Homeಮುಖಪುಟ'ಇಡಿ ಅಧಿಕಾರಿಗಳಿಂದ ಸಾಕ್ಷಿ ಹೇಳಿಕೆಗಳ ಆಡಿಯೋ ಡಿಲೀಟ್..'; ಆಪ್ ಸಚಿವೆ ಆತಿಶಿ ಗಂಭೀರ ಆರೋಪ

‘ಇಡಿ ಅಧಿಕಾರಿಗಳಿಂದ ಸಾಕ್ಷಿ ಹೇಳಿಕೆಗಳ ಆಡಿಯೋ ಡಿಲೀಟ್..’; ಆಪ್ ಸಚಿವೆ ಆತಿಶಿ ಗಂಭೀರ ಆರೋಪ

- Advertisement -
- Advertisement -

‘ಅಕ್ರಮ ಹಣ ವರ್ಗಾವಣೆಯ ತನಿಖೆಯ ಸಮಯದಲ್ಲಿ ಜಾರಿ ನಿರ್ದೇಶನಾಯವು (ಇಡಿ) ಆಡಿಯೋ ಕ್ಲಿಪ್‌ಗಳನ್ನು ಡಿಲೀಟ್ ಮಾಡಿದೆ’ ಎಂದು ದೆಹಲಿ ಶಿಕ್ಷಣ ಸಚಿವೆ ಅತಿಶಿ ಆರೋಪಿಸಿದ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತನಿಖಾ ಸಂಸ್ಥೆ ಚಿಂತನೆ ನಡೆಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಇಂಡಿಯಾ ಟುಡೆ’ ವರದಿ ಮಾಡಿದೆ.

ಮಂಗಳವಾರ ಮಾಧ್ಯಮದವರನ್ನು ಉದ್ದೇಶಿಸಿ “ಸ್ಫೋಟಕ ಮಾಹಿತಿ” ಬಹಿರಂಗಪಡಿಸಿದ ಸಚಿವೆ ಅತಿಶಿ, ‘ಎಎಪಿ ಪದಾಧಿಕಾರಿಗಳ ವಿರುದ್ಧ ತನಿಖೆ ನಡೆಸುತ್ತಿರುವ ಅಬಕಾರಿ ನೀತಿ ತನಿಖೆ ಸೇರಿದಂತೆ ಕೆಲವು ಪ್ರಕರಣಗಳಲ್ಲಿ ಸಾಕ್ಷಿ ಹೇಳಿಕೆಗಳ ಆಡಿಯೋ ರೆಕಾರ್ಡಿಂಗ್ ಅನ್ನು ಕೇಂದ್ರೀಯ ತನಿಖಾ ಸಂಸ್ಥೆ ಡಿಲೀಟ್ ಮಾಡಿದೆ’ ಎಂದು ಆರೋಪಿಸಿದರು.

ದೆಹಲಿಯ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ “ಸಾಕ್ಷ್ಯದಲ್ಲಿ ವಂಚನೆ ಇರುವುದು ಬೆಳಕಿಗೆ ಬಂದಿದೆ” ಎಂದು ಅವರು ಆರೋಪಿಸಿದರು. ‘ಸಿಸಿಟಿವಿ ವಿಡಿಯೋಗಳನ್ನು ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸಿ’ ಎಂದು ಅವರು ತನಿಖಾ ಸಂಸ್ಥೆಗೆ ಸವಾಲು ಹಾಕಿದರು.

‘ಎರಡು ವರ್ಷಗಳ ತನಿಖೆಯಲ್ಲಿ ₹1 ಕೂಡ ವಸೂಲಿ ಮಾಡಿಲ್ಲ. ಇಡಿಗೆ ಒಂದೇ ಒಂದು ಬಲವಾದ ಪುರಾವೆಯೂ ಸಿಕ್ಕಿಲ್ಲ. ಅವರ ಸಂಪೂರ್ಣ ಪ್ರಕರಣವು ಕೇವಲ ಹೇಳಿಕೆಗಳ ಮೇಲೆ ನಿಂತಿದೆ ಮತ್ತು ಇದೀಗ ವಂಚನೆ ಕೂಡ ಬೆಳಕಿಗೆ ಬಂದಿದೆ. ಈ ವಂಚನೆಯನ್ನು ಮರೆಮಾಚಲು ಇಡಿ ಈಗ ಸಿಸಿಟಿವಿ ದೃಶ್ಯಾವಳಿಗಳ ಆಡಿಯೋ ರೆಕಾರ್ಡಿಂಗ್ ಅನ್ನು ಅಳಿಸುತ್ತಿದೆ’ ಎಂದು ಆತಿಶಿ ಆರೋಪಿಸಿದ್ದಾರೆ.

‘ಇಡಿ ಏನನ್ನು ಮರೆಮಾಡಲು ಬಯಸುತ್ತದೆ? ಅದು ಇದುವರೆಗೂ ಎಷ್ಟು ಹೇಳಿಕೆಗಳನ್ನು ತೆಗೆದುಕೊಂಡಿದೆ, ಎಷ್ಟು ಸಿಸಿಟಿವಿಯಲ್ಲಿ ದಾಖಲಾಗಿದೆ ಮತ್ತು ಅವುಗಳಲ್ಲಿ ಎಷ್ಟು ಆಡಿಯೋ ಇದೆ’ ಎಂದು ಅವರು ಪ್ರಶ್ನಿಸಿದರು. ಎಎಪಿ ನಾಯಕರ ಮೇಲೆ ಇತ್ತೀಚಿನ ದಾಳಿಗಳು ಪಕ್ಷವನ್ನು “ಹೆದರಿಸಲು” ನಡೆಸಲಾಗುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.

‘ಕಳೆದ ಎರಡು ವರ್ಷಗಳಿಂದ ಎಎಪಿ ನಾಯಕರಿಗೆ ಬೆದರಿಕೆ ಹಾಕಲಾಗುತ್ತಿದೆ, ಈ ‘ತಥಾಕಥಿತ’ ಲಿಕ್ಕರ್ ಹಗರಣದ ಹೆಸರಿನಲ್ಲಿ ಯಾರದೋ ಮನೆ ಮೇಲೆ ದಾಳಿ, ಯಾರೋ ಸಮನ್ಸ್ ಪಡೆದು ಒಬ್ಬರನ್ನು ಬಂಧಿಸುತ್ತಾರೆ… ಎರಡು ವರ್ಷಗಳಲ್ಲಿ ನೂರಾರು ದಾಳಿಗಳ ನಂತರವೂ ಇಡಿ ಒಂದು ರೂಪಾಯಿಯನ್ನೂ ವಸೂಲಿ ಮಾಡಲು ಸಾಧ್ಯವಾಗಿಲ್ಲ.ಎರಡು ವರ್ಷಗಳ ನಂತರವೂ ಇಡಿ ಯಾವುದೇ ಬಲವಾದ ಪುರಾವೆಗಳನ್ನು ಕಂಡುಕೊಂಡಿಲ್ಲ ಮತ್ತು ಸಾಕ್ಷ್ಯವನ್ನು ಪ್ರಸ್ತುತಪಡಿಸಬೇಕು ಎಂದು ನ್ಯಾಯಾಲಯವು ಪದೇ ಪದೇ ಕೇಳುತ್ತಿದೆ’ ಎಂದು ಸಚಿವರು ಹೇಳಿದರು.

ದೆಹಲಿ ಜಲ ಮಂಡಳಿ ಅಕ್ರಮಕ್ಕೆ ಸಂಬಂಧಿಸಿದಂತೆ ಮಂಗಳವಾರವೂ ಕೂಡ ಜಾರಿ ನಿರ್ದೇಶನಾಲಯವು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಮತ್ತು ಎಎಪಿಗೆ ಸಂಪರ್ಕ ಹೊಂದಿರುವ ಕೆಲವರ ಮನೆಗಳಲ್ಲಿ ಶೋಧ ಮುಂದುವರಿಸಿದೆ.

ಇದನ್ನೂ ಓದಿ; ಚಂಡೀಗಢ ಮೇಯರ್ ಚುನಾವಣೆ: ‘ಬ್ಯಾಲೆಟ್ ಪೇಪರ್ ಟ್ಯಾಂಪರಿಂಗ್’ ಮಾಡುತ್ತಿರುವ ವಿಡಿಯೋ ಬಿಡುಗಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...