ಉದ್ದವ್
PC: National Heraldi

ರಾಜ್ಯದಲ್ಲಿ ಮಿತಿಮೀರಿರುವ ಕೊರೊನಾ ಪ್ರಕರಣಗಳನ್ನು ನಿಭಾಯಿಸಲು ಆಕ್ಸಿಜನ್ ಮತ್ತು ರೆಮ್‌ಡಿಸಿವಿರ್‌ ಔಷಧಿ ಕೊರತೆ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು  ಪ್ರಧಾನಿಮಂತ್ರಿ ಮೋದಿಯವರೊಂದಿಗೆ ಮಾತನಾಡಲು ಪ್ರಯತ್ನಿಸಿದರೆ ಪ್ರಧಾನಿ ಬಂಗಾಳ ಪ್ರಚರದಲ್ಲಿದ್ದಾರೆ ಎಂಬ ಉತ್ತರ ಬಂದಿದೆ ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲ್ಲಿಕ್ ಆರೋಪಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಕೈಮೀರುತ್ತಿದೆ. ನಮಗೆ ಆಮ್ಲಜನಕ ಮತ್ತು ರೆಮ್‌ಡಿಸಿವಿರ್‌ ಔಷಧಿಯ ಕೊರತೆಯುಂಟಾಗಿದೆ. ಈ ಕುರಿತು ಪ್ರಧಾನಿಯವರ ಸಹಾಯಕ್ಕಾಗಿ ಮುಖ್ಯಮಂತ್ರಿಗಳು ದೂರವಾಣಿ ಮೂಲಕ ಪ್ರಧಾನಿ ಕಾರ್ಯಾಲಯವನ್ನು ಸಂಪರ್ಕಿಸಿದರೆ ಪಿಎಂ ಬಂಗಾಳ ಪ್ರಚಾರದಲ್ಲಿದ್ದಾರೆ ಎಂಬ ಉತ್ತರ ಬರುತ್ತದೆ. ಇಲ್ಲಿ ಜನ ಸಾಯುತ್ತಿದ್ದರೆ ಮೋದಿ ಚುನಾವಣಾ ಪ್ರಚಾರದಲ್ಲಿದ್ದಾರೆ ಎಂದು ನವಾಬ್ ಮಲ್ಲಿಕ್ ಕಿಡಿಕಾರಿದ್ದಾರೆ.

ಆದರೆ ಪಿಎಂಒ ನವಾಬ್ ‌ಮಲ್ಲಿಕ್‌ರವರ ಆರೋಪಗಳನ್ನು ನಿರಾಕರಿಸಿದೆ. ಪ್ರಧಾನಿಯವರು ಶುಕ್ರವಾರದವರೆಗೂ ಕೊರೊನಾ ಕುರಿತು ಸಭೆ ನಡೆಸಿದ್ದಾರೆ. ರಾಜ್ಯಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಆಮ್ಲಜನಕ ಪೂರೈಕೆ ಮಾಡುತ್ತಿದ್ದಾರೆ ಎಂದಿದೆ.

ಬಂಗಾಳದ ಟಿಎಂಸಿ ನಾಯಕ ಡೆರೆಕ್ ಓ’ಬ್ರಿಯಾನ್ ಪ್ರತಿಕ್ರಿಯಿಸಿ “ಇದು ಆಘಾತಕಾರಿ ಬೆಳವಣಿಗೆ. ರಾಜ್ಯದ ಮುಖ್ಯಮಂತ್ರಿಯೊಬ್ಬರು ಆಮ್ಲಜನಕಕ್ಕಾಗಿ ಸಹಾಯ ಕೇಳಿದರೆ ಪ್ರಧಾನಿ ಪ್ರಚಾರದಲ್ಲಿದ್ದಾರೆ ಎಂದು ಹೇಳುವುದೇ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಪ್ರತಿಕ್ರಿಯಿಸಿ “ಇದು ಕೀಳು ಮಟ್ಟದ ರಾಜಕೀಯ” ಎಂದು ಟೀಕಿಸಿದ್ದಾರೆ. ಅಲ್ಲದೇ ಮಹಾರಾಷ್ಟ್ರ ಸರ್ಕಾರವನ್ನು “ಅಸಮರ್ಥ ಮತ್ತು ಭ್ರಷ್ಟ” ಎಂದು ಕರೆದಿದ್ದಾರೆ.

“ಮಹಾರಾಷ್ಟ್ರ ಇದುವರೆಗೆ ಭಾರತದಲ್ಲಿ ಅತಿ ಹೆಚ್ಚು ಪ್ರಮಾಣದ ಆಮ್ಲಜನಕವನ್ನು ಪಡೆದಿದೆ … ಕೇಂದ್ರವು ರಾಜ್ಯಗಳೊಂದಿಗೆ ದೈನಂದಿನ ಸಂಪರ್ಕದಲ್ಲಿದೆ … ನಿನ್ನೆ ಪಿಎಂ ಮೋದಿ ಕೇಂದ್ರ ಮತ್ತು ರಾಜ್ಯಗಳಿಗೆ ಒಟ್ಟಾಗಿ ಕೆಲಸ ಮಾಡುವಂತೆ ಹೇಳಿದರು … ಉದ್ಧವ್ ಠಾಕ್ರೆ ಅವರು ನಡೆಸುತ್ತಿರುವ ಕೀಳು ರಾಜಕೀಯವನ್ನು ನೋಡಿ ಬೇಸರವಾಗಿದೆ” ಎಂದು ಗೋಯಲ್ ಟ್ವೀಟ್ ಮಾಡಿದ್ದಾರೆ.

ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ ವರ್ಧನ್ ಟ್ವೀಟ್ ಮಾಡಿ “ನಾನು ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದೇನೆ. ಅತ್ಯಂತ ಹೆಚ್ಚು ಹಾನಿಗೊಳಗಾದ ಮಹಾರಾಷ್ಟ್ರಕ್ಕೆ “ವೈದ್ಯಕೀಯ ಆಮ್ಲಜನಕದ ಸಮರ್ಪಕ ಮತ್ತು ನಿರಂತರ ಪೂರೈಕೆ” ಸಿಗುತ್ತದೆ ಮತ್ತು ಕೇಂದ್ರವು 1,121 ವೆಂಟಿಲೇಟರ್‌ಗಳನ್ನು ಕಳುಹಿಸುತ್ತದೆ ಎಂದು ಭರವಸೆ ನೀಡಿದ್ದೇನೆ” ಎಂದಿದ್ದಾರೆ.

“ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಜಿ ಅವರೊಂದಿಗೆ ಮಾತನಾಡಿದ್ದೇನೆ… ವೈದ್ಯಕೀಯ ಆಮ್ಲಜನಕದ ಸಮರ್ಪಕ ಮತ್ತು ತಡೆರಹಿತ ಪೂರೈಕೆ ಮತ್ತು ಆರೋಗ್ಯ ಮೂಲಸೌಕರ್ಯ, ಔಷಧಿಗಳು ಮತ್ತು ಚಿಕಿತ್ಸಕಗಳಿಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದ್ದೇನೆ” ಎಂದು ಡಾ. ಹರ್ಷವರ್ಧನ್ ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ‘ಮಹಾರಾಷ್ಟ್ರಕ್ಕೆ ರೆಮ್‌ಡಿಸಿವಿರ್ ನೀಡಿದರೆ ಲೈಸನ್ಸ್‌ ರದ್ದು ಮಾಡುತ್ತೇವೆಂದು ಕಂಪನಿಗಳಿಗೆ ಕೇಂದ್ರ ಬೆದರಿಕೆ’

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here