Homeಕರ್ನಾಟಕಕಾರ್ಮಿಕ ಕಾನೂನು ತಿದ್ದುಪಡಿಗೆ ವಿರೋಧ: ಸುಗ್ರೀವಾಜ್ಞೆ ಪ್ರತಿ ಸುಟ್ಟು ಪ್ರತಿಭಟನೆಗೆ ನಿರ್ಧಾರ

ಕಾರ್ಮಿಕ ಕಾನೂನು ತಿದ್ದುಪಡಿಗೆ ವಿರೋಧ: ಸುಗ್ರೀವಾಜ್ಞೆ ಪ್ರತಿ ಸುಟ್ಟು ಪ್ರತಿಭಟನೆಗೆ ನಿರ್ಧಾರ

ಈ ತಿದ್ದುಪಡಿಯು ರಾಜ್ಯದ 70% ಕ್ಕೂ ಹೆಚ್ಚು ಕಾರ್ಮಿಕರಿಗೆ ಕಾರ್ಮಿಕ ಕಾನೂನುಗಳಿಂದ ಒದಗಿಸಲಾದ ಸಾಮಾಜಿಕ ಮತ್ತು ಕಾನೂನು ರಕ್ಷಣೆಗಳನ್ನು ಕಿತ್ತುಕೊಳ್ಳಲಿವೆ ಎನ್ನಲಾಗಿದೆ.

- Advertisement -
- Advertisement -

ಕಾರ್ಮಿಕ ಕಾನೂನುಗಳಿಗೆ ಕರ್ನಾಟಕ ಸರ್ಕಾರ ತಂದಿರುವ ಇತ್ತೀಚಿನ ತಿದ್ದುಪಡಿಗಳನ್ನು ವಿರೋಧಿಸಿ ಜುಲೈ 29 ರಂದು ಕಾರ್ಮಿಕರು ಎಲ್ಲಾ ಕೈಗಾರಿಕಾ ಸಂಸ್ಥೆಗಳ ಮುಂದೆ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ.

ಈ ತಿದ್ದುಪಡಿಯು ರಾಜ್ಯದ 70% ಕ್ಕೂ ಹೆಚ್ಚು ಕಾರ್ಮಿಕರಿಗೆ ಕಾರ್ಮಿಕ ಕಾನೂನುಗಳಿಂದ ಸಿಕ್ಕಿರುವ ಸಾಮಾಜಿಕ ಮತ್ತು ಕಾನೂನು ರಕ್ಷಣೆಗಳನ್ನು ಕಿತ್ತುಕೊಳ್ಳಲಿದೆ ಎಂದು ಕಾರ್ಮಿಕ ಸಂಘಟನೆಗಳು ಅಭಿಪ್ರಾಯಪಟ್ಟಿವೆ. ಹಾಗಾಗಿ ಸಾಮೂಹಿಕ ಆಂದೋಲನವನ್ನು ಪ್ರಾರಂಭಿಸಲಿದ್ದು, ಜುಲೈ 29 ರಂದು ಸುಗ್ರೀವಾಜ್ಞೆ ಪ್ರತಿ ಸುಟ್ಟು ಪ್ರತಿಭಟನೆ ನಡೆಸಲು ತೀರ್ಮಾನಿಸಿವೆ.

ಸುಗ್ರೀವಾಜ್ಞೆಯ ಮೂಲಕ ತಂದ ತಿದ್ದುಪಡಿಗಳ ಪ್ರಕಾರ, ಕೈಗಾರಿಕಾ ವಿವಾದ ಕಾಯ್ದೆ 1947 ರ ಸೆಕ್ಷನ್ 25 ಕೆ ಅನ್ನು ತಿದ್ದುಪಡಿ ಮಾಡಲಾಗಿದ್ದು, ಕಾರ್ಖಾನೆ ಮುಚ್ಚಲು ಇದ್ದ ಮಿತಿಯನ್ನು 100 ರಿಂದ 300 ಕಾರ್ಮಿಕರಿಗೆ ಹೆಚ್ಚಿಸಲಾಗಿದೆ.

ಗುತ್ತಿಗೆ ಕಾರ್ಮಿಕ (ಕ್ರಮಬದ್ಧಗೊಳಿಸುವಿಕೆ ಮತ್ತು ನಿರ್ಮೂಲನೆ) ಕಾಯ್ದೆ-1970 ರ ಸೆಕ್ಷನ್ 1 ಅನ್ನು ತಿದ್ದುಪಡಿ ಮಾಡಿ, ಅಸ್ತಿತ್ವದಲ್ಲಿರುವ 20 ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳಲುಇ ಇದ್ದ ಕಡ್ಡಾಯ ಪರವಾನಗಿಯನ್ನು ಮುಂದೆ 50ಕ್ಕೂ ಹೆಚ್ಚು ಕಾರ್ಮಿಕರಿಗೆ ಮಿತಿಯನ್ನು ಹೆಚ್ಚಿಸಲಾಗಿದೆ.

ಕಾರ್ಖಾನೆಗಳ ಕಾಯ್ದೆ-1948 ರ ಸೆಕ್ಷನ್ 2 (ಎಮ್) ಅನ್ನು ಸಹ ತಿದ್ದುಪಡಿ ಮಾಡಲಾಗಿದ್ದು, ಕಾರ್ಖಾನೆಗಳ ತಪಾಸಣೆಯನ್ನು 10 ಕಾರ್ಮಿಕರಿಂದ (ವಿದ್ಯುತ್‌ನೊಂದಿಗೆ) ಮಿತಿಯನ್ನು 20 ಕ್ಕೆ ಹೆಚ್ಚಿಸಲಾಗಿದೆ. 20 ಕಾರ್ಮಿಕರು (ವಿದ್ಯುತ್ ಸಹಾಯವಿಲ್ಲದೆ) ಮಿತಿಯನ್ನು 40 ಕ್ಕೆ ಹೆಚ್ಚಿಸಲಾಗಿದೆ.

ಕಾರ್ಖಾನೆಗಳ ಕಾಯ್ದೆ-1948 ರ ಸೆಕ್ಷನ್ 65 (3) (iv) ಅನ್ನು ಸಹ ತಿದ್ದುಪಡಿ ಮಾಡಲಾಗಿದೆ, ಯಾವುದೇ ತ್ರೈಮಾಸಿಕದಲ್ಲಿ ಅಧಿಕ ಕೆಲಸ ( ಒವರ್ ಟೈಂ ಡ್ಯೂಟಿ) ಒಟ್ಟು ಗಂಟೆಗಳ  75 ಗಂಟೆಗಳಿಂದ 125 ಗಂಟೆಗಳಿಗೆ ಹೆಚ್ಚಿಸಲಾಗಿದೆ.

ಈ ಬದಲಾವಣೆಗಳು ಕಾರ್ಖಾನೆಗಳಿಗೆ ಕಾರ್ಮಿಕರನ್ನು ನಿರ್ದಾಕ್ಷಿಣ್ಯವಾಗಿ ನೇಮಿಸಿಕೊಳ್ಳಲು ಮತ್ತು ಕಿತ್ತೊಗೆಯಲು ಅನುವು ಮಾಡಿಕೊಡುತ್ತದೆ ಎಂದು ಸೆಂಟರ್‌ ಆಫ್‌ ಇಂಡಿಯನ್ ಟ್ರೇಡ್‌ ಯುನಿಯನ್ (ಸಿಐಟಿಯು) ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಹೇಳಿದ್ದಾರೆ.

“ಜುಲೈ 29 ರಂದು ಎಲ್ಲಾ ಕಾರ್ಖಾನೆಗಳ ಮುಂದೆ ಸುಗ್ರೀವಾಜ್ಞೆಯ ಪ್ರತಿಗಳನ್ನು ಸುಡುವಂತೆ ನಾವು ಕರೆ ನೀಡಿದ್ದೇವೆ. ಇದರ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ನಮ್ಮ ವಿರೋಧವನ್ನು ಪ್ರಕಟಿಸಲು ಆಗಸ್ಟ್ 10 ರಂದು ರಾಜ್ಯವ್ಯಾಪಿ ‘ಸೇವ್ ಇಂಡಿಯಾ’ ಪ್ರತಿಭಟನೆ ನಡೆಯಲಿದೆ. ತರುವಾಯ, ಕಾರ್ಮಿಕರ ಹಕ್ಕುಗಳನ್ನು ಪುನಃಸ್ಥಾಪಿಸಲು ಕಾರ್ಮಿಕ ಚಳವಳಿಯನ್ನು ತೀವ್ರಗೊಳಿಸಲು ಕಾರ್ಮಿಕ ಸಂಘಗಳು ಜಂಟಿಯಾಗಿ ಪ್ರಚಾರ ಮಾಡಲಿವೆ” ಎಂದು ಸುಂದರಂ ಹೇಳಿದ್ದಾರೆ.

ಕರ್ನಾಟಕ ಹೈಕೋರ್ಟ್‌ನಲ್ಲಿ ಈ ಸುಗ್ರೀವಾಜ್ಞೆಯನ್ನು ಟ್ರೇಡ್ ಯೂನಿಯನ್ ಪ್ರಶ್ನಿಸಲಿದೆ ಎಂದು ಅವರು ಹೇಳಿದ್ದಾರೆ.

ದೊಡ್ಡ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಹಾಗೂ ಸಾರ್ವಜನಿಕ ಉದ್ಯಮಗಳ ಸಚಿವ ಜಗದೀಶ್ ಶೆಟ್ಟರ್, ಸಾಂಕ್ರಾಮಿಕ ರೋಗದಿಂದಾಗಿ ವ್ಯಾಪಾರವನ್ನು ಸುಲಭ ಮಾಡಲು ಕಾರ್ಮಿಕ ಕಾನೂನುಗಳಲ್ಲಿ ಕೈಗಾರಿಕೆಗಳ ಪರವಾದ ಬದಲಾವಣೆಗಳು ಅಗತ್ಯ ಎಂದು ಹೇಳಿದ್ದಾರೆ.

ಐಎನ್‌ಟಿಯುಸಿ‌, ಸಿಐಟಿಯು, ಹಿಂದ್ ಮಜ್ದೂರ್ ಸಭಾ ಮತ್ತು ಎಐಯುಟಿಸಿ ಸೇರಿದಂತೆ ರಾಜ್ಯದ ಹತ್ತು ಕಾರ್ಮಿಕ ಸಂಘಗಟನೆಳು ಕಾರ್ಮಿಕ ಸಂಘಗಳ ಜಂಟಿ ಸಮಿತಿ (ಜೆಸಿಟಿಯು)ಯು ಜುಲೈ 24 ರಂದು ಸರ್ಕಾರದ ಸುಗ್ರೀವಾಜ್ಞೆಯನ್ನು ತಿರೋಗಾಮಿ ಹಾಗೂ ಕಾರ್ಮಿಕ ವಿರೋಧಿ ಎಂದು ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದೆ.


ಓದಿ: ವಲಸೆ ಕಾರ್ಮಿಕರ ಮತದಾನದ ಹಕ್ಕನ್ನು ಖಾತರಿಗೊಳಿಸಿ: ಚುನಾವಣಾ ಆಯೋಗಕ್ಕೆ ಬಹಿರಂಗ ಪತ್ರ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...