HomeUncategorizedನಕ್ಸಲಿಸಂ ಅನ್ನು ತಡೆಯಲು ಮೋದಿಯಿಂದ ಮಾತ್ರ ಸಾಧ್ಯ: ಅಮಿತ್‌ ಶಾ

ನಕ್ಸಲಿಸಂ ಅನ್ನು ತಡೆಯಲು ಮೋದಿಯಿಂದ ಮಾತ್ರ ಸಾಧ್ಯ: ಅಮಿತ್‌ ಶಾ

- Advertisement -
- Advertisement -

ನಕ್ಸಲಿಸಂ 20 ಅಡಿ ಆಳದಲ್ಲಿ ಸಮಾಧಿ ಮಾಡಲಾಗಿದೆ, ಪ್ರಧಾನಿ ನರೇಂದ್ರ ಮೋದಿ ಮಾತ್ರ ಅದನ್ನು ತಡೆಯಲು ಸಾಧ್ಯ ಎಂದು ಜಾರ್ಖಂಡ್‌ನ ಗಿರಿಡಿಹ್‌ನಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಈಶಾನ್ಯ ರಾಜ್ಯಗಳು ಅವರ ಸಂಸ್ಕೃತಿ, ಸಾಮಾಜಿಕ ಗುರುತು, ಭಾಷೆ ಮತ್ತು ರಾಜಕೀಯ ಹಕ್ಕುಗಳ ಕುರಿತು ಭಯಪಡಬೇಕಾಗಿಲ್ಲ. ಅವುಗಳನ್ನು ಯಾರು ಮುಟ್ಟಲಾಗುವುದಿಲ್ಲ ಮತ್ತು ಮೋದಿ ಸರ್ಕಾರ ಅವರನ್ನು ರಕ್ಷಿಸುತ್ತದೆ ಎಂದು ನಾನು ಭರವಸೆ ನೀಡುತ್ತೇನೆ ಎಂದು ಅಸ್ಸಾಂ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅಮಿತ್ ಶಾ ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಈಶಾನ್ಯ ರಾಜ್ಯಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅಮಿತ್‌ ಶಾ ಪುನರುಚ್ಚರಿಸಿದ್ದಾರೆ.

ಕಾಶ್ಮೀರ ಭಾರತದ ಆಭರಣವಾಗಿದೆ, ಪ್ರಧಾನಿ ನರೇಂದ್ರ ಮೋದಿ 370ನೇ ವಿಧಿ ಮತ್ತು ಆರ್ಟಿಕಲ್‌ 35 ಎ ಗಳನ್ನು ರದ್ದುಗೊಳಿಸುವ ಮೂಲಕ ಅಲ್ಲಿ ತ್ರಿವರ್ಣವನ್ನು ಹಾರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಿಎಎ ಅಡಿ ಪೌರತ್ವ ನೀಡಿದ ಕೇಂದ್ರ ಸರ್ಕಾರ: ಸುಪ್ರೀಂ ಮೆಟ್ಟಿಲೇರಲು ನಿರ್ಧರಿಸಿದ ಮುಸ್ಲಿಂ ಲೀಗ್

0
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಡಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡುವ ಪ್ರಕ್ರಿಯೆಯನ್ನು ಕೇಂದ್ರ ಗೃಹ ಇಲಾಖೆ ಪ್ರಾರಂಭಿಸಿದೆ. ಈಗಾಗಲೇ ಮೊದಲ ಹಂತದಲ್ಲಿ ಅರ್ಜಿ ಸಲ್ಲಿಸಿದ 300ಕ್ಕೂ ಅಧಿಕ...