ಗಣೇಶೋತ್ಸವದ ಮೆರವಣಿಗೆ ವೇಳೆ ವ್ಯಕ್ತಿಯೊಬ್ಬ ಬುರ್ಖಾ ಧರಿಸಿ ಡ್ಯಾನ್ಸ್ ಮಾಡಿರುವ ಘಟನೆ ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದಿದ್ದು, ಘಟನೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಬುರ್ಖಾ ಧರಿಸಿ ನೃತ್ಯ ಮಾಡುವುದು ಕಂಡು ಬಂದಿದೆ. ವೀಡಿಯೊ ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತು ಚೆನ್ನೈ ಪೊಲೀಸರಿಗೆ ಹಲವರು ದೂರುಗಳನ್ನು ನೀಡಿದ್ದು, ಈ ವಿಷಯದ ಬಗ್ಗೆ ತನಿಖೆಯನ್ನು ನಡೆಸುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ. ಘಟನೆಯಿಂದ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವುದರಿಂದ ಘಟನೆ ಬಗ್ಗೆ ಪೊಲೀಸರು ಹೆಚ್ಚು ಗಮನ ಹರಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವಿರುತ್ತಂಪಟ್ಟು ನಿವಾಸಿ ಅರುಣ್ ಕುಮಾರ್ ಎಂಬಾತನಿಗೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಸಮುದಾಯಗಳ ನಡುವೆ ವೈಷಮ್ಯ ಬಿತ್ತಲು ಯತ್ನಿಸಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ.
ಗಣೇಶ ಚತುರ್ಥಿ ಹಬ್ಬಕ್ಕೆ ಮುನ್ನ, ಚೆನ್ನೈ ಪೊಲೀಸರು ನಗರದೊಳಗೆ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಕುರಿತು ಮಾರ್ಗಸೂಚಿ ಹೊರಡಿಸಿದ್ದರು. ಗಣೇಶ ಮೂರ್ತಿಗಳನ್ನು ಸ್ಥಾಪಿಸುವ ಸ್ಥಳಗಳು, ಮೆರವಣಿಗೆ ಮಾರ್ಗಗಳು ಮತ್ತು ನಿಮಜ್ಜನ ಸ್ಥಳಗಳ ಬಗ್ಗೆ ಮಾಹಿತಿ ಹಾಗೂ ಪಟಾಕಿಗಳ ಬಳಕೆ ನಿಷೇಧ ಮಾಡಿ ಮಾರ್ಗಸೂಚಿ ಹೊರಡಿಸಿದ್ದರು.
Chennai: Man dances in Burqa during Ganesh immersion
– a Person in Burqa was dancing, video went Viral
– turned out to be Arun Kumar, in an inebriated state
– Police Arrested him & said that it may have caused a cIash between the two ¢ommunities
– the hunt for other involved in… pic.twitter.com/91C9waoaJY— زماں (@Delhiite_) September 24, 2023
ಇದನ್ನು ಓದಿ: ನನ್ನ ಮೇಲೆ ದೈಹಿಕ ಹಲ್ಲೆಗೆ ಪ್ರಚೋದಿಸಲಾಗಿದೆ: ಸಂಸದ ಡ್ಯಾನಿಶ್ ಅಲಿ


