Homeಅಂತರಾಷ್ಟ್ರೀಯತಾನು ಕಾರ್ಯನಿರ್ವಹಿಸುತ್ತಿರುವ 82 ದೇಶಗಳ 34.5 ಕೋಟಿ ಜನರು ಹಸಿವಿನತ್ತ ಸಾಗುತ್ತಿದ್ದಾರೆ: ವಿಶ್ವಸಂಸ್ಥೆ ಎಚ್ಚರಿಕೆ

ತಾನು ಕಾರ್ಯನಿರ್ವಹಿಸುತ್ತಿರುವ 82 ದೇಶಗಳ 34.5 ಕೋಟಿ ಜನರು ಹಸಿವಿನತ್ತ ಸಾಗುತ್ತಿದ್ದಾರೆ: ವಿಶ್ವಸಂಸ್ಥೆ ಎಚ್ಚರಿಕೆ

- Advertisement -
- Advertisement -

ತಾನು ಕಾರ್ಯನಿರ್ವಹಿಸುತ್ತಿರುವ 82 ದೇಶಗಳ 34.5 ಕೋಟಿ ಜನರು ಹಸಿವಿನತ್ತ ಸಾಗುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮದ ಮುಖ್ಯಸ್ಥ ಡೇವಿಡ್ ಬೀಸ್ಲಿ ಗುರುವಾರ ಹೇಳಿದ್ದಾರೆ. ಈ ಬಿಕ್ಕಟ್ಟು “ಅಭೂತಪೂರ್ವ ಪ್ರಮಾಣದ ಜಾಗತಿಕ ತುರ್ತುಸ್ಥಿತಿ” ಎಂದು ಅವರು ಉಲ್ಲೇಖಿಸಿದ್ದಾರೆ.

“ಇದು ದಾಖಲೆಯ ಹೆಚ್ಚಳವಾಗಿದೆ. ಕೊರೊನಾ ಸಾಂಕ್ರಾಮಿಕ ರೋಗವು ಪ್ರಾರಂಭವಾಗುವ ಮೊದಲಿಗಿಂತ ಈಗ ಆಹಾರದ ಬಿಕ್ಕಟ್ಟು ತೀವ್ರವಾಗಿ ಹೆಚ್ಚಳವಾಗಿದ್ದು, ಆಹಾರ ಅಸುರಕ್ಷಿತ ಜನರ ಸಂಖ್ಯೆ 2.5 ಪಟ್ಟು ಹೆಚ್ಚಾಗಿ” ಎಂದು ಬೀಸ್ಲಿ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ 34.5 ಕೋಟಿ ಜನರಲ್ಲಿ 45 ದೇಶಗಳ ಐದು ಕೋಟಿ ಜನರು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು “ಕ್ಷಾಮದ ಬಾಗಿಲು ಬಡಿಯುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ: ಮಾನವ ಚರಿತ್ರೆಯಲ್ಲಿ ಬಂಡವಾಳವಾದ ಹಸಿವು ಎಂಬ ಜಾತಿಗೆಟ್ಟ ಪ್ರತಿಮೆ

“ಹಸಿವಿನ ಅಲೆಯು ಈಗ ಹಸಿವಿನ ಸುನಾಮಿಯಾಗಿದೆ” ಎಂದು ಅವರು ಎಚ್ಚರಿಸಿದ್ದು, ಘರ್ಷಣೆಗಳ ಏರಿಕೆ, ಕೊರೊನಾ ವೈರಸ್ ಸಾಂಕ್ರಾಮಿಕ, ಹವಾಮಾನ ಬದಲಾವಣೆ, ಹೆಚ್ಚುತ್ತಿರುವ ಇಂಧನ ಬೆಲೆಗಳು ಮತ್ತು ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವು ಹಸಿವಿನ ಅಂಕಿಅಂಶಗಳ ಹೆಚ್ಚಳದ ಹಿಂದಿನ ಕಾರಣಗಳಾಗಿವೆ ಎಂದು ಅವರು ಪಟ್ಟಿ ಮಾಡಿದ್ದಾರೆ.

ವಿಶ್ವಸಂಸ್ಥೆಯ ಹ್ಯುಮಾನಿಟೇರಿಯನ್ ಅಫೇರ್ಸ್ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್ ಅವರು, “ಸೊಮಾಲಿಯಾದಲ್ಲಿ ಎರಡು ಲಕ್ಷ ನಿವಾಸಿಗಳು ಕ್ಷಾಮದ ಅಪಾಯದಲ್ಲಿದ್ದು, ನವೆಂಬರ್ ವೇಳೆಗೆ ಈ ಸಂಖ್ಯೆಯು ಮೂರು ಲಕ್ಷವನ್ನು ತಲುಪುವ ನಿರೀಕ್ಷೆಯಿದೆ. ಅಲ್ಲದೆ, ಇನ್ನೂ ಲಕ್ಷಾಂತರ ಜನರು ಹಸಿವಿನ ಅಂಚಿನಲ್ಲಿದ್ದಾರೆ” ಎಂದು ಅವರು ಹೇಳಿದ್ದಾರೆ.

ವಿಶ್ವಸಂಸ್ಥೆಯ ಪ್ರಕಾರ, ಯೆಮೆನ್‌ನಲ್ಲಿ ಏಳು ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಸಶಸ್ತ್ರ ಸಂಘರ್ಷವು ಸುಮಾರು 1.9 ಕೋಟಿ ನಿವಾಸಿಗಳನ್ನು ತೀವ್ರ ಆಹಾರ ಅಭದ್ರತೆಗೆ ದೂಡಿದೆ. ನೈಜೀರಿಯಾದ ಸಂಘರ್ಷ ಪೀಡಿತ ರಾಜ್ಯಗಳಲ್ಲಿ ಸುಮಾರು 41 ಲಕ್ಷ ನಿವಾಸಿಗಳು ತೀವ್ರ ಮಟ್ಟದ ತೀವ್ರ ಆಹಾರ ಅಭದ್ರತೆಯನ್ನು ಎದುರಿಸುತ್ತಿದ್ದಾರೆ.

ಇದನ್ನೂ ಓದಿ: ಹಿಂದುತ್ವ ಮತ್ತು ಕಾರ್ಪೋರೇಟ್‌ ಮೈತ್ರಿಯಿಂದಾಗಿ ದೇಶದಲ್ಲಿ ನಿರುದ್ಯೋಗ, ಹಸಿವು, ಬಡತನ ಹೆಚ್ಚುತ್ತಿದೆ: ಸಿಪಿಐ(ಎಂ) ಪಾಲಿಟ್‌‌ಬ್ಯೂರೊ ಸದಸ್ಯ ಪ್ರಕಾಶ್‌ ಕಾರಟ್‌‌

“ಒಬ್ಬ ವ್ಯಕ್ತಿಯು ಸಾಕಷ್ಟು ಆಹಾರವನ್ನು ಸೇವಿಸಲು ಸಾಧ್ಯವಾಗದಿದ್ದಾಗ ಮತ್ತು ಅದು ಅವರ ಜೀವನ ಅಥವಾ ಜೀವನೋಪಾಯಕ್ಕೆ ತಕ್ಷಣದ ಅಪಾಯವನ್ನುಂಟುಮಾಡುತ್ತದೆ ಎಂದಾದರೆ ಅದನ್ನು ತೀವ್ರವಾದ ಆಹಾರ ಅಭದ್ರತೆ” ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ವ್ಯಾಖ್ಯಾನವಾಗಿದೆ.

“ಘರ್ಷಣೆ ನಡೆಯುವ ಅತ್ಯಂತ ವಿಪರೀತ ಸಂದರ್ಭಗಳಲ್ಲಿ, ನಾಗರಿಕರು ಬದುಕಲು ಅವಲಂಬಿಸಿರುವ ವಾಣಿಜ್ಯ ಸರಬರಾಜು ಮತ್ತು ಅಗತ್ಯ ಸೇವೆಗಳಿಗೆ ಪ್ರವೇಶವನ್ನು ಹೋರಾಟ ನಡೆಸುತ್ತಿರುವವರು ಉದ್ದೇಶಪೂರ್ವಕವಾಗಿ ಕಡಿತಗೊಳಿಸುತ್ತಾರೆ. ಹಸಿವನ್ನು ಯುದ್ಧದ ತಂತ್ರವಾಗಿ ಬಳಸಲಾಗುತ್ತದೆ” ಎಂದು ವಿಶ್ವಸಂಸ್ಥೆಯ ಹ್ಯುಮಾನಿಟೇರಿಯನ್ ಅಫೇರ್ಸ್ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ | Naanu Gauri

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ

0
ಗುಜರಾತ್‌ನಾದ್ಯಂತ ನಡೆದ ಹೈನುಗಾರಿಕೆ ನಡೆಸುವ ಸಮುದಾಯದ ಪ್ರತಿಭಟನೆಯ ನಂತರ ರಾಜ್ಯ ವಿಧಾನಸಭೆಯು ಗೋವು ನಿಯಂತ್ರಣ ಮಸೂದೆಯನ್ನು ಸರ್ವಾನುಮತದಿಂದ ಹಿಂಪಡೆದಿದೆ. ಸುಮಾರು ಐದು ತಿಂಗಳ ಹಿಂದೆ ರಾಜ್ಯದ ನಗರ ಪ್ರದೇಶಗಳ ರಸ್ತೆಗಳು ಮತ್ತು ಸಾರ್ವಜನಿಕ...