ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಅಶ್ಲೀಲವಾಗಿ ನಿಂದಿಸಿದ ಬಿಜೆಪಿ ಎಮ್‌ಎಲ್‌ಸಿ ಸಿಟಿ ರವಿ ವಿರುದ್ಧ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಆಕ್ರೋಶ ವ್ಯಕ್ತವಾಗಿದೆ. ಸಾಹಿತ್ಯ ಸಮ್ಮೇಳನದಲ್ಲಿ ಮುಖ್ಯ ಮಹಾದ್ವಾರದ ಬಳಿ ಶನಿವಾರ ಜಮಾಯಿಸಿದ ವಿವಿಧ ಮಹಿಳಾ ಸಂಘಟನೆಗಳ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ‘‘ಗೋ ಬ್ಯಾಕ್ ಸಿ.ಟಿ.ರವಿ’’ ಘೋಷಣೆ ಕೂಗಿ, ಮಹಿಳಾ ಪೀಡಕರಿಗೆ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಅವಕಾಶ ಕಲ್ಪಿಸಬಾರದು ಎಂದು ಆಗ್ರಹಿಸಿದ್ದಾರೆ. ಮಂಡ್ಯ ಸಾಹಿತ್ಯ
ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಶನಿವಾರ ಬೆಳಿಗ್ಗೆ 11 ಗಂಟೆಗೆ ಪ್ರಧಾನ ವೇದಿಕೆಯಲ್ಲಿ ನಡೆಯಲಿರುವ ‘‘ಸಾಹಿತ್ಯದಲ್ಲಿ ರಾಜಕೀಯ; ರಾಜಕೀಯದಲ್ಲಿ ಸಾಹಿತ್ಯ’’ ಗೋಷ್ಠಿಯಲ್ಲಿ ಸಿ.ಟಿ. ರವಿ ಮಾತನಾಡಬೇಕಿತ್ತು. ಆದರೆ ಇದನ್ನು ವಿವಿಧ ಸಂಘಟನೆಗಳು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಮಂಡ್ಯ ಸಾಹಿತ್ಯ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಪ್ರತಿಭಟನಾಕಾರರು ಸಾಹಿತ್ಯ ಸಮ್ಮೇಳನದಲ್ಲಿ ಸಿ.ಟಿ. ರವಿ ಪ್ರಬಂಧ ಮಂಡಿಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ಗೋಷ್ಠಿಯ ಅಧ್ಯಕ್ಷತೆಯನ್ನು ಕಾನೂನು ಸಚಿವ ಎಚ್.ಕೆ. ಪಾಟೀಲ್ ವಹಿಸಲಿದ್ದು, ಬಿ.ಎಲ್. ಶಂಕರ್ ಆಶಯ ಭಾಷಣ ಮಾಡಲಿದ್ದರು. ಪ್ರತಿಭಟನೆ ಕಾವಿಗೆ ಮಧ್ಯಾಹ್ನವಾದರೂ ಸಿ.ಟಿ.ರವಿ ಗೋಷ್ಠಿಯಲ್ಲಿ ಭಾಗವಹಿಸಿರಲಿಲ್ಲ ಎಂದು ವರದಿಯಾಗಿವೆ.
ಈ ಸಂದರ್ಭದಲ್ಲಿ ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ ಮಾತನಾಡಿ, “ಸಂವಿಧಾನ ವಿರೋಧಿ ಹೇಳಿಕೆಯನ್ನು ಸಮರ್ಥಿಸಿಕೊಂಡು ಅದನ್ನು ವಿರೋಧಿಸಿದ ಮಹಿಳೆಯನ್ನು ಸಿ.ಟಿ. ರವಿ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ಅವರನ್ನು ಮಂಡ್ಯದ ಕನ್ನಡ ಸಾಹಿತ್ಯ ಸಮ್ಮೇಳನದ ಅತಿಥಿಯಾಗಿ ಭಾಷಣ ಮಾಡುವುದನ್ನು ಕೇಳಿಸಿಕೊಳ್ಳಲು ಮಂಡ್ಯದ ಜನ ಕಾದು ಕೂತಿಲ್ಲ. ಅವರ ಭಾಷಣ ಸಾಹಿತ್ಯಾಸಕ್ತರಿಗೆ ಅಗತ್ಯವಿಲ್ಲ’’ ಎಂದು ಕಿಡಿಕಾರಿದ್ದಾರೆ.
ಮಂಡ್ಯ ಹಲವು ದಾರ್ಶನಿಕರು ಮಹನೀಯರನ್ನು ಕಂಡ ಜಿಲ್ಲೆ ಕುವೆಂಪು ಅವರ ವೈಚಾರಿಕತೆ, ಸಾಮರಸ್ಯವನ್ನು ಮೈಗೂಡಿಸಿಕೊಂಡು ಸಮಸಮಾಜವನ್ನು ಕಟ್ಟಬೇಕೆಂಬ ಕನಸು ಹೊತ್ತು ಪ್ರೀತಿ ಮಾನವತೆಗಳನ್ನು ಹಂಚುತ್ತಾ ಹೆಸರಾಗಿರುವ ಜಿಲ್ಲೆ. ಅಂಬೇಡ್ಕರ್ ಎಂದರೆ ಈ ನೆಲದ ಉಸಿರು, ಅಸ್ತಿತ್ವ ಎಂದು ಧ್ವನಿ ಎತ್ತುವ ಜಿಲ್ಲೆಯಾಗಿದ್ದು, ಇಂತಹ ಜಾಗಕ್ಕೆ ಕೋಮುಕ್ರಿಮಿ, ಸಂವಿಧಾನ ವಿರೋಧಿ, ಅದರಲ್ಲೂ ಮಹಿಳಾ ವಿರೋಧಿ ಮಾತುಗಳನ್ನಾಡುತ್ತಿರುವ ರವಿಗೆ ಮಂಡ್ಯದ ಸಾಹಿತ್ಯ ಸಮ್ಮೇಳನಕ್ಕೆ ಬರಲು ಅವಕಾಶ ಕೊಡುವುದಿಲ್ಲ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಮಂಡ್ಯದ ಸಂವಿಧಾನ ಪರ ಮತ್ತು ಮಹಿಳಾ ಪರ ಮನಸ್ಸುಗಳು ಅವಕಾಶ ಕೊಡುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕೇರಳದಲ್ಲಿ ಸದ್ದು ಮಾಡಿದ ‘MEC-7’ : ಚರ್ಚೆಗೆ ಕಾರಣವಾದ ಸಿಪಿಐ(ಎಂ) ನಾಯಕನ ಹೇಳಿಕೆ
ಕೇರಳದಲ್ಲಿ ಸದ್ದು ಮಾಡಿದ ‘MEC-7’ : ಚರ್ಚೆಗೆ ಕಾರಣವಾದ ಸಿಪಿಐ(ಎಂ) ನಾಯಕನ ಹೇಳಿಕೆ


