ಮಹಿಳೆಯೊಬ್ಬರ ಗುಪ್ತಾಂಗಕ್ಕೆ ಮೆಣಸಿನಕಾಯಿ ಪುಡಿ ಹಾಕಿ, ದೇಹದ ಅಂಗಾಂಗಳಿಗೆ ಕಾದ ಕಬ್ಬಿಣದಿಂದ ಬರೆ ಹಾಕಿ ಚಿತ್ರಹಿಂಸೆ ನೀಡಿರುವ ಅಘಾತಕಾರಿ ಘಟನೆ ಮಧ್ಯಪ್ರದೇಶದ ರಾಜಗಢದಲ್ಲಿ ನಡೆದಿದೆ. ಪತಿ, ಅತ್ತೆ, ಮಾವ ಈ ರೀತಿಯ ವಿಕೃತ ದೌರ್ಜನ್ಯವನ್ನು ಎಸಗಿದ್ದಾಗಿ ಸಂತ್ರಸ್ತ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಧ್ಯಪ್ರದೇಶ
ಮಹಿಳೆಯ ದೂರಿನ ಅನ್ವಯ ಅವರ ಪತಿ, ಅತ್ತೆ-ಮಾವ ಮತ್ತು ಅತ್ತಿಗೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತನ್ನ ಮೇಲೆ ನಾಲ್ವರೂ ಆರೋಪಿಗಳು ನಿರಂತರ 2 ಗಂಟೆಗಳ ಕಾಲ ದೌರ್ಜನ್ಯ ನಡೆಸಿ, ಚಿತ್ರಹಿಂಸೆ ನೀಡಿದ್ದಾಗಿ ಮಹಿಳೆ ದಾಖಲಿಸಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ನನ್ನನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದು, ಗುಪ್ತಾಂಗಕ್ಕೆ ಮಾವ ಮೆಣಸಿನಕಾಯಿ ಪುಡಿ ಹಾಕಿದ್ಧಾರೆ. ಅತ್ತೆ ಕಾದ ಕಬ್ಬಿಣದ ರಾಡ್‌ನಿಂದ ಕೈ, ಕಾಲು ಸೇರಿದಂತೆ ವಿವಿಧ ಅಂಗಾಂಗಳಿಗೆ ಬರೆ ಹಾಕಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ. ಮಧ್ಯಪ್ರದೇಶ
“ನಿರಂತರವಾಗಿ ಎಸಗಿದ ಹಲ್ಲೆ, ದೌರ್ಜನ್ಯದಿಂದ ನಾನು ಪ್ರಜ್ಞಾಹೀನಳಾಗಿದ್ದೆ. ಮರುದಿನ ಕೂಡಾ ಮತ್ತೆ ಹಲ್ಲೆ ಮಾಡಿದ್ದಾರೆ. ಅದರ ನಂತರ ನನ್ನನ್ನು ಬೈಕ್‌ನಲ್ಲಿ ಕರೆದೊಯ್ದು ನಿರ್ಜನ್ಯ ಪ್ರದೇಶದಲ್ಲಿ ಬಿಟ್ಟುಹೋಗಿದ್ದರು” ಎಂದು ಅವರು ವಿವರಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿದ್ದರಾದರೂ, ಆರೋಪಿಗಳನ್ನು ಈವರೆಗೆ ಬಂಧಿಸಿಲ್ಲ ಎಂದು ವರದಿಗಳು ಹೇಳಿವೆ.
ಇದನ್ನೂ ಓದಿ: ಪೊಲೀಸರ ಮುಂದೆಯೆ ವ್ಯಾಪಾರಿಯ ಮೇಲೆ ದಾಳಿಗೆ ಯತ್ನ – ಬಿಜೆಪಿಯ ದುಷ್ಕರ್ಮಿಗಳ ವಿರುದ್ಧ ಎಫ್‌ಐಆರ್
ಪೊಲೀಸರ ಮುಂದೆಯೆ ವ್ಯಾಪಾರಿಯ ಮೇಲೆ ದಾಳಿಗೆ ಯತ್ನ – ಬಿಜೆಪಿಯ ದುಷ್ಕರ್ಮಿಗಳ ವಿರುದ್ಧ ಎಫ್‌ಐಆರ್


