Homeಮುಖಪುಟದ್ವೇಷ ಭಾಷಣ ತಡೆಯುವಲ್ಲಿ ಟಿ.ವಿ. ಆಂಕರ್‌ಗಳ ಪಾತ್ರ ಮುಖ್ಯವಾಗಿದೆ: ಸುಪ್ರೀಂ ಕೋರ್ಟ್

ದ್ವೇಷ ಭಾಷಣ ತಡೆಯುವಲ್ಲಿ ಟಿ.ವಿ. ಆಂಕರ್‌ಗಳ ಪಾತ್ರ ಮುಖ್ಯವಾಗಿದೆ: ಸುಪ್ರೀಂ ಕೋರ್ಟ್

- Advertisement -
- Advertisement -

“ಯಾರಾದರೂ ದ್ವೇಷ ಭಾಷಣವನ್ನು ಮಾಡುವಾಗ ಅದನ್ನು ತಡೆಯುವಲ್ಲಿ ಟೆಲಿವಿಷನ್‌ ಚಾನೆಲ್‌ ನಿರೂಪಕರ ಪಾತ್ರ ಮುಖ್ಯವಾಗಿದೆ” ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ದ್ವೇಷದ ಮಾತುಗಳು ಟಿವಿ ಚಾನೆಲ್‌ಗಳಲ್ಲಿ ಬರುತ್ತಿರುವಾಗ ‘ಆಂಕರ್‌ನ ಪಾತ್ರ’ ‘ಬಹಳ ಮುಖ್ಯ’ವಾಗಿರುತ್ತದೆ ಎಂದು ತಿಳಿಸಿರುವ ಕೋರ್ಟ್, ಸರ್ಕಾರ ಏಕೆ ‘ಮೂಕ ಪ್ರೇಕ್ಷಕರಾಗಿ ಉಳಿದಿದೆ’ ಎಂದೂ ಪ್ರಶ್ನಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಮುಖ್ಯವಾಹಿನಿ ಮಾಧ್ಯಮ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿನ ಈ ಭಾಷಣಗಳಿಗೆ ಯಾವುದೇ ತಡೆ ಇಲ್ಲವಾಗಿದೆ. ದ್ವೇಷ ಭಾಷಣವನ್ನು ಯಾರೇ ಮಾಡಿದರೂ ಅದು ಮುಂದುವರೆಯದಂತೆ ತಕ್ಷಣವೇ ಕ್ರಮವಹಿಸುವುದು (ಆಂಕರ್‌ಗಳ) ಕರ್ತವ್ಯವಾಗಿದೆ” ಎಂದು ಕೋರ್ಟ್ ಹೇಳಿದೆ.

ಕಳೆದ ವರ್ಷದಿಂದ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿ ಕೆ.ಎಂ.ಜೋಸೆಫ್, “ಪತ್ರಿಕಾ ಸ್ವಾತಂತ್ರ್ಯ ಮುಖ್ಯವಾಗಿದೆ. ಆದರೆ ನಮ್ಮದು ಅಮೆರಿಕದಂತೆ ತೀರ ಸ್ವತಂತ್ರವಲ್ಲ. ನಾವು ಎಲ್ಲಿಗೆ ಗೆರೆ ಎಳೆಯಬೇಕು ಎಂಬುದು ತಿಳಿದಿರಬೇಕು’’ ಎಂದು ಅಭಿಪ್ರಾಯಪಟ್ಟರು.

“ಯಾರನ್ನಾದರೂ ಕೊಲ್ಲುವ ರೀತಿಯಲ್ಲಿ ದ್ವೇಷದ ಭಾಷಣವು ಪದರಗಳನ್ನು ಹೊಂದಿದೆ. ನೀವು ನಿಧಾನವಾಗಿ ಕೊಲ್ಲಬಹುದು ಅಥವಾ ಬೇರೆ ರೀತಿಯಲ್ಲಿ ಕೊಲ್ಲಬಹುದು” ಎಂದು ಆತಂಕ ವ್ಯಕ್ತಪಡಿಸಿರುವ ನ್ಯಾಯಾಲಯ, “ದ್ವೇಷದ ಭಾಷಣವು ವೀಕ್ಷಕರಿಗೆ ಏಕೆ ಆಸಕ್ತಿದಾಯಕವಾಗಿದೆ” ಎಂದು ಪ್ರಶ್ನಿಸಿದೆ.

“ಸರ್ಕಾರವು ಪ್ರತಿಕೂಲವಾದ ನಿಲುವನ್ನು ತೆಗೆದುಕೊಳ್ಳಬಾರದು. ಆದರೆ ನ್ಯಾಯಾಲಯಕ್ಕೆ ಸಹಾಯ ಮಾಡಬೇಕು” ಎಂದಿರುವ ಕೋರ್ಟ್, “ಇದು ಕ್ಷುಲ್ಲಕ ವಿಷಯವೇ?” ಎಂದು ಕೇಳಿದೆ.

ದ್ವೇಷದ ಭಾಷಣವನ್ನು ತಡೆಯುವ ಕುರಿತು ಕಾನೂನು ಆಯೋಗದ ಶಿಫಾರಸುಗಳ ಸಂಬಂಧ ಕ್ರಮ ಜರುಗಿಸಲು ಉದ್ದೇಶಿಸಿದ್ದರೆ ಕೇಂದ್ರ ಸರ್ಕಾರವು ಸ್ಪಷ್ಟಪಡಿಸಬೇಕೆಂದು ನ್ಯಾಯಾಲಯ ಸೂಚಿಸಿದ್ದು, ನವೆಂಬರ್ 23 ರಂದು ಮುಂದಿನ ವಿಚಾರಣೆಯನ್ನು ನಡೆಸಲಿದೆ.

ಸುಪ್ರೀಂ ಕೋರ್ಟ್‌ನ ಸೂಚನೆಯಂತೆ ಕಾನೂನು ಆಯೋಗವು ನಿರ್ದಿಷ್ಟ ಕಾನೂನುಗಳನ್ನು ಶಿಫಾರಸು ಮಾಡುವ ವರದಿಯನ್ನು 2017ರಲ್ಲಿ ಸಲ್ಲಿಸಿತ್ತು. “ಭಾರತದ ಯಾವುದೇ ಕಾನೂನಿನಲ್ಲಿ ದ್ವೇಷದ ಭಾಷಣವನ್ನು ವ್ಯಾಖ್ಯಾನಿಸಲಾಗಿಲ್ಲ. ಆದರೆ ಕೆಲವು ಶಾಸನಗಳಲ್ಲಿನ ಕಾನೂನು ನಿಬಂಧನೆಗಳು ವಾಕ್ ಸ್ವಾತಂತ್ರ್ಯಕ್ಕೆ ಅವಕಾಶ ನೀಡಿದ್ದರೂ, ಕೆಲವು ಮಾದರಿಯ ಮಾತುಗಳನ್ನು ನಿಷೇಧಿಸುತ್ತವೆ” ಎಂದು ಆಯೋಗ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿರಿ: ಕೆಲವೊಮ್ಮೆ ನಿರಾಶವಾದಿಯಾಗುತ್ತೇನೆ ಮತ್ತು ಏಕಾಂಗಿ ಕೂಡಾ: ಜೈಲಿನಿಂದ ಉಮರ್ ಖಾಲಿದ್ ಪತ್ರ

ಆಯೋಗವು ಕರಡು ಶಾಸನವನ್ನೂ ರೂಪಿಸಿದೆ. ಹೊಸ ಸೆಕ್ಷನ್‌ಗಳಾದ 153C (ದ್ವೇಷಕ್ಕೆ ಪ್ರಚೋದನೆಯನ್ನು ನಿಷೇಧಿಸುವುದು) ಮತ್ತು 505A (ಕೆಲವು ಸಂದರ್ಭಗಳಲ್ಲಿ ಭಯ, ಎಚ್ಚರಿಕೆ ಅಥವಾ ಹಿಂಸಾಚಾರದ ಪ್ರಚೋದನೆಯನ್ನು ಉಂಟುಮಾಡುವುದು) ಸೇರಿಸಲು ಸೂಚಿಸಿದೆ.

ಟಿವಿ ಕಾರ್ಯಕ್ರಮಗಳು, ಸಂಜೆಯ ಚರ್ಚೆಗಳು ವೈರಲ್‌ ಆಗುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿವೆ. ಇಂಟರ್ನೆಟ್ ಕಂಪನಿಗಳು ದ್ವೇಷದ ಭಾಷಣವನ್ನು ನಿಗ್ರಹಿಸುವಲ್ಲಿ ಕ್ರಮ ಜರುಗಿಸುತ್ತಿಲ್ಲ ಎಂಬ ಟೀಕೆಗಳೂ ವ್ಯಕ್ತವಾಗುತ್ತಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...