Homeಕರ್ನಾಟಕಬಸವ ಕಲ್ಯಾಣ ಉಪಚುನಾವಣೆ: ವಿಜಯೇಂದ್ರಗೆ ಟಿಕೆಟ್ ಇಲ್ಲ, ಈಗ್ಲೂ ‘ಹೊರಗಿನವರಿಗೇ’ ಟಿಕೆಟ್: ನಾರಾಯಣರಾವ್ ನೆನಪೇ ಕಾಂಗ್ರೆಸ್...

ಬಸವ ಕಲ್ಯಾಣ ಉಪಚುನಾವಣೆ: ವಿಜಯೇಂದ್ರಗೆ ಟಿಕೆಟ್ ಇಲ್ಲ, ಈಗ್ಲೂ ‘ಹೊರಗಿನವರಿಗೇ’ ಟಿಕೆಟ್: ನಾರಾಯಣರಾವ್ ನೆನಪೇ ಕಾಂಗ್ರೆಸ್ ಶಕ್ತಿ!

- Advertisement -
- Advertisement -

ಬೀದರಿನ ಬಸವ ಕಲ್ಯಾಣದಲ್ಲಿ ಈಗ ಉಪ ಚುನಾವಣೆ ನಡೆಯುತ್ತಿದೆ. ಯಡಿಯೂರಪ್ಪ ಅಧಿಕಾರಕ್ಕೆ ಬರುವ ಮೊದಲು ಸದನದಲ್ಲಿ ನಡೆದ ಚರ್ಚೆಯಲ್ಲಿ ತಮ್ಮ ಮುಗ್ಧತೆ ಮತ್ತು ಅದಕ್ಕೂ ಮುಖ್ಯವಾಗಿ ಪ್ರಾಮಾಣಿಕತೆಯ ಕಾರಣಕ್ಕೆ ತಮ್ಮ ಭಾಷಣದಿಂದ ರಾಜ್ಯದ ಗಮನ ಸೆಳೆದ ನಾರಾಯಣರಾವ್ ಎಂಬ ಹಿಂದುಳಿದ ವರ್ಗಕ್ಕೆ ಸೇರಿದ ನಾಯಕ ಕೊವಿಡ್ ಕಾರಣಕ್ಕೆ ಮೃತಪಟ್ಟರು. ಆ ಕಾರಣಕ್ಕೆ ಇಲ್ಲಿ ಉಪ ಚುನಾವಣೆ.

ಇರಲಿ, ಇಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅಭ್ಯರ್ಥಿ ಎಂಬ ಮಾತು ಮೊನ್ನೆವರೆಗೂ ಚಾಲ್ತಿಯಲ್ಲಿತ್ತು. ಹತ್-ಹನ್ನೆರಡು ಸಲ ವಿಜಯೇಂದ್ರ ಇಲ್ಲಿಗೆ ಬಂದು, ಲೋಕಲ್ ನಾಯಕರೊಂದಿಗೆ ಗುಪ್ತ ಮಾತುಕತೆ ನಡೆಸಿದ್ದರು. ಮೃತ ಶಾಸಕ ನಾರಾಯಣಸ್ವಾಮಿಯವರ ಬಯಕೆಯಾಗಿದ್ದ ಅನುಭವ ಮಂಟಪಕ್ಕೆ ಮುಖ್ಯಮಂತ್ರಿ ಚಾಲನೆ ನೀಡಿಬಿಟ್ಟರು. ಬೇರೆ-ಯಾವುದೇ ನಿರ್ದಿಷ್ಠ ಬಜೆಟ್ ಅನುದಾನವೂ ಇಲ್ಲದೇ! ಈ ‘ಪ್ರಗತಿಪರ ಸಂಪ್ರದಾಯ’ ಎಂಬ ವಿಲಕ್ಷಣ ಹೆಸರಿನ ಕಾರ್ಯಕ್ರಮದಲ್ಲಿ ವಿಜಯೇಂದ್ರ ಕೂಡ ಇದ್ದರು.

ಇದನ್ನೂ ಓದಿ: ಸದನದಲ್ಲಿಂದು ಗಮನಸೆಳೆದ ಕಾಂಗ್ರೆಸ್ಸಿನ ಶಾಸಕ ಬಿ.ನಾರಾಯಣರಾವ್ ರವರ ಮಾತುಗಳು

ಆ ನಂತರವೂ, ಮೊನ್ನೆ ಮಠಗಳಿಗೆ ಬೇಕಾಬಿಟ್ಟಿ 800 ಕೋಟಿ ರೂ ಹಂಚಿದರಲ್ಲ ಸಿಎಂ ಸಾಹೇಬರು… ಅದರಲ್ಲಿ ಬೀದರ್ ಜಿಲ್ಲೆ ಮತ್ತು ಬಸವ ಕಲ್ಯಾಣ ತಾಲೂಕಿನ ಮಠಗಳಿಗೆ ಪ್ರಾಶಸ್ತ್ಯ ನೀಡಲಾಗಿತ್ತು.
ಈ ನಡುವೆ ಹತ್ತಾರು ಸಲ ಬಸವಕಲ್ಯಾಣಕ್ಕೆ ಬಂದ ವಿಜಯೇಂದ್ರ ತಾನೇ ಅಭ್ಯರ್ಥಿ ಎಂಬುದನ್ನು ಪಕ್ಷದ ಲೋಕಲ್ ನಾಯಕರಿಗೆ ಹೇಳಿ ಹೋದರು.

ಅದೇನು ಎಡವಟ್ಟಾಯಿತೊ ಎನೊ. ಈಗ ಇಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸದಗಲ. ಇವರು ಕೂಡ ಬೀದರ್‌ನವರು ಅಲ್ಲವೇ ಅಲ್ಲ. ಕಲಬುರ್ಗಿ ಜಿಲ್ಲೆಯ ಅಸಾಮಿ. ಇವರ ಪತ್ನಿ ಇಲ್ಲಿ ತಹಶೀಲ್ದಾರ್ ಆಗಿ ಕೆಲಸ ಮಾಡಿದ್ದರು ಅಷ್ಟೇ.

ನಾರಾಯಣರಾವ್ ಪ್ರಾಮಾಣಿಕತೆಯೇ ಕಾಂಗ್ರೆಸ್ ಶಕ್ತಿ

ಕಾಂಗ್ರೆಸ್ ಇಲ್ಲಿ ಮೃತ ಶಾಸಕ ನಾರಾಯಣರಾವ್ ಅವರ ಪತ್ನಿ ಮಲ್ಲಮ್ಮ ಅವರನ್ನು ಕಣಕ್ಕೆ ಇಳಿಸಿದೆ. ಇಲ್ಲಿ ಕಾಂಗ್ರೆಸ್ ವರ್ಚಸ್ಸಿಗಿಂತ ನಾರಾಯಣರಾವ್ ಅವರ ಪ್ರಾಮಾಣಿಕತೆ, ಸರಳತೆ ಮತ್ತು ಅಂತಿಮದಲ್ಲಿ ಅವರು ಸದನದಲ್ಲಿ ಮಾಡಿದ ‘ಜನಸಾಮಾನ್ಯನ ಭಾಷಣ’ವೇ ಸ್ಪರ್ಧೆಗೆ ನಿಂತ ಹಾಗೆ ಕಾಣುತ್ತಿದೆ.

ಇದನ್ನೂ ಓದಿ: ಸದನದಲ್ಲಿ ಮಿಂಚಿದ ಬಸವ ಪ್ರಣೀತ ಶಾಸಕ ನಾರಾಯಣರಾವ್

ಇನ್ನೊಂದು ಕಡೆ ಮಸ್ಕಿ ಮತ್ತು ಬೆಳಗಾವಿಯಲ್ಲಿ ಕ್ಯಾಂಡಿಡೇಟ್ ಹಾಕದ ಜೆಡಿಎಸ್ ಇಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ! ಇಲ್ಲಿ ಸುಮಾರು 40,000 ದಷ್ಟು ಮುಸ್ಲಿಂ ಮತಗಳಿರುವುದೇ ಅದಕ್ಕೆ ಕಾರಣ..

ಈ ಕುರಿತು ಸಿದ್ದರಾಮಯ್ಯ “ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 40,000 ಅಲ್ಪಸಂಖ್ಯಾತ ಮತಗಳಿವೆ. ಜೆಡಿಎಸ್ ನವರು ಬಿಜೆಪಿ ಜೊತೆ ಒಳ‌ಒಪ್ಪಂದ ಮಾಡಿಕೊಂಡು ಮುಸ್ಲಿಂ‌ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ನಮ್ಮ ಮತಗಳನ್ನು ವಿಭಜಿಸುವ ಹುನ್ನಾರ ಮಾಡುತ್ತಿದ್ದಾರೆ. ಇದನ್ನು ಕ್ಷೇತ್ರದ ಜನ ಅರ್ಥಮಾಡಿಕೊಳ್ಳಬೇಕು” ಎಂದು ಪ್ರೆಸ್ ಮೀಟ್ ನಲ್ಲಿ ತಿಳಿಸಿದ್ದಾರೆ…

ಒಟ್ಟಿನಲ್ಲಿ ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.. ನಾರಾಯಣ್ ರಾವ್ ನೆನಪಿನಲ್ಲಿ ಅವರ ಪತ್ನಿಯನ್ನು ಕ್ಷೇತ್ರದ ಜನತೆ ಮತ್ತೆ ವಿಧಾನಸೌಧಕ್ಕೆ ಕಳಿಸುತ್ತಾರಾ? ಕಾದು ನೋಡಬೇಕಿದೆ.

ಇದನ್ನೂ ಓದಿ: ಅರಸು ಯುಗದ ಆದರ್ಶದ ಕೊಂಡಿ ಬಿ ನಾರಾಯಣರಾವ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...