Homeಮುಖಪುಟಮಂಗಳೂರು ಬಾಂಬ್ ಪ್ರಕರಣ: ಮಾಧ್ಯಮಗಳ ಇಸ್ಲಾಮಫೋಬಿಯ ಮತ್ತು ಪೊಲೀಸರ ಪಕ್ಷಪಾತ

ಮಂಗಳೂರು ಬಾಂಬ್ ಪ್ರಕರಣ: ಮಾಧ್ಯಮಗಳ ಇಸ್ಲಾಮಫೋಬಿಯ ಮತ್ತು ಪೊಲೀಸರ ಪಕ್ಷಪಾತ

- Advertisement -
- Advertisement -

ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಸೋಮವಾರ ಬಾಂಬ್ ಪತ್ತೆಯಾಗಿದೆ. ಕೂಡಲೇ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದವರು ಅದನ್ನು ಸುರಕ್ಷಿತವಾಗಿ ಸ್ಫೋಟಿಸಿ ಆತಂಕ ಹೋಗಲಾಡಿಸಿದರು. ಬಾಂಬ್‌ ಇಟ್ಟಿದ್ದ ಆರೋಪಿ ಎನ್ನಲಾದ ಆದಿತ್ಯ ರಾವ್‌ ಕೂಡ ಬೆಂಗಳೂರು ಪೊಲೀಸರಿಗೆ ಶರಣಾಗಿದ್ದಾನೆ. ಆದರೆ ಆ ಸಂದರ್ಭದಲ್ಲಿ ಕನ್ನಡದ ಕೆಲ ಮಾಧ್ಯಮಗಳು ನಡೆದುಕೊಂಡ ರೀತಿ ಅಸಹ್ಯ ಹುಟ್ಟಿಸುವಂತದ್ದು. ಒಂದು ಪಕ್ಷಕ್ಕೆ, ಒಂದು ಸಿದ್ದಾಂತಕ್ಕೆ ತಮ್ಮನ್ನು ತಾವು ಮಾರಿಕೊಂಡತೆ ಅವು ನಡೆದುಕೊಂಡಿದ್ದು ಪತ್ರಿಕೋದ್ಯಮದ ಎಲ್ಲಾ ನೀತಿ ಸಂಹಿತೆಯನ್ನು ಗಾಳಿಗೆ ತೂರಿದಂತಿತ್ತು. ‘ಪೌರತ್ವಕ್ಕೆ ಪ್ರತಿಕಾರ’, ‘ಬಾಂಬ್‌ಗೂ ಪಿಎಫ್‌ಐ ಸಂಘಟನೆಗೂ ನಂಟು ಏಕಿರಬಾರದು’ ಎಂಬಂತಹ ವರದಿಗಳನ್ನು ಪ್ರಸಾರ ಮಾಡಿದ್ದವು.

ವಿಜಯ ಕರ್ನಾಟಕ ಪತ್ರಿಕೆಯಂತೂ ಪೌರತ್ವ ವಿರೋಧಿಸಿ ನಡೆದ ಗಲಭೆಯ ವೇಳೆ ಪೊಲೀಸ್ ಗೋಲಿಬಾರ್‌ಗೆ ಇಬ್ಬರು ಬಲಿಯಾದ ಬಳಿಕ ಮಂಗಳೂರಿನಲ್ಲಿ ದೊಡ್ಡಮಟ್ಟದ ದುಷ್ಕೃತ್ಯವೊಂದು ನಡೆಯುವ ಸಾಧ್ಯತೆಯಿತ್ತು. ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದು ಈ ದುಷ್ಕೃತ್ಯದ ಭಾಗವಾಗಿರಬಹುದೆಂದು ಶಂಕಿಸಲಾಗಿದೆ ಎಂದು ಕಪೋಲಕಲ್ಪಿತ ವರದಿಯನ್ನು ತನ್ನ ಮುಖಪುಟದಲ್ಲಿ ಪ್ರಕಟಿಸಿತ್ತು. ಆಮೂಲಕ ಗೋಲಿಬಾರ್‌ಗೆ ಬಲಿಯಾದವರು ಮುಸ್ಲಿಮರಾದ್ದರಿಂದ ಬಾಂಬ್ ಇಟ್ಟಿರುವವರು ಮುಸ್ಲಿಮರೆ ಎಂದು ಸಾರುವ ಉದ್ದೇಶ ಅದರಲ್ಲಿತ್ತು.

ಭಯೋತ್ಪಾದನ ಕೃತ್ಯಕ್ಕೆ ಜಯ ಸಿಗದು ಎಂಬ ಸಂಪಾದಕೀಯವನ್ನು ಬರೆದು ಈ ವಿಚಾರದ ಕುರಿತು ಪೂರ್ವನಿರ್ಧರಿತ ಅಭಿಪ್ರಾಯಕ್ಕೆ ಬಂದಿದ್ದನ್ನು ಸಾರಿತ್ತು. ಇನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡ ಬಾಂಬ್ ಮಾತ್ರವಲ್ಲ ಅದನ್ನು ಇಟ್ಟ ಭಯೋತ್ಪಾದಕ ಶಕ್ತಿಗಳನ್ನು ಸಹ ಸಂಪೂರ್ಣವಾಗಿ ನಿಷ್ಕ್ರಿಯ ಮಾಡುತ್ತೇವೆ ಎಂದು ಘೋಷಿಸಿದ್ದರು.

ಬಾಂಬ್ ಎಂದ ಕೂಡಲೇ ಮುಸ್ಲಿಮರು ಎನ್ನುವಂತಹ ಮನೋಭಾವ ಮೂಡುವಂತೆ ಮಾಧ್ಯಮಗಳು ಮತ್ತು ಕೆಲ ಕೋಮುವಾದಿ ಪೊಲೀಸ್ ಅಧಿಕಾರಿಗಳು ದೀರ್ಘ ಅವಧಿಯಲ್ಲಿ ಬೆಳೆಸಿದ್ದಾರೆ. ಇದಕ್ಕಾಗಿಯೇ ಬಾಂಬ್ ಎಂದ ತಕ್ಷಣ ಬಹಳಷ್ಟು ಜನರು “ತನಿಖೆಯಲ್ಲಿ ಸಿಗುವ ಆರೋಪಿ ಮುಸ್ಲಿಮನಾಗಿದ್ದರೆ ಭಯೋತ್ಪಾದಕ ಎಂದು ಕರೆಸಿಕೊಳ್ಳುತ್ತಾನೆ, ಒಂದು ವೇಳೆ ಹಿಂದೂವಾಗಿದ್ದರೆ ಮಾನಸಿಕ ಅಸ್ವಸ್ಥನೆಂದು ಕರೆಸಿಕೊಳ್ಳುತ್ತಾನೆ” ಎಂದು ಟ್ರೋಲ್ ಮಾಡಿದ್ದರು.

ಆದರೆ ವಾಸ್ತವವೇನೆಂದರೆ ಸದ್ಯದ ಪೊಲೀಸ್ ತನಿಖೆಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಬಾಂಬ್ ಇಟ್ಟಿದ್ದ ಶಂಕಿತ ಆರೋಪಿ ಮಣಿಪಾಲದ ಮಣ್ಣಪಳ್ಳದ ಬಿ.ಕೃಷ್ಣಮೂರ್ತಿಯವರ ಮಗ ಆದಿತ್ಯ ರಾವ್ ಎಂದು ತಿಳಿದುಬಂದಿದ್ದಲ್ಲದೇ ಆತ ಪೊಲೀಸರೆದುರು ಶರಣಾಗಿದ್ದಾನೆ ಕೂಡ..

ಇಂಜಿನಿಯರಿಂಗ್ ಓದಿರುವ ಆದಿತ್ಯರಾವ್ ಬೆಂಗಳೂರಿನಲ್ಲಿ ಭದ್ರತಾ ಸಿಬ್ಬಂದಿ ಹುದ್ದೆಗೆ ಪ್ರಯತ್ನಿಸಿ ವಿಫಲವಾಗಿದ್ದನಂತೆ. ಕೆಲಸ ಸಿಗದ ಬೇಸರದಲ್ಲಿ ಒಂದು ವರ್ಷದ ಹಿಂದೆಯೇ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹುಸಿಬಾಂಬ್ ಕರೆ ಮಾಡಿ ಸಿಕ್ಕಿಬಿದ್ದಿದ್ದ. ಆ ಅಪರಾಧಕ್ಕಾಗಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಆತನಿಗೆ ವಿಮಾನ ನಿಲ್ದಾಣ ಸಿಬ್ಬಂದಿ ಮತ್ತು ಅಥಾರಿಟಿಯ ಮೇಲೆ ದ್ವೇಷವಿತ್ತು. ಆ ಕಾರಣಕ್ಕಾಗಿಯೇ ಆತ ಮಂಗಳೂರಿನಲ್ಲಿ ಬಾಂಬ್ ಇಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

ಮಣಿಪಾಲದ ಮಣ್ಣಪಳ್ಳದಲ್ಲಿ ವಾಸವಾಗಿದ್ದ ಈತನ ಕುಟುಂಬ ಒಂದು ವಾರದ ಕೆಳಗೆ ತಾನೇ ಮಂಗಳೂರಿನ ಲೇಡಿಹಿಲ್ ಅಪಾರ್ಟ್ಮೆಂಟ್‌ಗೆ ಶಿಫ್ಟ್ ಆಗಿದ್ದಾರೆ. ಆದರೆ ಆ ಒಂದು ವಾರದಿಂದ ಆತ ತನ್ನ ಮನೆಗೆ ಹೋಗದೆ ಕಾಣೆಯಾಗಿದ್ದಾನೆ ಎಂದು ಪೊಲೀಸರೆದುರು ಆತನ ತಂದೆ ತಿಳಿಸಿದ್ದಾರೆ. ಇನ್ನು ಬಾಂಬ್ ಇಟ್ಟಿದ್ದ ಘಟನೆ ಬೆಳಿಗ್ಗೆ 9 ಗಂಟೆಗೆ ನಡೆದರೆ ಮಧ್ಯಾಹ್ನ 2.50ಕ್ಕೆ ಟರ್ಮಿನಲ್ ಮ್ಯಾನೇಜರ್‌ಗೆ ಬಂದ ಕರೆಯೊಂದರಲ್ಲಿ ನನಗೆ ಕೊಟ್ಟ ತೊಂದರೆಗೆ ನಾನು ಸುಮ್ಮನೆ ಬಿಡುವುದಿಲ್ಲ ಎಂಬ ಧಮಕಿ ಹಾಕಲಾಗಿದೆಯಂತೆ. ಆದಿತ್ಯರಾವ್‌ನನ್ನು ಹೋಲುವ ವ್ಯಕ್ತಿಯು ಮಂಗಳೂರಿನ ವಿಮಾನ ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಈ ವಿಷಯ ಹೊರಬರುತ್ತಿದ್ದಂತೆಯೇ ಕನ್ನಡದ ಬಹುತೇಕ ಮುದ್ರಣ ಮಾಧ್ಯಮಗಳು ಮತ್ತು ಟಿವಿ ಚಾನೆಲ್‌ಗಳು ತೀವ್ರ ನಿರಾಸೆಗೆ ಒಳಗಾಗಿದ್ದಾರೆ. ಆರೋಪಿ ಮುಸ್ಲಿಮನಾಗಿರುತ್ತಾನೆ ಎಂದು ಹಂಬಲಿಸುತ್ತಿದ್ದ ಅವರಿಗೆ ಈ ‘ರಾವ್’ ಎಂಬ ಹೆಸರು ಕೇಳಿದೊಡನೆಯೆ ಗರಬಡಿದವರಂತಾಗಿರುವುದು ಕಂಡುಬಂದಿದೆ. ಅಲ್ಲಿಯವರೆಗೂ ಏರುಧ್ವನಿಯ ಸುದ್ದಿ ಪ್ರಸಾರ ಮಾಡುತ್ತಿದ್ದ ಅವರು ಬಾಯಿಗೆ ಬೀಗ ಜಡಿದುಕೊಂಡಿದ್ದಾರೆ.

ಈಗ ಅಸಲಿ ವಿಷಯಕ್ಕೆ ಬರುವುದಾದರೆ ಆದಿತ್ಯ ರಾವ್‌ಗೂ ಪೌರತ್ವ ವಿರೋಧಿ ಹೋರಾಟಕ್ಕೂ ಏನು ಸಂಬಂಧ? ಈತ ಬಾಂಬ್ ಇಟ್ಟಿರುವುದು ಪೌರತ್ವಕ್ಕೆ ಪ್ರತೀಕಾರ ಹೇಗಾಗುತ್ತದೆ? ಒಂದು ಸಮುದಾಯವನ್ನು, ಒಂದು ಭಿನ್ನಾಭಿಪ್ರಾಯವಿಟ್ಟುಕೊಂಡು ಹೋರಾಟ ಮಾಡುತ್ತಿರುವವರ ಮೇಲೆ ಯಾವುದೇ ಸಾಕ್ಷಿ ಇಲ್ಲದೇ ಗೂಬೆ ಕೂರಿಸಿದ ಮಾಧ್ಯಮಗಳು ನೀತಿ ಸಂಹಿತೆಯನ್ನು ಈ ರೀತಿ ಕೈಬಿಟ್ಟಿರುವುದು ಏತಕ್ಕಾಗಿ? ಈ ಮಾಧ್ಯಮಗಳು ತಮ್ಮ ತಪ್ಪಿನಿಂದ ಪಾಠ ಕಲಿತು ಕ್ಷಮಾಪಣೆಯನ್ನು ಪ್ರಕಟಿಸುತ್ತವೆಯೇ? ಇನ್ನೊಮ್ಮೆ ಈ ರೀತಿ ಮಾಡುವುದಿಲ್ಲವೆಂದು ಸಂಕಲ್ಪ ಮಾಡುತ್ತದೆಯೆಂದು ನಾವು ನಿರೀಕ್ಷಿಸಬಹುದೇ?

ಈಗ ಪೊಲೀಸರ ವಿಷಯಕ್ಕೆ ಬರೋಣ.

ಬೆಂಗಳೂರಿನಲ್ಲಿ ಪೌರತ್ವ ಕಾಯ್ದೆಯ ಪರ ಪ್ರತಿಭಟನೆಯಲ್ಲಿ ಹಿಂದೂ ಮುಖಂಡರ ಕೊಲೆಗೆ ಸ್ಕೆಚ್ ಹಾಕಿದ್ದರು, ಅವರು ಎಸ್‌ಡಿಪಿಐ ಸಂಘಟನೆಗೆ ಸೇರಿದವರು, ಅವರಿಗೆ ಹಣ ಬರುತ್ತದೆ ಎಂದು ಬೆಂಗಳೂರು ನಗರ ಕಮಿಷನರ್ ಪತ್ರಿಕಾಗೋಷ್ಟಿಯಲ್ಲಿ ಘೋಷಿಸಿದ್ದರು. ಆದರೆ ಎಫ್‌ಐಆರ್‌ನಲ್ಲಿಯಾಗಲಿ, ಆರೋಪಿತರ ಹೇಳಿಕೆಗಳಲ್ಲಾಗಲೀ ಅವರ ಟಾರ್ಗೆಟ್ ಆಗಿ ಯಾವುದೇ ಹೆಸರುಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಿಲ್ಲ. ಇಂಥವರೇ ಟಾರ್ಗೆಟ್ ಆಗಿದ್ದರು ಎಂದು ಹೇಳಲಾದ ವ್ಯಕ್ತಿಗಳು ಆಗಲೇ ಹುತಾತ್ಮರಂತೆ ಹೇಳಿಕೆಯನ್ನು ಕೊಟ್ಟೂ ಆಗಿತ್ತು. ಇದನ್ನೇ ಮುಂದುವರೆಸಿ ಪಿಎಫ್‌ಐ ನಿಷೇಧ ಎಂಬ ಟೈಟಲ್ ಸಹಾ ಬಂದಾಗಿತ್ತು. ವಾಸ್ತವದಲ್ಲಿ ಬಿಜೆಪಿ ಸರ್ಕಾರದ ಸಂಪುಟ ಸಭೆಯಲ್ಲಿ ಅದಕ್ಕೆ ತೀರ್ಮಾನವಾಗಿತ್ತು ಎಂಬುದನ್ನು ಬಿಟ್ಟರೆ ಅದಿನ್ನೂ ಫೈಲ್ ಸಮೇತ ಕೇಂದ್ರ ಸರ್ಕಾರಕ್ಕೆ ಹೋಗಿ, ಕೇಂದ್ರವು ಅಂತಹ ನಿಷೇಧ ಮಾಡಬೇಕಷ್ಟೇ.

ಬೆಂಗಳೂರಿನಲ್ಲಿನ ಸ್ಲಂಗಳಲ್ಲಿ ಬಾಂಗ್ಲಾದವರಿದ್ದಾರೆ ಎಂದು ಬಿಜೆಪಿ ಸಂಸದರ ಮಾಲೀಕತ್ವದ ಚಾನೆಲ್ ನಕಲಿ ಸ್ಟಿಂಗ್ ಒಂದನ್ನು ನಡೆಸಿತು. ಕೂಡಲೇ ಹಿಂದು ಮುಂದು ನೋಡದೇ ಉತ್ತರ ಕರ್ನಾಟಕದ ಮತ್ತು ಪೂರ್ವ ಭಾರತದ ಕೂಲಿ ಜನರು ವಾಸವಿದ್ದ ಗುಡಿಸಲುಗಳನ್ನು ನೆಲಸಮ ಮಾಡಿದ್ದ ಪೊಲೀಸ್ ಇಲಾಖೆಯ ಕಮಿಷನರ್ ಭಾಸ್ಕರ್‌ರಾವ್‌ರನ್ನು ಯಾರಾದರೂ ಬಿಜೆಪಿ ಪಕ್ಷದ ವಕ್ತಾರರಾ ಎಂದು ಕೇಳಿದರೆ ಏನು ಹೇಳುತ್ತಾರೆ?

ಬಾಂಬ್ ಇಟ್ಟವರು ಯಾರಾದರೂ ಸರಿಯೇ ನಾವು ಕಾನೂನು ಕ್ರಮ ಕೈಗೊಳ್ಳುತ್ತೇವೆ, ಭದ್ರತೆಯನ್ನು ಹೆಚ್ಚಿಸಿ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುತ್ತೇವೆ ಎಂಬ ಮಾತುಗಳನ್ನು ಆಡುವುದು ಸಮಂಜಸ. ಅದನ್ನು ದಾಟಿ ಕೋಮುಗಳಿಗೆ ಸಂಬಂಧ ಕಲ್ಪಿಸಿ ಹೇಳಿಕೆಗಳನ್ನು ನೀಡಲಾಗುತ್ತದೆ.

ಮಂಗಳೂರಿನಲ್ಲಿ ಪೌರತ್ವ ಕಾಯ್ದೆಯ ವಿರುದ್ಧ ಹೋರಾಟದಲ್ಲಿ ಇಬ್ಬರು ಮುಸ್ಲಿಮರನ್ನು ಗುಂಡಿಟ್ಟು ಹತ್ಯೆ ಮಾಡಿದ ಪೊಲೀಸರು ಅದಕ್ಕೆ ಕಾರಣವಾದ ಘಟನಾವಳಿಯ ಕುರಿತೂ ಸಮರ್ಪಕ ಪುರಾವೆಗಳನ್ನು ಒದಗಿಸಲು ವಿಫಲವಾಗಿದ್ದಾರೆ. ಆದರೆ ಬಾಂಬ್ ಎಂದ ಕೂಡಲೇ ಒಂದು ಕಡೆ ಕೈ ತೋರಿಸುತ್ತಾರೆ.. ವಾಸ್ತವ ಗೊತ್ತಾದಾಗ ಪೆಚ್ಚುಮೋರೆ ಹಾಕಿ ಕೂರುತ್ತಾರೆ ಅಷ್ಟೇ.

ಪ್ರತಿಭಟಿಸುತ್ತಿರುವವರ ಬಟ್ಟೆ ನೋಡಿದರೆ ಸಾಕು ಅವರು ಯಾರು ಎಂಬುದು ಗೊತ್ತಾಗುತ್ತದೆ ಎಂದು ಹೇಳುವ ಪ್ರಧಾನಿ ಇರುವ ರಾಷ್ಟ್ರವಿದು. ಮಾಧ್ಯಮಗಳು ಅಂತಹ ಪ್ರಧಾನಿಗೆ ಪ್ರಶ್ನೆ ಹಾಕುವ ಬದಲು ಪ್ರಧಾನಿಯ ವಿರುದ್ಧ ಮಾತಾಡುವವರ ಮೇಲೆ ದಾಳಿ ನಡೆಸಲು ಕಥೆಗಳನ್ನು ಹೊಸೆಯುತ್ತಿರುತ್ತವೆ. ಹೀಗಿರುವಾಗ ನಾವು ಇನ್ನೇನನ್ನು ನಿರೀಕ್ಷಿಸಲು ಸಾಧ್ಯ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....