Homeಕರ್ನಾಟಕಬಾಬಾಸಾಹೇಬರ ಫೋಟೋ ತೆರವು ಘಟನೆ; ಈ ಅವಮಾನ ಕೊನೆಯದಲ್ಲ...

ಬಾಬಾಸಾಹೇಬರ ಫೋಟೋ ತೆರವು ಘಟನೆ; ಈ ಅವಮಾನ ಕೊನೆಯದಲ್ಲ…

- Advertisement -
- Advertisement -

ಸಂವಿಧಾನ ಸಭೆಯಲ್ಲಿ ಮುಖ್ಯನ್ಯಾಯಾಧೀಶ ಹುದ್ದೆಯ ಅಧಿಕಾರದ ಬಗ್ಗೆ ಚರ್ಚೆಗಳಾಗುತ್ತಿದ್ದಾಗ ಡಾ. ಬಿ. ಆರ್. ಅಂಬೇಡ್ಕರ್ ’ನಾನೂ ವೈಯಕ್ತಿಕವಾಗಿ ಒಪ್ಪುತ್ತೇನೆ. ಮುಖ್ಯ ನ್ಯಾಯಾಧೀಶರು ಬಹಳ ಶ್ರೇಷ್ಠ ವ್ಯಕ್ತಿ. ಆದರೆ, ಎಷ್ಟಾದರೂ ಅವರು ನಮ್ಮಂತೆ ಮನುಷ್ಯರೇ. ಎಲ್ಲರಂತೆ ಲೋಪಗಳು, ಭಾವನೆಗಳು ಮತ್ತು ಪೂರ್ವಾಗ್ರಹಗಳನ್ನು ಹೊಂದಿರುತ್ತಾರೆ’ ಎಂದಿದ್ದರು. ಅವರ ಈ ಮಾತುಗಳಲ್ಲಿ ನ್ಯಾಯಾಧೀಶರಾದವರು ಈ ಸಮಾಜದ ಸಹಜ ಲೋಪಗಳನ್ನು ಸದಾ ಮೀರಬೇಕೆಂಬ ತುಡಿತವಿತ್ತು. ಭಾರತದ ಸಂವಿಧಾನ ಪೀಠಿಕೆಯೂ ಸಹ ಸಾಮಾಜಿಕ ನ್ಯಾಯವನ್ನು ಈ ನಿಟ್ಟಿನಲ್ಲಿಯೇ ಎತ್ತಿ ಹಿಡಿಯುತ್ತದೆ. ನ್ಯಾಯವನ್ನು ನೀಡುವ ಮನುಷ್ಯರು ಸಾಧ್ಯವಾದಷ್ಟು ಸಾಮಾಜಿಕ ಪಟ್ಟಭದ್ರ ಹಿತಾಸಕ್ತಿಗಳಿಂದ ದೂರವಿರಬೇಕಾದ್ದು ನ್ಯಾಯಾಂಗದ ಮೊಟ್ಟ ಮೊದಲ ಅರ್ಹತೆ. ಆದರೇನು ಮಾಡುವುದು ನಮ್ಮ ನ್ಯಾಯಾಂಗದ ನಡವಳಿಕೆಗಳು ಕೆಲವೊಮ್ಮೆ ಭಾರತದ ಸಂವಿಧಾನದ ಮೌಲ್ಯಗಳ ವಿರುದ್ಧವಿರುತ್ತದೆ.

ಮಲ್ಲಿಕಾರ್ಜುನ ಗೌಡ

ಕೆಳಹಂತದ ನ್ಯಾಯಾಧೀಶರ ಕತೆಗಳೊಂದಷ್ಟನ್ನು ಕೇಳಿಬಿಟ್ಟರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಒಂದೆರಡು ಉದಾಹರಣೆಗಳನ್ನು ನೋಡುವುದಾದರೆ, 2013ರಲ್ಲಿ ಅಲಹಾಬಾದ್‌ನಲ್ಲಿ ಜಿಲ್ಲಾ ನ್ಯಾಯಾಧೀಶರೊಬ್ಬರು ತಮಗೆ ಗೊತ್ತು ಮಾಡಿದ ಕೊಠಡಿಯನ್ನು ಗಂಗಾಜಲದಿಂದ ಶುದ್ಧೀಕರಿಸಿದ್ದರಂತೆ. ಅದಕ್ಕೆ ಕಾರಣ ಈ ಹಿಂದೆ ಆ ಕೊಠಡಿಯಲ್ಲಿದ್ದದ್ದು ದಲಿತ ನ್ಯಾಯಾಧೀಶರು! ಇದೇ ವರ್ಷದಲ್ಲಿ ಮಧ್ಯಪ್ರದೇಶದ ಜಿಲ್ಲಾ ನ್ಯಾಯಾಧೀಶರೊಬ್ಬರು ಎಲ್ಲಾ ಶಾಲಾಮಕ್ಕಳಿಗೂ ಬ್ರಾಹ್ಮಣ ಜ್ಯೋತಿಷಿಯ ಬಳಿ ಭವಿಷ್ಯ ಕೇಳಿಸಿ ಶಾಲೆಗೆ ದಾಖಲಿಸಬೇಕೆಂದು ಅಭಿಪ್ರಾಯಪಟ್ಟಿದ್ದರು. ಬಾಂಬೆ ಹೈಕೋರ್ಟ್ ಜ್ಯೋತಿಷ್ಯವನ್ನು ವಿಜ್ಞಾನವೆಂದು ತೀರ್ಪು ನೀಡಿತ್ತು. ಹೀಗಿದ್ದ ನ್ಯಾಯಾಧೀಶರು 2021ರಷ್ಟೊತ್ತಿಗೆ ಯಾವ ಮಟ್ಟ ತಲುಪಿದ್ದಾರೆ ನೋಡಿ. ಅಲಹಾಬಾದ್ ಹೈಕೋರ್ಟ್‌ನ ನ್ಯಾಯಾಧೀಶರೊಬ್ಬರು ’ಆಕ್ಸಿಜನ್‌ಅನ್ನು ಹೊರಹಾಕುವ ಏಕೈಕ ಪ್ರಾಣಿ ದನವಾಗಿದೆ’ ಎಂದಿದ್ದರು. ’ದನವನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸಬೇಕು’ ಎಂದಿದ್ದರು. ಇತ್ತೀಚೆಗೆ ಸುಪ್ರೀಂ ಕೋರ್ಟಿನ ಹಾಲಿ ನ್ಯಾಯಾಧೀಶರಾದ ಅಬ್ದುಲ್ ನಜೀರ್ ಸಾಬ್ ’ಮನು, ಚಾಣಕ್ಯರಂತಹ ದೇಸೀ ನ್ಯಾಯದಿಶಾರದರ ನ್ಯಾಯಸಂಹಿತೆಯನ್ನು ಅಳವಡಿಸಿಕೊಳ್ಳಬೇಕೆಂದು’ ಕರೆ ನೀಡಿದ್ದರು.

ಈ ಮೇಲಿನಂತೆ ನೂರಾರು ಹೇಳಿಕೆಗಳಿವೆ ಬಿಡಿ. ಇಂತಹ ನ್ಯಾಯಾಧೀಶರಿಂದ ಸಂವಿಧಾನ ಮೌಲ್ಯವನ್ನು ಎತ್ತಿಹಿಡಿಯಲಾಗುತ್ತದೆಯೇ ಎಂಬುದು ಮುಖ್ಯ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಮುಖಾಮುಖಿಯಾಗಿ ಮೊನ್ನೆ ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡನ ತಾರತಮ್ಯಪೂರಿತ ಅವಿವೇಕತನವನ್ನು ನೋಡಬೇಕಿದೆ. ಆತನಿಗೆ ಉದ್ಯೋಗ ನೀಡಿ ಕರ್ತವ್ಯಗಳ ಪಟ್ಟಿಯನ್ನು ನಿಗದಿಪಡಿಸಿರುವುದು ಭಾರತದ ಸಂವಿಧಾನವಾದರೂ ಅವರ ತಲೆಯಲ್ಲಿ ತುಂಬಿರುವುದು ಮಾತ್ರ ಭಾರತದ ವಿಲಕ್ಷಣ ಜಾತಿ ತಾರತಮ್ಯ ವ್ಯವಸ್ಥೆ. ನ್ಯಾಯಾಧೀಶನೊಬ್ಬ ಈ ಹಿಂದೆ ಇಂತಹ ತಾರತಮ್ಯ ಮಾಡಲು ಹಿಂದುಮುಂದು ನೋಡುತ್ತಿದ್ದನೇನೋ (ಕನಿಷ್ಟ 80-90 ರ ದಶಕದಲ್ಲಿ ಇದು ಸತ್ಯವಾಗಿರುತ್ತದೆ). ಕನಿಷ್ಠ ತನ್ನ ಇತರೆ ಜಾತಿಯ ಸಹವರ್ತಿಗಳು ತನ್ನ ಬಗ್ಗೆ ಏನೆಲ್ಲಾ ಭಾವಿಸಬಹುದು ಎಂದು ಅಳುಕುತ್ತಿದ್ದನೇನೋ. ಆದರೆ ಇಂದು ಪ್ರಭುತ್ವವೇ ಇಂತಹ ನ್ಯಾಯಾಧೀಶರ ಪರವಾಗಿ ನಿಂತಿದೆ. ಸುಪ್ರೀಂ ಕೋರ್ಟ್ ಎಸ್.ಸಿ ಮತ್ತು ಎಸ್.ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆ 1989 (ಅಟ್ರಾಸಿಟಿ ತಡೆ ಕಾಯ್ದೆ) ಮತ್ತು ತಿದ್ದುಪಡಿ 2015 ಇದನ್ನು ದಲಿತರು ’ಅತಿರೇಕದ ದುರ್ಬಳಕೆ’ ಮಾಡಿಕೊಳ್ಳುತ್ತಿದ್ದಾರೆ ಎಂದು ತೀರ್ಪು ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಇಂತಹ ಮನಸ್ಥಿತಿಗಳ ಹಿಂದೆ ಪ್ರಭುತ್ವದ ಒಪ್ಪಿಗೆ ಇರಲೇಬೇಕು. ಪ್ರಭುತ್ವದ ಧೋರಣೆಯೇ ಸಮಾಜದ ಧೋರಣೆಯೆಂದು ಬಿಂಬಿಸುವ ಜಾಗಟೆಗಳಿರಬೇಕು. ಆ ಜಾಗಟೆಗಳು ಇದನ್ನು ಸಾರ್ವತ್ರೀಕರಣಗೊಳಿಸಬೇಕು. ಹೀಗೆ ಪ್ರಭುತ್ವವೊಂದು ನಮ್ಮದೆಂದು ಜನತೆಗೆ ಅನಿಸಿದಾಗ ಪ್ರಭುತ್ವದ ವಿರೋಧಿಗಳೆಲ್ಲ ಜನರ ವಿರೋಧಿಗಳಾಗಿಯೂ ಪ್ರಭುತ್ವಕ್ಕೆ ಬಹುಪರಾಕು ಹೇಳುವವರೆಲ್ಲ ಜನನಾಯಕರಂತೆಯೂ ಕಾಣುತ್ತಾರೆ. ಅಲ್ಲಿಗೆ ಫ್ಯಾಸಿಸಂ ತನ್ನ ಬಲೆಗಳನ್ನು ದೊಡ್ಡದು ಮಾಡಿಕೊಳ್ಳುತ್ತಾ ಹೋಗುತ್ತಿರುತ್ತದೆ.

ಭಾರತದ ಸಂವಿಧಾನ ಜಾರಿಯಾದಾಗಿನಿಂದಲೂ ಅದರ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಎನ್ನುವುದನ್ನು ಒಪ್ಪಿಕೊಳ್ಳಲು ತಿಣುಕಾಡುತ್ತಿದ್ದ ಬೆರಳೆಣಿಕೆಯಷ್ಟು ಜನರ ಸಂಖ್ಯೆ ಇಂದು ಗಮನಾರ್ಹವಾಗಿ ಬೆಳೆದು ನಿಂತಿದೆ. ಸಂವಿಧಾನ ಸಭೆಯ ಚರ್ಚೆಗಳನ್ನು ಹೆಕ್ಕಿ ಮುಂದಿಟ್ಟರೂ ಸತ್ಯವನ್ನು ಅರಿಯಲು ಅವರಿಂದ ಸಾಧ್ಯವಾಗುತ್ತಿಲ್ಲ. ಮತ್ತೊಂದು ಕಡೆ ’ಸಂವಿಧಾನವನ್ನು ಬದಲಾಯಿಸುತ್ತೇವೆ’ ಎಂದು ಸರ್ಕಾರದ ಪಾಲುದಾರನೇ ಹೇಳುತ್ತಿದ್ದರು ಅದನ್ನು ನಂಬಲು ಹಲವರಿಗೆ ಸಾಧ್ಯವಾಗುತ್ತಿಲ್ಲ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ’ಗೋಹತ್ಯಾ ನಿಷೇಧ ಹಾಗೂ ಮತಾಂತರ ನಿಷೇಧ ಕಾಯ್ದೆ’ಗಳು ಸೇರಿಕೊಳ್ಳಲು ಹೇಗೆ ಸಾಧ್ಯ? ಬ್ರಾಹ್ಮಣರಾದಿಯಾಗಿ ಮೇಲ್ಜಾತಿಗಳಿಗೆ ಕೇವಲ ಆರ್ಥಿಕ ಮಾನದಂಡದ ಆಧಾರದಲ್ಲಿ ಅವರ ಜನಸಂಖ್ಯೆಗಿಂತಲೂ ಹೆಚ್ಚಿಗೆ ಮೀಸಲಾತಿ ಕೊಡಲು ಹೇಗೆ ಸಾಧ್ಯ? 72 ವರ್ಷದ ನಂತರವೂ ಅಸ್ಪೃಶ್ಯತೆ ನಿಷೇಧವಾಗದಿರಲು ಹೇಗೆ ಸಾಧ್ಯ? ಕೇವಲ 10 ಶ್ರೀಮಂತರು ಭಾರತದ ಶೇ. 45 ರಷ್ಟು ಸಂಪತ್ತನ್ನು ಹೊಂದಲು ಹೇಗೆ ಸಾಧ್ಯ? ಈ ಪ್ರಶ್ನೆಗಳಿಗೆ ಉತ್ತರವೇನು? ಎಲ್ಲಾ ಭಾರತೀಯರಿಗಾಗಿ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಉಳ್ಳವರು ತಮ್ಮ ಪರವಾಗಿ ತಿದ್ದುಪಡಿ ಮಾಡಿಕೊಳ್ಳುತ್ತಿದ್ದಾರೆ ಎಂಬುದಲ್ಲವೇ?

ಅಬ್ದುಲ್ ನಜೀರ್ ಸಾಬ್

ಮೇಲಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಾಗ ಮಾತ್ರ ಜಿಲ್ಲಾ ನ್ಯಾಯಾಧೀಶನೊಬ್ಬ ’ಸಂವಿಧಾನ ಶಿಲ್ಪಿಯ ಭಾವಚಿತ್ರವನ್ನು ಇಡಲು ಹಾಗೂ ಇಟ್ಟ ಭಾವಚಿತ್ರವನ್ನು ನಿರಾಕರಿಸಲು ಇರುವ ಕಾರಣಗಳನ್ನು ತಿಳಿಯಬಹುದಾಗಿದೆ. ಅಂದು ಅಂಬೇಡ್ಕರರ ಭಾವಚಿತ್ರಕ್ಕೆ ಆದ ಅವಮಾನಕ್ಕೆ ಅದೆಷ್ಟು ಜನ ಕೆಂಡಾಮಂಡಲರಾದರೋ ಬಹುಶಃ ಅದಕ್ಕಿಂತಲೂ ಹೆಚ್ಚು ಜನ ಒಳಗೊಳಗೇ ಖುಷಿಗೊಂಡಿಲ್ಲ ಎಂಬುದನ್ನು ಖಚಿತವಾಗಿ ಹೇಳುವ ಧೈರ್ಯ ಯಾರಿಗಿದೆ? ಇದು ಕೇವಲ ಭಾವಚಿತ್ರದ ಕತೆಯಲ್ಲ. ಇಡೀ ದೇಶದ ಕತೆ. ಭಾರತೀಯರ ಕತೆ. ಕೊಳೆತ ಹೆಣವನ್ನು ಹೂಳದೆ ಮಮ್ಮಿಯಾಗಿಸಿಕೊಂಡು ಅದನ್ನೇ ಪರಂಪರೆಯೆಂದು ಕೊಂಡಾಡುತ್ತ ಆಗಾಗ ಸುಗಂಧದ್ರವ್ಯವನ್ನು ಲೇಪಿಸಿಕೊಂಡಿರುವ ಸಮಾಜದಲ್ಲಿ ಸದಾ ಚಿಗುರುತ್ತಲೇ ಇರುವ ಅಂಬೇಡ್ಕರ್ ವಿಚಾರಧಾರೆಯನ್ನು ಸಹಿಸಿಕೊಳ್ಳುವುದಾದರೂ ಹೇಗೆ? ಹಾಗಾಗಿ ಒಮ್ಮೆ ಹೊಗಳಬೇಕು, ಹೊಗಳಿ ದೇವರಾಗಿಸಬೇಕು. ಇಲ್ಲವೇ ಆಗಾಗ ತೆಗಳಿ ಚಿಗುರನ್ನು ಚಿವುಟುತ್ತಿರಬೇಕು. ಈ ಎರಡೂ ಕೆಲಸವನ್ನು ಪ್ರಭುತ್ವ ಈಗಾಗಲೇ ಅಂಬೇಡ್ಕರರ ವಿಷಯದಲ್ಲಿ ಮಾಡಿದೆ, ಮಾಡುತ್ತಿದೆ. ಎರಡನೆಯದರ ಭಾಗವಾಗಿ ಮಲ್ಲಿಕಾರ್ಜುನ ಗೌಡ ತನ್ನ ಕೆಲಸವನ್ನು ಮುಂದುವರೆಸಿದ್ದಾರೆ. ಮೊದಲನೆಯದ್ದರ ಭಾಗವಾಗಿ ಪ್ರಭುತ್ವ ’ಪಂಚತೀರ್ಥ’ವನ್ನಾಗಿಸುತ್ತಿದೆ. ನಿಜವಾದ ಅಂಬೇಡ್ಕರ್ ಅನುಯಾಯಿಗಳ ಮುಂದಿರುವ ಆಯ್ಕೆ ಇವೆರಡರಲ್ಲಿ ಒಂದಾದರೆ ಅದು ಅಂಬೇಡ್ಕರ್ ಅವರಿಗೆ ಬಗೆದ ದ್ರೋಹವಾಗುತ್ತದೆ. ಹಾಗೆಂದರೆ ಮೂರನೆಯದೊಂದಿದೆಯೇ? ಎಂದು ಪ್ರಶ್ನಿಸಿದರೆ ಮೂರನೆಯದ್ದೋ.. ನಾಲ್ಕನೆಯದ್ದೋ.. ಐದನೆಯದ್ದೋ.. ಬನ್ನಿ ಜಾತಿವಿನಾಶದೆಡೆಗೆ ಹಲವು ಪ್ರಯೋಗ ಮಾಡುತ್ತಾ ಅಂಬೇಡ್ಕರರ ರಥವನ್ನು ಮುಂದೆಳೆಯೋಣ ಎಂದು ಹೇಳುತ್ತೇನೆ.


ಇದನ್ನೂ ಓದಿ: ಕೋಮುವಾದಿಗಳು ಆಕ್ಟೀವ್ ಆಗಿರುವುದರಿಂದ ಇಂತಹ ಘಟನೆಗಳಾಗುತ್ತಿವೆ: ಜಸ್ಟೀಸ್ ದಾಸ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...