Homeಕರ್ನಾಟಕಮಸ್ಕಿ: ಒಂದು ಕಡೆ ಜೆಡಿಎಸ್ ಶಾಸಕ ವೆಂಕಟಪ್ಪ ನಾಯಕ್, ಇನ್ನೊಂದು ಕಡೆ ಅದೇ ಪಾರ್ಟಿ MLA...

ಮಸ್ಕಿ: ಒಂದು ಕಡೆ ಜೆಡಿಎಸ್ ಶಾಸಕ ವೆಂಕಟಪ್ಪ ನಾಯಕ್, ಇನ್ನೊಂದು ಕಡೆ ಅದೇ ಪಾರ್ಟಿ MLA ನಾಡಗೌಡ: ಮಧ್ಯದಲ್ಲಿ ಜೆಡಿಎಸ್ ಕ್ಯಾಂಡಿಡೇಟೇ ಇಲ್ಲ!

ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಿಂಧನೂರು ಐಬಿಯಲ್ಲಿ ವಿಶೇಷವಾಗಿ ಭೇಟಿ ಮಾಡಿದ ಸಿಂಧನೂರು ಶಾಸಕ ನಾಡಗೌಡರು ಮರುದಿನವೇ, ಮಸ್ಕಿಯಲ್ಲಿ ಕ್ಯಾಂಡಿಡೇಟ್ ಹಾಕಲ್ಲ ಎಂದಿದ್ದರು.

- Advertisement -
- Advertisement -

ಸಂಪನ್ಮೂಲದ ಅಭಾವ ಎನ್ನುತ್ತಿರುವ ಜೆಡಿಎಸ್ ಪಕ್ಷ ಬಸವಕಲ್ಯಾಣದಲ್ಲಿ ಮುಸ್ಲಿಂ ಕ್ಯಾಂಡಿಡೇಟ್ ಹಾಕಿದೆ. ಆದರೆ ಅಕ್ಕ ಪಕ್ಕದಲ್ಲೇ ಇಬ್ಬರು ಎಂಎಲ್‌ಎ ಇದ್ದರೂ ಮಸ್ಕಿ ಉಪಚುನಾವಣೆಗೆ ಅಭ್ಯರ್ಥಿ ಹಾಕಿಲ್ಲ.

ಈಗ ರಾಯಚೂರು ಜಿಲ್ಲೆಯ ಮಸ್ಕಿಗೆ ಉಪ ಚುನಾವಣೆ ನಡೀತಾ ಇದೆ. ವಿಶೇಷ ಅಂದರೆ ಇಲ್ಲಿ ಕಳೆದ ಸಲದ ಕಾಂಗ್ರೆಸ್ ಅಭ್ಯರ್ಥಿ ಈಗ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ, ಕಳೆದ ಸಲದ ಬಿಜೆಪಿಯ ಕ್ಯಾಂಡಿಡೇಟ್ ಈ ಸಲ ಕಾಂಗ್ರೆಸ್ ಕ್ಯಾಂಡಿಡೇಟ್. ಇವುಗಳ ನಡುವೆ ಜೆಡಿಎಸ್ ಇಲ್ಲಿ ಬೆಳೆಯುವ ಅಪೂರ್ವ ಅವಕಾಶವನ್ನು ಕೈ ಚೆಲ್ಲಿತೆ..?

ಉಪ ಚುನಾವಣೆಯಲ್ಲಿ ಕ್ಯಾಂಡಿಡೇಟ್ ಹಾಕಲ್ಲ ಅಂತ ದೇವೇಗೌಡರು ಹೇಳಿದರು. ಕುಮಾರಸ್ವಾಮಿ ಕೂಡ ಅದನ್ನೆ ಹೇಳಿದ್ದರು. ಆದರೆ, ಭೂಕಾಯ್ದೆ ಪರ ಮತ್ತು ಸ್ಪೀಕರ್ ವಿಷಯದಲ್ಲಿ ಜೆಡಿಎಸ್ ನಿಲುವನ್ನು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡು, ಜೆಡಿಎಸ್ ಬಿಜೆಪಿ ಪರ ನಿಲ್ತಾ ಇದೆ ಎಂದ ಕೂಡಲೇ ಎಚ್ಚೆತ್ತುಕೊಂಡ ಕುಮಾರಸ್ವಾಮಿ, ಉಪ ಚಹುನಾವಣೆಗಳಲ್ಲಿ ಎಲ್ಲ ಕಡೆ ಕ್ಯಾಂಡಿಡೇಟ್ ಹಾಕುವುದಾಗಿ ಹೇಳಿದ್ದರು.

ಆದರೆ ಈಗ ಸಂಪನ್ಮೂಲದ ಕೊರತೆಯ ಕಾರಣದಿಂದ ಅವರು ಎಲ್ಲ ಕಡೆ ಅಭ್ಯರ್ಥಿ ಹಾಕಿಲ್ಲ! 3 ಉಪ ಚುನಾವಣೆ ಪೈಕಿ ಬಸವಕಲ್ಯಾಣದಲ್ಲಿ ಮುಸ್ಲಿಂ ಅಭ್ಯರ್ಥಿ ಹಾಕಲು ಅವರಿಗೆ ಸಂಪನ್ಮೂಲದ ಕೊರತೆ ಕಾಣಲಿಲ್ಲವೇ ಎಂಬ ಪ್ರಶ್ನೆ ಎದುರಾಗಿದೆ.

ಇದನ್ನೂ ಓದಿ: ಮಸ್ಕಿ ಉಪಚುನಾವಣೆ| ಅಭ್ಯರ್ಥಿಗಳು ಅದಲು-ಬದಲು: ಮೀಸಲು ಕ್ಷೇತ್ರದಲ್ಲಿ ‘ಗೌಡರ’ ಸ್ಪರ್ಧೆ!

ಆದರೆ ಒಳ್ಳೇ ಫೈಟ್ ಕೊಡುವ ಸಾಧ್ಯತೆಯಿದ್ದ ಮಸ್ಕಿಯಲ್ಲಿ ಜೆಡಿಎಸ್ ಕ್ಯಾಂಡಿಡೇಟ್ ಹಾಕಿಲ್ಲ. ಸಂಪನ್ಮೂಲದ ಕೊರತೆಯೇ? ಸಂಪನ್ಮೂಲ ಅಂದರೆ ಏನು? ಅದು ನೂರಾರು ಕೋಟಿ ರೊಕ್ಕವೇ? ಅಥವಾ ಅಲ್ಲಿರುವ ಮತದಾರರರೇ? ಈ ನಿಟ್ಟಿನಲ್ಲಿ ಯೋಚಿಸಿದಾಗ ಒಕ್ಕಲಿಗರ ಪಾರ್ಟಿ ಎಂಬ ಹಣೆಪಟ್ಟಿ ಅಚಿಟಿಸಿಕೊಂಡಿರುವ ಜೆಡಿಎಸ್‌ಗೆ ಹೈದರಾಬಾದ್ ಕರ್ನಾಟಕದಲ್ಲಿ ನೆಲೆ ವಿಸ್ತರಿಸುವ ಸಾಕಷ್ಟು ಸಾಧ್ಯತೆ ಇವೆ. ಇಲ್ಲಿ ಇನ್ನೂ ಜನತಾ ಪರಿವಾರದ ಬೇರುಗಳಿವೆ.

ಇನ್ನು ಮಸ್ಕಿಗೇ ಬರೋಣ. ಮಸ್ಕಿಗೆ ಅಂಟಿಕೊಂಡ ಸಿಂಧನೂರಲ್ಲಿ ಜೆಡಿಎಸ್‌ನಿಂದ ವೆಂಕಟರಾವ್ ನಾಡಗೌಡ ಶಾಸಕರು, ಇನ್ನೊಂದು ಕಡೆ ಮಸ್ಕಿಗೆ ಅಂಟಿಕೊಂಡ ರಾಯಚೂರು ಜಿಲ್ಲೆಯ ಮಾನ್ವಿ ಕ್ಷೇತ್ರದಲ್ಲಿ ರಾಜಾ ವೆಂಕಟಪ್ಪ ನಾಯಕ್ ಜೆಡಿಎಸ್‌ನ ಶಾಸಕರು. ಜೆಡಿಎಸ್‌ಗೆ ಇದಕ್ಕಿಂತ ಸಂಪನ್ಮೂಲ ಬೇಕಿತ್ತೆ..? ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾದ ಮಸ್ಕಿಯಲ್ಲಿ ನಾಯಕರು ಮತ್ತು ಲಿಂಗಾಯತರ ಮತಗಳು ನಿರ್ಣಾಯಕ. ಸಿಂಧನೂರಿನ ಎಂಎಲ್‌ಎ ಲಿಂಗಾಯತ, ಮಾನ್ವಿಯ ಎಂಎಲ್‌ಎ ನಾಯಕ ಜನಾಂಗದವರು. ಇದು ಸಂಪನ್ಮೂಲ ಅಲ್ಲವೇ..? ಎಂಬ ಪ್ರಶ್ನೆಗಳು ಮೂಡಿವೆ.

ಮಸ್ಕಿಗೆ ಅಂಟಿಕೊಂಡ ಲಿಂಗಸೂಗುರು ಕ್ಷೇತ್ರದಲ್ಲೂ ಜೆಡಿಎಸ್ ಪ್ರಭಾವ ಇದೆ. 2013 ರಲ್ಲಿ ಮಾನಪ್ಪ ವಜ್ಜಲ ಇಲ್ಲಿಂದ ಜೆಡಿಎಸ್‌ನಿಂದ ಗೆದ್ದಿದ್ದರು. 2018 ರಲ್ಲಿ ಜೆಡಿಎಸ್ ಕೆಲವೇ ಸಾವಿರ ಮತಗಳಲ್ಲಿ ಸೋತು ಎರಡೆನೇ ಸ್ಥಾನದಲ್ಲಿ ಇತ್ತು.

ಅಂದರೆ ಅಂಟಿಕೊಂಡ ಮೂರು ಕ್ಷೇತ್ರಗಳಲ್ಲಿ ಪ್ರಭಾವ ಇದ್ದರೂ ಸಂಪನ್ಮೂಲದ ಕೊರತೆಯಿಂದ ಜೆಡಿಎಸ್ ಇಲ್ಲಿ ಕ್ಯಾಂಡಿಡೇಟ್ ಹಾಕಿಲ್ಲ! ಆದರೆ ಬಸವಕಲ್ಯಾಣದಲ್ಲಿ ಅದು ಮುಸ್ಲಿಂ ಅಭ್ಯರ್ಥಿಯನ್ನು ಹಾಕಿದೆ. ಇತ್ತ ಬೆಳಗಾವಿಯಲ್ಲಿ ಅಪಾರ ಸಂಪನ್ಮೂಲದ ಜಾರಕಿಹೊಳಿ ಎದುರೂ ಕ್ಯಾಂಡಿಡೇಟ್ ಹಾಕಿಲ್ಲ.

ಇದನ್ನೂ ಓದಿ: ಬಸವ ಕಲ್ಯಾಣ ಉಪಚುನಾವಣೆ: ವಿಜಯೇಂದ್ರಗೆ ಟಿಕೆಟ್ ಇಲ್ಲ, ಈಗ್ಲೂ ‘ಹೊರಗಿನವರಿಗೇ’ ಟಿಕೆಟ್: ನಾರಾಯಣರಾವ್ ನೆನಪೇ ಕಾಂಗ್ರೆಸ್ ಶಕ್ತಿ!

ಸಂಪನ್ಮೂಲ ಹುಡುಕುತ್ತ ಬೈ ಎಲೆಕ್ಷನ ಬಂಧನದಲ್ಲಿ ಅನ್ನಬಹುದು. ಸಂಪನ್ಮೂಲದ ಕೊರತೆ ಬೈ ಎಲೆಕ್ಷನ್ ಮೂಲಕ ನೀಗಿದೆಯೇ ಎಂಬ ಪ್ರಶ್ನೆ ಮಾತ್ರ ಹಾಗೇ ಉಳಿದಿದೆ.

ನಿನ್ನೆ ಮಸ್ಕಿಯ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡರು ಸಿಂಧನೂರಿನ ಜೆಡಿಎಸ್ ಶಾಸಕ ವೆಂಕಟರಾವ್ ನಾಡಗೌಡರ ಮನೆಗೆ ಹೋಗಿ ಬೆಂಬಲ ಕೇಳಿದರೆಂದು ಇಲ್ಲಿನ ಎಲ್ಲ ದಿನಪತ್ರಿಕೆಗಳಲ್ಲಿ ಬಂದಿದೆ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ.

ಇತ್ತ, ಸುಮಾರು 12 ದಿನದ ಹಿಂದೆ ಮಸ್ಕಿ ಚುನಾವಣೆ ನಿಮಿತ್ತ ಸಿಂಧನೂರಿಗೆ ಬಂದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಿಂಧನೂರು ಐಬಿಯಲ್ಲಿ ವಿಶೇಷವಾಗಿ ಭೇಟಿ ಮಾಡಿದ ಸಿಂಧನೂರು ಶಾಸಕ ನಾಡಗೌಡರು ಮರುದಿನವೇ, ಮಸ್ಕಿಯಲ್ಲಿ ಕ್ಯಾಂಡಿಡೇಟ್ ಹಾಕಲ್ಲ ಎಂದಿದ್ದರು. ಅಷ್ಟೊತ್ತಿಗೆ ವಿಜಯೇಂದ್ರ ಮತ್ತು ಕುಮಾರಸ್ವಾಮಿ ಡಿಸ್ಕಸ್ ಮಾಡಿರಬಹುದು ಎಂದು ಇಲ್ಲಿನ ರೈತ ಹೋರಾಟಗಾರರು ಹೇಳುತ್ತಾರೆ. ಜೊತೆಗೆ ಒಳ ಒಪ್ಪಂದ ಆಗಿರಬಹುದು ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.

‘ನಾನು ಒಬ್ಬ ಶಾಸಕನಾಗಿ ಸಿಎಂ ಭೇಟಿ ಮಾಡಿದ್ದೇನೆ ಅಷ್ಟೇ… ನಮ್ಮ ಕಾರ್ಯಕರ್ತರು ಬೇಡ ಅಂದಿದ್ದಕ್ಕೆ ಕ್ಯಾಂಡಿಡೇಟ್ ಹಾಕಿಲ್ಲ. ನೀರಾವರಿ ಹೋರಾಟ ಫಲಿತಾಂಶದ ಮ್ಯಾಲ ಪ್ರಭಾವ ಬೀರುತ್ತದೆ ‘ವೆಂಕಟ ರಾವ್ ನಾಡಗೌಡ, ಸಿಂಧನೂರು ಶಾಸಕ


ಇದನ್ನೂ ಓದಿ: ಬೆಳಗಾವಿ ಲಿಂಗಾಯತರ ಕೋಟೆಯಲ್ಲಿ ಸತೀಶ್ ಜಾರಕಿಹೊಳಿ ಹೋರಾಟ: ಅಹಿಂದ ಒಟ್ಟುಗೂಡುವುದೇ? ಗೆದ್ರೆ ಯಮಕನಮರಡಿಯಲ್ಲಿ ಪ್ರಿಯಾಂಕಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...