ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬರುವ ಮೊದಲ ರಾಜ್ಯ ಪಶ್ಚಿಮ ಬಂಗಾಳವಾಗಲಿದೆ. ಮಮತಾ ಬ್ಯಾನರ್ಜಿ ಈ ಕಾಯ್ದೆಯನ್ನು ಜಾರಿಗೊಳಿಸದಂತೆ ತಡೆಯಲು ಸಾಧ್ಯವಿಲ್ಲ ಎಂದು ಭಾರತೀಯ ಜನತಾ ಪಕ್ಷದ ಬಂಗಾಳ ಘಟಕದ ಮುಖ್ಯಸ್ಥ ದಿಲೀಪ್ ಘೋಷ್ ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯ ಕಟು ವಿರೋಧಿಗಳಲ್ಲೊಬ್ಬರಾದ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿನ್ನೆ ತಾನೇ “ಯಾವುದೇ ಪರಿಸ್ಥಿತಿಯಲ್ಲಿಯೂ ಸಹ ನಮ್ಮ ರಾಜ್ಯದಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲು ಎಂದು ಸವಾಲು ಹಾಕಿದ್ದರು.
ಅಷ್ಟು ಮಾತ್ರವಲ್ಲದೇ ಕೇರಳ, ಪಂಜಾಬ್, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಛತ್ತಿಸಘಡ ಸೇರಿದಂತೆ ಹಲವು ರಾಜ್ಯಗಳು ಕಾಯ್ದೆಯ ಜಾರಿಗೆ ನಕಾರ ಸೂಚಿಸಿದ್ದವು. ಆದರೆ ಕಾನೂನಿಯಲ್ಲಿ ಅದಕ್ಕೆ ಅವಕಾಶವಿಲ್ಲ ಎಂದು ಹಲವರು ಸ್ಪಷ್ಟಪಡಿಸಿದ್ದಾರೆ.
“ಈ ಮೊದಲು, 370 ನೇ ವಿಧಿಯನ್ನು ರದ್ದುಗೊಳಿಸುವುದನ್ನು ಮಮತಾ ಬ್ಯಾನರ್ಜಿ ವಿರೋಧಿಸಿದ್ದರು. ಆದರೆ ಕೇಂದ್ರ ಸರ್ಕಾರವು ಅದನ್ನು ಕಾರ್ಯಗತಗೊಳಿಸುವುದನ್ನು ಅವರಿಮದ ತಡೆಯಲಾಗಲಿಲ್ಲ. ಈ ಸಂದರ್ಭದಲ್ಲಿ, ರಾಜ್ಯದಲ್ಲಿ ಹೊಸ ಪೌರತ್ವ ಕಾಯ್ದೆಯನ್ನು ಕಾರ್ಯಗತಗೊಳಿಸುವ ಮೊದಲ ರಾಜ್ಯ ಬಂಗಾಳವಾಗಲಿದೆ, ಅದನ್ನು ಸಹ ತಡೆಯಲು ಅವರಿಂದ ಸಾಧ್ಯವಿಲ್ಲ ಎಂದು ಘೋಷ್ ಹೇಳಿದ್ದಾರೆ.
“ರಾಜ್ಯದಲ್ಲಿ ತನ್ನ ಮತ ಬ್ಯಾಂಕ್ ಕಳೆದುಕೊಳ್ಳುವ ಭೀತಿಯಿಂದಾಗಿ ಅವರು ಹೀಗೆ ಮಾತಾಡುತ್ತಿದ್ದಾರೆ ಎಂದು ಪ್ರಶ್ನಿಸಿರುವ ದಿಲೀಪ್ ಘೋಷ್, ನಾವು ಒಂದು ವಿಷಯವನ್ನು ಬಹಳ ಸ್ಪಷ್ಟಪಡಿಸುತ್ತೇನೆ. ಪೌರತ್ವ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗುವುದು, ಬ್ಯಾನರ್ಜಿ ಅಥವಾ ಅವರ ಪಕ್ಷ ಅದನ್ನು ತಡೆಯಲು ಸಾಧ್ಯವಾಗುವುದಿಲ್ಲ ”ಎಂದು ಅವರು ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಕೇವಲ ಅಕ್ರಮ ವಲಸಿಗರ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳುತ್ತಾರೆ ಆದರೆ ಹಿಂದೂ ನಿರಾಶ್ರಿತರ ಬಗ್ಗೆ ಅಲ್ಲ ಎಂದು ಘೋಷ್ ಆರೋಪಿಸಿದ್ದಾರೆ.
“ಬಂಗಾಳದಲ್ಲಿ ನಡೆದ ಪ್ರತಿಭಟನೆಯ ಹಿಂದೆ ಇರುವ ಅಕ್ರಮ ವಲಸಿಗರ ವಿರುದ್ಧ ಮಮತಾ ಬ್ಯಾನರ್ಜಿ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ? ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಅವರು ಜನಸಾಮಾನ್ಯರನ್ನು ಪ್ರಚೋದಿಸುತ್ತಿದ್ದಾರೆ. ನುಸುಳುಕೋರರ ಬಗ್ಗೆ ಆಕೆಗೆ ತುಂಬಾ ಕಾಳಜಿ ಇದ್ದರೆ, ಹಿಂದೂ ನಿರಾಶ್ರಿತರ ಬಗ್ಗೆ ಅವಳು ಯಾಕೆ ಏನನ್ನೂ ಹೇಳುತ್ತಿಲ್ಲ?” ಎಂದು ಬಿಜೆಪಿ ಕೈಲಾಶ್ ವಿಜಯವರ್ಗಿಯಾ ಪ್ರಶ್ನಿಸಿದ್ದಾರೆ.


