Homeಮುಖಪುಟಕಳೆದ ವರ್ಷದಂತೆ ಇನ್ನು ವೇಗವಾಗಿ ಕೊರೊನಾ ವಿರುದ್ಧ ಹೋರಾಡೋಣ; ಮೋದಿ

ಕಳೆದ ವರ್ಷದಂತೆ ಇನ್ನು ವೇಗವಾಗಿ ಕೊರೊನಾ ವಿರುದ್ಧ ಹೋರಾಡೋಣ; ಮೋದಿ

- Advertisement -
- Advertisement -

ಕಳೆದ ವರ್ಷ ಕೊರೊನಾ ವಿರುದ್ಧ ಹೋರಾಡಿದಂತೆ, ಇನ್ನೂ ವೇಗವಾಗಿ ಮತ್ತು ಸಮನ್ವಯದೊಂದಿಗೆ ಭಾರತ ಹೋರಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೇಶಾದ್ಯಂತ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಕುರಿತು ಸಭೆ ನಡೆಸಿದ ಅವರು, ಲಸಿಕೆ ಉತ್ಪಾದನೆಯನ್ನು ತೀವ್ರಗೊಳಿಸಲು ದೇಶದ ಎಲ್ಲಾ ಸಾಮರ್ಥ್ಯವನ್ನು ತೊಡಗಿಸಿ ಎಂದು ತಿಳಿಸಿದ್ದಾರೆ.

ಟ್ವೀಟ್ ಮೂಲಕ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸಲು ಸಿದ್ಧತೆಯನ್ನು ಪರಿಶೀಲಿಸಲಾಗಿದೆ. ಔಷಧಿಗಳು, ಆಮ್ಲಜನಕ, ವೆಂಟಿಲೇಟರ್‌ಗಳು ಮತ್ತು ವ್ಯಾಕ್ಸಿನೇಷನ್‌ಗೆ ಸಂಬಂಧಿಸಿದ ಅಂಶಗಳನ್ನು ಚರ್ಚಿಸಲಾಯಿತು. ನಾವು ಕಳೆದ ವರ್ಷ ಮಾಡಿದಂತೆ, ಇನ್ನೂ ಹೆಚ್ಚಿನ ವೇಗ ಮತ್ತು ಸಮನ್ವಯದೊಂದಿಗೆ ಕೋವಿಡ್ ವಿರುದ್ಧ ಯಶಸ್ವಿಯಾಗಿ ಹೋರಾಡುತ್ತೇವೆ” ಎಂದು ಹೇಳಿದ್ದಾರೆ.

“ಕೋವಿಡ್ ವಿರುದ್ಧ ಹೋರಾಡಲು ಪರೀಕ್ಷೆ, ಪತ್ತೆ ಮತ್ತು ಚಿಕಿತ್ಸೆಗೆ ಬೇರೆ ಯಾವುದೇ ಪರ್ಯಾಯವಿಲ್ಲ ಎಂದ ಅವರು, ಅನುಮೋದಿತ ವೈದ್ಯಕೀಯ ಆಮ್ಲಜನಕ ಸ್ಥಾವರಗಳ ಸ್ಥಾಪನೆಯನ್ನು ವೇಗಗೊಳಿಸಬೇಕು ಮತ್ತು ಸ್ಥಳೀಯ ಆಡಳಿತಗಳು ಕ್ರಿಯಾಶೀಲವಾಗಿ ಜನರ ಕಾಳಜಿ ವಹಿಸಬೇಕು ಮತ್ತು ಸೂಕ್ಷ್ಮವಾಗಿರಬೇಕು” ಎಂದು ಒತ್ತಾಯಿಸಿದ್ದಾರೆ.

ಪ್ರಕರಣಗಳು ಹೆಚ್ಚಾಗುವುದರೊಂದಿಗೆ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ ಎಂಬ ಸಮಸ್ಯೆಗೆ ಉತ್ತರಿಸಿರುವ ಅವರು “ಲಭ್ಯತೆಯನ್ನು ಹೆಚ್ಚಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ಹೇಳಿದ್ದಾರೆ.

ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ಸಂಪೂರ್ಣ ರಾಷ್ಟ್ರೀಯ ಸಾಮರ್ಥ್ಯವನ್ನು ಬಳಸಿಕೊಳ್ಳಿ ಎಂದಿರುವ ಅವರು, ರೆಮೆಡಿಸಿವಿರ್ ಮತ್ತು ಇತರ ಔಷಧಿಗಳ ಪೂರೈಕೆಯನ್ನು ತೀವ್ರಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ನಿನ್ನೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ರಾಜ್ಯದಲ್ಲಿ ಆಮ್ಲಜನಕ ಮತ್ತು ರೆಮೆಡಿಸಿವಿರ್ ಔಷಧಿ ಕೊರತೆಯ ವಿಚಾರವಾಗಿ ಪ್ರಧಾನಿಯವರನ್ನು ಸಂಪರ್ಕಿಸಿದಾಗ ಅವರು ಬಂಗಾಳ ಚುನಾವಣಾ ಪ್ರಚಾರದಲ್ಲಿದ್ದಾರೆ ಎಂದು ಪಿಎಂಒ ತಿಳಿಸಿತ್ತು ಎಂದು ಮಹಾರಾಷ್ಟ್ರ ಸಚಿವರು ಕಿಡಿಕಾರಿದ್ದರು.


ಇದನ್ನೂ ಓದಿ: ಆಕ್ಸಿಜನ್ ಕೊರತೆ ಕುರಿತು ಪ್ರಧಾನಿಗೆ ಕರೆ ಮಾಡಿದ ಉದ್ಧವ್ ಠಾಕ್ರೆ: ಬಂಗಾಳ ಚುನಾವಣಾ ಪ್ರಚಾರದಲ್ಲಿದ್ದಾರೆ ಎಂದ ಪಿಎಂಒ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಕ‌ಳೆದ‌ವ‌ರ್ಷ‌ ದೀಪ‌ಹ‌ಚ್ಚಿ ಚ‌ಪ್ಪಾಳೆ ಹೊಡೆದು ಗ‌0ಟೆ ಬಾರಿಸಿದ್ದೆವು

    ಆದ‌ರೆ ಈ ವ‌ರ್ಷ‌? ಏನು?

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...