Homeಕರ್ನಾಟಕಮಾರ್ಚ್ 2023ರ ಗೌರಿ ಲಂಕೇಶ್ ಹತ್ಯಾ ಪ್ರಕರಣ ವಿಚಾರಣಾ ವರದಿ

ಮಾರ್ಚ್ 2023ರ ಗೌರಿ ಲಂಕೇಶ್ ಹತ್ಯಾ ಪ್ರಕರಣ ವಿಚಾರಣಾ ವರದಿ

- Advertisement -
- Advertisement -

ಗೌರಿ ಲಂಕೇಶ್ ಹತ್ಯಾ ಪ್ರಕರಣದ ಮಾರ್ಚ್ ತಿಂಗಳ ವಿಚಾರಣೆಯು ಮಾರ್ಚ್ 13 ರಿಂದ 17 ರವರೆಗೆ ನಡೆಯಿತು. ಮೂವರು ಸಾಕ್ಷಿಗಳ ಪ್ರಧಾನ ಹೇಳಿಕೆ ಮತ್ತದರ ಮೇಲೆ ಆರೋಪಿ ಪರ ವಕೀಲರ ಪಾಟಿ ಸವಾಲುಗಳು ನಡೆದವು, ಹಾಗೂ ಬಾಕಿ ಉಳಿದಿದ್ದ ಇನ್ನಿಬ್ಬರು ಸಾಕ್ಷಿಗಳ ಹೇಳಿಕೆ ಮತ್ತು ಪಾಟಿ ಸವಾಲುಗಳು ಮುಂದುವರೆದವು.

ಬಾಲರಾಜ್:  CI- SIT ಟೀಮಿನ ಸದಸ್ಯರು.

ಇವರು 2018 ರ ಮೇ 23 ರಂದು ಆರೋಪಿ ಸುಜಿತ್ ಕುಮಾರ್ ಉಡುಪಿಯಲ್ಲಿ ವಾಸವಿದ್ದ ಮನೆಯನ್ನು ಪಂಚರ ಎದುರಿಗೆ ಸೂಕ್ತ ಪ್ರಕ್ರಿಯೆಗಳನ್ನು ಅನುಸರಿಸಿ ತಪಾಸಣೆ ಮಾಡಿದ್ದರ ಬಗ್ಗೆ ಸಾಕ್ಷಿ ನುಡಿದರು. ಸುಜಿತ್ ಮನೆಯಲ್ಲಿ ಸುಜಿತ್ ಓಟರ್ ಕಾರ್ಡ್, ಕರ್ನಾಟಕ-ಮಹಾರಾಷ್ಟ್ರ ಭೂಪಟ, ಸನಾತನ ಸಂಸ್ಥೆಯ ಅಂಜಲಿ ಗಾಡ್ಗಿಲ್ ಎಂಬುವರು ಬರೆದ ಲೇಖನದ ಜೆರಾಕ್ಸ್ ಪ್ರತಿ, 18 ಮೊಬೈಲ್ ಸೆಟ್ಟುಗಳು ಮತ್ತು 15 ಮೊಬೈಲ್ ಪೌಚುಗಳು, ಹಾಗೂ ಮೂರು ಮೊಬೈಲ್ ಖರೀದಿಗೆ ಸಂಬಧಿಸಿದ ರಸೀದಿಗಳನ್ನು ವಶಪಡಿಸಿಕೊಂಡ ಬಗ್ಗೆ ಸಾಕ್ಷಿ ನುಡಿದರು. ಆ ದಿನ ರಸೀದೆಯಲ್ಲಿ ಇದ್ದ ವಿಳಾಸದ ಮೇರೆಗೆ ಉಡುಪಿ ಬಸ್‌ ಸ್ಟ್ಯಾಂಡ್‌ನಲ್ಲಿದ ಐ ಮೊಬೈಲ್ ಅಂಗಡಿ ಮತ್ತು ಮಣಿಪಾಲದ ಸಿಟಿ ಪಾಯಿಂಟ್ ಮೊಬೈಲ್ ಅಂಗಡಿಯಲ್ಲಿ ಮೊಬೈಲ್ ಖರೀದಿಯ ಮೂಲ ರಸೀದಿಯನ್ನು ವಶಪಡಿಸಿಕೊಂಡ ಬಗ್ಗೆ ಸಾಕ್ಷಿ ನುಡಿದರು.

ಹಾಗೆಯೇ 2018 ರ ಜುಲೈ 21 ರಂದು ಹುಬ್ಬಳ್ಳಿಗೆ ಹೋಗಿ ಬಾತ್ಮೀದಾರದ ಸಹಕಾರದೊಂದಿಗೆ ಆರೋಪಿಗಳಾದ ಅಮಿತ್ ಬಡ್ಡಿ ಮತ್ತು ಗಣೇಶ್ ಮಿಸ್ಕಿನ್ ಅವರುಗಳನ್ನು ಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಹಾಜರುಪಡಿಸಿ, ಅಲ್ಲಿಂದ ಅವರನ್ನು ಬೆಂಗಳೂರಿಗೆ ಕರೆತಂದ ಬಗ್ಗೆಯೂ ಸಾಕ್ಷ್ಯ ನುಡಿದರು. ಹಾಗೂ ಸದರಿ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಗುರುತಿಸಿದರು.

ಪಾಟಿ ಸವಾಲು: ಆರೋಪಿ ಪರ ವಕೀಲ ಕೃಷ್ಣಮೂರ್ತಿಯವರು ಸಾಕ್ಷಿಯ ತಪಾಸಣೆ ಮಾಡುವಾಗ, ದಾಖಲು ಮಾಡುವಾಗ ಸರಿಯಾದ ಪ್ರಕ್ರಿಯೆಗಳನ್ನು ಅನುಸರಿಸದ ಬಗ್ಗೆ, ತಾವು ಸಹಿ ಮಾಡಿ ಪಡೆದುಕೊಂಡ ನೋಟೀಸಿನಲಿ ಕೈಬರಹದಿಂದ ಕೆಲವು ತಿದ್ದುಪಡಿ ಮಾಡಿರುವ ಬಗ್ಗೆ, ಹಾಗೂ ಸಾಕ್ಷಿಯ ಮೇಲೆ ಬೇರೆ ಪ್ರಕರಣದಲ್ಲಿ ಆರೋಪವಿರುವ ಬಗ್ಗೆ ಹಾಗೂ ಸಾಮಾನ್ಯವಾಗಿ ತಮ್ಮ ವ್ಯಾಪ್ತಿಯಲ್ಲಿ ಇಲ್ಲದ ಪ್ರಕರಣಗಳಲ್ಲಿ ತಲೆದೂರಿಸುತ್ತಾರೆ ಎಂಬ ಆರೋಪದ ಬಗ್ಗೆ ಪಾಟಿ ಸವಾಲು ಮಾಡಿದರು. ಹಾಗೂ ಅವರು ನುಡಿದ ಸಾಕ್ಷಿಗಳೆಲ್ಲವೂ ಸುಳ್ಳು ಎಂದು ಸವಾಲು ಹಾಕಿದರು. ಸಾಕ್ಷಿಯು ಅಲ್ಲಲ್ಲಿ ಕೈಬರಹದ ತಿದ್ದುಪಡಿ ಮಾಡಿರುವ ಬಗ್ಗೆ ಹಾಗೂ ಪಡೆದುಕೊಂಡ ನೋಟೀಸಿನಲ್ಲಿ ಕೆಲವು ನಿರ್ದಿಷ್ಟ ಸೂಚನೆಗಳು ಇಲ್ಲದಿರುವ ಬಗ್ಗೆ ಒಪ್ಪಿಕೊಂಡರೂ ಉಳಿದ ಎಲ್ಲಾ ಆರೋಪಗಳನ್ನು ನಿರಾಕರಿಸಿದರು.

ಮುಕುಂದ ವಿ: ಬಿಬಿಎಂಪಿ ಯಲ್ಲಿ ಎಸ್‌ಡಿಎ

ಇವರು 2018 ರ ಜೂನ್ 7 ರಂದು ಪೊಲೀಸರ ಕೋರಿಕೆ ಮೇರೆಗೆ ಮೇಲಧಿಕಾರಿಗಳು ಆದೇಶಿಸಿದ್ದರಿಂದ ತನಿಖೆಯಲ್ಲಿ ಪಂಚರಾಗಿ ಸಹಕರಿಸಿದ ಬಗ್ಗೆ ಸಾಕ್ಷಿ ನುಡಿದರು. ಜೂನ್ 7 ರಂದು ಸಿಐಡಿ ಕಚೇರಿಯಲ್ಲಿ ಆರೋಪಿ ಸುಜಿತ್ ಕುಮಾರ್ ಅವರ ಧ್ವನಿ ಮಾದರಿ ಮತ್ತು ಆರೋಪಿ ಸುಜಿತ್ ಕುಮಾರ್ ಮತ್ತು ಮತ್ತೊಬ್ಬ ಆರೋಪಿ ಮನೋಹರ್ ಅವರ ಕೈಬರಹದ ಮಾದರಿಗಳನ್ನು ಸೂಕ್ತ ಪ್ರಕ್ರಿಯೆಗಳನ್ನು ಅನುಸರಿಸಿ ಪೊಲೀಸರು ಪಡೆದುಕೊಂಡ ಬಗ್ಗೆ ಸಾಕ್ಷಿ ನುಡಿದರು. ಅದಕ್ಕೆ ಸಬಂಧಿಸಿದಂತೆ ತಾವು ಧೃಢಪಡಿಸಿ ನೀಡಿದ ಹೇಳಿಕೆ ಮತ್ತು ಸಹಿಗಳನ್ನು ಗುರುತಿಸಿದರು. ಮತ್ತು ವಿಡಿಯೋ ಕಾನ್ಫರೆನ್ಸಿನ ಮೂಲಕ ಆರೋಪಿ ಸುಜಿತ್ ಮತ್ತು ಮನೋಹರ್ ಅವರನ್ನು ಗುರುತಿಸಿದರು.

ಪಾಟಿ ಸವಾಲು: ಆರೋಪಿ ಪರ ವಕೀಲರು ಸಾಕ್ಷಿಯು ಪಂಚರಾಗಿ ಸಹಕರಿಸಲು ಅನುಸರಿಸಬೇಕಿದ್ದ ಪ್ರಕ್ರಿಯೆಗಳಲ್ಲಿ ಇರುವ ಲೋಪಗಳ ಬಗ್ಗೆ ಪ್ರಶ್ನಿಸಿದರು. ಹಾಗೂ ಸುಳ್ಳು ಸಾಕ್ಷ್ಯ ಹೇಳುತ್ತಿರುವುದಾಗಿ ಸವಾಲು ಮಾಡಿದರು. ಸಾಕ್ಷಿಯು ಅದನ್ನು ನಿರಾಕರಿಸಿದರು. ಧ್ವನಿ ಮುದ್ರಿಕೆಗಳ ಕಾಪಿಯನ್ನು ತಮಗೆ ಇನ್ನೂ ಒದಗಿಸದೇ ಇರುವುದರಿಂದ ಸಾಕ್ಷಿಯು ಅದನ್ನು ಧ್ರುಡೀಕರಿಸುವ ಬಗ್ಗೆ ಆರೋಪಿ ಪರ ವಕೀಲರು ತಕರಾರು ಮಾಡಿದರು. ಆದರೆ ಈಗಾಗಲೇ ಧ್ವನಿ ಮುದ್ರಿತ ಕಾಪಿಗಳನ್ನು ಡಿಫೆನ್ಸ್ ವಕೀಲರಿಗೆ ನೀಡದಿದ್ದಲ್ಲಿ ಅದರೊಳಗಿನ ಕಂಟೆಂಟ್ ಅನ್ನು ನ್ಯಾಯಾಲಯ ಮಾನ್ಯ ಮಾಡುವುದಿಲ್ಲ ಎಂದು ನೀಡಿರುವ ಆದೇಶವನ್ನು ನ್ಯಾಯಾಲಯದ ಗಮನಕ್ಕೆ ತರಲಾಯಿತು.

ಪ್ರವೀಣ್ ಕುಮಾರ್: ಕಡಬಗೆರೆ ಗ್ರಾಮ ಪಂಚಾಯತಿ ಸೆಕ್ರೆಟರಿ

ಇವರು ಪೊಲೀಸರ ಕೋರಿಕೆ ಮೇರೆಗೆ ಕಡಬಗರೆ ಗ್ರಾಮ ಪಂಚಾಯತಿಯ ಪಿಡಿಒ ಅವರಿಂದ ನಿರ್ದೇಶಿತನಾಗಿ ಪೊಲೀಸರ ತನಿಖೆಗೆ ಜೂನ್ 7 ರಂದು ಪಂಚರಾಗಿ ಸಹಕರಿಸಿದ ಬಗ್ಗೆ ಸಾಕ್ಷ್ಯ ನುಡಿದರು. ಪೊಲೀಸರೊಂದಿಗೆ ಸೀಗೆ ಹಳ್ಳಿ ಗೇಟ್ ಬಳಿ ಇರುವ ಸುರೇಶ್ ಎಂಬುವರ ಮನೆಯ ಮೊದಲ ಮಹಡಿಯಲ್ಲಿ ಆರೋಪಿ ತಾನು ವಾಸವಿದ್ದುದಾಗಿ ಪೊಲೀಸರು ಕರೆದುಕೊಂಡು ಬಂದಿದ್ದ ಆರೋಪಿ ಅಮೋಲ್ ಕಾಳೆ ಹೇಳಿದ್ದಾಗಿ ಸಾಕ್ಷಿ ನುಡಿದರು. ಆದರೆ ಮನೆಯ ತಪಾಸನೆಯ ಪಂಚನಾಮೆಗೆ ಸಹಿ ಹಾಕಲು ಆರೋಪಿ ನಿರಾಕರಿಸಿದ ಬಗೆಗೂ ಹೇಳಿಕೆ ನೀಡಿದರು. ಆ ನಂತರ ಸಾಯಿ ಲಕ್ಷ್ಮಿ ಲೇ ಔಟ್ ಬಳಿ ಇದ್ದ ಅಂಗಡಿ ಮಳಿಗೆಯಲ್ಲಿ ಒಂದೆರೆಡು ದಿನ ವಾಸವಿದ್ದ ಬಗ್ಗೆ ಆರೋಪಿ ಅಮೋಲ್ ಕಾಳೆ ಹೇಳಿದರೂ ನಂತರ ನಡೆದ ಅಂಗಡಿಯ ಪಂಚನಾಮೆಗೆ ಸಹಿ ಹಾಕಲು ಒಪ್ಪಲಿಲ್ಲ. ಆ ಪ್ರತಿಯೊಂದು ಕಡೆಯಲ್ಲೂ ಪೊಲಿಸರು ತಮ್ಮೆಲ್ಲರನ್ನು ಒಟ್ಟಾಗಿಸಿ ಫ಼ೋಟೊ ತೆಗೆದ ಬಗ್ಗೆ ಹೇಳಿದರು ಮತ್ತು ಅದನ್ನು ಗುರುತಿಸಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಅಮೋಲ್ ಕಾಳೆಯನ್ನು ಗುರುತಿಸಿದರು. ಖುದ್ದಾಗಿ ತೋರಿಸಿದರೆ ಸುರೇಶ್ ಅವರನ್ನು ಗುರುತಿಸುವುದಾಗಿ ಹೇಳಿದರು. ಪ್ರಾಸಿಕ್ಯುಷನ್ ವಕೀಲರು ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಖುದ್ದು ಹಾಜರು ಮಾಡುವಂತೆ ಆದೇಶಿಸಲು ಕೋರಿದರು. ಮರುದಿನ ಖುದ್ದು ಹಾಜರಾದ ಆರೋಪಿಗಳ ಹತ್ತಿರ ಹೋಗಿ ಸಾಕ್ಷಿಯು ಆರೋಪಿ ಸುರೇಶ್ ಅವರನ್ನು ಗುರುತಿಸಿದರು. ಸಂಬಂಧಪಟ್ಟ ಆರೋಪಿ ತಾನು ಸುರೇಶ್ ಎಂದು ಒಪ್ಪಿಕೊಂಡರು.

ಪಾಟಿ ಸವಾಲು : ಆರೋಪಿ ಪರ ವಕೀಲರು ಸರ್ಕಾರಿ ಸಿಬ್ಬಂದಿಯಾಗಿ ಪೊಲಿಸ್ ಪಂಚನಾಮೆಗೆ ಸಹಕರಿಸುವ ಮುನ್ನ ಪಾಲಿಸ ಬೇಕಾದ ಪ್ರಕ್ರಿಯೆಗಳಲ್ಲಿ ಇರುವ ಲೋಪಗಳ ಬಗ್ಗೆ, ಹಾಗೂ ಅದರಲ್ಲಿ ಇರುವ ಕೈಬರಹ ತಿದ್ದುಪಡಿಗಳ ಬಗ್ಗೆ ಪ್ರಶ್ನಿಸಿದರು. ಸುಳ್ಳು ಸಾಕ್ಷ್ಯ ನುಡಿಯುತ್ತಿದೀರಿ ಎಂದು ಆರೋಪಿಸಿದರು. ಅವೆಲ್ಲವನ್ನು ಸಾಕ್ಷಿಯು ನಿರಾಕರಿಸಿದರು.

ರವಿಕುಮಾರ್: ಡಿವಿಆರ್ ಪಂಚನಾಮೆಯ ಸಾಕ್ಷಿ

ಇವರು ಎಮ್‌ಎನ್‌ಸಿ ಗಳಿಗೆ ಫುಡ್ ಸಪ್ಲೈ ಮಾಡುವ ಬಿಸಿನೆಸ್ ನಲ್ಲಿದ್ದು 2017 ರ ಸೆಪ್ಟೆಬರ್ 5ರ ಮಧ್ಯರಾತ್ರಿ ಟೀ ಕುಡಿಯಲು ರಾಜರಾಜೇಶ್ವರಿ ನಗರದ ಬಳಿ ನಿಂತಿದ್ದಾಗ ಪೊಲೀಸರ ಕೋರಿಕೆ ಮೇರೆಗೆ ಅವರು ವಶಪಡಿಸಿಕೊಂಡಿದ್ದ ಸಿಸಿಟಿವಿಗಳ ಡಿವಿಆರ್ ಗಳ ಪಂಚನಾಮೆಗೆ ಸಾಕ್ಷಿಯಾದ ಬಗ್ಗೆ ಹೇಳಿದರು.

ಪಾಟಿ ಸವಾಲು: ಮುಂದುವರೆದ ಇವರ ಪಾಟಿ ಸವಾಲಿನಲ್ಲಿ ಆರೋಪಿ ಪರ ವಕೀಲರು ಮುಖ್ಯವಾಗಿ ಪ್ರದರ್ಶಿತವಾದ ಡಿವಿಆರ್ ರೆಕಾರ್ಡ್ ನಲ್ಲಿ ಸೆಪ್ಟೆಂಬರ್ 5 ರ ರಾತ್ರಿ 7-7.30 ರವರೆಗಿನ ರೆಕಾರ್ಡಿಂಗ್ ನೋಡಿದಾಗ ಸಮಯ 7.19ಕ್ಕೆ ಗೌರಿಯವರು ಗೇಟನ್ನು ತೆರೆಯುತ್ತಿರುವ ದೃಶ್ಯವಿದೆ. ಆಗ ಅವರ ಮೇಲೆ ದಾಳಿ ನಡೆದಿಲ್ಲ ಅಲ್ಲವೇ ಎಂದು ಕೇಳಿದಾಗ ಹೌದು ಎಂದು ನುಡಿದರು. ಹಾಗೆಯೇ ತಮ್ಮ ವ್ಯವಹಾರಕ್ಕೆ ಪೊಲೀಸರಿಂದ ಸಹಾಯ ಬೇಕಾಗುತ್ತದೆ ಎಂಬ ಕಾರಣಕ್ಕೆ ಸುಳ್ಳು ಸಾಕ್ಷಿ ನುಡಿಯುತ್ತಿದೀರ ಎಂಬ ಆರೋಪವನ್ನು ನಿರಾಕರಿಸಿದರು.

ಪ್ರಕಾಶ್: ಎಸಿಪಿ- 2017 ಸೆಪ್ಟೆಂಬರ್ 5-7 ರವರೆಗೆ ಪ್ರಕರಣದ ತನಿಖಾಧಿಕಾರಿಯಾಗಿದ್ದವರು

ಮುಂದುವರೆದ ಈ ಸಾಕ್ಷಿಯ ವಿಚಾರಣೆಯಲ್ಲಿ ಸಾಕ್ಷಿಯು ತಾವು ವಶಪಡಿಸಿಕೊಂಡ ಡಿವಿಆರ್ ಇಂದ ಪ್ರದರ್ಶಿಸಲಾದ ದೃಶ್ಯದಲ್ಲಿ ಗೌರಿ ಲಂಕೇಶ್ ಗೇಟನ್ನು ತೆರೆಯುತ್ತಿರುವುದು, ಆಗ ಕಾರಿನ ಒಂದು ಸಿಂಗಲ್ ಲೈಟ್ ಆನ್ ಆಗಿರುವುದು ಮತ್ತು ಅಪರಿಚಿತನೊಬ್ಬ ಬಂದು ಗೌರಿ ಲಂಕೇಶ್ ಗೆ ಶೂಟ್ ಮಾಡಿ ಹೋಗುತ್ತಿರುವುದು ಕಂಡುಬರುತ್ತದೆಂದು ಗುರುತಿಸಿದರು. ಮತ್ತು ಈ ಪುರಾವೆಯನ್ನು ದಾಖಲಿಸಲಾಯಿತು….

ಪಾಟಿ ಸವಾಲು: ಆರೋಪಿ ಪರ ವಕೀಲರು ಪ್ರಧಾನವಾಗಿ

ಗೌರಿ ಲಂಕೇಶರ ಸಾವನ್ನು ಖಚಿತ ಪಡಿಸಿಕೊಳ್ಳದೆ ದೇಹವನ್ನು ಶವಾಗಾರಕ್ಕೆ ಕಳಿಸಿದ ಬಗ್ಗೆ,

ಪೊಲೀಸರ ವರದಿಯಲ್ಲಿ ನಮೂದಾಗಿದ್ದ ಸಮಯದಂತೆ ಸಿಸಿಟಿವಿ ಡಿವಿಆರ್ ನಲ್ಲಿ ಇಲ್ಲದಿರುವ ಬಗ್ಗೆ,

ಸೂಕ್ತ ಪ್ರಕ್ರಿಯೆಗಳನ್ನು ಅನುಸರಿಸದ ಬಗ್ಗೆ ಪ್ರಶ್ನಿಸಿದರು.

ಸಾಕ್ಷಿಯು ತಾನು2017 ರ ಸೆಪ್ಟೆಂಬರ್ 5 ರ ರಾತ್ರಿಯಿಂದ 7 ರ ಬೆಳಿಗ್ಗೆಯವರೆಗೆ ಕೇವಲ ತಾತ್ಕಾಲಿಕ ತನಿಖಾಧಿಕಾರಿಯಾಗಿದ್ದರಿಂದ ನಂತರದ ವಿವರಗಳನ್ನು ಗಮನಿಸದ ಬಗ್ಗೆ ಮತ್ತು ಪೊಲೀಸ್ ನಿಯಮಾವಳಿಗಳ ಪ್ರಕಾರ ನಡೆದುಕೊಂಡಿರುವ ಬಗ್ಗೆ ಸಾಕ್ಷಿ ನುಡಿದರು. ಸಾಮಾನ್ಯವಾಗಿ ಡಿವಿಅರ್ ನಲ್ಲಿ ನಮೂದಾಗಿರುವ ಸಮಯಕ್ಕೂ ನೈಜ ಸಮಯಕ್ಕೂ ವ್ಯತ್ಯಾಸವಿರುವ ಬಗ್ಗೆಯೂ ಹೇಳಿದರು.

ಮತ್ತು ಗೌರಿಯವರ ಸಾವನ್ನು ಖಚಿತಪಡಿಸಿಕೊಳ್ಳದೆ ಶವಾಗಾರಕ್ಕೆ ಕಳಿಸಲಾಯಿತೆಂಬ ಮತ್ತು ಸುಳ್ಳು ಸಾಕ್ಷಿ ನುಡಿಯುತ್ತಿದ್ದೇನೆ ಎಂಬ ಆರೋಪವನ್ನು ನಿರಾಕರಿಸಿದರು.

ಈ ಸಾಕ್ಷಿಯ ಪಾಟಿ ಸವಾಲು ಮುಂದುವರೆಯಲಿದೆ.
ಮುಂದಿನ ವಿಚಾರಣೆ 2023ರ ಮೇ 8 ಕ್ಕೆ ನಿಗದಿಯಾಗಿದೆ.

ಈ ಮಧ್ಯೆ ಗೌರಿಯವರು ಶೂಟ್ ಆದ ದೃಷ್ಯಾವಳಿಯನ್ನು ಕಾರಾಗೃಹದಲ್ಲಿರುವ ಆರೋಪಿಗಳಿಗೆ ತೋರಿಸಿ ಅವರೊಂದಿಗೆ ಸಮಾಲೋಚನೆ ಮಾಡಲು ಆರೋಪಿ ಪರ ವಕೀಲರು ಅವಕಾಶ ಕೋರಿದರು. ನ್ಯಾಯಾಲಯವು ಕೆಲವು ಷರತ್ತುಗಳೊಂದಿಗೆ ಅವರಿಗೆ ಅವಕಾಶ ನೀಡಿತು.

ಈಗಾಗಲೇ ತಿಳಿಸಿದಂತೆ ಪೊಲೀಸ್ ಅಧಿಕಾರಿಗಳ ವಿಶೇಷ ಕೋರಿಕೆಯ ಮೇರೆಗೆ ಕಳೆದ ತಿಂಗಳಿಂದ ಗೌರಿ ಲಂಕೇಶ್ ಹತ್ಯಾ ವಿಚಾರಣೆಯು ಇನ್- ಕ್ಯಾಮೆರಾ – ಗೋಪ್ಯವಾಗಿ ನಡೆಯುತ್ತಿದೆ. ಅಂದರೆ ವಿಚಾರಣೆ ನಡೆಯುವಾಗ ಸಾರ್ವಜನಿಕರಿಗೆ ಮತ್ತು ಪತ್ರಕರ್ತರಿಗೆ ಪ್ರವೇಶವಿರುವುದಿಲ್ಲ.

ಈ ವರದಿಯನ್ನು, ಕೋರ್ಟ್ ವೆಬ್ ಸೈಟಿನಲ್ಲಿರುವ ಸಾಕ್ಷಿಗಳ deposition ಗಳನ್ನೂ ಮತ್ತು ಆರೋಪಿ ಪರ ವಕೀಲರಾದ ಕೃಷ್ಣಮೂರ್ತಿ ಪಿ. ಮತ್ತು ಸರ್ಕಾರಿ ವಕೀಲರಾದ ಬಾಲನ್ ಅವರು ಕೊಟ್ಟ ಮಾಹಿತಿಗಳನ್ನು ಆಧರಿಸಿ ಸಿದ್ಧಪಡಿಸಲಾಗಿದೆ.

  • ಶಿವಸುಂದರ್

ಇದನ್ನೂ ಓದಿ: ‘ನ್ಯಾಯಾಲಯಗಳಲ್ಲಿ ಮುಚ್ಚಿದ ಲಕೋಟೆ ವ್ಯವಹಾರ ಕೊನೆಗೊಳಿಸಿ’: ಸರ್ಕಾರದ ಉನ್ನತ ವಕೀಲರಿಗೆ ಸಿಜೆಐ ಚಾಟಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...