Homeಮುಖಪುಟಯುವತಿಯರ ಮದುವೆ ವಯಸ್ಸು ಹೆಚ್ಚಳ: ಮೋದಿ ಸರ್ಕಾರದ ನಿರ್ಧಾರಕ್ಕೆ ಖಾಪ್ ಪಂಚಾಯತ್ ನಾಯಕರ ವಿರೋಧ

ಯುವತಿಯರ ಮದುವೆ ವಯಸ್ಸು ಹೆಚ್ಚಳ: ಮೋದಿ ಸರ್ಕಾರದ ನಿರ್ಧಾರಕ್ಕೆ ಖಾಪ್ ಪಂಚಾಯತ್ ನಾಯಕರ ವಿರೋಧ

- Advertisement -
- Advertisement -

ದೇಶದಲ್ಲಿ ಯುವತಿಯರ ವಿವಾಹದ ಕಾನೂನುಬದ್ಧ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಹೆಚ್ಚಿಸುವ ಒಕ್ಕೂಟ ಸರ್ಕಾರದ ನಿರ್ಧಾರವನ್ನು ಉತ್ತರ ಪ್ರದೇಶದ ಕೆಲವು ಖಾಪ್ ಪಂಚಾಯತ್‌ನ ನಾಯಕರು ವಿರೋಧಿಸಿದ್ದಾರೆ.

ಈ ರೀತಿ ವಯಸ್ಸು ಹೆಚ್ಚಿಸಿರುವುದರಿಂದ ಸಮಾಜದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಜೊತೆಗೆ ಮಹಿಳೆಯರ ಮೇಲೆ ನಡೆಯುವ ಅಪರಾಧಗಳು ಹೆಚ್ಚಾಗಲು ಕಾರಣವಾಗುತ್ತದೆ ಎಂದು ವಾದಿಸಿದ್ದಾರೆ.

ಯುವತಿಯರ ವಿವಾಹದ ಕಾನೂನುಬದ್ಧ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಇದು ಜಾರಿಯಾದರೆ ದೇಶದಲ್ಲಿ ಯುವತಿ ಮಯ್ಯು ಯುವಕರ ವಿವಾಹದ ವಯಸ್ಸು ಸರಿಸಮಾನವಾಗುತ್ತದೆ.

ಇದನ್ನೂ ಓದಿ: ದೇಶದಲ್ಲಿ ಯುವತಿಯರ ಮದುವೆಯ ವಯಸ್ಸು 21 ಕ್ಕೆ ಏರಿಕೆ: ಇತರ ದೇಶಗಳಲ್ಲಿ ಮದುವೆ ವಯಸ್ಸು ಹೇಗಿದೆ…?

ಕಲ್ಖಂಡೇಯ ಖಾಪ್ ಮುಖ್ಯಸ್ಥ ಚೌಧರಿ ಸಂಜಯ್ ಕಲ್ಖಂಡೆ ಮಾತನಾಡಿ, ಮಹಿಳೆಯರ ಮದುವೆಯ ವಯಸ್ಸನ್ನು ಹೆಚ್ಚಿಸುವ ನಿರ್ಧಾರವು ಸಮಾಜದ ಮೇಲೆ “ವ್ಯತಿರಿಕ್ತ ಪರಿಣಾಮ” ಬೀರುತ್ತದೆ ಎಂದಿದ್ದಾರೆ.

ಯುವಜನತೆ ಇಂದು ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿದ್ದು, ಇಂದಿನ 14 ವರ್ಷ ವಯಸ್ಸಿನ ಹೆಣ್ಣುಮಕ್ಕಳು ಕೂಡ ಮದುವೆಯಾಗುವಷ್ಟು ಪ್ರಬುದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.

ಇದೇ ರೀತಿ, ಗತ್ವಾಲಾ ಖಾಪ್ ಮುಖ್ಯಸ್ಥ ಬಾಬಾ ಶ್ಯಾಮ್ ಸಿಂಗ್ ಮಾತನಾಡಿ, ಕನಿಷ್ಠ ವಯೋಮಿತಿಯನ್ನು ಹೆಚ್ಚಿಸುವ ನಿರ್ಧಾರವು ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದಿದ್ದಾರೆ.

ದೇಶದಲ್ಲಿ ಯುವತಿಯರ ಮದುವೆಯ ವಯಸ್ಸನ್ನು 18ರಿಂದ 21ಕ್ಕೆ ಏರಿಸಲಾಗಿದ್ದು, ಈ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಈ ಪ್ರಸ್ತಾಪವನ್ನು ಜಯಾ ಜೇಟ್ಲಿ ನೇತೃತ್ವದ ನೀತಿ ಆಯೋಗದ ಕಾರ್ಯಪಡೆಯು ಬೆಂಬಲಿಸಿದ್ದು, ಸರ್ಕಾರದ ಉನ್ನತ ತಜ್ಞ ವಿಕೆ ಪಾಲ್, ಆರೋಗ್ಯ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಕಾನೂನು ಸಚಿವಾಲಯದ ಹಿರಿಯ ಅಧಿಕಾರಿಗಳು ಕಳೆದ ವರ್ಷ ಜೂನ್‌ನಲ್ಲಿ ರಚಿಸಲಾದ ಕಾರ್ಯಪಡೆಯ ಸದಸ್ಯರಾಗಿದ್ದರು.


ಇದನ್ನೂ ಓದಿ: ಅತ್ಯಾಚಾರದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಕ್ಷಮೆ ಕೇಳಿದ ಮಾಜಿ ಸ್ಪೀಕರ್‌ ರಮೇಶ್ ಕುಮಾರ್‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...