ಮಧ್ಯಪ್ರದೇಶದ ಆಸ್ಪತ್ರೆಯೊಂದರ ಹಾಸಿಗೆಯ ಮೇಲೆ ನಾಯಿಯೊಂದು ಮಲಗಿರುವ ವೀಡಿಯೊ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೊ ರಾಜ್ಯದ ಹದಗೆಟ್ಟ ಆರೋಗ್ಯ ಪರಿಸ್ಥಿತಿಯ ಪ್ರತೀಕ ಎಂದ ವಿಪಕ್ಷ ಕಾಂಗ್ರೆಸ್ ಆಡಳಿತರೂಢ ಬಿಜೆಪಿಯನ್ನು ದೂಷಿಸಿದೆ.
ವಿಡಿಯೊ ರಾಜ್ಯದ ರತ್ಲಾಮ್ ಜಿಲ್ಲೆಯದ್ದು ಎಂದು ಹೇಳಲಾಗಿದ್ದು, ಜಿಲ್ಲೆಯ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ.ಪ್ರಭಾಕರ ನಾನಾವರೆ ಅವರು, ತಾನು ರಜೆಯಲ್ಲಿದ್ದ ಕಾರಣ ಈ ಘಟನೆಯ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ ಎಂದು ಪಿಟಿಐಗೆ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಬಿಜೆಪಿ ಆಡಳಿತ ನಡೆಸುತ್ತಿರುವ ಮಧ್ಯಪ್ರದೇಶದಲ್ಲಿ ನಾಯಿಗಳು ಉತ್ತಮ ನಿದ್ರೆ ಮಾಡುತ್ತಿದೆ, ಆದರೆ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್ ಸಂಸದ ನರೇಂದ್ರ ಸಲೂಜಾ ಅವರು ಟ್ವೀಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
मध्यप्रदेश में भले मरीज़ों को बेड़ मिले या ना मिले लेकिन “श्वान “ तो बेड पर मस्त सोया हुआ है…
तस्वीर रतलाम के अलोट की बतायी जा रही है…
“बदहाल स्वास्थ्य सिस्टम” pic.twitter.com/mhqjdGNiEx
— Narendra Saluja (@NarendraSaluja) September 16, 2022
ಟ್ವಿಟರ್‌ನಲ್ಲಿ ಅವರು, “ಮಧ್ಯಪ್ರದೇಶದಲ್ಲಿ, ರೋಗಿಗಳಿಗೆ ಹಾಸಿಗೆ ಸಿಗುತ್ತದೆಯೋ ಇಲ್ಲವೋ, ಆದರೆ ‘ನಾಯಿ’ ಹಾಸಿಗೆಯ ಮೇಲೆ ಚೆನ್ನಾಗಿ ನಿದ್ರಿಸುತ್ತಿದೆ. ಈ ದೃಶ್ಯ ರತ್ಲಾಮ್ ಜಿಲ್ಲೆಯ ಅಲೋಟ್‌ನದ್ದು ಎಂದು ಹೇಳಲಾಗುತ್ತಿದೆ. ಆತಂಕಕಾರಿ ಆರೋಗ್ಯ ವ್ಯವಸ್ಥೆ” ಎಂದು ಹೇಳಿದ್ದಾರೆ.


