Homeಮುಖಪುಟಆದಿತ್ಯನಾಥ್‌‌ ಚುನಾವಣಾ ಅಫಿಡವಿಟ್‌: 1.54 ಕೋಟಿ ರೂ. ಮೌಲ್ಯದ ಆಸ್ತಿ; 1.80 ಲಕ್ಷದ ರಿವಾಲ್ವರ್‌ &...

ಆದಿತ್ಯನಾಥ್‌‌ ಚುನಾವಣಾ ಅಫಿಡವಿಟ್‌: 1.54 ಕೋಟಿ ರೂ. ಮೌಲ್ಯದ ಆಸ್ತಿ; 1.80 ಲಕ್ಷದ ರಿವಾಲ್ವರ್‌ & ರೈಫಲ್‌!

- Advertisement -
- Advertisement -

ಗೋರಖ್‌ಪುರ ವಿಧಾನಸಭಾ ಚುನಾವಣೆಗೆ ಮುನ್ನ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಶುಕ್ರವಾರ ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ 1.54 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ಇದರಲ್ಲಿ ಕೈಯಲ್ಲಿ ನಗದು, ಬ್ಯಾಂಕ್ ಖಾತೆಗಳ ಬಾಕಿ ಮತ್ತು ಸ್ಥಿರ ಠೇವಣಿ ಸೇರಿದೆ. ದಾಖಲೆಯ ಪ್ರಕಾರ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ಬಾಕಿ ಉಳಿದಿಲ್ಲ.

ವಿಶೇಷವಾಗಿ, 1 ಲಕ್ಷ ರೂ. ಮೌಲ್ಯದ ರಿವಾಲ್ವರ್‌ ಮತ್ತು 80 ಸಾವಿರ ರೂ. ಮೌಲ್ಯದ ರೈಫಲ್ ಹೊಂದಿದ್ದಾರೆ ಎಂದು ಮುಖ್ಯಮಂತ್ರಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. 1992 ರಲ್ಲಿ ಪೌಧಿ ಗದ್ವಾಲ್‌ನಲ್ಲಿರುವ ಎಚ್‌ಎನ್ ಬಹುಗುಣ ವಿಶ್ವವಿದ್ಯಾಲಯದಿಂದ (ಶ್ರೀನಗರ) ವಿಜ್ಞಾನದಲ್ಲಿ ಪದವಿ ಪಡೆದ್ದೇನೆ ಎಂದು ಅವರು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಪಂಚರಾಜ್ಯ ಚುನಾವಣೆ ಮುಖ್ಯಾಂಶಗಳು: ಆದಿತ್ಯನಾಥ್‌‌ ನಾಮಪತ್ರ ಸಲ್ಲಿಕೆ; BJPಗೆ ಓಟಿಲ್ಲ ಎಂದ ರೈತರು!

ಶುಕ್ರವಾರದಂದು ಆದಿತ್ಯನಾಥ್ ಅವರು ಗೋರಖ್‌ಪುರ ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ನಾಮಪತ್ರದ ಜೊತೆಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಅವರು ತಮ್ಮ ಆಸ್ತಿಯನ್ನು ಘೋಷಿಸಿದ್ದಾರೆ.

ಅವರು ಕ್ರಮವಾಗಿ 1 ಲಕ್ಷ ಮತ್ತು 80 ಸಾವಿರ ರೂ. ಮೌಲ್ಯದ ರಿವಾಲ್ವರ್ ಮತ್ತು ರೈಫಲ್ ಹಾಗೂ 49,000 ಮತ್ತು 26,000 ರೂ. ಮೌಲ್ಯದ ಚಿನ್ನದ ಕಿವಿಯೋಲೆಗಳು ಮತ್ತು ಚಿನ್ನದ ಸರ ಹೊಂದಿದ್ದಾರೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. 12,000 ರೂ ಮೌಲ್ಯದ ಸ್ಮಾರ್ಟ್‌ಫೋನ್ ಮತ್ತು ಟ್ವಿಟರ್‌ ಮತ್ತು ಫೇಸ್‌ಬುಕ್‌ನಲ್ಲಿ ಎರಡು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹೊಂದಿದ್ದಾಗಿ ತಿಳಿಸದಿದ್ದಾರೆ.

2017ರಲ್ಲಿ ವಿಧಾನ ಪರಿಷತ್ತಿಗೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಆದಿತ್ಯನಾಥ್‌‌ ತಮ್ಮ ಆಸ್ತಿ 95.98 ಲಕ್ಷ ರೂ. ಎಂದು ಉಲ್ಲೇಖಿಸಿದ್ದರು. ಅವರು ಕ್ರಮವಾಗಿ 13.11 ಲಕ್ಷ ರೂ. ಮತ್ತು 8.72 ಲಕ್ಷ ರೂ. ಮೌಲ್ಯದ ಟೊಯೊಟಾ ಫಾರ್ಚುನರ್ ಮತ್ತು ಟೊಯೊಟಾ ಇನ್ನೋವಾ ಎಸ್‌ಯುವಿಗಳನ್ನು ಹೊಂದಿದ್ದಾರೆ. ಆದರೆ ವಿಧಾನಸಭೆ ಚುನಾವಣೆಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಾವು ಯಾವುದೇ ವಾಹನ ಹೊಂದಿಲ್ಲ ಎಂದು ತಿಳಿಸಿದ್ದಾರೆ.

ತಮ್ಮ ವಿರುದ್ಧ ಗೋರಖ್‌ಪುರ, ಮಹಾರಾಜ್‌ಗಂಜ್ ಮತ್ತು ಸಿದ್ಧಾರ್ಥನಗರ ಜಿಲ್ಲಾ ನ್ಯಾಯಾಲಯಗಳಲ್ಲಿ ನಾಲ್ಕು ಪ್ರಕರಣಗಳು ಬಾಕಿ ಇವೆ ಎಂದು ಅವರು ವಿಧಾನ ಪರಿಷತ್ತಿನ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದರು.

ಇದನ್ನೂ ಓದಿ: ರಾಜ್ಯದಲ್ಲಿ ತೀವ್ರಗೊಳ್ಳುತ್ತಿರುವ ಹಿಜಾಬ್ ವಿವಾದ: ಕಠಿಣ ನಿಲುವು ತಳೆಯದ ಬೊಮ್ಮಾಯಿ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...