಮಾಡುವುದು ಒಂದು ದೊಡ್ಡ ಜವಾಬ್ದಾರಿ. ಲಾಕ್‌ಡೌನ್‌ ಮಾಡುವುದಕ್ಕಿಂತ ಮುಂಚೆ ಹಲವಾರು ತಯಾರಿಗಳು ಮಾಡಿಕೊಳ್ಳಬೇಕಾಗುತ್ತದೆ. ಜನರಿಗೆ ಯಾವುದೆ ತೊಂದರೆ ಆಗದೇ ಇರುವ ರೀತಿಯಲ್ಲಿ ಲಾಕ್‌ಡೌನ್‌ ಮಾಡುವ ತಯಾರಿ ಆಗಬೇಕಿತ್ತು. ಆದರೆ ಸರ್ಕಾರ ಈಗ ಮಾಡಿರುವುದೇನೆಂದರೆ ನಾವು ಲಾಕ್‌ಡೌನ್‌ ಮಾಡುತ್ತೇವೆ ನೀವು ಏನು ಬೇಕಾದರೂ ಮಾಡಿಕೊಳ್ಳಿ, ನೀವು ಲಾಕ್‌ಡೌನ್‌ ಮಾಡಿಲ್ಲವೆಂದರೆ ನಾವು ನಿಮ್ಮನ್ನು ಶಿಕ್ಷೆಗೊಳಪಡಿಸುತ್ತೇವೆ ಎಂದು ಹೇಳುತ್ತಿದೆ” ಎಂದರು.

“ಲಾಕ್‌ಡೌನ್‌ ಹೇಗೆ ಮಾಡಬೇಕೆಂದು ಬೀದಿಯ ಸಾಮನ್ಯ ಮನುಷ್ಯನ ಬಳಿ ಹೊಗಿ ಕೇಳಿದರೂ ಅವರೇ ಅದರ ಬಗ್ಗೆ ಸರಳವಾಗಿ ಹೇಳುತ್ತಾರೆ. ಇದಕ್ಕೆಲ್ಲ ದೊಡ್ಡ ಮಟ್ಟದ ಜ್ಞಾನ ಬೇಕಾಗಿಲ್ಲ, ಇಷ್ಟನ್ನೂ ನಮ್ಮ ಸರ್ಕಾರ ಮಾಡಿಲ್ಲ. ಲಾಕ್‌ಡೌನ್‌ ಸಮಯದಲ್ಲಿ ಏನು ತಿನ್ನುತ್ತಾರೆ, ತುರ್ತು ಪರಿಸ್ಥಿತಿಯ ಅಗತ್ಯ ಬಂದರೆ ಏನು ಮಾಡಬೇಕು, ಉದ್ಯೋಗ ಕಳೆದುಕೊಂಡರೆ ಏನು ಮಾಡಬೇಕು, ದಿನಗೂಲಿ ಕಾರ್ಮಿಕರು ಏನು ಮಾಡಬೇಕು ಹೀಗೆ ಯಾವುದೆ ರೀತಿಯಲ್ಲಿ ಚಿಂತಿಸದೆ ಏಕಾಏಕಿ ಲಾಕ್‌ಡೌನ್ ಘೋಷಿಸಿ ಕ್ಯಾಂಡಲ್ ಹಚ್ಚಿ, ಪ್ಲೇಟ್ ಹೊಡೆಯಿರಿ, ಚಪ್ಪಾಳೆ ತಟ್ಟಿ ಎಂದು ಹೇಳುತ್ತಾರೆಂದರೆ ನಮ್ಮ ದೇಶದಲ್ಲಿ ಇರುವ ಮೂಡನಂಬಿಕೆಯ ಬಗ್ಗೆ ಅರಿವಾಗುತ್ತದೆ” ಎಂದು ಡಾ. ಸಿಲ್ವಿಯ ಹೇಳಿದ್ದಾರೆ.

ಪ್ರಪಂಚದ ಬಹುತೇಕ ರಾಷ್ಟ್ರಗಳಲ್ಲಿ ಲಾಕ್‌ಡೌನ್‌ ಚಾಲ್ತಿಯಲ್ಲಿದೆ. ಇತರ ದೇಶಗಳಲ್ಲಿ ಹೇಗೆ ನಿಭಾಯಿಸುತ್ತಿದ್ದಾರೆ, ಒಂದು ವಾರಕ್ಕೂ ಹೆಚ್ಚಿನ ಲಾಕ್‌ಡೌನ್‌ನಿಂದ ಕಲಿತ ಪಾಠಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸರ್ವಪಕ್ಷ ಸಮಾಲೋಚನೆ ನಡೆಸಿ ಪ್ರಧಾನಿ ಮೋದಿ ಅವರು ದೇಶದ ಜನರ ಆತಂಕವನ್ನು ಹೋಗಲಾಡಿಸುತ್ತಾರೆ ಎಂಬ ನಿರೀಕ್ಷೆ ಮತ್ತೊಮ್ಮೆ ಮನ್‌ಕಿ ಬಾತ್‌ನಲ್ಲಿ ಹುಸಿಯಾಗದಿರಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಪ್ರದಾನಿಗಳ ಕರೆಗೆ ನಾವು ಸ್ಪಂದಿಸುವುದು ಕೇವಲ ೯ ನಿಮಿಷ ಮಾತ್ರ. ಅದೂ ಸಾಮೂಹಿಕವಾಗಿ ಮಾನಸಿಕ ದೃಢತೆಯನ್ನೂ, ಏಕತೆಯನ್ನೂ ಪ್ರದರ್ಶಿಸುವ, ಸೋಂಕಿಗೆ ಒಳಗಾಗಿರುವ ಜನರಿಗೆ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಸಲುವಾಗಿ ಭಾಗವಹಿಸುವ ಒಂದು ಪ್ರಕ್ರಿಯೆ. ಶ್ರೀಮತಿ ಡಾಕ್ಟರ್ ಸಿಲ್ಲಿ ವಿಮಾ ಅವರು ತಿಳಿಯೋಣವಾಗಲಿ. ಭಾರತೀಯತೆ ಎಂದರೇ ಆಧ್ಯಾತ್ಮ. ಅದು ನಮ್ಮತನ, ಪಾಶ್ಚಾತ್ಯರೇ ಭಾರತದತ್ತ ತಿರುಗಿ ನೋಡುತ್ತಿರುವಾಗ, ವಿಶ್ವ ಆರೋಗ್ಯ ಸಂಸ್ಥೆಯೇ ಭಾರತವನ್ನು ಮುಂದಾಳತ್ವ ವಹಿಸಲು ಬೇಡುತ್ತಿರುವಾಗ ನಮ್ಮದೇ ಜನರ ಮನಸ್ತಿತಿ ಕಂಡು ಮರುಗಬಹುದಷ್ಟೆ.

  2. Problems will not get solved by speech of Prime minister or by this article of this author.there was no need for both these. Don’t waste time publishing these

  3. Thinking our PM is not doing his job & imposing same on other readers is an absolute rubbish article…
    Allowing time to lockdown in our country with such huge population is just doing a massive blunder..
    We have seen how there is a mass flow with all the restrictions.,..

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...