Homeಅಂತರಾಷ್ಟ್ರೀಯದೇಶದಲ್ಲಿ ಯುವತಿಯರ ಮದುವೆಯ ವಯಸ್ಸು 21 ಕ್ಕೆ ಏರಿಕೆ: ಇತರ ದೇಶಗಳಲ್ಲಿ ಮದುವೆ ವಯಸ್ಸು ಹೇಗಿದೆ?

ದೇಶದಲ್ಲಿ ಯುವತಿಯರ ಮದುವೆಯ ವಯಸ್ಸು 21 ಕ್ಕೆ ಏರಿಕೆ: ಇತರ ದೇಶಗಳಲ್ಲಿ ಮದುವೆ ವಯಸ್ಸು ಹೇಗಿದೆ?

- Advertisement -
- Advertisement -

ದೇಶದಲ್ಲಿ ಯುವತಿಯರ ಮದುವೆಯ ವಯಸ್ಸನ್ನು 18ರಿಂದ 21ಕ್ಕೆ ಏರಿಸಲಾಗಿದ್ದು, ಈ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಯುವತಿಯರ ವಿವಾಹ ವಯಸ್ಸನ್ನು ಕನಿಷ್ಠ 18 ರಿಂದ 21ಕ್ಕೆ ಏರಿಸುವ ಯೋಜನೆ ಪರಿಶೀಲನೆಯಲ್ಲಿದೆ ಎಂದು ಹೇಳಿದ್ದರು.

ಈ ಪ್ರಸ್ತಾಪವನ್ನು ಜಯಾ ಜೇಟ್ಲಿ ನೇತೃತ್ವದ ನೀತಿ ಆಯೋಗದ ಕಾರ್ಯಪಡೆಯು ಬೆಂಬಲಿಸಿದ್ದು, ಸರ್ಕಾರದ ಉನ್ನತ ತಜ್ಞ ವಿಕೆ ಪಾಲ್, ಆರೋಗ್ಯ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಕಾನೂನು ಸಚಿವಾಲಯದ ಹಿರಿಯ ಅಧಿಕಾರಿಗಳು ಕಳೆದ ವರ್ಷ ಜೂನ್‌ನಲ್ಲಿ ರಚಿಸಲಾದ ಕಾರ್ಯಪಡೆಯ ಸದಸ್ಯರಾಗಿದ್ದರು.

ಮೊದಲ ಗರ್ಭಧಾರಣೆಯ ಸಮಯದಲ್ಲಿ ಯುವತಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು ಎಂದು ಟಾಸ್ಕ್ ಫೋರ್ಸ್ ಒತ್ತಿ ಹೇಳಿದ್ದರಿಂದ ಡಿಸೆಂಬರ್‌ನಲ್ಲಿ ಪ್ರಸ್ತಾವನೆಯ ಶಿಫಾರಸುಗಳನ್ನು ಸಲ್ಲಿಸಲಾಗಿತ್ತು. ಈಗ ಇದಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಇದೇ ವೇಳೆ ವಿಶ್ವದ ಕೆಲವು ರಾಷ್ಟ್ರಗಳಲ್ಲಿ ಇರುವ ಮದುವೆ ವಯಸ್ಸಿನ ಮಿತಿ ಹೀಗಿದೆ.

ಇದನ್ನೂ ಓದಿ: ಸಿನೆಮಾದ ಮೂಲಕ ಜಾತಿ ಮುಕ್ತ ಸಮಾಜ ಕಟ್ಟಲೊರಟ ಅಂಬೇಡ್ಕರ್‌ವಾದಿ ನಿರ್ದೇಶಕ ಪ.ರಂಜಿತ್‌…!

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ

ಇಲ್ಲಿ ಒಂದೊಂದು ರಾಜ್ಯದಲ್ಲೂ ಒಂದೊಂದು ನೀತಿಯಿದೆ. ಸಾಮಾನ್ಯವಾಗಿ 18 ವರ್ಷದ ಮೇಲ್ಪಟ್ಟವರು ಮದುವೆಯಾಗಲು ಅಡ್ಡಿಯಿಲ್ಲ. ಆದರೆ, ನೆಬ್ರಾಸ್ಕಾದಲ್ಲಿ 19 ವರ್ಷ, ಮಿಸಿಸಿಪ್ಪಿ (Mississippi) ಯಲ್ಲಿ 21 ವರ್ಷ ವಯಸ್ಸಿನ ಮಿತಿಯಿದೆ.

ಕೆನಡಾ

ಕೆನಡಾದಲ್ಲಿ ಪೋಷಕರ ಒಪ್ಪಿಗೆಯೊಂದಿಗೆ 16 ವರ್ಷಕ್ಕೆ ಮತ್ತು ಯಾರ ಒಪ್ಪಿಗೆ ಇಲ್ಲದೆ ಸ್ವಯಂ ನಿರ್ಧಾರ ತೆಗೆದುಕೊಂಡರೆ 18/19 ವರ್ಷಕ್ಕೆ ಮದುವೆಯಾಗಬಹುದು.

ಜಪಾನ್

ಜಪಾನ್‌ನಲ್ಲಿ 20 ವರ್ಷ ತುಂಬಿದ ಯುವಕ, ಯುವತಿ ಮದುವೆಯಾಗಬಹುದು. ಪೋಷಕರ ಒಪ್ಪಿಗೆಯೊಂದಿಗೆ ಯುವತಿಗೆ 16 ಮತ್ತು ಯುವಕನಿಗೆ 18 ವರ್ಷ ವಾಗಿದ್ದರೆ ಮದುವೆ ಮಾಡಬಹುದಾಗಿದೆ.

ಚೀನಾ

ಚೀನಾ ಯುವಕರ ಮದುವೆ ವಯಸ್ಸನ್ನು 22 ವರ್ಷಕ್ಕೆ ಹೆಚ್ಚಿಸಿರುವ ಏಕೈಕ ದೇಶವಾಗಿದೆ. ಇಲ್ಲಿ ಯುವಕರಿಗೆ 22 ವರ್ಷ ಯುವತಿಯರಿಗೆ 20 ವರ್ಷ ವಯಸ್ಸು ಆಗಿರಬೇಕು.

ಫ್ರಾನ್ಸ್

ಫ್ರಾನ್ಸ್‌ನಲ್ಲಿ ಮದುವೆಯಾಗಲು ಯುವಕ ಯುವತಿ ಇಬ್ಬರಿಗೂ 18 ವರ್ಷವಾಗಿರಬೇಕು.

ರಷ್ಯಾ

ರಷ್ಯಾದಲ್ಲಿ ಮದುವೆಯ ವಯಸ್ಸು 18 ವರ್ಷವಾಗಿದೆ. ಆದರೆ, ಗರ್ಭಧಾರಣೆಯಂತಹ ಸನ್ನಿವೇಶದಲ್ಲಿ ಕಾನೂನಿನ ಒಪ್ಪಿಗೆಯೊಂದಿಗೆ 16 ವರ್ಷಕ್ಕೆ ಮದುವೆಯಾಗಬಹುದು.

ಬ್ರಿಟನ್

ಬ್ರಿಟನ್‌ನಲ್ಲಿ ಮದುವೆಯ ವಯಸ್ಸು 18 ವರ್ಷವಾಗಿದೆ. ಆದರೆ, ಸ್ಕಾಟ್‌ಲ್ಯಾಂಡ್‌ನಲ್ಲಿ ಮಾತ್ರ 16ನೇ ವಯಸ್ಸಿಗೆ ಮದುಯಾಗಬಹುದು. ಪೋಷಕರು ಮತ್ತು ಕಾನೂನಿನ ಒಪ್ಪಿಗೆಯೊಂದಿಗೆ 16ನೇ ವಯಸ್ಸಿನಲ್ಲಿ ಮದುವೆ ಮಾಡಬಹುದು.

ಪಾಕಿಸ್ತಾನ

ಇಲ್ಲಿ ಯುವಕನಿಗೆ 18 ವರ್ಷವಾಗಿರಬೇಕು. ಯುವತಿಗೆ 16 ವರ್ಷ ಆದರೆ, ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯಗಳಲ್ಲಿ ಕೆಲವೊಮ್ಮೆ 18 ವರ್ಷಕ್ಕೆ ಅನುಮತಿ ನೀಡಲಾಗಿದೆ.

ಅಫ್ಘಾನಿಸ್ತಾನ

ಇಲ್ಲಿ ಯುವಕರಿಗೆ 18 ವರ್ಷ. ಯುವತಿಗೆ 16 ವರ್ಷ. ಪೋಷಕರು ಮತ್ತು ಕಾನೂನಿನ ಒಪ್ಪಿಗೆಯೊಂದಿಗೆ ಯುವಕನಿಗೆ 18, ಯುವತಿಗೆ 15 ವರ್ಷ ವಯಸ್ಸು ನಿಗಧಿ ಮಾಡಲಾಗಿದೆ.

ಬಾಂಗ್ಲಾದೇಶ

ಬಾಂಗ್ಲಾದಲ್ಲಿ ಯುವಕರಿಗೆ 21 ವರ್ಷ ಮತ್ತು ಯುವತಿಯರಿಗೆ 18 ನಿಗಧಿಮಾಡಲಾಗಿದೆ.

ಇರಾನ್

ಇರಾನ್‌ನಲ್ಲಿ ಯುವಕನಿಗೆ 18, ಯುವತಿಗೆ 15 ತುಂಬಿದರೆ ಮದುವೆಯಾಗಬಹುದು. ಪೋಷಕರು ಮತ್ತು ಕಾನೂನಿನ ಒಪ್ಪಿಗೆಯೊಂದಿಗೆ ಯುವಕನಿಗೆ 15 ಮತ್ತು ಯುವತಿಗೆ 13 ವರ್ಷವಾಗಿದ್ದರೆ ಮದುವೆ ಮಾಡಬಹುದು.


ಇದನ್ನೂ ಓದಿ: ಯುವತಿಯರ ವಿವಾಹ ವಯಸ್ಸನ್ನು 18ರಿಂದ 21ಕ್ಕೆ ಏರಿಸುವ ಪ್ರಸ್ತಾಪಕ್ಕೆ ಸಂಪುಟ ಒಪ್ಪಿಗೆ: ವರದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...