Homeಕರ್ನಾಟಕಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಲೇಖಕರ ಕಡೆಗಣನೆ: ಪರ್ಯಾಯ ಸಮ್ಮೇಳನಕ್ಕೆ ಸಾಹಿತಿಗಳ ಚಿಂತನೆ

ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಲೇಖಕರ ಕಡೆಗಣನೆ: ಪರ್ಯಾಯ ಸಮ್ಮೇಳನಕ್ಕೆ ಸಾಹಿತಿಗಳ ಚಿಂತನೆ

“ಗುರುಗೋವಿಂದ ಭಟ್ಟರ ಮೊಮ್ಮಗ ಎಂದು ಕಸಾಪ ಅಧ್ಯಕ್ಷರು ಹೇಳಿಕೊಳ್ಳುತ್ತಾರೆ. ಶರೀಫರು ಯಾರು? ಗೋವಿಂದ ಭಟ್ಟರು ಯಾರು? ಅಷ್ಟೂ ಗೊತ್ತಾಗಲ್ಲವಾ?”

- Advertisement -
- Advertisement -

ಹಾವೇರಿಯಲ್ಲಿ ಜನವರಿ 6ರಿಂದ 8ರವರೆಗೆ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಲೇಖಕರನ್ನು ಕಡೆಗಣಿಸಲಾಗಿದ್ದು, ಪರ್ಯಾಯ ಸಮ್ಮೇಳನ ನಡೆಸುವ ಚಿಂತನೆಯನ್ನು ಕನ್ನಡದ ಜಾತ್ಯತೀಯ ಮನಸ್ಸುಗಳು ಮಾಡುತ್ತಿವೆ.

ಕನ್ನಡದ ಪ್ರಾತಿನಿಧಿಕ ಸಂಸ್ಥೆ ಎಂದೇ ಕರೆಯಲಾಗುವ ಕನ್ನಡ ಸಾಹಿತ್ಯ ಪರಿಷತ್‌ (ಕಸಾಪ) ಈ ಹಿಂದೆ ಯಾವತ್ತೂ ಈ ರೀತಿಯ ಪ್ರಮಾದವನ್ನು ಮಾಡಿರಲಿಲ್ಲ. ಮಹೇಶ ಜೋಷಿಯವರು ಅಧ್ಯಕ್ಷರಾದ ಮೇಲೆ ವಿವಾದಗಳ ಮೂಲಕ ಸದ್ದು ಮಾಡುತ್ತಿರುವ ಕಸಾಪ, “ಈಗ ಮುಸ್ಲಿಮರನ್ನು ಹೊರಗಿಡುವ ಮಟ್ಟಕ್ಕೆ ತಲುಪಿದೆ” ಎಂದು ಟೀಕೆಗಳು ವ್ಯಕ್ತವಾಗುತ್ತಿವೆ.

“ಆರ್‌ಎಸ್‌ಎಸ್ ಮನಸ್ಥಿತಿ ಇಲ್ಲಿ ಕೆಲಸ ಮಾಡಿದೆ. ಜಾತಿ ದ್ವೇಷ, ಧರ್ಮದ್ವೇಷ ಢಾಳಾಗಿ ಕಾಣುತ್ತಿದೆ” ಎಂಬ ಟೀಕೆಗೆ ಸಮ್ಮೇಳನ ಗುರಿಯಾಗಿದೆ.

ಕನ್ನಡ ಸಾಹಿತ್ಯ ಪರಿಷತ್‌ ಮಾಡಿರುವ ಎಡವಟ್ಟಿನ ಕುರಿತು ಹಿರಿಯ ವಿದ್ವಾಂಸರಾದ ಪ್ರೊ.ಪುರುಷೋತ್ತಮ ಬಿಳಿಮಲೆಯವರು ಫೇಸ್‌ಬು‌ಕ್‌ನಲ್ಲಿ ಪೋಸ್ಟ್ ಮಾಡಿದ್ದು, “ಹಾವೇರಿಯ ಕನ್ನಡ ಸಾಹಿತ್ಯ ಸಮ್ಮೇಳನದಿಂದ ಮುಸ್ಲಿಂ ಲೇಖಕರನ್ನು ಹೊರಗಿಟ್ಟಿರುವುದು ಆಕಸ್ಮಿಕ ಏನೂ ಅಲ್ಲ. ನೆಹರೂ ಅಂಥ ಲೇಖಕರನ್ನೇ ಹೊರಗಿಟ್ಟವರಿವರು. ಈ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ತನ್ನ ನಿಲುವನ್ನು ನೇರವಾಗಿಯೇ ಪ್ರಕಟಿಸಬೇಕು” ಎಂದು ಆಗ್ರಹಿಸಿದ್ದಾರೆ. ಜೊತೆಗೆ “ಕೆಲವರನ್ನು ಕರೆದಿದ್ದು ಅವರು ಬರುವುದಿಲ್ಲ ಎಂದೂ ಹೇಳಿರಬಹುದು” ಎಂಬ ಮಾತನ್ನೂ ಸೇರಿಸಿದ್ದಾರೆ.

“ಆಧುನಿಕ ಕನ್ನಡ ಸಾಹಿತ್ಯದಲ್ಲಿ ಶಿಶುನಾಳ ಷರೀಫರೇ ನಮಗೆ ಸಿಗುವ ಮೊದಲ ಮಹತ್ವದ ಕವಿ. ಆನಂತರ ಕೆ.ಎಸ್‌.ನಿಸಾರ್‌ ಅಹಮದ್‌, ಬೊಳುವಾರು ಮಹಮ್ಮದ್‌ ಕುಞಿ, ಸಾರಾ ಅಬೂಬಕರ್,‌ ಹಸನ್ ನಯೀಂ ಸುರಕೋಡ, ರಹಮತ್‌ ತರೀಕರೆ ಮೊದಲಾದವರು ಕನ್ನಡದ ಸುಪ್ರಸಿದ್ಧ ಲೇಖಕರು. ಬೊಳುವಾರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬೇಕಿತ್ತು. ಅವರಿಗೆ ಜ್ಞಾನಪೀಠ ಪ್ರಶಸ್ತಿಯೂ ಬರಬೇಕು. ದಾದಾಪೀರ್‌ ಜೈನ್ ಅವರಿಗೆ ಈ ಸಲದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಸಬೀಹಾ ಭೂಮಿ ಗೌಡರು ಲೇಖಕಿಯಾಗಿ ಪ್ರಸಿದ್ಧರು” ಎಂದು ಕಸಾಪಕ್ಕೆ ನೆನಪಿಸಿದ್ದಾರೆ.

“ಒಂದಾದರೂ ಪುಸ್ತಕ ಪ್ರಕಟಿಸಿದ ಮುಸ್ಲಿಂ ಲೇಖಕರು ಬಹಳ ಜನ ಇದ್ದಾರೆ. ಬಹುಶಃ ಮುಂದಿನ 10 ವರ್ಷದಲ್ಲಿ ಕನ್ನಡದ ಲೇಖಕರೆಂದರೆ ಮುಸ್ಲಿಮರೇ ಆಗಿರುತ್ತಾರೆ. ಅವರಲ್ಲಿ ನನಗೆ ಕೂಡಲೇ ನೆನಪಿಗೆ ಬರುವವರೆಂದರೆ, ಆರಿಫ್‌ ರಾಜಾ, ಎ.ಕೆ.ಕುಕ್ಕಿಲ, ಬಿ.ಎಂ.ಬಷೀರ್, ಇಸ್ಮಾಯಿಲ್ , ಮಹಮ್ಮದ್‌ ಕುಳಾಯಿ, ಗಂಗಾವತಿ ಸಲೀಮಾ, ಅಬ್ಬುಸ್ಸಲಾಮ್ ಪುತ್ತಿಗೆ, ಇಬ್ರಾಹಿಂ ಸಯೀದ್ ಸಾಬ್, ಸಲಾಂ ಸಮ್ಮಿ, ಬಾನು ಮುಷ್ತಾಕ್, ಫಾತಿಮಾ ರಲಿಯಾ, ಕೆ.ಷರೀಫಾ, ಡಿ.ಬಿ.ರಜಿಯಾ, ಜಹಾನ್ ಆರಾ, ಎ.ಎಸ್.ಮಕಾನದಾರ , ಬಿ.ಪೀರ್ ಭಾಷಾ, ಅಜಮೀರ ನಂದಾಪುರ, ದಸ್ತಗೀರ್ ದಿನ್ನಿ, ಇಮಾಮ್ ಹಡಗಲಿ, ಮುಸ್ತಾಫಾ, ಡಾ.ಮಕ್ತೂಂಬಿ ಮುಲ್ಲಾ, ಶಿ ಜು ಪಾಶಾ, ಮೆಹಬೂಬ್ಬಿ ಶೇಖ್ , ಸಿರಾಜ್ ಬಿಸರಳ್ಳಿ, ನಜ್ಮಾ ನಜೀರ್ ಚಿಕ್ಕನೇರಳೆ, ಮುನವ್ವರ್ ಜೋಗಿಬೆಟ್ಟು, ಬಿ.ಎಂ.ಹನೀಫ್‌, ಮೆಹಬೂಬಭಾಷಾ ಮಕಾನದಾರ, ಬಾಬು ಮನಸೇ, ಹಕೀಂ ಪದಡ್ಕ, ಹಸನ್ಮುಖಿ ಬಡಗನ್ನೂರು, ಆಸೀಫಾ, ನೂರಜಾನ್, ಸಕೀನಾ ಬೇಗಂ, ಸುನೈಫ್ ವಿಟ್ಲ, ಇಮಾಮ್ ಹಡಗಲಿ, ಅಮೀರಸಾಬ ವಂಟಿ, ಉಮರ್ ದೇವರಮನಿ, ಅಮೀನ್ ಅತ್ತಾರ್, ಸಯ್ಯದ್ ಸಿಕಂದರ್ ಮೀರ್ ಅಲಿ, ಚಾಂದ್ ಕವಿಚಂದ್ರ, ಕಾ ಹು ಚಾನಪಾಶಾ, ಸೈಫ್ ಜಾನ್ಸೆ, ರಾಜೇಸಾಬ ಬಾಗವಾನ್, ಶರೀಫ್ ಹಸಮಕಲ್, ಆಶಿಖ್ ಮುಲ್ಕಿ , ಇಮಾಮ್ ಗೋಡೆಕಾರ, ಸಿಹಾನಾ ಎಂ ಬಿ ಮೊದಲಾದವರು” ಎಂದು ಪಟ್ಟಿ ಮಾಡಿದ್ದಾರೆ.

ಮತ್ತೊಂದು ಪೋಸ್ಟ್ ಮಾಡಿರುವ ಅವರು, “ಪರ್ಯಾಯ ಸಮ್ಮೇಳನ ಇವತ್ತಿನ ತುರ್ತು. ದಾವಣಗೆರೆ ಅಥವಾ ಬೆಂಗಳೂರು ಅನುಕೂಲ. ಕೋಲಾರ, ಮೈಸೂರು, ಶಿವಮೊಗ್ಗವೂ ಆದೀತು. ಹಿರಿಯ ಸಾಹಿತಿಗಳಾದ ದೇವನೂರ ಮಹಾದೇವ, ಪ್ರೊ.ಬರಗೂರು ರಾಮಚಂದ್ರಪ್ಪ ಬರಬೇಕು. ಪ್ರೊ.ರಾಜೇಂದ್ರ ಚೆನ್ನಿ, ಅರುಣ್‌ ಜೋಳದಕೂಡ್ಲಿಗಿ, ಬಿ.ಎಂ.ಹನೀಫ್‌ ಮೊದಲಾದವರು ಬರುತ್ತಾರೆ. ಅವರವರದೇ ಖರ್ಚು. ಸಭಾಂಗಣ, ಮಧ್ಯಾಹ್ನ ಊಟ, ಧ್ವನಿವರ್ಧಕ, ಚಹಾ ಇತ್ಯಾದಿಗಳಿಗೆ ಕ್ರೌಡ್‌ ಫಂಡಿಂಗ್‌ ಮಾಡೋಣ. ನಾನು ನನ್ನ ಖರ್ಚಲ್ಲಿ ಬರುತ್ತೇನೆ. ಸತ್ಯನಾರಾಯಣ ಪೂಜೆಗೆ ಸುದ್ದಿ ಕೇಳಿಯೇ ಹೋಗಬೇಕಂತೆ. ಇದೂ ಹಾಗೆಯೇ ಆಗಲಿ. ಸಮ್ಮೇಳನದಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ. ಯಾವುದೂ ಯಃಕಶ್ಚಿತವೂ ಅಲ್ಲ. ಯಾರಾದರೂ ಸಮರ್ಥ ನಾಯಕತ್ವ ಕೊಡಿ” ಎಂದು ಕೋರಿದ್ದಾರೆ.

ಬಿಳಿಮಲೆಯವರ ಪೋಸ್ಟ್‌ಗೆ ಹತ್ತಾರು ಲೇಖಕರು ಪ್ರತಿಕ್ರಿಯೆ ನೀಡಿದ್ದು, ಪರ್ಯಾಯ ಸಮ್ಮೇಳನಕ್ಕೆ ಬೆಂಬಲ ನೀಡುತ್ತಿದ್ದಾರೆ.

ಹಿರಿಯ ಪತ್ರಕರ್ತರು ಹಾಗೂ ಲೇಖಕರಾದ ಬಿ.ಎಂ.ಹನೀಫ್ ಅವರು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿ, “ಹಾವೇರಿಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಸುಮಾರು 80 ಮಂದಿ ಸಾಧಕರಿಗೆ ಸನ್ಮಾನ ಆಗುತ್ತಿದೆ. ಪ್ರತಿಸಲವು ಸನ್ಮಾನ ಮಾಡುವಾಗ ರಾಜ್ಯದ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಈ ವೇದಿಕೆಯಲ್ಲಿ ಗೌರವಿಸಲಾಗುತ್ತಿತ್ತು. ಕರ್ನಾಟಕದಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಸಾಧಕರು ಇವರಿಗೆ ಸಿಗಲಿಲ್ಲವೆಂದರೆ ಇವರು ಸ್ಪಷ್ಟವಾಗಿ ಕಮ್ಯುನಲ್‌ ಆಗಿದ್ದಾರೆ ಎಂದರ್ಥ. ಅಪ್ರಜ್ಞಾಪೂರ್ವಕವಾಗಿ ಮುಸ್ಲಿಮರ ಹೆಸರು ಬಿಟ್ಟು ಹೋಗಿರಲು ಸಾಧ್ಯವಿಲ್ಲ. ಶಿಕ್ಷಣ, ಸಹಕಾರಿ ಕ್ಷೇತ್ರ, ಪತ್ರಿಕೋದ್ಯಮ, ಸಾಹಿತ್ಯ ಮೊದಲಾದ ಕ್ಷೇತ್ರಗಳಲ್ಲಿ ಸಾಧನೆಗೈದ ಮುಸ್ಲಿಮರಿದ್ದಾರೆ” ಎಂದು ವಿವರಿಸಿದರು.

“ಕಾವ್ಯಕ್ಷೇತ್ರದಲ್ಲಿ ಬಹುಮುಖ್ಯವಾಗಿ ಹೆಸರು ಮಾಡಿದವರನ್ನು ಪ್ರಧಾನ ಕವಿಗೋಷ್ಠಿಯಲ್ಲಿ ಗುರುತಿಸಲಾಗುತ್ತದೆ. 25 ಮಂದಿ ಕವಿಗಳಲ್ಲಿ ಒಬ್ಬರೇ ಒಬ್ಬರು ಮುಸ್ಲಿಮರಿಲ್ಲ. ಬೇರೆ ಕವಿಗೋಷ್ಠಿಗಳಲ್ಲಿ ಹೆಸರಿಗೆ ನಾಲ್ಕು ಮುಸ್ಲಿಮರನ್ನು ಹಾಕಿಕೊಂಡಿದ್ದಾರೆ. ಹಾಗೆ ಆಯ್ಕೆಯಾದವರು ಅನರ್ಹರೇನಲ್ಲ. ಇತ್ತೀಚೆಗೆ ಬರೆಯುತ್ತಿರುವ ಪ್ರತಿಭಾವಂತರೇ ಆಗಿದ್ದಾರೆ. ಆದರೆ ಪ್ರಧಾನ ವೇದಿಕೆಯಲ್ಲಿ ನಡೆಯುವ ಕವಿಗೋಷ್ಠಿಗೆ ಯಾವ ಮುಸ್ಲಿಮರೂ ಸಿಗಲಿಲ್ಲವೇ? ಪ್ರಧಾನ ವೇದಿಕೆಯಲ್ಲಿ ನಡೆಯುವ 9 ವಿಚಾರಗೋಷ್ಠಿಗಳಲ್ಲಿ ಸುಮಾರು 34 ಮಂದಿ ಮಾತನಾಡುತ್ತಾರೆ. ಇದರಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಇಲ್ಲ” ಎಂದು ವಿಷಾದಿಸಿದರು.

“ಮುಸ್ಲಿಂ ಎಂದು ಹೇಳಿದ ತಕ್ಷಣ- ತಮ್ಮ ಜಾತಿಯವರ ಬಗ್ಗೆ ಇವರು ಹೇಳುತ್ತಿದ್ದಾನೆಂದು ಕೆಲವರು ಆರೋಪಿಸಬಹುದು. ಆದರೆ ಕನ್ನಡ ಸಾಹಿತ್ಯ ಪರಿಷತ್ ಎಂದಿಗೂ ಕಮ್ಯುನಲ್ ಆಗಿ ವರ್ತಿಸಿಲ್ಲ. ಈ ರೀತಿಯ ತಾರತಮ್ಯ ಎಂದೂ ಆಗಿರಲಿಲ್ಲ. ದಲಿತರು, ಮಹಿಳೆಯರು, ಮುಸ್ಲಿಮರು- ಹೀಗೆ ಎಲ್ಲರಿಗೂ ಪ್ರಾತಿನಿಧ್ಯವನ್ನು ನೀಡಲಾಗುತ್ತಿತ್ತು” ಎಂದು ಸ್ಮರಿಸಿದರು.

“ಹಿರಿಯರ ಸ್ಮರಣೆ ಗೋಷ್ಠಿಗೆ ನಿಸಾರ್‌ ಅಹಮ್ಮದ್ ಅವರ ಹೆಸರು ನೆನಪಾಗಲಿಲ್ಲವಾ? ಕರ್ನಾಟಕ ಪ್ರಾದೇಶಿಕ ವೈವಿಧ್ಯತೆ ಎಂಬ ಗೋಷ್ಠಿ ಇದೆ. ಪ್ರಾದೇಶಿಕ ವೈವಿಧ್ಯತೆ ಎಂದು ತುಳು, ಕೊಂಕಣಿ, ಕೊಡವ, ಅರೆಭಾಷೆಗಳನ್ನು ಗುರುತಿಸಲಾಗಿದೆ. ಆದರೆ ಬ್ಯಾರಿ ಭಾಷೆಯನ್ನು ಏಕೆ ಬಿಟ್ಟಿದ್ದೀರಿ? ರಾಜ್ಯದಲ್ಲಿ ಹದಿನಾಲ್ಕು ಲಕ್ಷ ಮುಸ್ಲಿಮರು ಬ್ಯಾರಿ ಭಾಷೆ ಮಾತನಾಡುತ್ತಾರೆ. ಕರ್ನಾಟಕ ಸರ್ಕಾರ ಬ್ಯಾರಿ ಅಕಾಡೆಮಿಯನ್ನು ಸ್ಥಾಪಿಸಿದೆ. ಕನ್ನಡ ಸಾಹಿತ್ಯ ಕೃಷಿ ಮಾಡಿರುವ ಮುಸ್ಲಿಂ ಲೇಖಕರನ್ನು ಪಟ್ಟಿ ಮಾಡಿದರೆ ಶೇ. 60ರಷ್ಟು ಲೇಖಕರು ಬ್ಯಾರಿ ಮಾತೃಭಾಷೆಯ ಕನ್ನಡಿಗ ಲೇಖಕರೇ ಇದ್ದಾರೆ. ಇದ್ಯಾವುದನ್ನೂ ಗಮನಿಸದೆ ಸುಮ್ಮನೆ ಬಿಟ್ಟಿದ್ದೀರಿ ಎಂದರೆ ನೀವು ಕನ್ನಡ ಸಾಹಿತ್ಯದ ಬಗ್ಗೆ ಕುರುಡಾಗಿದ್ದೀರಿ ಎಂದರ್ಥ. ನಿಮ್ಮ ಮನಸ್ಸಿನಲ್ಲಿ ಆರ್‌ಎಸ್‌ಎಸ್ ಕೆಲಸ ಮಾಡುತ್ತಿದೆ, ಜಾತಿ ದ್ವೇಷ, ಧರ್ಮ ದ್ವೇಷವನ್ನು ನಿಮ್ಮೊಳಗೆ ತುಂಬಿಕೊಂಡಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಕಸಾಪ ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಇಂದು ಉಳಿಯಲಿಲ್ಲ. ಕಸಾಪ ಅಧ್ಯಕ್ಷರಿಗೆ ಇದು ತಿಳಿಯಲಿಲ್ಲವಾ? ಕಸಾಪ ಅಧ್ಯಕ್ಷರು ಕನ್ನಡದ ಬಗ್ಗೆ ಕಂಠಶೋಷಣೆ ಮಾಡಿಕೊಳ್ಳುತ್ತಾರೆ. ಗುರುಗೋವಿಂದ ಭಟ್ಟರ ಮೊಮ್ಮಗ ಎಂದು ಹೇಳಿಕೊಳ್ಳುತ್ತಾರೆ. ಶಿಶುನಾಳ ಶರೀಫರ ಪದ ಹಾಡಿಕೊಂಡು ತಿರುತ್ತಾರೆ. ಶರೀಫರು ಯಾರು? ಗುರು ಗೋವಿಂದ ಭಟ್ಟರು ಯಾರು? ಅಷ್ಟೂ ಗೊತ್ತಾಗಲ್ಲವಾ?” ಎಂದು ಕೇಳಿದರು.

“ಮುಸ್ಲಿಮರಷ್ಟೇ ಅಲ್ಲ. ದಲಿತರು ಎಷ್ಟು ಮಂದಿ ಇದ್ದಾರೆ? ಮಹಿಳೆಯರಿಗೆ ಎಷ್ಟು ಸ್ಥಾನಮಾನ ನೀಡಿದ್ದೀರಿ? ಸ್ವಾಗತ, ವಂದನಾರ್ಪಣೆ, ನಿರೂಪಣೆ ಮಾಡೋದಷ್ಟೇ ಮಹಿಳೆಯರ ಕೆಲಸವಾ?” ಎಂದು ಪ್ರಶ್ನಿಸಿದರು.

ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಹೇಶ ಜೋಶಿಯವರ ಪ್ರತಿಕ್ರಿಯೆ ಪಡೆಯಲು ಮೂರ್ನಾಲ್ಕು ಬಾರಿ ಕರೆ ಮಾಡಲಾಯಿತು. ಅವರು ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...