Homeಮುಖಪುಟಮಧ್ಯಪ್ರದೇಶ: ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ- ಆತನ ಮೇಲೆಯೇ ದೂರು ದಾಖಲಿಸಿದ ಪೊಲೀಸರು

ಮಧ್ಯಪ್ರದೇಶ: ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ- ಆತನ ಮೇಲೆಯೇ ದೂರು ದಾಖಲಿಸಿದ ಪೊಲೀಸರು

ಇಷ್ಟೆಲ್ಲಾ ದೌರ್ಜನ್ಯ ನಡೆದರೂ ಸಹ ಪೊಲೀಸರು ದಾಳಿಕೋರರ ಮೇಲೆ ಕ್ರಮ ಕೈಗೊಳ್ಳದೇ ಹಲ್ಲೆಗೊಳಗಾದ ಧರ್ಮೇಂದ್ರ ವಿರುದ್ಧ ಮಾತ್ರ ಕಳ್ಳತನದ ಪ್ರಕರಣ ದಾಖಲಿಸಿದ್ದಾರೆ ಎಂದು ಹರ್ಷ ಅಂಬೇಡ್ಕರ್‌ವಾದಿ ಎಂಬುವವರು ಆರೋಪಿಸಿದ್ದಾರೆ.

- Advertisement -
- Advertisement -

ಮೊನ್ನೆ ತಾನೇ ದಲಿತ ದಂಪತಿಗಳ ಬೆಳೆ ನಾಶ ಮಾಡಿದ ಕಾರಣಕ್ಕೆ ವಿಷ ಕುಡಿದು, ಪೊಲೀಸರಿಂದ ಅಮಾನವೀಯವಾಗಿ ಥಳಿಸಲ್ಪಟ್ಟ ದಲಿತ ದಂಪತಿಗಳ ಘಟನೆ ಹಸಿಯಾಗಿರುವಾಗಲೇ ಅದೇ ಮಧ್ಯಪ್ರದೇಶದ ಗುಣಾದಲ್ಲಿ ನಡುಬೀದಿಯಲ್ಲಿ ದಲಿತ ಯುವಕರನ್ನು ಕ್ರೂರವಾಗಿ ಹಲ್ಲೆಮಾಡುವ ವಿಡಿಯೋ ವೈರಲ್ ಆಗಿದೆ.

ಕಳ್ಳತನದ ಅನುಮಾನದ ಮೇಲೆ ಧರ್ಮೇಂದ್ರ ಎಂಬ ದಲಿತ ಯುವಕನನ್ನು ನಡುಬೀದಿಯಲ್ಲಿ ಥಳಿಸಲಾಗಿದೆ. ಹೊಡೆತದಿಂದ ಅವನು ಪ್ರಜ್ಞಾಹೀನನಾದರು ಸಹ ಬಿಡದೇ ಅವನ ಕುತ್ತಿಗೆಗೆ ಬಟ್ಟೆ ಕಟ್ಟಿ ಬೀದಿಯಲ್ಲಿ ಎಳೆದಾಡಿರುವ ಹೃದಯ ವಿದ್ರಾವಕ ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿವೆ.

ಇಷ್ಟೆಲ್ಲಾ ದೌರ್ಜನ್ಯ ನಡೆದರೂ ಸಹ ಪೊಲೀಸರು ದಾಳಿಕೋರರ ಮೇಲೆ ಕ್ರಮ ಕೈಗೊಳ್ಳದೇ ಹಲ್ಲೆಗೊಳಗಾದ ಧರ್ಮೇಂದ್ರ ವಿರುದ್ಧ ಮಾತ್ರ ಕಳ್ಳತನದ ಪ್ರಕರಣ ದಾಖಲಿಸಿದ್ದಾರೆ ಎಂದು ಹರ್ಷ ಅಂಬೇಡ್ಕರ್‌ವಾದಿ ಎಂಬುವವರು ಆರೋಪಿಸಿದ್ದಾರೆ.

ನಮ್ಮ ಸಮಾಜದಲ್ಲಿ ದಲಿತ ವರ್ಗವಾಗಿ ಬದುಕಲು ಎಷ್ಟು ಕಷ್ಟಪಡಬೇಕು, ಎಷ್ಟು ಅನಾನುಕೂಲ ಎದುರಿಸಬೇಕು ಎಂದು ನಾನು ಆಶ್ಚರ್ಯ ಪಡುತ್ತೇನೆ. ದಿ ದಲಿತ್ ವಾಯ್ಸ್ ಪ್ರತಿದಿನ ಈ ರೀತಿಯ ಅಹಿತಕರ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದೆ. ಅದನ್ನು ಫಾಲೋಮಾಡಿ ಎಂದು ಖ್ಯಾತ ನಿರ್ದೇಶಕ ಅನುಭವ್ ಸಿನ್ಹಾ ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ಮಧ್ಯಪ್ರದೇಶದ ದಲಿತ ದಂಪತಿಯ ಮೇಲಿನ ಅಮಾನವೀಯ ಹಲ್ಲೆಗೆ ತೀವ್ರ ಖಂಡನೆ: ಡಿಸಿ, ಎಸ್ಪಿ ಅಮಾನತು 

ತಮ್ಮ ಭೂಮಿ ಆಕ್ರಮಿಸಿದ್ದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಕ್ಕೆ ದಲಿತ ಯುವಕನ ಹತ್ಯೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದು ಆಘಾತಕಾರಿ. ಕಾನೂನನ್ನು ಇನ್ನಷ್ಟು ಬಿಗಿಗೊಳಿಸಬೇಕಿದೆ.

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...