ಈಶಾನ್ಯ ಭಾರತದ ಮಣಿಪುರದಲ್ಲಿ ನಡೆಯುತ್ತಿರುವ ಗಲಭೆಗಳಿಗೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಮತ್ತು ಬಿಜೆಪಿಯ ಕೇಂದ್ರ ನಾಯಕತ್ವ ಕಾರಣ ಎಂದು ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಕನಿಮೊಳಿ ಕರುಣಾನಿಧಿ ಟೀಕಿಸಿದ್ದಾರೆ. ಮಾಜಿ ಸಿಎಂ ಬಿರೇನ್ ಸಿಂಗ್ ಶಾಂತಿಯನ್ನು ಪುನಃಸ್ಥಾಪಿಸುವ ಕರ್ತವ್ಯದಲ್ಲಿ ವಿಫಲರಾಗಿದ್ದು, ಬದಲಾಗಿ ಗುಂಪು ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಮಣಿಪುರ ಹಿಂಸಾಚಾರಕ್ಕೆ
ಮಣಿಪುರ ಹಿಂಸಾಚಾರ ಮತ್ತು ನೂರಾರು ಜನರ ಸಾವಿನ ಹೊಣೆಗಾರಿಕೆಯನ್ನು ಮಣಿಪುರದ ಮಾಜಿ ಸಿಎಂ ಬಿರೇನ್ ಸಿಂಗ್ ಮಾತ್ರವಲ್ಲ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಮಾತ್ರ ಕೂಡಾ ತೆಗೆದುಕೊಳ್ಳಬೇಕು ಎಂದು ಕನಿಮೊಳಿ ಹೇಳಿದ್ದಾರೆ. ಮಣಿಪುರ ಹಿಂಸಾಚಾರಕ್ಕೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಸುಪ್ರೀಂ ಕೋರ್ಟ್‌ನ ವಿಚಾರಣೆಯು ಮುಖ್ಯಮಂತ್ರಿ ಗಲಭೆಯನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ ಮಾತ್ರವಲ್ಲದೆ ಅವುಗಳನ್ನು ಉತ್ತೇಜಿಸಿದ್ದಾರೆ ಎಂಬುದಕ್ಕೆ ಪುರಾವೆಗಳನ್ನು ಹೊರತಂದಿದೆ. ಅಲ್ಪಸಂಖ್ಯಾತ ಗುಂಪುಗಳ ವಿರುದ್ಧ ದ್ವೇಷದಿಂದ ಮಾತನಾಡುವ ಅವರ ಆಡಿಯೋ ರೆಕಾರ್ಡಿಂಗ್‌ಗಳನ್ನು ಈಗ ಪರಿಶೀಲಿಸಲಾಗಿದೆ” ಎಂದು ಅವರು ಹೇಳಿದ್ದಾರೆ.
ಬಿಜೆಪಿಯ ಆಲಸ್ಯ ಮನೋಭಾವವನ್ನು ಆರೋಪಿಸಿದ ಅವರು, “ಮಣಿಪುರ ಹಿಂಸಾಚಾರ ಪ್ರಾರಂಭವಾದಾಗಿನಿಂದ, ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಮಧ್ಯಪ್ರವೇಶಿಸಿ ಸಹಜ ಪರಿಸ್ಥಿತಿ ಪುನಃಸ್ಥಾಪಿಸುವಂತೆ ಒತ್ತಾಯಿಸುತ್ತಿವೆ, ಆದರೆ ಅವರ ನಿಷ್ಕ್ರಿಯತೆಯು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ” ಎಂದು ಕನಿಮೊಳಿ ಹೇಳಿದ್ದಾರೆ.
ಹಿಂಸಾಚಾರದ ತನಿಖೆಗೆ ನಿಷ್ಪಕ್ಷಪಾತ ಆಯೋಗವನ್ನು ನೇಮಿಸಬೇಕೆಂದು ಒತ್ತಾಯಿಸಿದ ಕನಿಮೊಳಿ, ಮಣಿಪುರದಲ್ಲಿ ಶಾಂತಿ ಮತ್ತು ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸಲು ಬಿಜೆಪಿ ಸರ್ಕಾರ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂಓದಿ: ಭಿನ್ನಮತದ ವದಂತಿ ನಡುವೆ ಪಂಜಾಬ್ ಸಿಎಂ, ಶಾಸಕರೊಂದಿಗೆ ಕೇಜ್ರಿವಾಲ್ ಮಹತ್ವದ ಸಭೆ
ಭಿನ್ನಮತದ ವದಂತಿ ನಡುವೆ ಪಂಜಾಬ್ ಸಿಎಂ, ಶಾಸಕರೊಂದಿಗೆ ಕೇಜ್ರಿವಾಲ್ ಮಹತ್ವದ ಸಭೆ


