Homeಕರ್ನಾಟಕಮಹೇಶ್ ಜೋಶಿ ಸರ್ವಾಧಿಕಾರ ನಡೆಗೆ ಕಸಾಪ ಸದಸ್ಯರಿಂದಲೇ ವಿರೋಧ

ಮಹೇಶ್ ಜೋಶಿ ಸರ್ವಾಧಿಕಾರ ನಡೆಗೆ ಕಸಾಪ ಸದಸ್ಯರಿಂದಲೇ ವಿರೋಧ

- Advertisement -
- Advertisement -

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ್ ಜೋಶಿ ಅವರು ವಿಶ್ವ ಮಹಿಳಾ ದಿನಾಚರಣೆಯ ದಿನದಂದು ದೂರದರ್ಶನದ ಸಹಾಯಕ ನಿರ್ದೇಶಕಿ ನಿರ್ಮಲಾ ಎಲಿಗಾರ್ ಅವರನ್ನು ಕಸಾಪ ಸದಸ್ಯತ್ವದಿಂದ ಅಮಾನತು ಮಾಡುವ ಮೂಲಕ ಸರ್ವಾಧಿಕಾರತ್ವ ಪ್ರದರ್ಶಿಸಿದ್ದಾರೆ. ಅಧ್ಯಕ್ಷ ಜೋಶಿ ಅವರ ಈ ನಡೆಗೆ ಕಸಾಪ ಸದಸ್ಯರಿಂದಲೇ ವಿರೋಧ ವ್ಯಕ್ತವಾಗುತ್ತಿದೆ.

ಹಾವೇರಿಯಲ್ಲಿ ನಡೆದ 8ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಮಲಾ ಸಿ. ಎಲಿಗಾರ್ ಅವರು, ವಸತಿ ಸೌಲಭ್ಯಕ್ಕೆ ಸಂಬಂಧಿಸಿದಂತೆ ಪರಿಷತ್ತಿನ ಅಧ್ಯಕ್ಷರೊಂದಿಗೆ ಬಹಿರಂಗವಾಗಿಯೇ ಮಾತಿನ ಚಕಮಕಿ ನಡೆಸಿದ್ದರು. ಅಷ್ಟೇ ಅಲ್ಲದೇ ದೂರದರ್ಶನದಲ್ಲಿ ಕಸಾಪ ವಿರುದ್ಧ ಒಂದು ನಿಮಿಷದ ಮೌನಾಚರಣೆ ಮಾಡಿದ್ದರು. ಇದು ಮಹೇಶ್ ಜೋಶಿಯವರ ಕಣ್ಣು ಕೆಂಪಾಗಲು ಕಾರಣವಾಗಿದೆ.

ಜೋಶಿ ನೇತೃತ್ವದ ಕಸಾಪ ಕಾರ್ಯಕಾರಿ ಸಮಿತಿಯು, ‘ಪರಿಷತ್ತಿನ ಘನತೆ ಗೌರವ ಮತ್ತು ಧ್ಯೇಯೋದೇಶಗಳಿಗೆ ವಿರುದ್ಧವಾಗಿ ಅವರು ನಡೆದುಕೊಂಡಿದ್ದಾರೆ’ ಎಂದು ಪರಿಷತ್ತಿನ ನಿಯಮ 8) 7) ಅಡಿಯಲ್ಲಿನ ಅಧಿಕಾರ ಬಳಸಿ ನಿರ್ಮಲಾ ಸಿ. ಎಲಿಗಾರ್ ಅವರ ಕಸಾಪ ಸದಸ್ಯತ್ವವನ್ನು ಅಮಾನತುಗೊಳಿಸಿದೆ. ಇದೇ ವೇಳೆ 2022ನೇ ಸಾಲಿನಲ್ಲಿ ನಿರ್ಮಲಾ ಎಲಿಗಾ‌ರ್‌ ಅವರಿಗೆ ನೀಡಲಾಗಿದ್ದ ‘ಪಂಕಜಶ್ರೀ ಸಾಹಿತ್ಯ ಪ್ರಶಸ್ತಿ’ಯನ್ನೂ ಹಿಂಪಡೆದಿದ್ದಾರೆ.

ಏಕಾಏಕಿ ಸದ್ಯಸತ್ವದ ಅಮಾನತು ಮತ್ತು ಪ್ರಶಸ್ತಿ ಹಿಂಪಡೆಯುವಿಕೆಯು ಕಸಾಪ ಇತಿಹಾಸದಲ್ಲಿ ಎಂದೂ ನಡೆದಿರಲಿಲ್ಲ. ಕಳೆದ ಒಂದು ವರ್ಷದಿಂದ ಹಲವು ನಡೆಗಳಲ್ಲಿ ವಿವಾದಕ್ಕೀಡಾಗಿರುವ ಕಸಾಪ, ಹೊಸ ವಿವಾದವನ್ನು ಹುಟ್ಟುಹಾಕಿದೆ. ಇದು ಸಾಹಿತ್ಯಕ ಮತ್ತು ಸಾಂಸ್ಕೃತಿಕ ಲೋಕದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಅಧ್ಯಕ್ಷ ಮಹೇಶ್ ಜೋಶಿ ಅವರ ಈ ಸರ್ವಾಧಿಕಾರ ನಡೆಗೆ ಕಸಾಪ ಸದಸ್ಯರಿಂದಲೇ ವಿರೋಧ ವ್ಯಕ್ತವಾಗಿದೆ.

ಇದನ್ನೂ ಓದಿ: ಮಹಿಳಾ ದಿನಾಚರಣೆಯಂದು ನಿರ್ಮಲಾ ಎಲಿಗಾರ್ ಕಸಾಪ ಸದಸ್ಯತ್ವ ರದ್ದು: ಮಹೇಶ ಜೋಶಿಯಿಂದ ಸರ್ವಾಧಿಕಾರತ್ವ ಪ್ರದರ್ಶನ

ಈ ಬಗ್ಗೆ ಕಸಾಪ ಸದಸ್ಯರಾದ ಪುರುಷೋತ್ತಮ ಬಿಳಿಮಲೆಯವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಹೀಗೇಕೆ ಮಾಡುತ್ತಿದೆ? ಎಂದು ಪ್ರಶ್ನಿಸಿದ್ದಾರೆ. “ದೂರದರ್ಶನದ ಹಿರಿಯ ಅಧಿಕಾರಿ ನಿರ್ಮಲಾ ಎಲಿಗಾರ್ ಅವರು ಹಾವೇರಿ ಸಮ್ಮೇಳನದಲ್ಲಿ ತಮಗಾದ ತೊಂದರೆಗಳನ್ನು ತಮ್ಮದೇ ಆದ ರೀತಿಯಲ್ಲಿ ಪ್ರತಿಭಟಿಸಿರುವುದನ್ನು ನಾನು ಸಾಮಾಜಿಕ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಅದು ಪ್ರಜಾಪ್ರಭುತ್ವ ನಮಗೆ ಕೊಟ್ಟಿರುವ ಹಕ್ಕು. ಇದನ್ನು ಉಪಯೋಗಿಸಿಕೊಂಡು ನಾವು ಹಲವರು ನಮ್ಮದೇ ರೀತಿಯಲ್ಲಿ ಪ್ರತಿಭಟಿಸಿದ್ದೇವೆ” ಎಂದಿದ್ದಾರೆ.

“ಸುಮಾರು 15 ವರ್ಷಗಳಿಂದ ವೈಯಕ್ತಿಕವಾಗಿ ಗೊತ್ತಿರುವ ನನ್ನನ್ನು ಜೋಶಿ ಅವರು ʼಪೆಂಡಾಲ್‌ ಹಾಕಿಸುವʼ ಮಟ್ಟಕ್ಕೆ ಇಳಿಸಿದ್ದಾರೆ. ಬೌದ್ದಿಕ ಚರ್ಚೆಗಳಲ್ಲಿ ವಿಶ್ವಾಸ ಇರುವ ನಾನು ಅದನ್ನು ನ್ಯಾಯಾಲಯಕ್ಕೆ ಕೊಂಡೊಯ್ಯಲಿಲ್ಲ. ಅಧಿಕಾರ ಗೆಳೆತನವನ್ನು ಮರೆಸಿಬಿಡುವುದು ನನಗೇನೂ ಹೊಸತಲ್ಲ. ಆದರೆ ಈಗ ಕಸಾಪವು ನಿರ್ಮಲಾ ಎಲಿಗಾರ್ ಅವರ ಮೇಲೆ ಕ್ರಮ ಕೈಗೊಂಡಿದೆ. ಅವರ ಸದಸ್ಯತ್ವವನ್ನು ಅಮಾನತಿನಲ್ಲಿರಿಸಿದೆ. ಅವರಿಗೆ ನೀಡಲಾದ ಪ್ರಶಸ್ತಿಯನ್ನು ಹಿಂದೆಗೆದುಕೊಳ್ಳಲಾಗಿದೆ. ಇವು ಸರಿಯಾದ ಕ್ರಮಗಳಲ್ಲ. ಕಾರಣ ಕೂಡಲೇ ಅಮಾನತು ಕ್ರಮವನ್ನು ಹಿಂತೆಗೆದುಕೊಳ್ಳಬೇಕಾಗಿ ನಾನು ನನ್ನ ಗೆಳೆಯರಾದ ಕಸಾಪ ಅಧ್ಯಕ್ಷರನ್ನು ಕೋರಿಕೊಳ್ಳುತ್ತಿದ್ದೇನೆ” ಎಂದು ತಿಳಿಸಿದ್ದಾರೆ.

“ನಮ್ಮನ್ನೆಲ್ಲ ಬೆಳೆಸಿದ ಸಂಸ್ಥೆಯೊಂದು ಈಗ ಹಿಡಿಯುತ್ತಿರುವ ಹಾದಿಯನ್ನು ನೋಡಿ ಸಿಟ್ಟು ಬರುತ್ತಿಲ್ಲ, ಬದಲು ವಿಷಾದವಾಗುತ್ತಿದೆ. ಕನ್ನಡದ ದೊಡ್ಡ ದೊಡ್ಡ ಸಾಹಿತಿಗಳೇ ಮೌನವಾಗಿರುವಾಗ ನನ್ನಂಥ ಹೊರನಾಡಿನವನಿಗೇಕೆ ಈ ಕೆಲಸ! ಬಹುಶ: ನಾವೇ ಮರ್ಯಾದೆಯಿಂದ ಹೊರಬರುವುದು ಸರಿಯೆಂದು ತೋರುತ್ತದೆ” ಎಂದು ಬಿಳಿಮಲೆ ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಮತ್ತೋರ್ವ ಕ.ಸಾ.ಪ. ಆಜೀವ ಸದಸ್ಯ ಹಾಗೂ ಹಿರಿಯ ಪತ್ರಕರ್ತರಾದ ಸಂಗಮೇಶ ಮೆಣಸಿನಕಾಯಿ ಅವರು ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, “ಪ್ರಜಾಪ್ರಭುತ್ವದ ವಿರುದ್ಧ ಕ.ಸಾ.ಪ.?” ಎಂದು ಪ್ರಶ್ನೆ ಮಾಡಿದ್ದಾರೆ. “‘ಡಾ. ನಿರ್ಮಲಾ ಎಲಿಗಾರ್‌ ಅವರಿಗೆ ಹಾವೇರಿ ಸಾಹಿತ್ಯ ಸಮ್ಮೇಳನದ ಘಟನೆಯಿಂದ ಎದುರಿಸಬೇಕಾಗಬಹುದಾದ ಪ್ರತೀಕಾರದ ಬಗ್ಗೆ ಎಚ್ಚರಿಸಿದ್ದೆ. ನಾವಂದುಕೊಂಡಂತೆ ಪರೋಕ್ಷ ಸೇಡು ತೀರಿಸಿಕೊಳ್ಳುತ್ತಿಲ್ಲ, ಬದಲಿಗೆ ಪ್ರತ್ಯಕ್ಷ ಸೇಡಿಗೇ ಮುಂದಾಗಿದ್ದಾರೆ ನಾಡೋಜರು!” ಎಂದು ಟೀಕಿಸಿದ್ದಾರೆ.

“ಅಷ್ಟಕ್ಕೂ ಆಜೀವ ಸದಸ್ಯತ್ವದಿಂದ ಮತ್ತು ಘೋಷಿತ ಪ್ರಶಸ್ತಿಯಿಂದ ಕೈಬಿಡುವಂಥ ತಪ್ಪು ನೀವೇನು (ನಿರ್ಮಲಾ ಎಲಿಗಾರ) ಮಾಡಿದ್ದೀರೋ ನಾನರಿಯೆ. ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಘಟನೆ ವೇಳೆ ಹಾಜರಿದ್ದ ನನ್ನ ಆತ್ಮೀಯರು ಹೇಳುವ ಪ್ರಕಾರ ನೀವು ನಿಮಗಾಗಿಯೇ, ಅಂದರೆ ದೂರದರ್ಶನದ ಸಿಬ್ಬಂದಿಗಾಗಿ ಮೀಸಲಾಗಿದ್ದ ಸೌಲಭ್ಯವನ್ನು ಕೇಳಿದ್ದೀರಿ. ಸೂಕ್ತ ಸ್ಪಂದನೆ ಸಿಗದಿದ್ದಾಗ ಏರಿದ ದನಿಯಲ್ಲಿ ಪ್ರಶ್ನಿಸಿದ್ದೀರಿ. ವಿಡಿಯೊ ನೋಡಿದಾಗ ಅವರೂ ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಗೋಚರಿಸುತ್ತದೆ. ‘ಹಲೋ ಹೌ ಆರ್ ಯೂ…’ ಅಂತ ಬೇರೆ ಯಾರಿಗೋ ವಿಶ್ ಮಾಡುತ್ತ ಪಲಾಯನಗೈದಿದ್ದಾರೆ.”

”ಒಂದಂತೂ ಖುಷಿ-ನೇರವಾಗಿ ಅದೇ ಘಟನೆಯನ್ನು ಉಲ್ಲೇಖಿಸಿ, ‘ಶಿಸ್ತುಕ್ರಮ’ ಕೈಗೊಂಡು, ತಮ್ಮ ‘ಬುದ್ಧಿಮತ್ತೆ’ ಪ್ರದರ್ಶಿಸಿದ್ದಾರೆ! ಇಲ್ಲಿ ಸಮ್ಮೇಳನದ ವರದಿಗೆ ತೆರಳುವ ಪತ್ರಕರ್ತರು, ಕ.ಸಾ.ಪ. ಬೆಂಗಳೂರಿನ ಎಲ್ಲ ಆಜೀವ ಸದಸ್ಯರು, ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲ ಕನ್ನಡಾಭಿಮಾನಿಗಳು ಎಚ್ಚೆತ್ತುಕೊಳ್ಳಬೇಕಾದ ಕೆಲವು ಅಂಶಗಳಿವೆ” ಎಂದು ಉಲ್ಲೇಖಿಸಿದ್ದಾರೆ.

* ನೀವು (ನಿರ್ಮಲಾ) ಸೂಕ್ತ ಸೌಲಭ್ಯ ಪ್ರಶ್ನಿಸಿ, ‘ಪರಿಷತ್ತಿನ ಗೌರವಕ್ಕೆ ಚ್ಯುತಿ’ ತಂದಿದ್ದು ದೂರದರ್ಶನದ ಅಧಿಕಾರಿಯಾಗಿ! ಒಂದು ವೇಳೆ ನೀವು ಕ.ಸಾ.ಪ. ಆಜೀವ ಸದಸ್ಯರಲ್ಲದೇ ಇದ್ದಿದ್ದರೆ, ಕ.ಸಾ.ಪ. ಯಾವ ಕ್ರಮ ಜರುಗಿಸುತ್ತಿತ್ತೋ ಏನೋ?

* ನಿಮಗೆ ಪ್ರಶಸ್ತಿ ಘೋಷಣೆ ಆಗಿದ್ದು ಸಾಹಿತಿ ನಿರ್ಮಲಾ ಅವರಿಗೆ. ನೀವು ‘ಪರಿಷತ್ತಿನ ಗೌರವಕ್ಕೆ ಚ್ಯುತಿ’ ತಂದದ್ದು ದೂರದರ್ಶನದ ಅಧಿಕಾರಿಯಾಗಿ! ಹಾಗಾಗಿ ಪರಿಷತ್ತಿನ ಯಾವ ನಿಯಮಾವಳಿ ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದೆ? ಕ.ಸಾ.ಪ.ದ ಪ್ರತಿಯೊಬ್ಬ ಪದಾಧಿಕಾರಿ ಈ ಬಗ್ಗೆ ಸ್ಪಷ್ಟನೆ ಕೊಡಬೇಕು.

* ಇನ್ನು ಮುಂದೆ ಸಮ್ಮೇಳನದ ವರದಿಗೆ ಬರುವ ಎಲ್ಲ ಪತ್ರಕರ್ತರು ಕ.ಸಾ.ಪ.ದ ಆಜೀವ ಸದಸ್ಯತ್ವ ಹೊಂದಿರಲೇಬೇಕೆಂಬ ನಿಯಮ ಬರಬಹುದು. ಸಮ್ಮೇಳನದಲ್ಲಿ ಕಂಡುಬರುವ ನ್ಯೂನತೆಗಳನ್ನು ಪ್ರಶ್ನಿಸಿದರೆ, ವರದಿ ಮಾಡಿದರೆ ಕ್ರಮ ಕೈಗೊಳ್ಳಲು ಬೇಕಲ್ಲ?

* ಇನ್ನು ಮುಂದೆ ಸಮ್ಮೇಳನದ ವರದಿಗೆ ಬರುವ ಪತ್ರಕರ್ತರೆಲ್ಲ ನಿರ್ಮಲಾ ಅವರಂತೆ ಕ.ಸಾ.ಪ.ದ ಯಾವುದಾದರೊಂದು ಪ್ರಶಸ್ತಿ ಪಡೆದಿರಲೇಬೇಕೆಂಬ ನಿಯಮ ಜಾರಿಯಾಗಬಹುದು. ಪ್ರಶ್ನಿಸಿದರೆ ವಾಪಸ್ ಪಡೆಯಲು ಬೇಕಲ್ಲ?

* ಸಮ್ಮೇಳನಕ್ಕೆ ಬರುವ ಎಲ್ಲ ಕನ್ನಡಾಭಿಮಾನಿಗಳಿಗೂ ಇಂಥದೇ ನಿಯಮಗಳು ಪ್ರತ್ಯಕ್ಷ/ಪರೋಕ್ಷವಾಗಿ ಜಾರಿಯಾಗಬಹುದು. ಶಿಸ್ತು ಕ್ರಮ ಜರುಗಿಸಲು ಬೇಕಲ್ಲ?

ಈ ಮೇಲಿನ ತಕರಾರುಗಳನ್ನು ಸಂಗಮೇಶ ಅವರು ಎತ್ತಿದ್ದಾರೆ.

“ಒಟ್ಟಿನಲ್ಲಿ ಕ.ಸಾ.ಪ. ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧ ದಿಕ್ಕಿನಲ್ಲಿ ಹೊರಟಿರುವ ದಿಟ್ಟ ಸಂಕೇತವಿದು.
ಏನೇ ಇರಲಿ ಮೇಡಂ, ನೀವು ಕ.ಸಾ.ಪ. ಅಧ್ಯಕ್ಷರ ಅಹಂ ಅಷ್ಟೇ ಅಲ್ಲ, ನಿಮ್ಮ ಮಾಜಿ ಮೇಲಧಿಕಾರಿಯ ಅಹಂ ಅನ್ನೂ ಕೆಣಕಿದ್ದೀರಿ. ಇನ್ನೂ ಹುಷಾರಾಗಿ ಇರಬೇಕು. ನಿಮ್ಮೊಂದಿಗೆ ನಮ್ಮಂಥವರು ನೈತಿಕವಾಗಿ ಮಾತ್ರ ಜೊತೆಗಿರಲು ಸಾಧ್ಯ” ಎಂದು ಸಂಗಮೇಶ ಮೆಣಸಿನಕಾಯಿ ಅವರು ನಿರ್ಮಲಾ ಎಲಿಗಾರ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಮುಂದುವರೆದು ಕಸಾಪವನ್ನು ತರಾಟೆಗೆ ತಗೆದುಕೊಂಡಿರುವ ಸಂಗಮೇಶ್ ಅವರು, “ನಿರ್ಮಲಾ ಅವರ ಯಾವ ತಪ್ಪಿಗೆ ಯಾವ ಶಿಕ್ಷೆ ಕೊಡಬೇಕು ಎಂಬ ಪ್ರಾಥಮಿಕ ಜ್ಞಾನವೂ ಕ.ಸಾ.ಪ.ದಲ್ಲಿ ಇದ್ದಂತಿಲ್ಲ. ಅಂತೆಯೇ ಎರಡು ತಿಂಗಳು ತಲೆ ಕೆರೆದುಕೊಂಡು ಆಜೀವ ಸದಸ್ಯತ್ವ ಮತ್ತು ಘೋಷಿತ ಪ್ರಶಸ್ತಿಯಿಂದ ಕೈಬಿಟ್ಟು ಸೇಡು ತೀರಿಸಿಕೊಳ್ಳಲಾಗಿದೆ. ಇದು ಪಕ್ಕಾ ಪುರುಷ ಅಹಂ, ಯಜಮಾನಿಕೆಯ ಬುದ್ಧಿಯೇ ಸರಿ. ಈ ಶಿಕ್ಷೆ ವಿಧಿಸಿರುವ ಕ.ಸಾ.ಪ. ಪದಾಧಿಕಾರಿಗಳಿಗೆ ಒಂದು ಪ್ರಶ್ನೆ. ಸಮ್ಮೇಳನದ ಪೆಂಡಾಲ್ ಹಾಕಲು ಬರುವ ಹುಡುಗ, ‘ಪೆಂಡಾಲ್ ಹಾಕಲು ಸ್ಥಳವೇ ಇಲ್ಲ, ಎಲ್ಲಿ ಹಾಕಲಿ?’ ಅಂತ ಕೇಳಿದರೆ ಅವನ ಆಜೀವ ಸದಸ್ಯತ್ವ ರದ್ದು ಮಾಡ್ತೀರಾ? ಈಗ ಅಂಥದೇ ಕೆಲಸ ಮಾಡಿದ್ದೀರಿ. ಕೂಡಲೇ ಸರಿಯಾಗಿ ಓದಿಕೊಂಡಿರುವ ಒಬ್ಬ ಕಾನೂನು ಸಲಹೆಗಾರನನ್ನು ನೇಮಿಸಿಕೊಳ್ಳಿ” ಎಂದು ಅವರು ಸಲಹೆ ನೀಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...