Homeಚಳವಳಿಭಯೋತ್ಪಾದಕ ಸಂಘಟನೆಗಳ ನಂಟಿನ ಆರೋಪ: ರೈತ ಹೋರಾಟಗಾರರಿಗೆ NIA ನೋಟಿಸ್

ಭಯೋತ್ಪಾದಕ ಸಂಘಟನೆಗಳ ನಂಟಿನ ಆರೋಪ: ರೈತ ಹೋರಾಟಗಾರರಿಗೆ NIA ನೋಟಿಸ್

ಎನ್‌ಐಎ ಮೂಲಕ ಸಮನ್ಸ್ ನೀಡಿ ರೈತರನ್ನು ಹೆದರಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇದಕ್ಕೆ ನಾವು ಹೆದರುವುದಿಲ್ಲ ಎಂದು ಹೋರಾಟಗಾರರು ಹೇಳಿದ್ದಾರೆ.

- Advertisement -
- Advertisement -

ಅಮೆರಿಕ ಮೂಲದ ಖಾಲಿಸ್ತಾನಿ ಪರ ಸಂಘಟನೆ ಸಿಖ್ಸ್ ಫಾರ್ ಜಸ್ಟೀಸ್ (ಎಸ್‌ಎಫ್‌ಜೆ) ವಿರುದ್ಧ ದಾಖಲಾದ ಎಫ್‌ಐಆರ್‌ಗೆ ಸಂಬಂಧಿಸಿದಂತೆ, ರೈತ ಹೋರಾಟದಲ್ಲಿ ಪಾಲ್ಗೊಳ್ಳುವ 12 ಕ್ಕಿಂತಲೂ ಪಂಜಾಬಿ ಮತ್ತು ಸಿಖ್ ಸಾಮಾಜಿಕ ಕಾರ್ಯಕರ್ತರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನೋಟಿಸ್ ನೀಡಿದೆ. ಇಂತಹ ನೋಟಿಸ್‌ಗಳನ್ನು ಸ್ವೀಕರಿಸಿದವರ ಸಂಖ್ಯೆ 40 ಕ್ಕಿಂತ ಹೆಚ್ಚಾಗುವ ನಿರೀಕ್ಷೆಯಿದೆ.

ಅಮೆರಿಕ ಮೂಲದ ಗುರ್‌ಪತ್ವಂತ್ ಸಿಂಗ್ ಪನ್ನು, ಯುನೈಟೆಡ್ ಕಿಂಗ್‌ಡಮ್ ಮೂಲದ ಪರಮ್‌ಜಿತ್ ಸಿಂಗ್ ಪಮ್ಮಾ ಮತ್ತು ಕೆನಡಾದ ಹರ್‌ದೀಪ್ ಸಿಂಗ್ ನಿಜ್ಜಾರ್ ಸೇರಿದಂತೆ ಒಟ್ಟು ಮೂವರ ವಿರುದ್ಧ ಎನ್‌ಐಎ 2020 ರ ಡಿಸೆಂಬರ್ 15 ರಂದು ದೆಹಲಿಯಲ್ಲಿ ಎಫ್‌ಐಆರ್ ದಾಖಲಿಸಿತ್ತು. ಗುರ್‌ಪತ್ವಂತ್ ಸಿಂಗ್ ಪನ್ನು ಎಸ್‌ಎಫ್‌ಜೆ ಮುಖ್ಯಸ್ಥರಾಗಿದ್ದಾರೆ.

ಇದನ್ನೂ ಓದಿ: ಹೋರಾಟ ನಿರತ ರೈತರ ಸೇವೆಗಾಗಿ ವಿದೇಶಿ ಕೆಲಸದ ಅವಕಾಶ ತೊರೆದ ಯುವಕ..!

ಎಫ್‌ಐಆ‌ರ್‌‌ನಲ್ಲಿ, “ಸಿಖ್ಸ್ ಫಾರ್‌ ಜಸ್ಟಿಸ್‌ ಎಂಬ ಸಂಘಟನೆಯು ಇತರ ಖಾಲಿಸ್ತಾನಿ ಭಯೋತ್ಪಾದಕ ಸಂಘಟನೆಗಳಾದ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್, ಖಲಿಸ್ತಾನ್ ಟೈಗರ್ ಫೋರ್ಸ್ ಮತ್ತು ಖಾಲಿಸ್ತಾನ್ ಜಿಂದಾಬಾದ್ ಫೋರ್ಸ್ ಸಂಘಟನೆಗಳೊಂದಿಗೆ ಯುಎಪಿಎ ಅಡಿಯಲ್ಲಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದೆ ಎಂಬ ಮಾಹಿತಿ ಕೇಂದ್ರ ಸರ್ಕಾರ ಪಡೆದಿದೆ. ಈ ಸಂಘಟನೆಗಳು ಭಯ ಮತ್ತು ಅರಾಜಕತೆಯ ವಾತಾವರಣವನ್ನು ಸೃಷ್ಟಿಸುವ ಹಾಗೂ ಜನರಲ್ಲಿ ಅಸಮಾಧಾನ ಉಂಟುಮಾಡಿ ಭಾರತ ಸರ್ಕಾರದ ವಿರುದ್ಧ ದಂಗೆ ಏಳುವಂತೆ ಪ್ರಚೋದಿಸುವ ಪಿತೂರಿ ಮಾಡಿದೆ” ಎಂದು ಹೇಳಲಾಗಿದೆ.

“ಭಾರತದ ಜನರಲ್ಲಿ ಭಯೋತ್ಪಾದನೆಯನ್ನು ಬಿತ್ತಲು ಮತ್ತು ಪ್ರಭಾವಶಾಲಿ ಯುವಕರನ್ನು ಪ್ರಚೋದಿಸಲು ಎನ್‌‌ಜಿಒಗಳ ಮೂಲಕ ಭಾರತ ಮೂಲದ ಖಾಲಿಸ್ತಾನಿ ಪರ ಸಂಘಟನೆಗಳಿಗೆ ದೊಡ್ಡ ಪ್ರಮಾಣದ ಹಣವನ್ನು ಸಂಗ್ರಹಿಸಿ ಕಳುಹಿಸಲಾಗುತ್ತಿದೆ” ಎಂದು ಎಫ್ಐಆರ್ ಹೇಳುತ್ತದೆ.

ಇದನ್ನೂ ಓದಿ: ದೆಹಲಿ ಗಡಿಯಲ್ಲಿ ಹೋರಾಟದ ಹೊಸ ಭಾಷ್ಯ ಬರೆಯುತ್ತಿರುವ ದೇಶದ ರೈತರು: ಡಾ. ಪುರುಷೋತ್ತಮ ಬಿಳಿಮಲೆ

ಲೋಕ್ ಭಾಲೈ ಇನ್ಸಾಫ್ ವೆಲ್ಫೇರ್ ಸೊಸೈಟಿ (ಎಲ್‌ಬಿಐಡಬ್ಲ್ಯುಎಸ್) ಅಧ್ಯಕ್ಷ ಬಾಲ್‌ದೇವ್ ಸಿಂಗ್ ಸಿರ್ಸಾ ಮತ್ತು ಚಿತ್ರ ನಟ ದೀಪ್ ಸಿಧು ಅವರ ಸಹೋದರ ಮಂದೀಪ್ ಸಿಂಗ್ ಅವರಿಗೆ ತನಿಖಾ ಸಂಸ್ಥೆಯು ನೋಟಿಸ್ ನೀಡಿದೆ.

ಜಲಂಧರ್ ಮೂಲದ ಬರಹಗಾರ ಮತ್ತು ನಿರೂಪಕ ಬಲ್ವಿಂದರ್ ಪಾಲ್ ಸಿಂಗ್, ಪತ್ರಕರ್ತ ಬಾಲ್ತೆಜ್ ಪನ್ನು, ಅಕಾಲಿ ನಾಯಕ ಪರ್ಮ್‌ಜಿತ್ ಸಿಂಗ್ ಅಕಾಲಿ, ಮೊಗಾದ ಪಾಲ್ವಿಂದರ್ ಸಿಂಗ್, ಹೋಶಿಯಾರ್‌ಪುರದ ನೊಬೆಲ್ಜಿತ್ ಸಿಂಗ್, ಸಿಖ್ ಯೂತ್ ಫೆಡರೇಶನ್ ಭಿಂದರ್‌ವಾಲಾ (ಎಸ್‌ವೈಎಫ್‌ಬಿ) ಉಪಾಧ್ಯಕ್ಷ ರಂಜಿತ್ ಸಿಂಗ್ ದಮ್‌ದಮಿ ತಕ್ಸಲ್, ಸುರಿಂದರ್ ಸಿಂಗ್ ಥಿಕ್ರಿವಾಲಾ ಸೇರಿದಂತೆ ಅಮೃತಸರ, ಲುಧಿಯಾನ ಮತ್ತು ಹೋಶಿಯಾರ್‌ಪುರ ಮೂಲದ ಸಿಖ್ ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಪಂಜಾಬಿ ಬರಹಗಾರರು, ಕಲಾವಿದರು, ಪತ್ರಕರ್ತರು ಕೂಡ ನೋಟಿಸ್ ಪಡೆದಿದ್ದಾರೆ.

‘ಪ್ರತಿಭಟನೆಗೆ ಸಹಾಯ ಮಾಡುವವರನ್ನು ಟಾರ್ಗೇಟ್’

ಪ್ರತಿಭಟನಾ ಸ್ಥಳಗಳಿಗೆ ಜನರನ್ನು ಕರೆದೊಯ್ಯಲು ಬಸ್ಸುಗಳನ್ನು ನೀಡಿದ ಟ್ರಾನ್ಸ್‌‌ಪೋರ್ಟ್‌ ಸಂಸ್ಥೆಗಳನ್ನೂ ಎನ್ಐಎ ಗುರಿಯಾಗಿಸುತ್ತಿದೆ ಎಂದು ಸಂಯುಕ್ತಾ ಕಿಸಾನ್ ಮೋರ್ಚಾ (ಎಸ್ಕೆಎಂ) ಪ್ರತಿನಿಧಿಗಳು ತಿಳಿಸಿದ್ದಾರೆ. ಅಲ್ಲದೆ, ಕೆಲವು ಕೇಬಲ್ ಚಾನೆಲ್ ಆಪರೇಟರ್‌ಗಳಿಗೆ ನೋಟಿಸ್ ಕಳುಹಿಸಲಾಗಿದೆ. ಹೋರಾಟಕ್ಕೆ ಸಂಬಂಧಿಸಿದಂತೆ ಸಮನ್ಸ್ ಕಳುಹಿಸಲಾಗಿರುವ ಎಲ್ಲ ಜನರನ್ನು ನವದೆಹಲಿಯ ಪ್ರಧಾನ ಕಚೇರಿಯಲ್ಲಿ ಹಾಜರಾಗುವಂತೆ ಎನ್ಐಎ ಕೇಳಿದೆ.

ಇದನ್ನೂ ಓದಿ: ಕೃಷಿ ಕಾಯ್ದೆಗಳ ಸಮರ್ಥನೆ: ತೊಂದರೆಗೊಳಗಾದವರಿಗೆ ರಕ್ಷಣೆ ಅಗತ್ಯವೆಂದ IMF

ಪ್ರತಿಭಟನೆಯನ್ನು ಮುಗಿಸಲು ಸರ್ಕಾರ ಈಗ ಎನ್ಐಎಯನ್ನು ಬಳಸುತ್ತಿದೆ ಎಂದು ಬಾಲ್‌ದೇವ್ ಸಿಂಗ್ ಸಿರ್ಸಾ ತಿಳಿಸಿದ್ದಾರೆಂದು ’ಫೆಡರಲ್’ ವರದಿ ಮಾಡಿದೆ.

“ನಮ್ಮ ಹೋರಾಟವನ್ನು ಧಮನಿಸಲು ಸುಪ್ರೀಂಕೋರ್ಟ್ ಸೇರಿದಂತೆ ಪ್ರತಿಯೊಂದು ತಂತ್ರವನ್ನು ಬಳಸಲಾಯಿತು, ಆದರೆ ಸರ್ಕಾರಕ್ಕೆ ನಮ್ಮ ಪ್ರತಿಭಟನೆಯನ್ನು ಕೊನೆಗೊಳಿಸಲು ಸಾಧ್ಯವಾಗಲಿಲ್ಲ. ದೆಹಲಿಯ ಗಡಿಯಲ್ಲಿ ರೈತರ ಸಂಖ್ಯೆ ದಿನೇ ದಿನ ಹೆಚ್ಚುತ್ತಿದೆ. ಎನ್‌ಐಎ ಮೂಲಕ ಸಮನ್ಸ್‌ ನೀಡಿ ರೈತರನ್ನು ಹೆದರಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಆದರೆ ಇದಕ್ಕೆ ನಾವು ಹೆದರುವುದಿಲ್ಲ, ನಮ್ಮ ಹಕ್ಕುಗಳಿಗಾಗಿ ನಾವು ನಿರಂತರವಾಗಿ ಹೋರಾಡುತ್ತೇವೆ” ಎಂದು ಬಾಲ್‌ದೇವ್ ಸಿಂಗ್ ಸಿರ್ಸಾ ಹೇಳಿದ್ದಾರೆ.

ರೈತ ಪ್ರತಿಭಟನೆಗೆ ಸಹಾಯ ಮಾಡುವವರನ್ನು ಗುರಿಯಾಗಿಸಿ ಎನ್ಐಎ ಬಳಸುವುದನ್ನು ನಿಲ್ಲಿಸುವಂತೆ, ಜನವರಿ 15 ರಂದು ನಡೆದ 9 ನೇ ಸುತ್ತಿನ ಮಾತುಕತೆಯ ಸಂದರ್ಭದಲ್ಲಿ ಸಂಯುಕ್ತಾ ಕಿಸಾನ್ ಮೋರ್ಚಾ ಸರ್ಕಾರವನ್ನು ಒತ್ತಾಯಿಸಿದೆ. ನಾವು ಖಾಲಿಸ್ತಾನಿ ಪರ ಗುಂಪು ಎಸ್‌ಎಫ್‌ಜೆ ಜೊತೆ ಯಾವುದೇ ರೀತಿಯಿಂದ ಸಂಪರ್ಕ ಹೊಂದಿಲ್ಲ ಎಂದು ಅದು ಹೇಳಿದೆ.

ಇದನ್ನೂ ಓದಿ: ಹೋರಾಟವನ್ನು ಬೆಚ್ಚಗಿರಿಸುತ್ತಿರುವ ‘ಟ್ರ್ಯಾಲಿ’ ಎಂಬ ರೈತರ ಬದುಕಿನ ಬಂಡಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...