Homeಮುಖಪುಟಮಧ್ಯಪ್ರದೇಶ | ಬೆಡ್‌ ಇಲ್ಲದೆ ಬಾಲಕಿಗೆ ನೆಲದ ಮೇಲೆ ಕೂರಿಸಿ ಚಿಕಿತ್ಸೆ; ಹದಗೆಟ್ಟ ಆರೋಗ್ಯ...

ಮಧ್ಯಪ್ರದೇಶ | ಬೆಡ್‌ ಇಲ್ಲದೆ ಬಾಲಕಿಗೆ ನೆಲದ ಮೇಲೆ ಕೂರಿಸಿ ಚಿಕಿತ್ಸೆ; ಹದಗೆಟ್ಟ ಆರೋಗ್ಯ ವ್ಯವಸ್ಥೆ?

- Advertisement -
- Advertisement -

ಮಧ್ಯಪ್ರದೇಶದ ಸತ್ನಾ ಜಿಲ್ಲಾಸ್ಪತ್ರೆಯಲ್ಲಿ ಖಾಲಿ ಹಾಸಿಗೆಗಳಿಲ್ಲದ ಕಾರಣ 15 ವರ್ಷದ ಬಾಲಕಿಗೆ ರಕ್ತ ನೀಡುವುದಕ್ಕಾಗಿ ನೆಲದ ಮೇಲೆ ಕುಳ್ಳಿರಿಸಿದ ಅಮಾನವೀಯ ಘಟನೆ ನಡೆದಿದೆ. ಮಹಿಳೆಯೊಬ್ಬರು ರಕ್ತದ ಬಾಟಲ್ ಅನ್ನು ಕೈಯಲ್ಲಿ ಹಿಡಿದು ನಿಂತಿದ್ದಾರೆ. ನೆಲದ ಮೇಲೆ ಕುಳಿತಿದ್ದ ಬಾಲಕಿಯ ಕೈಗೆ ರಕ್ತದ ಸೂಜಿಯನ್ನು ಜೋಡಿಸಲಾಗಿದೆ. ಘಟನೆಯ ಫೋಟೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸರ್ಕಾರದ ವೈದ್ಯಕೀಯ ವ್ಯವಸ್ಥೆಯ ಬಗ್ಗೆ ಟ್ವಿಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಮಧ್ಯಪ್ರದೇಶದ ಆಸ್ಪತ್ರೆಯ ಈ ಚಿತ್ರ ನಮ್ಮ ದೇಶದ ಆರೋಗ್ಯ ವ್ಯವಸ್ಥೆಯ ನೈಜತೆಯನ್ನು ಹೊಂದಿದೆ. ಬಡತನವು ಬಡವರನ್ನು ಕೊಲ್ಲುತ್ತಿದೆಯೇ ರೋಗವಲ್ಲ!” ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಟ್ವೀಟ್ ಮಾಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಹಿಮೋಗ್ಲೋಬಿನ್ ಮಟ್ಟ ಕಡಿಮೆ ಇದ್ದ ಕಾರಣ ಸಂತೋಷಿ ಕೇವತ್ ತನ್ನ ತಾಯಿ ಜೊತೆಗೆ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದರು. ಆದರೆ, ಬಾಲಕಿಗೆ ಚಿಕಿತ್ಸೆ ನೀಡಲು ಖಾಲಿ ಹಾಸಿಗೆಗಳಿಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿಗಳು ಹೇಳಿದ್ದಾರೆ. ಇದರ ನಂತರ ತಮ್ಮ ಮಗಳಿಗೆ ಚಿಕಿತ್ಸೆ ನೀಡುವಂತೆ ಮಹಿಳೆ ಬೇಡಿಕೊಂಡಿದ್ದು, ನಂತರ ಹುಡುಗಿಯನ್ನು ನೆಲದ ಮೇಲೆ ಕುಳಿತು ಚಿಕಿತ್ಸೆ ಪಡೆಯುವಂತೆ ಮಾಡಲಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ: ಮಧ್ಯಪ್ರದೇಶ: ಆಸ್ಪತ್ರೆಯ ಬೆಡ್ ಮೇಲೆ ನಾಯಿ; ಆತಂಕಕಾರಿ ಆರೋಗ್ಯ ವ್ಯವಸ್ಥೆ ಎಂದ ಕಾಂಗ್ರೆಸ್

“ಇದು ಮಧ್ಯಪ್ರದೇಶದ ಮೈಹಾರ್‌ನ ಸಿವಿಲ್ ಆಸ್ಪತ್ರೆಯ ಚಿತ್ರ. ತಾಯಿ ರಕ್ತದ ಬಾಟಲನ್ನು ಕೈಯಲ್ಲಿ ಹಿಡಿದಿದ್ದಾರೆ, ಅನಾರೋಗ್ಯ ಪೀಡಿತ ಮಗಳನ್ನು ನೆಲದ ಮೇಲೆ ಕೂರಿಸಲಾಗಿದೆ. ಇದು ಕ್ರೂರ ಮತ್ತು ನಿರ್ಲಜ್ಜ ಸರ್ಕಾರದ ಆಡಳಿತಕ್ಕೆ ಉದಾಹರಣೆ” ಎಂದು ಎಎಪಿ ಶಾಸಕ ನರೇಶ್ ಬಾಲ್ಯಾನ್‌ ಟ್ವೀಟ್ ಮಾಡಿದ್ದಾರೆ.

ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ನಿರ್ಲಕ್ಷ್ಯವನ್ನು ಬಿಂಬಿಸುವ ಫೋಟೋ ವೈರಲ್ ಆದ ನಂತರ ಅಧಿಕಾರಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಹೊಣೆಗಾರರ ​​ವಿರುದ್ಧ ಕ್ರಮ ಕೈಗೊಂಡಿದೆ.

ಜಿಲ್ಲಾಧಿಕಾರಿ ಅನುರಾಗ್ ವರ್ಮಾ ಅವರು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸುವಂತೆ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯಾಧಿಕಾರಿ ಡಾ.ಅಶೋಕ್ ಅವಧಿಯವರಿಗೆ ಸೂಚಿಸಿದ್ದಾರೆ. ತನಿಖೆಯ ನಂತರ, ಮೈಹಾರ್ ಆಸ್ಪತ್ರೆಯ ಉಸ್ತುವಾರಿ ಡಾ. ಪ್ರದೀಪ್ ನಿಗಮ್ ಮತ್ತು ಸ್ಟಾಫ್ ನರ್ಸ್ ಅಂಜು ಸಿಂಗ್ ಭತ್ಯೆ ಏರಿಕೆಯನ್ನು ತಕ್ಷಣವೇ ಜಾರಿಗೆ ಬರುವಂತೆ ಸೂಚನೆಗಳನ್ನು ನೀಡಲಾಗಿದೆ ಎಂದು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಇದನ್ನೂ ಓದಿ: ಮಧ್ಯಪ್ರದೇಶ: ಆಂಬ್ಯುಲೆನ್ಸ್‌ ಇಲ್ಲದೆ ತಳ್ಳೋಗಾಡಿ ಬಳಕೆ; ಘಟನೆ ವರದಿ ಮಾಡಿದ ಮೂವರು ಪತ್ರಕರ್ತರ ಮೇಲೆ ಎಫ್‌ಐಆರ್‌

ಈ ನಡುವೆ ರಾಜ್ಯದ ರತ್ಲಾಮ್‌ ಜಿಲ್ಲೆಯ ಆಸ್ಪತ್ರೆಯೊಂದರ ಹಾಸಿಗೆಯ ಮೇಲೆ ನಾಯಿಯೊಂದು ಮಲಗಿರುವ ವೀಡಿಯೊ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದರು ಕಾಂಗ್ರೆಸ್ ಸಂಸದ ನರೇಂದ್ರ ಸಲೂಜಾ ಅವರು, “ಮಧ್ಯಪ್ರದೇಶದಲ್ಲಿ, ರೋಗಿಗಳಿಗೆ ಹಾಸಿಗೆ ಸಿಗುತ್ತದೆಯೋ ಇಲ್ಲವೋ, ಆದರೆ ‘ನಾಯಿ’ ಹಾಸಿಗೆಯ ಮೇಲೆ ಚೆನ್ನಾಗಿ ನಿದ್ರಿಸುತ್ತಿದೆ. ಈ ದೃಶ್ಯ ರತ್ಲಾಮ್‌ ಜಿಲ್ಲೆಯ ಅಲೋಟ್‌ನದ್ದು ಎಂದು ಹೇಳಲಾಗುತ್ತಿದೆ. ಆತಂಕಕಾರಿ ಆರೋಗ್ಯ ವ್ಯವಸ್ಥೆ” ಎಂದು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...