Homeಮುಖಪುಟಮಧ್ಯಪ್ರದೇಶ: ಬುಡಕಟ್ಟು ವ್ಯಕ್ತಿಯನ್ನು ಅಮಾನುಷವಾಗಿ ಥಳಿಸಿದ ಬಜರಂಗದಳ ಸದಸ್ಯ

ಮಧ್ಯಪ್ರದೇಶ: ಬುಡಕಟ್ಟು ವ್ಯಕ್ತಿಯನ್ನು ಅಮಾನುಷವಾಗಿ ಥಳಿಸಿದ ಬಜರಂಗದಳ ಸದಸ್ಯ

- Advertisement -
- Advertisement -

ಮಧ್ಯಪ್ರದೇಶ ರಾಜ್ಯದ ರಾಜಧಾನಿ ಭೋಪಾಲ್‌ನಿಂದ ಸುಮಾರು 178 ಕಿಲೋಮೀಟರ್ ದೂರದಲ್ಲಿರುವ ಮಧ್ಯಪ್ರದೇಶದ ಬೇತುಲ್‌ನಲ್ಲಿ ಬುಡಕಟ್ಟು ವ್ಯಕ್ತಿಯೊಬ್ಬನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ‘ಮುರ್ಗ್’ (ಕೋಳಿ ಭಂಗಿ ಶಿಕ್ಷೆ) ಪೋಸ್ ನೀಡುವಂತೆ ಒತ್ತಾಯಿಸಲಾಗಿದೆ. ಸಂತ್ರಸ್ತನನ್ನು ರಾಜು ಉಯಿಕೆ ಎಂದು ಗುರುತಿಸಲಾಗಿದೆ. ಆರೋಪಿ ಚಂಚಲ್ ರಜಪೂತ್ ಬಜರಂಗದಳದ ಸದಸ್ಯನಾಗಿದ್ದು, ಆತನ ನೇತೃತ್ವದ ಗುಂಪಿನ ಸದಸ್ಯರು ಬುಡಕಟ್ಟು ವ್ಯಕ್ತಿಯನ್ನು ದೈಹಿಕ ಹಿಂಸಿಸಿ, ಜಾತಿ ನಿಂದನೆ ಮಾಡಿದ್ದಾರೆ.

ಬೇತುಲ್‌ ನಗರದ ಸುಭಾಷ್ ಶಾಲೆಯ ಬಳಿ ನಡೆದ ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಳತಾಣಗಳಲ್ಲಿ ವೈರಲ್ ಆಗಿರುವ ದೃಶ್ಯಾವಳಿಗಳು ಮನಕಲಕುವಂತಿದ್ದು, ನೆಡಟ್ಡಿಗರು ಆಕ್ರೋಶ ವ್ಯಕ್ತಪಡಿಡಸಿದ್ದಾರೆ.

ರಾಜು ಉಯಿಕೆಯನ್ನು ಕೀಳು ಭಂಗಿಯಲ್ಲಿ ಉಳಿತುಕೊಳ್ಳುವಂತೆ ಬಲವಂತಪಡಿಸಲಾಗಿದೆ. ನಂತರ, ಚಂಚಲ್ ರಜಪೂತ್ ಮತ್ತು ಇತರ ಮೂವರು ಆತನ ತಲೆರ ಬಾಯಿಗೆ ರಕ್ತ ಬರುವಂತೆ ಥಳಿಸಿರುವುದು ವೀಡಿಯೋದಲ್ಲಿ ಕಾಣಬಹುದು. ರಾಜು ಬಾಯಿಂದ ರಕ್ತಸ್ರಾವವಾಗುತ್ತಿದ್ದರೂ ದಾಳಿಕೋರರು ತಮ್ಮ ಅಮಾನುಷ ಹಲ್ಲೆಯನ್ನು ಮುಂದುವರಿಸಿದ್ದಾರೆ.

ಡಿಜೆ ಆಗಿ ಕೆಲಸ ಮಾಡುತ್ತಿರುವ ರಾಜು ಅವರು ನೋವಿನ ಅನುಭವವನ್ನು ವಿವರಿಸಿದ್ದಾರೆ. ‘ರಾತ್ರಿ 11:30 ರ ಸುಮಾರಿಗೆ ನಾನು ಮನೆಗೆ ಹೋಗುತ್ತಿದ್ದಾಗ ಸುಭಾಷ್ ಶಾಲೆಯ ಬಳಿ ಚಂಚಲ್ ರಜಪೂತ್ ಮತ್ತು ಅವರ ಬಜರಂಗದಳದ ಸ್ನೇಹಿತರು ನನ್ನನ್ನು ಕರೆದೊಯ್ದರು. ಅವರು ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದರು. ನನ್ನ ವಿರುದ್ಧ ಜಾತಿ ನಿಂದನೆ ಪದಗಳನ್ನು ಬಳಸಿದ್ದಾರೆ’ ಎಂದು ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಘಟನೆಯನ್ನು ಬೆಳಕಿಗೆ ತಂದಿದ್ದಾರೆ. ಅವರ ಟ್ವೀಟ್ ನೋಡಿದ ಪೊಲೀಸರು ತಕ್ಷಣ ದೂರು ದಾಖಲಿಸಿಕೊಂಡಿದ್ದಾರೆ. ಚಂಚಲ್ ರಜಪೂತ್ ಮತ್ತು ಇತರ ಮೂವರು ಆರೋಪಿಗಳ ವಿರುದ್ಧ ತ್ವರಿತವಾಗಿ ಎಫ್‌ಐಆರ್ ದಾಖಲಿಸಿದರು. ಘಟನೆ ಶನಿವಾರ ನಡೆದಿರುವುದಾಗಿ ಬೆತುಲ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸಿದ್ಧಾರ್ಥ್ ಚೌಧರಿ ಖಚಿತಪಡಿಸಿದ್ದು, ದುಷ್ಕರ್ಮಿಗಳನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ. ಆರೋಪಿಗಳ ಪತ್ತೆಗೆ ತೀವ್ರ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪಟ್ವಾರಿ, ‘ಒಂದೆಡೆ, ಪ್ರಧಾನಿ ನರೇಂದ್ರ ಮೋದಿಯವರ ಭಾಷಣದಲ್ಲಿ ಬುಡಕಟ್ಟು ಜನರ ಉನ್ನತಿ ಮತ್ತು ಗೌರವದ ಬಗ್ಗೆ ಸುಳ್ಳುಗಳನ್ನು ಮಾತನಾಡುತ್ತಾರೆ! ಇನ್ನೊಂದೆಡೆ, ಬುಡಕಟ್ಟು ಸಹೋದರ ರಾಜ್ ಉಯಿಕೆಯನ್ನು ಹಿಂಸಿಸುತ್ತಿರುವ ಬೇತುಲ್ ಬಜರಂಗದಳ ಬೆಂಬಲಿಗರು! ಪ್ರಧಾನಿ ಇಲ್ಲ! ಆದರೆ, ಈಗ ಬಿಜೆಪಿಯ ಬುಡಕಟ್ಟು ಗೌರವದ ಸತ್ಯವನ್ನು ನೀವು ನಿಮ್ಮ ಕಣ್ಣುಗಳಿಂದ ನೋಡುತ್ತೀರಿ! ನ್ಯಾಯದಲ್ಲಿ ನಂಬಿಕೆ ಕಳೆದುಕೊಳ್ಳುವಷ್ಟು ದಬ್ಬಾಳಿಕೆ ಮಾಡಬೇಡಿ’ ಎಂದು ಬರೆದಿದ್ದಾರೆ.

ಇದನ್ನೂ ಓದಿ; ಕೊಯಮತ್ತೂರು ಕಾರು ಸ್ಫೋಟ ಪ್ರಕರಣ: ಮತ್ತೆ ನಾಲ್ವರ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನಮ್ಮ ನಾಯಕ ಅಂದು ಗುಹೆಯೊಳಗೆ, ಇಂದು ನೀರೊಳಗೆ, ಮುಂದೆ ಚಂದ್ರನ ಮೇಲೆ: ಪ್ರಕಾಶ್ ರಾಜ್

0
"ನಮಗೊಬ್ಬ ನಾಯಕನಿದ್ದಾನೆ. ಆತ 2019ರಲ್ಲಿ ಕ್ಯಾಮರಾ ಮ್ಯಾನ್‌ಗಳ ಜೊತೆ ಗುಹೆ ಸೇರ್ಕೊಂಡ. ಈಗ ಚುನಾವಣೆ ಬರುವಾಗ ನೀರಿನೊಳಗೆ ಹೋಗಿದ್ದಾನೆ. ಮುಂದಿನ ಚುನಾವಣೆಗೆ ಚಂದ್ರನ ಮೇಲೆ ನಿಂತುಕೊಳ್ಳುತ್ತಾನೆ. ಆತ 20ನೇ ಶತಮಾನದ ದೇಶದ ನಾಯಕನಾ?"...