ಮಾನನಷ್ಟ ಮೊಕದ್ದಮೆಯಲ್ಲಿ ಅಪರಾಧಿ ಎಂದು ಸಾಬೀತಾದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿದ ವೇಗದಲ್ಲೇ ಅವರನ್ನು ಮತ್ತೆ ಸಂಸದರನ್ನಾಗಿ ಮಾಡಬೇಕು ಎಂದು ಲೋಕಸಭೆಯಲ್ಲಿ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಶನಿವಾರ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರನ್ನು ಲೋಕಸಭೆಯ ಸದಸ್ಯರನ್ನಾಗಿ ಮರುಸ್ಥಾಪಿಸುವಂತೆ ಚೌಧರಿ ಅವರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಒತ್ತಾಯಿಸಿದರು.
2019ರ ಲೋಕಸಭೆ ಚುನಾವಣಾ ಪ್ರಚಾರದ ವೇಳೆ ಅನೇಕ ಕಳ್ಳರಿಗೆ ಮೋದಿ ಎಂಬ ಉಪನಾಮ ಏಕೆ ಇದೆ? ಎಂದು ಕೇಳಿದ್ದರು. ಈ ಹೇಳಿಕೆಗೆ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು. ಆನಂತರ ಅವರನ್ನು ಅಪರಾಧಿ ಎಂದು ಹೇಳಿ ಶಿಕ್ಷೆ ನೀಡಲಾಗಿತ್ತು.
ಗುಜರಾತ್ ನ್ಯಾಯಾಲಯವು ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಒಂದು ದಿನದ ನಂತರ, ಮಾರ್ಚ್ 24ರಂದು ಗಾಂಧಿ ಅವರನ್ನು ಸಂಸದರಾಗಿ ಅನರ್ಹಗೊಳಿಸಲಾಯಿತು.
ಲೋಕಸಭೆ ಸೆಕ್ರೆಟರಿ ಜನರಲ್ ಕಚೇರಿಯನ್ನು ಸಂಪರ್ಕಿಸಲು ಮತ್ತು ರಾಹುಲ್ ಗಾಂಧಿಯವರ ಸಂಸದ ಸ್ಥಾನವನ್ನು ಮರುಸ್ಥಾಪಿಸಲು ಕೋರಿ ಪತ್ರವನ್ನು ನೀಡುವಂತೆ ಬಿರ್ಲಾ ಅವರಿಗೆ ಸಲಹೆ ನೀಡಿದರು.
ಕಚೇರಿಯ ಅಧೀನ ಕಾರ್ಯದರ್ಶಿಯೊಬ್ಬರು ಪತ್ರವನ್ನು ಸ್ವೀಕರಿಸಿದ್ದಾರೆ ಎಂದು ಚೌಧರಿ ಶನಿವಾರ ಹೇಳಿದರು.
”ಪತ್ರದ ಜೊತೆಗೆ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿ ಲೋಕಸಭೆ ಸೆಕ್ರೆಟರಿಯೇಟ್ ಹೊರಡಿಸಿದ ಅಧಿಸೂಚನೆ ಮತ್ತು ಸುಪ್ರೀಂ ಕೋರ್ಟ್ ಆದೇಶದ ಪ್ರತಿಯನ್ನು ಸಲ್ಲಿಸಿದ್ದೇನೆ” ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಹೇಳಿದರು.
”ನನ್ನ ಪಕ್ಷದ ಪರವಾಗಿ ನಾನು ನಿಯಮಗಳ ಪ್ರಕಾರ ಏನು ಮಾಡಬೇಕೋ ಅದನ್ನು ಮಾಡಿದ್ದೇನೆ … ರಾಹುಲ್ ಗಾಂಧಿಯವರನ್ನು ಯಾವ ವೇಗದಲ್ಲಿ ಅನರ್ಹಗೊಳಿಸಲಾಗಿದೆಯೋ ಅದೇ ವೇಗದಲ್ಲಿ ಅವರ ಸಂಸದ ಸ್ಥಾನ ಮರುಸ್ಥಾಪನೆಯೂ ಆಗಬೇಕು” ಅವರು ಹೇಳಿದರು.
ಸೋಮವಾರದೊಳಗೆ ರಾಹುಲ್ ಗಾಂಧಿಯವರನ್ನು ಸಂಸದರಾಗಿ ಮರುಸ್ಥಾಪಿಸುವಂತೆ ಚೌಧರಿ ಬಿರ್ಲಾ ಅವರನ್ನು ಚೌಧರಿ ಒತ್ತಾಯಿಸಿದರು.
”ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸಿದ್ದಕ್ಕೆ ನಾವು ಏನನ್ನೂ ಹೇಳಲಿಲ್ಲ; ಅವರು ತನ್ನ ಮನೆಯನ್ನು ಖಾಲಿ ಮಾಡಲು ಹೇಳಿದ ದಿನ, ಆ ದಿನವೂ ರಜಾದಿನವಾಗಿತ್ತು, ಇಂದು ಸಹ ರಜಾದಿನವಾಗಿದೆ. ನಮಗೆ ದಿನ್ ಕಿ ತತ್ಪರ್ತ ಕುಚ್ ಅಲಗ್ ಥಿ…ಆಜ್ ಕಿ ತತ್ಪರ್ತಾ ಕುಚ್ ಧೀಮಿ ಲಗ್ ರಹೀ ಹೈ [ಆ ದಿನದ ಅಲೌಕಿಕತೆ ಬೇರೆಯೇ ಆಗಿತ್ತು, ಇಂದು ವೇಗ ಸ್ವಲ್ಪ ಕಡಿಮೆಯಾಗಿದೆ]” ಎಂದು ಅವರು ಟೀಕಿಸಿದರು.
ಸಂಸದ ಸ್ಥಾನದಿಂದ ಅನರ್ಹಗೊಂಡ ಮೂರು ದಿನಗಳ ನಂತರ ಗಾಂಧಿ ಅವರಿಗೆ ನೀಡಲಾದ ಸರ್ಕಾರಿ ಬಂಗಲೆಯನ್ನು ತೊರೆಯುವಂತೆ ಕೇಳಲಾಯಿತು. ಏಪ್ರಿಲ್ 22 ರಂದು ಬಂಗಲೆಯನ್ನು ಖಾಲಿ ಮಾಡಿದ ಅವರು, ಸತ್ಯವನ್ನು ಮಾತನಾಡಿದ್ದಕ್ಕಾಗಿ ಬೆಲೆ ತೆರಬೇಕಾಯಿತು ಎಂದು ಹೇಳಿದರು.
ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧದ ‘ಬಿಜೆಪಿಯ ಷಡ್ಯಂತ್ರ ಬಯಲಾಗಿದೆ’: ಸುಪ್ರೀಂ ತೀರ್ಪು ಬಳಿಕ ಖರ್ಗೆ ಪ್ರತಿಕ್ರಿಯೆ


