Homeಮುಖಪುಟಸರಸ್ವತಿ ಪೂಜೆ ವಿರೋಧಿಸಿ ’ಜೀವಮಾನ ಸಾಧನೆ ಪ್ರಶಸ್ತಿ’ ತಿರಸ್ಕರಿಸಿದ ಮರಾಠಿ ಕವಿ ಯಶ್ವಂತ್‌ ಮನೋಹರ್‌

ಸರಸ್ವತಿ ಪೂಜೆ ವಿರೋಧಿಸಿ ’ಜೀವಮಾನ ಸಾಧನೆ ಪ್ರಶಸ್ತಿ’ ತಿರಸ್ಕರಿಸಿದ ಮರಾಠಿ ಕವಿ ಯಶ್ವಂತ್‌ ಮನೋಹರ್‌

- Advertisement -
- Advertisement -

ಹಿರಿಯ ಮರಾಠಿ ಕವಿ ಯಶ್ವಂತ್ ಮನೋಹರ್ ಅವರು ವಿದರ್ಭ ಸಾಹಿತ್ಯ ಸಂಘ (ವಿಎಸ್ಎಸ್) ನೀಡಿದ ‘ಜೀವಮಾನ ಸಾಧನೆ ಪ್ರಶಸ್ತಿ’ ಸ್ವೀಕರಿಸಲು ನಿರಾಕರಿಸಿದ ಘಟನೆ ನಡೆದಿದೆ. ಸಂಘವು ವೇದಿಕೆಯಲ್ಲಿ ‘ಸರಸ್ವತಿ ಪೂಜೆ’ ನಡೆಸಿ, ಭಾವಚಿತ್ರಕ್ಕೆ ಹಾರ ಹಾಕಿದ್ದನ್ನು ವಿರೋಧಿಸಿರುವ ಕವಿ, ತಮಗೆ ಬಂದ ಸಾಹಿತ್ಯ ಗೌರವವನ್ನು ತಿರಸ್ಕರಿಸಿದ್ದಾರೆ.

ಕವಿಯು ವಿಎಸ್ಎಸ್‌ಗೆ ಬರೆದ ಪತ್ರದಲ್ಲಿ, “ಸರಸ್ವತಿ ಭಾವಚಿತ್ರವು ಮಹಿಳೆಯರು, ಶೂದ್ರರನ್ನು ಶಿಕ್ಷಣ ಮತ್ತು ಜ್ಞಾನದಿಂದ ನಿರ್ಬಂಧಿಸಿದ ಶೋಷಣೆಯ ಸಂಕೇತವಾಗಿದೆ. ಸಾಹಿತ್ಯ ಕಾರ್ಯಕ್ರಮಗಳಲ್ಲಿ ನಾನು ಧರ್ಮವನ್ನು ಒಪ್ಪುವುದಿಲ್ಲ” ಎಂದಿದ್ದಾರೆಂದು Freepressjournal.com ಮೂಲವನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ: ‘ಸಣ್ಣ ಪಿಕಾ-ಒಂದುವರೆ ರುಪಾಯಿ’ – ಅಧೀರ್ ಬಿಸ್ವಾಸ್ ಅವರ ನಿರಾಶ್ರಿತ ಆತ್ಮಕಥೆ

“ವಿದರ್ಭ ಸಾಹಿತ್ಯ ಸಂಘವು ಬರಹಗಾರನಾಗಿ ನನ್ನ ಪಾತ್ರ ಮತ್ತು ಚಿಂತನೆಗಳನ್ನು ತಿಳಿಯುತ್ತದೆ ಎಂಬುದು ನನ್ನ ತಿಳುವಳಿಕೆಯಾಗಿತ್ತು. ಸರಸ್ವತಿಯ ಚಿತ್ರವಿರುತ್ತದೆ ಎಂದು ನನಗೆ ತಿಳಿಸಲಾಯಿತು. ನನ್ನ ಮೌಲ್ಯಗಳನ್ನು ಕಡೆಗಣಿಸುವ ಮೂಲಕ ಪ್ರಶಸ್ತಿಯನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಅದನ್ನು ನಯವಾಗಿ ನಿರಾಕರಿಸಿದ್ದೇನೆ” ಎಂದು ಅವರು ಹೇಳಿದ್ದಾರೆ.

“ವಿದರ್ಭ ಸಾಹಿತ್ಯ ಸಂಘದ ಯಾರಾದರೂ ಈ ಬಗ್ಗೆ ನನ್ನಲ್ಲಿ ಚರ್ಚಿಸಿದ್ದರೆ, ಒಂದು ಮಾರ್ಗವನ್ನು ಕಂಡುಕೊಳ್ಳಬಹುದಿತ್ತು, ಆದರೆ ಅದು ಆಗಲಿಲ್ಲ” ಎಂದು ಅವರು ಹೇಳಿದ್ದಾರೆ.

ಸರಸ್ವತಿಯ ಭಾವಚಿತ್ರದ ಬದಲು ಎಲ್ಲ ಸಾಹಿತ್ಯಿಕ ಅಥವಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಾವಿತ್ರಿಭಾಯಿ ಪುಲೆ ಭಾವಚಿತ್ರ ಮತ್ತು ಸಂವಿಧಾನದ ಪ್ರತಿಯನ್ನು ಇಡುವಂತೆ ಎಲ್ಲಾ ಕಲಾವಿದರು, ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಕೋರುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಅಮರೇಶ ನುಗಡೋಣಿ ಅವರ ಹೊಸ ಕಾದಂಬರಿ `ಕೊರೊನಾ ಕಥೆ’ಗೆ ಕಾದಂಬರಿಕಾರನ ಮುನ್ನುಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...