Homeಮುಖಪುಟಇಸ್ಲಾಂ ಮತ್ತು ಅಂಬೇಡ್ಕರ್‌‌ ಬಗೆಗಿನ ಸುಳ್ಳುಗಳು; ಮಹಾ ಮಾನವತಾವಾದಿಗೆ ‘ಸೂಲಿಬೆಲೆ’ ಮಾಡಿದ ಅವಮಾನ!

ಇಸ್ಲಾಂ ಮತ್ತು ಅಂಬೇಡ್ಕರ್‌‌ ಬಗೆಗಿನ ಸುಳ್ಳುಗಳು; ಮಹಾ ಮಾನವತಾವಾದಿಗೆ ‘ಸೂಲಿಬೆಲೆ’ ಮಾಡಿದ ಅವಮಾನ!

- Advertisement -
- Advertisement -

‘ಇಸ್ಲಾಂ ಕುರಿತು ಅಂಬೇಡ್ಕರ್ ಮನದಿಂಗಿತ’ ಎಂಬ ವಿಚಾರದ ಬಗ್ಗೆ ಚಕ್ರವರ್ತಿ ಸೂಲಿಬೆಲೆಯವರು ಮಾತನಾಡಿದ್ದಾರೆ. ಮಹಾ ಮಾನವತಾವಾದಿಯಾಗಿದ್ದ ಡಾ.ಬಿ.ಆರ್. ಆಂಬೇಡ್ಕರ್ ಮುಸ್ಲಿಂ ದ್ವೇಷಿಯಾಗಿದ್ದರು ಎಂದು ಬಿಂಬಿಸಿ ಅಂಬೇಡ್ಕರ್ ಮತ್ತು ಮುಸ್ಲಿಮರನ್ನು ಏಕಕಾಲದಲ್ಲಿ ಅವಮಾನಿಸಲು ಸೂಲಿಬೆಲೆ ಹೆಣಗಾಡಿದ್ದಾರೆ‌. ಅಂಬೇಡ್ಕರ್‌ಗೆ ಮಹಾಮಾನವತಾವಾದಿಯ ವ್ಯಕ್ತಿತ್ವವಿದೆ. ಅಂಬೇಡ್ಕರ್ ಘನತೆಯ ಕುಂದು ತರುವ ಸಂಘಪರಿವಾರದ ಹಳೇ ಕುತಂತ್ರವೇ ಸೂಲಿಬೆಲೆಯ ಈ ಪ್ರಯತ್ನವಾಗಿದೆ. ಅದನ್ನು ಹೊರತುಪಡಿಸಿದರೆ ಯಾವುದೇ ಜನಾಂಗ ಅಥವಾ ಸಮುದಾಯವನ್ನು ಪೂರ್ವಾಗ್ರಹ ಪೀಡಿತವಾಗಿ ನೋಡುವ ವ್ಯಕ್ತಿತ್ವ ಅಂಬೇಡ್ಕರರದ್ದಲ್ಲ.

ಆಗಿನ ಕಾಲಘಟ್ಟದಲ್ಲಿ ಅಂಬೇಡ್ಕರ್‌ಗೆ ಮುಸ್ಲಿಮರ ನಡವಳಿಕೆ ಬಗ್ಗೆ ಆಕ್ಷೇಪಗಳು ಇದ್ದಿದ್ದು ನಿಜ. ‘ಇಸ್ಲಾಂ ಕೂಡಾ ದಲಿತರ ಬಗೆಗೆ ಅಸ್ಪೃಶ್ಯ ನಿಲುವನ್ನು ಹೊಂದಿತ್ತು. ಹಾಗಾಗಿ ಅಂಬೇಡ್ಕರ್ ಇಸ್ಲಾಂ ವಿರುದ್ದ ಆಕ್ರೋಶಿತರಾಗಿದ್ದರು’ ಎಂದು ಸೂಲಿಬೆಲೆ ಹೇಳುತ್ತಾರೆ. ಇದು ಬಾಗಶಃ ನಿಜ. ಆದರೆ ಅದಕ್ಕೆ ಕಾರಣ ಇಸ್ಲಾಂ ಧರ್ಮ ಅಲ್ಲ. ಇಸ್ಲಾಂ ಧರ್ಮದ ಮೂಲ ಆಶಯಗಳು ಒಳ್ಳೆಯದಿದ್ದು, ಅದು ಭಾರತದಲ್ಲಿ ಹಿಂದೂ ಸಮಾಜವನ್ನು ಅನುಕರಣೆ ಮಾಡಿ ಕೆಟ್ಟ ದಾರಿ ಹಿಡಿದಿದೆ ಎಂದೇ ಅಂಬೇಡ್ಕರ್ ಭಾವಿಸಿದ್ದರು.

ಇದನ್ನೂ ಓದಿ: ಭಾರತವನ್ನು ತಾರತಮ್ಯಗಳಿಂದ ಮುಕ್ತಗೊಳಿಸುವುದೇ ಅಂಬೇಡ್ಕರ್‌ರಿಗೆ ಗೌರವ ಸಲ್ಲಿಸುವ ಏಕೈಕ ಮಾರ್ಗ

ಹಿಂದೂ ಧರ್ಮೀಯ ಮೇಲ್ವರ್ಗಗಳ ಜೊತೆ ಆರ್ಥಿಕ, ಸಾಮಾಜಿಕ, ರಾಜಕೀಯ ಮಿಳಿತವನ್ನು ಹೊಂದಿದ್ದ ಮುಸ್ಲಿಮರು ತಮ್ಮ ಧರ್ಮದಲ್ಲಿ ಇಲ್ಲದ ಅಸ್ಪೃಶ್ಯತೆಯನ್ನು ಹಿಂದೂಗಳಿಂದ ಎರವಲು ಪಡೆದಿದ್ದರು ಎಂದು ಅಂಬೇಡ್ಕರ್‌ಗೆ ಅಸಮಾದಾನ ಇತ್ತು. ಇದು ಹಿಂದೂ ಧರ್ಮದ ತಾನೂ ಕೆಟ್ಟಿದ್ದಲ್ಲದೇ ಇಸ್ಲಾಂ ಧರ್ಮವನ್ನೂ ಕೆಡಿಸಿತ್ತು ಎಂಬ ಬಗೆಗಿನ ಅಸಮಾದಾನವಷ್ಟೆ.

PC : Pinterest

“ಮುಸ್ಲೀಮರ ಆಗಿನ ರಾಜಕೀಯದ ಬಗೆಗೆ” ಅಂಬೇಡ್ಕರ್ ಅಸಮಾದಾನಕ್ಕೆ ಇನ್ನೊಂದು ಮುಖ್ಯ ಕಾರಣ ಮನುವಾದಿ ಹಿಂದೂ ನಾಯಕರ ತಾಳಕ್ಕೆ ಕುಣಿಯುತ್ತಿದ್ದ ಮುಸ್ಲಿಂ ನಾಯಕರ ಧೋರಣೆ. ದಲಿತರ ಅಭಿವೃದ್ದಿ ವಿಚಾರವನ್ನು ಅಂಬೇಡ್ಕರ್ ಎತ್ತಿದಾಗ ಹಿಂದೂ ಮನುವಾದಿ ನಾಯಕರು ಮುಸ್ಲಿಂ ನಾಯಕರನ್ನು ಎತ್ತಿಕಟ್ಟುತ್ತಿದ್ದರು.

ಸರಳವಾಗಿ ಹೇಳುವುದಾದರೆ, ತಮ್ಮ ಹಿಂದಿನ ಅಧಿಕಾರವನ್ನು ಪಡೆಯಲು ಮನುವಾದಿ ಹಿಂದೂ ನಾಯಕರು ತಮ್ಮ ಹಿಡನ್ ಅಜೆಂಡಾದ ಭಾಗವಾಗಿ ಮುಸ್ಲಿಮರ ಬೇಡಿಕೆಗಳೆಲ್ಲವಕ್ಕೂ ಒಪ್ಪಿಗೆ ನೀಡುತ್ತಿದ್ದರು. ದಲಿತರು ಹಿಂದೂಗಳಲ್ಲ ಎಂಬುದು ಅಂಬೇಡ್ಕರ್ ಅವರ ನಿಲುವಾಗಿತ್ತು. ಅದಕ್ಕಾಗಿಯೇ ಹಿಂದೂ ಮತ್ತು ಮುಸ್ಲಿಂ ಎಂದು ಪ್ರತ್ಯೇಕಿಸಲು “ಅವಕಾಶವನ್ನು ಎರಡು ಪಾಲು” ಮಾತ್ರ ಮಾಡಲಾಗುತ್ತಿತ್ತು.

ಇದನ್ನೂ ಓದಿ: ಒಳಮೀಸಲಾತಿಯ ಕುರಿತು ಡಾ. ಬಿ.ಆರ್. ಅಂಬೇಡ್ಕರ್‌ರವರ ಆಶಯ ಎನು?

ಆದರೆ ಅವಕಾಶವನ್ನು “ಮೂರು ಪಾಲು ಮಾಡಿ” ಎಂಬುದು ಅಂಬೇಡ್ಕರ್ ಆಗ್ರಹವಾಗಿತ್ತು. ಒಂದೋ ದಲಿತರು ಹಿಂದೂಗಳೆಂದು ಒಪ್ಪಬೇಕಿತ್ತು. ಹಾಗೆ ಒಪ್ಪಿದರೆ ಸಾಮಾಜಿಕವಾಗಿ, ರಾಜಕೀಯವಾಗಿ ದಲಿತರಿಗೆ ಅನ್ಯಾಯವಾಗುತ್ತಿತ್ತು.‌‌ ಮೀಸಲಾತಿಯಿಂದ ವಂಚಿತರಾಗುತ್ತಿದ್ದರು. ಹಿಂದೂ ಮನುವಾದಿ ನಾಯಕರ ಈ ಅಜೆಂಡಾ ಆಗಿನ ಮುಸ್ಲಿಂ ನಾಯಕರಿಗೆ ಅರ್ಥ ಆಗುತ್ತಿರಲಿಲ್ಲ. ಹಾಗಾಗಿ ಅನಿವಾರ್ಯವಾಗಿ ಮುಸ್ಲಿಂ ಕೋಮುವಾದಿ, ಮುಸ್ಲಿಂ ದಲಿತ ವಿರೋಧಿ ನಿಲುವನ್ನು ಅಂಬೇಡ್ಕರ್ ವಿರೋಧಿಸಿದರೇ ವಿನಹ ಅವರು ಇಸ್ಲಾಂ ಧರ್ಮವಿರೋಧಿ ಆಗಿರಲಿಲ್ಲ.

ಅಂಬೇಡ್ಕರ್ ಸಾರಥ್ಯದ ‘ಬಹಿಷ್ಕೃತ ಭಾರತ’ ಪತ್ರಿಕೆಯಲ್ಲಿ ಮುಸ್ಲಿಂ ಚಿಂತಕರ, ಸಮಾಜವಾದಿಗಳ ಲೇಖನಗಳು ಪ್ರಕಟವಾಗುತ್ತಿದ್ದವು. ಆ ಎಲ್ಲಾ ಲೇಖನಗಳು ಮುಸ್ಲಿಮರ ಸಾಮಾಜಿಕ, ರಾಜಕೀಯ, ಅರ್ಥಿಕ ಸುಧಾರಣೆಯ ಪರವಾಗಿದ್ದವೇ ಆಗಿದ್ದವು. ಒಂದು ಹಂತದಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವ ಬಗ್ಗೆಯೂ ಡಾ ಬಿ ಆರ್ ಅಂಬೇಡ್ಕರ್ ಯೋಚಿಸಿದ್ದರು.

ಮುಸ್ಲಿಮರು ಮತ್ತು ದಲಿತರ ಉದ್ದಾರ ಅಂಬೇಡ್ಕರ್‌ರ ಒಂದು ದೊಡ್ಡ ಆಶಯವಾಗಿತ್ತು. ಅದಕ್ಕಾಗಿಯೇ ಅವರು ಸಂವಿದಾನ ರಚನಾ ಸಭೆಯನ್ನು ಪ್ರವೇಶ ಮಾಡಬೇಕಿತ್ತು. ಯಾರೂ ಕೂಡಾ ಅಂಬೇಡ್ಕರ್‌ರನ್ನು ಈ ನಿಟ್ಟಿನಲ್ಲಿ ಬೆಂಬಲಿಸದೇ ಇದ್ದಾಗ ಅಸೆಂಬ್ಲಿಯಲ್ಲಿ ಯೋಗೇಂದ್ರನಾಥ್ ಮಂಡಲ್ ಅಂಬೇಡ್ಕರ್ ಹೆಸರನ್ನು ಸೂಚಿಸಿದ್ದರು. ಈ ಸೂಚನೆಗೆ ಬೆಂಬಲ‌ ನೀಡಿದ್ದು ಮುಸ್ಲಿಂ ಲೀಗ್. ಇದರಿಂದಾಗಿಯೇ ಅಂಬೇಡ್ಕರ್ ಸಂವಿಧಾನ ರಚನಾ ಸಭೆ ಪ್ರವೇಶಿಸುವುದು ಸಾಧ್ಯವಾಯಿತು. ಸಂವಿಧಾನದಲ್ಲಿ ದಲಿತರು, ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರು ಮತ್ತು ಶೋಷಿತರಿಗೆ ಸಮಾನ ಹಕ್ಕುಗಳು ಮತ್ತು ಮೀಸಲಾತಿಗಳನ್ನು ನೀಡಲು ಸಾಧ್ಯವಾಯಿತು.

ಇದನ್ನೂ ಓದಿ: ಸಿನೆಮಾದ ಮೂಲಕ ಜಾತಿ ಮುಕ್ತ ಸಮಾಜ ಕಟ್ಟಲೊರಟ ಅಂಬೇಡ್ಕರ್‌ವಾದಿ ನಿರ್ದೇಶಕ ಪ.ರಂಜಿತ್

ಮಹಾ ಮಾನವತಾವಾದಿ ಡಾ ಬಿ ಆರ್ ಅಂಬೇಡ್ಕರ್ ಇಸ್ಲಾಂ ವಿರೋಧಿಯಾಗಿದ್ದರು ಎನ್ನುವ ಚಕ್ರವರ್ತಿ ಸೂಲಿಬೆಲೆ ಈ ಮೂಲಕ ಅಂಬೇಡ್ಕರ್ ವ್ಯಕ್ತಿತ್ವಕ್ಕೆ ಅವಮಾನ ಮಾಡಿದ್ದಾರೆ. ಅಂಬೇಡ್ಕರ್ ಕೋಮುವಾದ, ಅಸ್ಪೃಶ್ಯತೆ, ಅಸಮಾನತೆಯ ವಿರೋಧಿಯಾಗಿದ್ದರು. ಕೋಮುವಾದದ ವಿರೋಧವೆಂದರೆ ಅದು ಹಿಂದೂ ಕೋಮುವಾದವಿರಲಿ, ಮುಸ್ಲಿಮ್ ಕೋಮುವಾದವಿರಲಿ, ಕೋಮುವಾದಕ್ಕೆ ವಿರೋಧವಷ್ಟೆ. ಜನಾಂಗ, ಸಮುದಾಯದ ವಿರೋಧಿ ಎಂದರ್ಥವಲ್ಲ.

ಡಾ.ಬಿ.ಆರ್. ಅಂಬೇಡ್ಕರ್ ಅವರ ಈಗಿನ ಭಾರತೀಯ ವಾರಸುದಾರರಾದ ಹಿಂದೂ ಮುಸ್ಲಿಮರೆಲ್ಲರೂ ಕೋಮುವಾದ, ಅಸ್ಪೃಶ್ಯತೆ, ಅಸಮಾನತೆಯ ವಿರೋಧಿಗಳೇ ಆಗಿದ್ದಾರೆ. ಚಕ್ರವರ್ತಿ ಸೂಲಿಬೆಲೆಯ ಅಂಬೇಡ್ಕರ್ ವಿರೋಧಿ ಕುತಂತ್ರಕ್ಕೆ ಈ ನೆಲದ ಅಂಬೇಡ್ಕರ್‌ ವಾದಿಗಳು ಬಲಿಯಾಗುವುದಿಲ್ಲ. ಅಂಬೇಡ್ಕರ್ ವಾದ ಎಂದರೆ ಪ್ರಜ್ಞೆ ಎಂಬ ಪ್ರಾಥಮಿಕ ಜ್ಞಾನವೇ ಇಲ್ಲದೆ ಸೂಲಿಬೆಲೆ ವ್ಯರ್ಥ ಪ್ರಯತ್ನ ಮಾಡಿದ್ದಾರಷ್ಟೆ.

ಇದನ್ನೂ ಓದಿ: Factcheck ಅಂಬೇಡ್ಕರ್‌ರವರಿಗೆ ಭಾರತ ರತ್ನ ಕೊಟ್ಟಿದ್ದು ಅಟಲ್ ಬಿಹಾರ ವಾಜಪೇಯಿ- ಬಿ.ಎಲ್ ಸಂತೋಷ್ : ಈ ಮಾತು ನಿಜವೇ?

<iframe width="1280" height="720" src="https://www.youtube.com/embed/s3N8ypUOxec" title="YouTube video player" frameborder="0" allow="accelerometer; autoplay; clipboard-write; encrypted-media; gyroscope; picture-in-picture" allowfullscreen></iframe>
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...