Homeನಿಜವೋ ಸುಳ್ಳೋFact Check: ಭಾರತದ ಮ್ಯಾಗಿ ನೂಡಲ್ಸ್ ನಲ್ಲಿ ಗೋಮಾಂಸವಿದೆಯೆ?

Fact Check: ಭಾರತದ ಮ್ಯಾಗಿ ನೂಡಲ್ಸ್ ನಲ್ಲಿ ಗೋಮಾಂಸವಿದೆಯೆ?

- Advertisement -
- Advertisement -

ಅಂತರಾಷ್ಟ್ರೀಯವಾಗಿ ಮಾರಾಟವಾಗುವ ಬೀಫ್ ಫ್ಲೇವರ್ ಮ್ಯಾಗಿ ನೂಡೆಲ್ಸ್ ಪ್ಯಾಕೆಟ್ ಒಂದರ ಚಿತ್ರವೊಂದನ್ನು ಹಾಕಿ, ಭಾರತದಲ್ಲಿ ಇದನ್ನು ಮಾರಾಟ ಮಾಡಲಾಗುತ್ತಿದೆ ಅದನ್ನು ಬ್ಯಾನ್ ಮಾಡಬೇಕು ಎಂದು ಫೇಸ್ಬುಕ್ಕಿನಾದ್ಯಂತ ಪೋಸ್ಟಂದು ವೈರಲಾಗಿತ್ತು. ಅದನ್ನು ಫ್ಯಾಕ್ಟ್ ಚೆಕ್ಕರ್ ನ್ಯೂಸ್ ವೆಬ್ ಪೋರ್ಟಲ್‌ ಆದ “ಭೂಮ್ ಲೈವ್” ಫ್ಯಾಕ್ಟ್ ಚೆಕ್ ನಡೆಸಿದ್ದು ಸುದ್ದಿಯ ಸತ್ಯಾಸತ್ಯತೆಯನ್ನು ಹೊರ ಹಾಕಿದೆ.

ನೆಸ್ಲೇ ಇಂಡಿಯಾವನ್ನು ಸಂಪರ್ಕಿಸಿದ ಭೂಮ್ ಲೈವ್, ಫೇಸ್ ಬುಕ್ಕಿನಲ್ಲಿ ಹರಿದಾಡುತ್ತಿರುವ ಬೀಫ್ ಫ್ಲೇವರ್ ಮ್ಯಾಗಿಯು ಆಸ್ಟ್ರೇಲಿಯಾದಲ್ಲಿ ಮಾರಾಟ ಮಾಡುವ ಮ್ಯಾಗಿಯಾಗಿದೆ ಎಂದು ವರದಿ ಮಾಡಿದೆ.

ಅದರ ಫೋಟೋವನ್ನು ಹಾಕಿ “ಮ್ಯಾಗಿಯಲ್ಲಿ ಗೋಮಾಂಸದ ಫ್ಲೇವರ್ ಹಾಕಲು ಪ್ರಾರಂಭಿಸಿದ್ದಾರೆ, ಇಂದಿನಿಂದ ನಾನು ಮ್ಯಾಗಿಯನ್ನು ಬಹಿಷ್ಕಾರ ಮಾಡುತ್ತಿದ್ದೇನೆ. ದಯವಿಟ್ಟು ಯಾರು ದನಕ್ಕೆ ತಾಯಿಯ ಸ್ಥಾನಮಾನ ನೀಡಿದ್ದೀರೊ ಅವರೆಲ್ಲರೂ ಮ್ಯಾಗಿಯನ್ನು ಬಹಿಷ್ಕಾರ ಮಾಡಿ” ಎಂದು ಬರೆಯಲಾಗಿದೆ.

मैगी में गोमांस का फ्लेवर डालना शुरू कर दिया मैं आज से मैगी का बहिष्कार करता हूँ , कृपया आप भी जो गाय को माता का दर्जा देतें हैं मैगी का बहिष्कार करें मैगी का बहिष्कार करो

Posted by क्षत्रिय सिंह on Tuesday, March 10, 2020

ಇನ್ನೊಂದು ಚಿತ್ರದಲ್ಲಿ ಕೂಡಾ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಮ್ಯಾಗಿ ಕಂಪೆನಿಯ ಬೀಫ್ ಫ್ಲೇವರಿನ ಕ್ಯೂಬುಗಳ ಬಗ್ಗೆ ಕೂಡಾ ಇದೇ ರೀತಿಯ ಸುಳ್ಳುಗಳನ್ನು ಹರಿಯಬಿಡಲಾಗಿದೆ.

मैगी में गोमांस का फ्लेवर डालना शुरू कर दिया ?? कृपया आप भी जो गाय को माता का दर्जा देतें हैं मैगी का बहिष्कार करें ?#मैगी_का_बहिष्कार_करो…

Posted by Shubham Sharma on Tuesday, March 10, 2020

ಭೂಮ್ ಲೈವ್, ನಸ್ಲೇ ಇಂಡಿಯಾ ವಕ್ತಾರರನ್ನು ಸಂಪರ್ಕಿಸಿ ಈ ಬಗ್ಗೆ ಸ್ಪಷ್ಟನೆ ಕೇಳಿದಾಗ “ಮ್ಯಾಗಿಯ ಬೀಫ್ ಫ್ಲೇವರ್ ಉತ್ಪನ್ನಗಳು ಭಾರತಲ್ಲಿ ಮಾರಾಟಕ್ಕೆ ಲಭ್ಯವಿಲ್ಲ” ಎಂದು ಹೇಳಿದ್ದಾರಲ್ಲದೆ “ಭಾರತದಲ್ಲಿ ಲಭ್ಯವಿರುವ ಮ್ಯಾಗಿಯ ಯಾವುದೇ ಉತ್ಪನ್ನದಲ್ಲಿ ದನದ ಫ್ಲೇವರ್ ಇರುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ ಮ್ಯಾಗಿ ಇಂಡಿಯಾ ವೆಬ್ ಸೈಟಿನಲ್ಲಿ ಮಾಂಸಾಹಾರಿ ವಿಭಾಗದಲ್ಲಿ ಕೇವಲ ಚಿಕನ್ ಫ್ಲೇವರ್ ಮಾತ್ರ ಹಾಕಿದೆ. ಜೊತೆಗೆ ತನ್ನ ಫೇಸ್ ಬುಕ್ ಪೇಜಲ್ಲಿ ಕೂಡಾ ಇದೆ ಮಾಹಿತಿಯನ್ನು ಹಾಕಿದೆ.

ಭೂಮ್ ಲೈವ್ ಗೋಮಾಂಸವಿದೆ ಎಂದು ವೈರಲಾದ ಫೋಟೋವನ್ನು ರಿವರ್ಸ್ ಸರ್ಚ್ ಮಾಡಿದಾಗ ಅದು “ಮ್ಯಾಗಿ ಆಸ್ಟ್ರೇಲಿಯಾ”ದ ವೆಬ್ಸೈಟಿನ ಫೋಟೋ ಎಂದು ಪತ್ತೆಯಾಗಿದೆ.

ಅಲ್ಲದೆ ಭೂಮ್ ಲೈವ್ ಫೇಸ್ ಬುಕ್ಕಲ್ಲಿ ಹರಿದಾಡುವ ಇನ್ನೊಂದು ಚಿತ್ರವಾದ ಗೋಮಾಂಸದ ಕ್ಯೂಬನ್ನು ಅಮೇರಿಕಾದ ಅಮೇಜಾನ್ ವೆಬ್ಸೈಟಲ್ಲಿ ಇರುವುದನ್ನು ಪತ್ತೆ ಹಚ್ಚಿದೆ. ಅದು ಕೂಡ ಭಾರತದಲ್ಲಿ ಲಭ್ಯವಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...