Homeಮುಖಪುಟಕಾಂಗ್ರೆಸ್ ನಲ್ಲಿ ಕಾರ್ಯದರ್ಶಿಗಳ ಬದಲಾವಣೆ ಪರ್ವ: ರಾಜ್ಯ ಉಸ್ತುವಾರಿಯಾಗಿ ರಣದೀಪ್ ಸಿಂಗ್ ಸುರ್ಜೇವಾಲ

ಕಾಂಗ್ರೆಸ್ ನಲ್ಲಿ ಕಾರ್ಯದರ್ಶಿಗಳ ಬದಲಾವಣೆ ಪರ್ವ: ರಾಜ್ಯ ಉಸ್ತುವಾರಿಯಾಗಿ ರಣದೀಪ್ ಸಿಂಗ್ ಸುರ್ಜೇವಾಲ

ಪಕ್ಷದಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಕೋರಿ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದ 23 ಕಾಂಗ್ರೆಸ್ ಭಿನ್ನಮತೀಯ ನಾಯಕರಲ್ಲಿ ಒಬ್ಬರಾದ ಗುಲಾಮ್ ನಬಿ ಆಜಾದ್ ಅವರನ್ನು ಪಟ್ಟಿಯಿಂದ ಕೈಬಿಡಲಾಗಿದೆ.

- Advertisement -
- Advertisement -

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿನ್ನೆ ಪಕ್ಷದ ಹೊಸ ಕಾರ್ಯದರ್ಶಿಗಳನ್ನು ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥರನ್ನು ನೇಮಕ ಮಾಡಿದ್ದಾರೆ. ಆದರೆ ಪಕ್ಷದ ಹಿರಿಯ ನಾಯಕರಾದ ಗುಲಾಮ್ ನಬಿ ಆಜಾದ್, ಅಂಬಿಕಾ ಸೋನಿ, ಮೋತಿ ಲಾಲ್ ವೊಹ್ರಾ, ಲುಜೆನಿಯೊ ಫಲೇರಿಯೊ ಮತ್ತು ಮಲ್ಲಿಕಾರ್ಜುನ್ ಖರ್ಗೆ ಮುಂತಾದವರನ್ನು ಪ್ರಧಾನ ಕಾರ್ಯದರ್ಶಿಗಳ ಪಟ್ಟಿಯಿಂದ ಕೈಬಿಡಲಾಗಿದೆ.

ಪಕ್ಷದಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಕೋರಿ ಸೋನಿಯಾ ಗಾಂಧಿಗೆ ಪತ್ರ ಬರೆದ 23 ಕಾಂಗ್ರೆಸ್ ನಾಯಕರಲ್ಲಿ ಗುಲಾಮ್ ನಬಿ ಆಜಾದ್ ಕೂಡ ಇದ್ದರು. ಅವರು ಹರಿಯಾಣ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದರು.

ಇದನ್ನೂ ಓದಿ: ನಮ್ಮ ಪ್ರಜಾಪ್ರಭುತ್ವದ ಮೇಲೆ ಸರ್ವಾಧಿಕಾರದ ಪ್ರಭಾವ ಹೆಚ್ಚುತ್ತಿದೆ: ಸೋನಿಯಾ ಗಾಂಧಿ

ಹೊಸ ನೇಮಕಾತಿಗಳ ಪ್ರಕಾರ, ಹಲವು ರಾಜ್ಯ ಉಸ್ತುವಾರಿಗಳನ್ನು ಬದಲಿಸಲಾಗಿದೆ. ಮಧ್ಯಪ್ರದೇಶದಲ್ಲಿ ಮುಕುಲ್ ವಾಸ್ನಿಕ್, ಪಂಜಾಬ್‌ನಲ್ಲಿ ಹರೀಶ್ ರಾವತ್, ಆಂಧ್ರಪ್ರದೇಶದಲ್ಲಿ ಉಮ್ಮನ್ ಚಾಂಡಿ, ಕೇರಳ ಮತ್ತು ಲಕ್ಷದ್ವೀಪದಲ್ಲಿ ತಾರಿಕ್ ಅನ್ವರ್, ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ, ಕರ್ನಾಟಕದಲ್ಲಿ ರಣದೀಪ್ ಸಿಂಗ್ ಸುರ್ಜೆವಾಲಾ, ಅಸ್ಸಾಂನಲ್ಲಿ ಜಿತೇಂದ್ರ ಸಿಂಗ್, ರಾಜಸ್ಥಾನದಲ್ಲಿ ಅಜಯ್ ಮಾಕೆನ್ ನೇಮಕಗೊಂಡಿದ್ದಾರೆ. ಕೆ.ಸಿ.ವೇಣುಗೋಪಾಲ್ ಅವರು ಸಾಂಸ್ಥಿಕ ಪ್ರಧಾನ ಕಾರ್ಯದರ್ಶಿಯಾಗಲಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ ನಾಯಕತ್ವ: ಪಕ್ಷದ ಮುಖಂಡರಿಂದ ಸೋನಿಯಾ ಗಾಂಧಿಗೆ ಪತ್ರ

ಸಾಂಸ್ಥಿಕ ಮತ್ತು ಕಾರ್ಯಾಚರಣೆಯ ವಿಷಯಗಳಲ್ಲಿ ಸೋನಿಯಾ ಗಾಂಧಿಗೆ ಸಹಾಯ ಮಾಡಲು ಪಕ್ಷವು ವಿಶೇಷ ಸಮಿತಿಯನ್ನು ರಚಿಸಿದೆ. ಈ ಸಮಿತಿಯಲ್ಲಿ ಎ.ಕೆ. ಆಂಟನಿ, ಅಹ್ಮದ್ ಪಟೇಲ್, ಅಂಬಿಕಾ ಸೋನಿ, ಕೆ.ಸಿ. ವೇಣುಗೋಪಾಲ್, ಮುಕುಲ್ ವಾಸ್ನಿಕ್ ಮತ್ತು ರಣದೀಪ್ ಸಿಂಗ್ ಸುರ್ಜೆವಾಲಾ ಇದ್ದು, ಯಾವುದೇ ಭಿನ್ನಮತೀಯ ನಾಯಕರನ್ನು ಸೇರಿಸಲಾಗಿಲ್ಲ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕೇಂದ್ರ ಚುನಾವಣಾ ಪ್ರಾಧಿಕಾರವನ್ನೂ ಸೋನಿಯಾ ಗಾಂಧಿ ಪುನರ್ನಿರ್ಮಿಸಿದ್ದಾರೆ.

ಈ ಹಿಂದೆ 23 ಭಿನ್ನಮತೀಯರ ಪತ್ರವು ಕಾಂಗ್ರೆಸ್‌ನಲ್ಲಿ ಆಂತರಿಕ ಬಿಕ್ಕಟ್ಟಿಗೆ ಕಾರಣವಾಗಿತ್ತು. ಹಿರಿಯ ರಾಜಕಾರಣಿಗಳಾದ ಶಶಿ ತರೂರ್, ಗುಲಾಮ್ ನಬಿ ಆಜಾದ್, ಪೃಥ್ವಿರಾಜ್ ಚೌವ್ಹಾಣ್, ಆನಂದ್ ಶರ್ಮಾ ಮತ್ತು ಕಪಿಲ್ ಸಿಬಲ್ ಇದಕ್ಕೆ ಸಹಿ ಹಾಕಿದ್ದರು.

ಪತ್ರದಲ್ಲಿ ನಾಯಕರು ಸಾಮೂಹಿಕ ನಾಯಕತ್ವಕ್ಕೆ ಕರೆ ನೀಡಿದ್ದರು. ಇದು ಕಾರ್ಯಕಾರಿ ಸಭೆಯಲ್ಲಿ ಭಾರಿ ಚರ್ಚೆ ನಡೆದು ರಾಹುಲ್ ಗಾಂಧಿ ಈ ನಾಯಕರು ಕಿಡಿ ಕಾಡಿದ್ದರು ಎನ್ನಲಾಗಿದೆ.


ಇದನ್ನೂ ಓದಿ: ಗಡಿ ಬಿಕ್ಕಟ್ಟಿಗೆ ಕೇಂದ್ರದ ಅಸಮರ್ಪಕ ನೀತಿಗಳೇ ಕಾರಣ – ಸೋನಿಯಾ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...