Homeಮುಖಪುಟಮೋದಿ ಸರ್ಕಾರ ಭಾರತವನ್ನು ಪ್ರಪಾತಕ್ಕೆ ತಳ್ಳಿದೆ, ಮಾಧ್ಯಮಗಳು ’ಸಬ್‌ ಚಂಗಾಸಿ’ ಎನ್ನುತ್ತಿವೆ: ರಾಹುಲ್

ಮೋದಿ ಸರ್ಕಾರ ಭಾರತವನ್ನು ಪ್ರಪಾತಕ್ಕೆ ತಳ್ಳಿದೆ, ಮಾಧ್ಯಮಗಳು ’ಸಬ್‌ ಚಂಗಾಸಿ’ ಎನ್ನುತ್ತಿವೆ: ರಾಹುಲ್

- Advertisement -
- Advertisement -

ಮೋದಿ ಸರ್ಕಾರ ಭಾರತವನ್ನು ತೊಂದರೆಗಳ ಪ್ರಪಾತಕ್ಕೆ ತಳ್ಳಿದೆ ಆದರೆ ಕೇಂದ್ರ ಸರ್ಕಾರ ಮತ್ತು ಮಾಧ್ಯಮಗಳು ’ಸಬ್‌ ಚಂಗಾಸಿ’ (ಎಲ್ಲವು ಚೆನ್ನಾಗಿದೆ) ಎಂದು ಹೇಳುತ್ತಿವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ದ ನಿರಂತರವಾಗಿ ಮಾತನಾಡುತ್ತಿರುವ ರಾಹುಲ್ ಗಾಂಧಿ ಇಂದು ವ್ಯಂಗ್ಯವಾಗಿ ಸರ್ಕಾರ ಮತ್ತು ಮಾಧ್ಯಮಗಳ ವಿರುದ್ದ ದಾಳಿಮಾಡಿದ್ದಾರೆ. “ಕೊರೊನಾ ವಿರುದ್ಧ ಮೋದಿ ಸರ್ಕಾರದ ‘ಯೋಜಿತ ಹೋರಾಟ’ವು ಭಾರತವನ್ನು ತೊಂದರೆಗಳ ಪ್ರಪಾತಕ್ಕೆ ತಳ್ಳಿತು” ಎಂದಿರುವ ರಾಹುಲ್ ಗಾಂಧಿ, ಸಮಸ್ಯೆಗಳನ್ನು ಪಟ್ಟಿ ಮಾಡಿದ್ದಾರೆ.

ಇದನ್ನೂ ಓದಿ: BJP ಗೆಲುವಿಗೆ ಫೇಸ್‌ಬುಕ್ ಕೆಲಸ: ತನಿಖೆಗೆ ರಾಹುಲ್ ಗಾಂಧಿ ಆಗ್ರಹ

ಜಿಡಿಪಿಯಲ್ಲಿ 24% ಐತಿಹಾಸಿಕ ಇಳಿತ, 12 ಕೋಟಿ ಉದ್ಯೋಗಗಳ ನಷ್ಟ, 15.5 ಲಕ್ಷ ಕೋಟಿ ಹೆಚ್ಚುವರಿ ಸಾಲಗಳು, ಕೊರೊನಾ ಸೋಂಕಿನಿಂದ ವಿಶ್ವದಲ್ಲೇ ಅತ್ಯಂತ ಹೆಚ್ಚು ದೈನಂದಿನ ಸಾವುಗಳು ಎಂಬ ಅಂಶಗಳನ್ನು ಉಲ್ಲೇಖಿಸಿದ ಅವರು, “ಆದರೆ ಕೇಂದ್ರ ಸರ್ಕಾರ ಮತ್ತು ಮಾಧ್ಯಮಗಳು ಮಾತ್ರ ’ಸಬ್ ಚಂಗಾಸಿ’ ಎಂದು ಹೇಳುತ್ತಿದೆ” ಎಂದು ಹೇಳಿದ್ದಾರೆ.

ಕೇಂದ್ರ ಕೊರೊನಾ ಸೋಂಕನ್ನು ನಿರ್ವಹಿಸುತ್ತಿರುವ ರೀತಿಯನ್ನು ರಾಹುಲ್ ಗಾಂಧಿ ನಿರಂತರವಾಗಿ ಟೀಕಿಸುತ್ತಿದ್ದಾರೆ. ಎರಡು ದಿನಗಳ ಹಿಂದೆ, “ನಾನು ಫಬ್ರವರಿಯಲ್ಲೇ ಕೊರೊನಾ ಸುನಾಮಿ ರೀತಿ ಬರುತ್ತದೆ, ತಯಾರಾಗಿರಿ ಎಂದು ಹೇಳಿದ್ದೆ, ಆದರೆ ಸರ್ಕಾರ ನನ್ನನ್ನು ತಮಾಷೆ ಮಾಡಿತ್ತು” ಎಂದು ಹೇಳಿದ್ದರು.

ಅಷ್ಟೇ ಅಲ್ಲದೆ ಸೆಪ್ಟೆಂಬರ್‌ 6 ರಂದು ತನ್ನ ಸರಣಿ ವಿಡಿಯೋ ಕಾರ್ಯಕ್ರಮದಲ್ಲಿ ”ಜಿಎಸ್‌‌ಟಿಯ ದೋಷಪೂರಿತ ಅನುಷ್ಠಾನವು ಆರ್ಥಿಕತೆಯನ್ನು ನಾಶಪಡಿಸಿದೆ, ಇದು ಆರ್ಥಿಕತೆಯಲ್ಲಿರುವ ಅಸಂಘಟಿತ ವಲಯಕ್ಕೆ ಎರಡನೇ ದೊಡ್ಡ ಹೊಡೆತವಾಗಿದೆ” ಎಂದು ರಾಹುಲ್ ಆರೋಪಿಸಿದ್ದರು.

ಇದನ್ನೂ ಓದಿ: ದೋಷಪೂರಿತ ಜಿಎಸ್‌ಟಿ ದೇಶದ ಆರ್ಥಿಕತೆಯನ್ನು ನಾಶಮಾಡಿದೆ: ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...