ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೊ ಯಾತ್ರೆ’ಯ ಪ್ರಚಾರಕ್ಕಾಗಿ ಹಾಕಲಾಗಿದ್ದ ಬ್ಯಾನರ್‌ನಲ್ಲಿ ಗಾಂಧಿ ಕೊಲೆ ಆರೋಪಿ ವಿ.ಡಿ. ಸಾವರ್ಕರ್ ಚಿತ್ರವನ್ನು ಬಳಸಲಾಗಿರುವ ಘಟನೆ ಕೇರಳದ ನೆಡುಂಬಸ್ಸೆರಿ ಬಳಿಯ ಅಥಣಿಯಲ್ಲಿ ನಡೆದಿದೆ.
ಚಿತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಇದರ ನಂತರ ಎಚ್ಚೆತ್ತ ಪಕ್ಷದ ಕಾರ್ಯಕರ್ತರು ಆ ಚಿತ್ರಕ್ಕೆ ಮಹಾತ್ಮ ಗಾಂಧಿಯ ಚಿತ್ರವನ್ನು ಅಂಟಿಸಿ ಅದನ್ನು ಮರೆಮಾಚಿದ್ದಾರೆ. ಈ ನಡುವೆ ಪಕ್ಷವೂ ಸ್ಥಳೀಯ ಕಾಂಗ್ರೆಸ್ ಘಟಕದ ಕಾರ್ಯದರ್ಶಿಯನ್ನು ಘಟನೆಗೆ ಹೊಣೆಯನ್ನಾಗಿಸಿ ಅಮಾನತು ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಭಾರತ್ ಜೋಡೊ ಯಾತ್ರೆಯನ್ನು ಸ್ವಾಗತಿಸಲು ಪಕ್ಷವು ಸ್ವಾತಂತ್ಯ್ರ ಹೋರಾಟಗಾರರ ಚಿತ್ರಗಳಿರುವ ಬ್ಯಾನರನ್ನು ಅಥಣಿಯಲ್ಲಿ ಹಾಕಿತ್ತು. ಈ ಬ್ಯಾನರ್‌ನಲ್ಲಿ ರವೀಂದ್ರ ನಾಥ್ ಠಾಗೋರ್, ಅಬ್ದುಲ್ ಕಲಾಂ ಆಜಾದ್, ಜಿ.ಬಿ. ಪಂತ್ ಸೇರಿದಂತೆ ಹಲವು ಸ್ವಾತಂತ್ಯ್ರ ಹೋರಾಟಗಾರರ ನಡುವೆ ಗಾಂಧಿ ಕೊಲೆ ಆರೋಪಿಯ ಚಿತ್ರವು ಸೇರಿಕೊಂಡಿತ್ತು. ಬ್ಯಾನರ್ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಜಿಲ್ಲಾ ಕಾಂಗ್ರೆಸ್ ಸಮಿತಿ ಸ್ಥಳೀಯ ಸಮಿತಿ ಕಾರ್ಯದರ್ಶಿ ಸುರೇಶ್ ಅವರನ್ನು ಅಮಾನತು ಮಾಡಿದೆ.

ವಿಷಯವು ವಿವಾದವಾಗುತ್ತಿದ್ದಂತೆ ಕಾರ್ಯಕರ್ತರು ಸಾವರ್ಕರ್ ಚಿತ್ರದ ಮೇಲೆ ಮಹಾತ್ಮ ಗಾಂಧಿಯ ಚಿತ್ರವನ್ನು ಅಂಟಿಸಿದ್ದಾರೆ. ಈ ಪ್ರದೇಶದಲ್ಲಿ ಭಾರತ್ ಜೋಡೋ ಯಾತ್ರೆ ಪ್ರವೇಶಿಸುವ ಗಂಟೆಗಳ ಮೊದಲು ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅಭಿಯಾನದ ಸಮನ್ವಯದಲ್ಲಿ ಗಂಭೀರ ಲೋಪ ಎಸಗಿರುವ ಸ್ಥಳೀಯ ಸಮಿತಿ ಕಾರ್ಯದರ್ಶಿ ವಿರುದ್ಧ ಜಿಲ್ಲಾ ನಾಯಕತ್ವ ಕ್ರಮ ಕೈಗೊಂಡಿದೆ.
“ಪಕ್ಷದ ಸ್ಥಳೀಯ ಕಾರ್ಯಕರ್ತರೊಬ್ಬರು ಈ ಫ್ಲೆಕ್ಸ್ ಕಟ್ಟಿದ್ದಾರೆ. ಅವರು ಸ್ವಾತಂತ್ಯ್ರ ಹೋರಾಟಗಾರರ ಚಿತ್ರಗಳನ್ನು ಮುದ್ರಿಸಿ ಕೊಡುವಂತೆ ಫ್ಲೆಕ್ಸ್ ಮುದ್ರಣ ಮಾರಾಟಗಾರರನ್ನು ಕೇಳಿದ್ದರು. ಅದನ್ನು ಮುದ್ರಿಸುವಾಗ ಈ ಚಿತ್ರವೂ ಪ್ರಮಾದದಿಂದಾಗಿ ಮುದ್ರಣಗೊಂಡಿದೆ. ಸಮಸ್ಯೆ ಗಮನಕ್ಕೆ ಬಂದ ಕೂಡಲೇ ತೆಗೆಸಲು ಸೂಚನೆ ನೀಡಲಾಗಿದೆ” ಎಂದು ಕಾಂಗ್ರೆಸ್ ಮುಖಂಡರು ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮಗಳ ವರದಿ ಮಾಡಿವೆ.
ಇದನ್ನೂ ಓದಿ: ಭಾರತ್ ಜೋಡೊ ಯಾತ್ರೆಯಿಂದ ಕಾಂಗ್ರೆಸ್‌ಗೆ ಲಾಭವಾಗಲಿದೆಯೇ?: ಪಾದಯಾತ್ರೆಗಳ ಇತಿಹಾಸ ಏನು ಹೇಳುತ್ತದೆ?
ಈ ಮಧ್ಯೆ ಭಾರತ್ ಜೋಡೋ ಯಾತ್ರೆ ಇಂದು ಎರ್ನಾಕುಲಂ ಜಿಲ್ಲೆಯಲ್ಲಿ ತನ್ನ ಪ್ರವಾಸವನ್ನು ಪ್ರಾರಂಭಿಸಿತು. ನಿನ್ನೆ ಸಂಜೆ ಜಿಲ್ಲೆಯ ಗಡಿಭಾಗವಾದ ಆರೂರ್‌ನಲ್ಲಿ ಪ್ರಯಾಣ ಮುಗಿಸಿ ಬೆಳಗ್ಗೆ ಕುಂಬಳಂ ಟೋಲ್ ಜಂಕ್ಷನ್‌ನಿಂದ ಹೊರಟಿತ್ತು. ಇಂದಿನ ಯಾತ್ರೆಯು ಸುಮಾರು 18 ಕಿ.ಮೀ ಕ್ರಮಿಸಿ ಎಡಪಲ್ಲಿಯ ಸೇಂಟ್ ಜಾರ್ಜ್ ಚರ್ಚ್ ನಲ್ಲಿ ಕೊನೆಗೊಳ್ಳಲಿದೆ.



What is this? How Gandhi killer Godse photo appeared?