Homeಮುಖಪುಟಅನಿಮಲ್ ಫಾರ್ಮ್‌ ನೆನಪು ಮಾಡುವ ಸರ್ಕಾರದ ದಿನಕ್ಕೊಂದು ನಿಯಮಗಳು!

ಅನಿಮಲ್ ಫಾರ್ಮ್‌ ನೆನಪು ಮಾಡುವ ಸರ್ಕಾರದ ದಿನಕ್ಕೊಂದು ನಿಯಮಗಳು!

ಇವತ್ತಿನ ನಿಯಮ ಏನು? ನಿನ್ನೆಯದು ಏನು? ನಾಳೆಯದು ಏನು ಅಂತ ಯಾರಿಗೂ ಸರಿಯಾಗಿ ಗೊತ್ತೇ ಆಗೋದಿಲ್ಲ. ಆ ಸಂಶಯ, ಅಸ್ಪಷ್ಟತೆ, ಸಂದೇಹ, ಅಪಾರದರ್ಶಕತೆಗಳ ವಾತಾವರಣದಲ್ಲಿಯೇ ಜೀವನ ಮುಂದುವರೆಯುತ್ತದೆ.

- Advertisement -
- Advertisement -

ಕೊರೋನಾ ಪುರಾಣ, ವರ್ಣಕಾರಣ ಕಾಂಡ

ನಾವು ಸಣ್ಣವರಿದ್ದಾಗ ಭಾರತದ ಸ್ವರೂಪದ ಬಗ್ಗೆ ಒಂದು ಹಾಡು ಹೇಳತಿದ್ದೆವಿ- ಕೇಸರಿ -ಬಿಳಿ – ಹಸಿರು ಬಣ್ಣ ನಡುವೆ ಚಕ್ರವು ಅಂತ ಅದರಾಗ ಒಂದು ಸಾಲು ಇತ್ತು.

ಈ ಬಣ್ಣಗಳ ನಡುವೆ ರಾಜಕೀಯ ಹುಟ್ಟತದ ಅಂತ ನಮಗ ಗೊತ್ತಿರಲಿಲ್ಲ. ಇದರ ಬಗ್ಗೆ ಸ್ವಲ್ಪ ತಿಳಕೊಳ್ಳೋಣ.

ಮೊಟ್ಟ ಮೊದಲಿಗೆ, ಅಂದರ ಲಕ್ಷಾಂತರ ಮಂದಿಗೆ ಕೊರೋನಾ ಬಂದು, ಸಾವಿರಾರು ಜನ ಸತ್ತ ಮ್ಯಾಲೆ, ಭಾರತ ಸರಕಾರದ ಕಣ್ಣು ತೆರದು ಲಾಕಡೌನು (ಕೀಲಿ ಕಿಟಕ್) ಘೋಷಿಸಿತು. ಆಮ್ಯಾಲೆ ದೇಶದ 700 ಜಿಲ್ಲೆಗಳನ್ನ ಕೆಂಪು, ಕಿತ್ತಳೆ ಹಾಗೂ ಹಸಿರು ಅಂತ ಹೇಳಿ ವಿಭಜನೆ ಮಾಡಿತು.

ಅದರ ಹಿಂದಿನ ಕಾರಣ ಅಂದರೆ 1. ಯಾವುದೇ ಜಿಲ್ಲೆಯೊಳಗ ಒಂದು ಕೊರೊನಾ ಪ್ರಕರಣ ಇದ್ದರೂ ಅದು ಕೆಂಪು. 2. ಯಾವುದೇ ಪ್ರಕರಣ ಇರದಿದ್ದರ ಅದು ಹಸಿರು ಹಾಗೂ 3. ಕಳೆದ 14 ದಿನದಲ್ಲಿ ಒಂದೂ ಹೊಸ ಪ್ರಕರಣ ಇರಲಿಲ್ಲ ಅಂದರ ಅದು ಕಿತ್ತಳೆ.

ಕೆಂಪು ಜಿಲ್ಲೆಯೊಳಗ ಯಾವುದೇ ಆರ್ಥಿಕ ಚಟುವಟಿಕೆ ಇಲ್ಲ, ಓಡಾಟ ಇಲ್ಲ. ಕಿತ್ತಳೆಯೊಳಗ ಬಹಳ ಮಟ್ಟಿಗೆ ಪ್ರತಿಬಂಧ ಹಾಗೂ ಹಸಿರಿನೊಳಗ ಎಲ್ಲ ರೀತಿಯ ಚಟುವಟಿಕೆ ಹಾಗೂ ಓಡಾಟ ಮುಕ್ತ.

ಆದರ ಸಮಸ್ಯಾ ಏನಪಾ ಅಂದರ ಎಂದಿನಂತೆ ಕೇಂದ್ರ ಸರಕಾರ ಕೀಲಿ ಕಿಟಕ್ ಆಗಲಿ, ಇತರ ಪರಿಹಾರ ಕ್ರಮಗಳನ್ನಾಗಲೀ ಸಾರಾಸಾರ ವಿಚಾರ ಮಾಡಿ ಮಾಡಿರಲಿಲ್ಲ.

ಇದರಿಂದ ದೊಡ್ಡ ಆಭಾಸ ಆತು. ಒಂದು ಸಾವಿರ ಕೇಸು ಇರೋ ಮುಂಬೈ ಕಿತ್ತಳೆ ವಲಯದಾಗ ಬಂದು, ಕರ್ನಾಟದ 14 ಜಿಲ್ಲೆ ಗಳು ಕೆಂಪು ವಲಯದಾಗ ಬಂದವು.

ಕೇಂದ್ರದ ಆಳುವ ಪಕ್ಷಕ್ಕೆ ಅತಿ ಹೆಚ್ಚು ದೇಣಿಗೆ ಕೊಟ್ಟ ಖಾಸಗಿ ಕಂಪನಿಗಳು ಸರಕಾರದ ಮೇಲೆ ಒತ್ತಡ ಹಾಕಿದರು. ಮುಂಬೈ- ಅಹಮದಾಬಾದು- ಸುರತ ಮುಂತಾದ ಕಡೆ ಕಾರಖಾನೆ- ಅಂಗಡಿ ತೆಗೆಯಬಹುದಾದರೆ ನಮ್ಮಲ್ಲೆ ಯಾಕೆ ಬೇಡ ಅಂತ ತಕರಾರು ಮಾಡಿದರು. ಅವರು ತಮ್ಮ ತಮ್ಮ ನೌಕರರಿಗೆ ಸಂಬಳ ಕೊಟ್ಟಿದ್ದರೋ ಇಲ್ಲೋ, ಆದರೆ ಪಿಎಂ ಕೇರ್ಸ ಅನ್ನೋ ಹುಂಡಿಗೆ ರೊಕ್ಕ ಹಾಕಿ ಭಕ್ತಿಯಿಂದ ಕೈ ಮುಗದಿದ್ದರು.

ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದ್ದಕ್ಕ ಜನರಿಗೆ ತೊಂದರೆ ಆಗಿತ್ತು. ಸರಕಾರಕ್ಕೆ ತೆರಿಗೆ ಸಿಗಲಾರದ ಹಂಗ ಆಗಿತ್ತು. ಸರಕಾರಿ ನೌಕರರಿಗೆ ಸಂಬಳ ತಡಾ ಆಗಲಿಕ್ಕೆ ಸುರು ಆಗಿತ್ತು. ವಿಶ್ವಬ್ಯಾಂಕು, ಮೋಡಿ, ಮತ್ತು ಇತರ ಸಂಸ್ಥೆಗಳು ಭಾರತದ ನಿವ್ವಳ ಉತ್ಪನ್ನ ಶೇಕಡಾ 1-2 ರ ಒಳಗೆ ಇಳಿಯಲಿದೆ ಅಂತ ಭವಿಷ್ಯ ಹೇಳಲಿಕ್ಕೆ ಸುರು ಮಾಡಿದರು.

ಅಷ್ಟರೊಳಗೆ ಪಂತ ಪ್ರಧಾನ ನಮೋ ಅವರು ಮೂರನೇ ಕೀಲಿ ಕಿಟಕ್ ಘೋಷಣೆ ಮಾಡಿದ್ದರು. ಇನ್ನು ಅದನ್ನು ಹೆಂಗ ಸರಿ ಮಾಡಬೇಕು ಅಂತ ಯಾರಿಗೂ ಗೊತ್ತಿರಲಿಲ್ಲ.

ಎಪ್ರಿಲ 30 ರಂದು ಕೇಂದ್ರದ ಕೆಲವು ಅಧಿಕಾರಿಗಳು ಒಂದು ಸಭೆ ನಡೆಸಿದರು. ಅದರಾಗ ಈ ಹಿಂದೆ ಮಾಡಿದ ಕಲರ ಕೋಡಿಂಗ (ವರ್ಣಾಧಾರಿತ ವಿಭಜನೆ) ಸರಿ ಇಲ್ಲ. ಅದನ್ನ ಬದಲಾಯಿಸಬೇಕು. ಬರೇ ಪ್ರಕರಣ ಪತ್ತೆ ಆಗೋದು ಮುಖ್ಯ ಅಲ್ಲ. ಅದರ ಸಂಖ್ಯೆ ಎಷ್ಟು ದಿನದೊಳಗ ದುಪ್ಪಟ್ಟು ಆಗತಾವು, ಎಷ್ಟು ಜನ ಗುಣ ಆಗಿದ್ದಾರ, ರಾಜ್ಯ ಹಾಗೂ ಜಿಲ್ಲೆ ಆಡಳಿತ ಎಷ್ಟರ ಮಟ್ಟಿಗೆ ತಯಾರು ಆಗಿದಾರು ಮುಂತಾದ ವಿಷಯಗಳನ್ನ ಆಧರಿಸಿ ಕೆಂಪು ನಿರ್ಧರಿಸೋಣ. ಕಳೆದ 21 ದಿನದೊಳಗ ಪ್ರಕರಣ ಇಲ್ಲಾ ಅಂದರ ಅದು ಹಸಿರು ಅಂತ ಅನ್ನೋಣ. ಇವು ಎರಡೂ ಇಲ್ಲದವು ಕಿತ್ತಳೆ ಜಿಲ್ಲೆಗಳು ಅಂತ ಆಗಲಿ ಅಂತ ಹೇಳಿದರು.

ರಾಜ್ಯ ಸರಕಾರಗಳು ಕೆಂಪು- ಕಿತ್ತಳೆ ಇದ್ದದ್ದನ್ನು ಹಸಿರು ಮಾಡಬಹುದು. ಆದರೆ ಉಲ್ಟಾ ಮಾಡಲು ಬರೋದಿಲ್ಲ. ಪಟ್ಟಿ ಬದಲಾವಣೆ ಮಾಡೋದಾದರ ನಾವು ಮಾಡತೇವಿ ಅಂದರು. ಕರ್ನಾಟಕದಲ್ಲಿ ಇದ್ದ 14 ಕೆಂಪು ಜಿಲ್ಲೆಗಳ ಸಂಖ್ಯೆ ಮೂರಕ್ಕೆ ಇಳಿಯಿತು.

ಹಿಂಗಾಗಿ ಮೂರನೇ ಹಂತದ ಲಾಕ್ ಡೌನ ಇದ್ದರೂ ಕೂಡ ಕಾರ್ಖಾನೆ- ಅಂಗಡಿ ತೆರೆಯಲಾಯಿತು. ಅತಿ ಕಮ್ಮಿ ಪ್ರಕರಣ ಇದ್ದಾಗ ಬಂದು ಮಾಡಿದ ಅಂಗಡಿಗಳು ಅತಿ ಹೆಚ್ಚು ಪ್ರಕರಣಗಳು ದಾಖಲಾದ ಮೇಲೆ ತೆರೆದುಕೊಂಡವು. ಇದೇ ನಿರ್ಧಾರ ತೊಗೊಳ್ಳೋದು ಆಗಿದ್ದರ ಇಷ್ಟೆಲ್ಲಾ ಸರ್ಕಸ್ಸು ಯಾಕ ಮಾಡಬೇಕಾಗಿತ್ತು. ಮೊದಲನೇ ದಿವಸವೇ ಈ ನಿರ್ಧಾರ ತೊಗೊಂಡಿದ್ದರ ಅಷ್ಟೊಂದು ಆರ್ಥಿಕ ಹಿನ್ನಡೆ ಆಗತಿರಲಿಲ್ಲ.

ಈ ಬಣ್ಣಗಳ ರಾಜಕಾರಣಕ್ಕೆ ವರ್ಣಕಾರಣ ಅನ್ನಬಹುದು. ಯಾಕ ಹಿಂಗಂದರ, ಸರಕಾರದ ನಿರ್ಧಾರಗಳು ವಿಜ್ಞಾನಿಗಳ ಮಾತು ಕೇಳಿ ನಡೆಯುತ್ತಿಲ್ಲ. ಅವು ಕೆಲವು ಐಎಎಸ್ಸು ಅಧಿಕಾರಿಗಳು ಹಾಗೂ ಕೆಲವೇ ಕೆಲವು ರಾಜಕಾರಣಿಗಳ ಮನಸೋಇಚ್ಛಿ ನಿರ್ಧಾರಗಳು. ಇವುಗಳಿಂದ ಯಾರಿಗೂ ಸ್ಪಷ್ಟತೆ ಇಲ್ಲ. ಯಾರಿಗೂ ಇವು ಸರಿಯಾಗಿ ಅರ್ಥವಾಗಿಲ್ಲ. ಇವುಗಳ ಬಗ್ಗೆ ಯಾರೂ ವೈಯಕ್ತಿಯ ಜವಾಬುದಾರಿ ತೊಗೊಳ್ಳೋದಿಲ್ಲ. ಸಧ್ಯಕ್ಕಂತೂ ಈ ಮುಖ ಇಲ್ಲದ ನಿರ್ಧಾರಗಳಿಂದ ನಮಗ ಮುಕ್ತಿ ಇಲ್ಲವೇನೋ.

ದೂರದರ್ಶಿ ಸಾಹಿತಿ ಭವಿಷ್ಯದಲ್ಲಿ ನಡಿಯೋದನ್ನು ಇಂದೇ ನಡೆದಂತೆ ಚಿತ್ರಿಸಿದ ಜಾರ್ಜ್ ಆರ್ವೆಲ್ ಅವರ ಅತಿ ಜನಪ್ರಿಯ ಕಾದಂಬರಿಯ ಹೆಸರು ʻ1984ʼ. ಅದರೊಳಗೆ ಕೆಲವು ಜನ ತಮ್ಮ ದೇಶದ ಜನರನ್ನ ಕತ್ತಲೆಯೊಳಗೆ ಇಟ್ಟು ಸರಕಾರ ನಡೆಸತಾರ. ಕಾಲ್ಪನಿಕ ʻಹಿರಿಯ ಅಣ್ಣʼನ ಹೆದರಿಕೆಯಿಂದ ಜನರ ಮೇಲೆ ದಬ್ಬಾಳಿಕೆ ನಡಸತಾರ.

ಅದೇ ಲೇಖಕನ ಇನ್ನೊಂದು ಕಾದಂಬರಿ ʻಎನಿಮಲ್ ಫಾರ್ಮʼ.

ರೈತನೊಬ್ಬನ ಮನೆಯ ಹಿತ್ತಲದಲ್ಲಿ ನಡೆಯುವ ಕತೆ ಇದು. ಬರೀ ತಿಂದುಂಡು ಹಾಯಾಗಿ ಮಲಗುವ ಚಾಲಾಕಿ ಹಂದಿಗಳು ಸರಕಾರ ರಚಿಸಿ ತಾವೇ ರಾಜರಾಗಿ ಬಿಡತಾರ. ರೈತನ ಹೊಲದಲ್ಲಿ ಕಷ್ಟಪಟ್ಟು ದುಡಿಯುವ ಕುದುರೆಗಳನ್ನು ಕಾರ್ಮಿಕರನ್ನಾಗಿ ಮಾಡಿಕೊಳ್ಳತಾವು. ಆ ತೋಟದ ಮನೆಯಲ್ಲಿ ಒಂದು ಫಲಕ ಇರತೈತಿ. ಅದರ ಮೇಲೆ ಇವತ್ತಿನ ನೀತಿ- ನಿಯಮಗಳು ಅಂತ ಬರದಿರತಾವು. ಅದನ್ನ ಯಾರು ಬರದಿತಾರ ಅಂತ ಯಾರಿಗೂ ಗೊತ್ತಿರೋದಿಲ್ಲ. ಅದರಾಗ ಒಂದು – ಎರಡು ಅಂತ ಹೇಳಿ ನಿಯಮಗಳ ಪಟ್ಟಿನ ಇರತೈತಿ. ಅವನ್ನ ಎಲ್ಲ ಪ್ರಾಣಿಗಳು ಭಕ್ತಿಯಿಂದ ಪಾಲಿಸತಿರತಾವು.

ಆದರ ಅವರ ಮೇಲೆ ದ್ವೇಷ ಸಾಧಿಸೋ ದೃಷ್ಟಿಯಿಂದ ಆ ಹಂದಿಗಳು ಒಂದು ಸಂಚು ರೂಪಿಸತಾವು. ರಾತ್ರಿ ಎಲ್ಲರೂ ಮಲಗಿದಾಗ ಎದ್ದು ಬಂದು ಆ ಪಟ್ಟಿಯ ಕೊನೆಯ ನಿಯಮಗಳನ್ನ ಅಳಿಸಿ ಸಂಪೂರ್ಣ ತದ್ವಿರುದ್ಧ ವಾದ ನಿಯಮಗಳನ್ನ ಬರದು ಬಿಡತಾವು. ಮರು ದಿನ ಬೆಳಿಗ್ಗೆ ಎದ್ದು ನಿನ್ನೆ ಎಲ್ಲರೂ ನಿಯಮ ಉಲ್ಲಂಘಿಸಿದ್ದೀರಿ ಅಂತ ಹೇಳಿ ಶಿಕ್ಷೆ ಕೊಡತಾವು. ಉಳಿದ ಪ್ರಾಣಿಗಳು ʻಇಲ್ಲ. ನಾವು ಇದರಲ್ಲಿ ಬರೆದ ನಿಯಮಗಳನ್ನೇ ಪಾಲನೆ ಮಾಡಿದ್ದೇವೆʼ ಅಂತ ತಿರುಗಿ ವಾದ ಮಾಡಿದರೆ, ಎಲ್ಲಿದೆ ನೋಡಿ? ಇಲ್ಲಿರುವ ನಿಯಮವೇ ಬೇರೆ, ನೀವು ಮಾಡಿದ್ದೇ ಬೇರೆ ಅಂತ ಅವರನ್ನು ಹೆದರಿಸುತ್ತವೆʼ.

ಕೊನೆಗೂ ಇವತ್ತಿನ ನಿಯಮ ಏನು? ನಿನ್ನೆಯದು ಏನು? ನಾಳೆಯದು ಏನು ಅಂತ ಯಾರಿಗೂ ಸರಿಯಾಗಿ ಗೊತ್ತೇ ಆಗೋದಿಲ್ಲ. ಆ ಸಂಶಯ, ಅಸ್ಪಷ್ಟತೆ, ಸಂದೇಹ, ಅಪಾರದರ್ಶಕತೆಗಳ ವಾತಾವರಣದಲ್ಲಿಯೇ ಜೀವನ ಮುಂದುವರೆಯುತ್ತದೆ. ನಿಯಮ ಪಾಲಿಸುವರಿಗೂ, ಆರಕ್ಷಕರಿಗೂ, ನಿಯಮ ಮುರಿಯುವವರಿಗೂ, ಜನಸಾಮಾನ್ಯರಿಗೂ ಎಲ್ಲರಿಗೂ ಭಯದ ವಾತಾವರಣ ಇರುತ್ತದೆ.

ಇವತ್ತಿನ ಆಗುಹೋಗುಗಳು ನಮಗ ಎನಿಮಲ್ ಫಾರ್ಮಿನ ನೆನಪು ಮಾಡಿಕೊಡತಾವು. ಅಚ್ಛೇ ದಿನ್ ಹೋಗಲಿ, ಬೊಹುತ ಬೂರೆ ದಿನ ಆನೆವಾಲೆ ಹೈಂ ಅಂತ ಅನ್ನಿಸತೈತಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...