Homeಅಂತರಾಷ್ಟ್ರೀಯಪಿಎನ್‌ಬಿ ಸಾಲ ವಂಚನೆ ಆರೋಪಿ ಚೋಕ್ಸಿ ಡೊಮಿನಿಕಾದಲ್ಲಿ ಬಂಧನ; ಭಾರತಕ್ಕೆ ಹಸ್ತಾಂತರ ಮಾಡಲು ಆಂಟಿಗುವ ಪ್ರಧಾನಿ...

ಪಿಎನ್‌ಬಿ ಸಾಲ ವಂಚನೆ ಆರೋಪಿ ಚೋಕ್ಸಿ ಡೊಮಿನಿಕಾದಲ್ಲಿ ಬಂಧನ; ಭಾರತಕ್ಕೆ ಹಸ್ತಾಂತರ ಮಾಡಲು ಆಂಟಿಗುವ ಪ್ರಧಾನಿ ಸೂಚನೆ

- Advertisement -
- Advertisement -

ಡೊಮಿನಿಕಾದಲ್ಲಿ ಬಂಧಿತನಾಗಿರುವ ವಜ್ರವ್ಯಾಪಾರಿ, ಪಿಎನ್‌ಬಿ ಹಣ ವಂಚನೆಯ ಆರೋಪಿ ಮೆಹುಲ್‌ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಆಂಟಿಗುವಾ ಮತ್ತು ಬಾರ್ಬುಡಾ ಪ್ರಧಾನಿ ಗಾಸ್ಟನ್ ಬ್ರೌನ್ ಕೇಳಿಕೊಂಡಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಮಂಗಳವಾರ ರಾತ್ರಿ (ಸ್ಥಳೀಯ ಕಲಾಮಾನ) ಡೊಮಿನಿಕಾದಲ್ಲಿ ಚೋಕ್ಸಿ ಬಂಧನದ ಸುದ್ದಿ ಬಂದ ನಂತರ, ಬ್ರೌನ್ ಸ್ಥಳೀಯ ಮಾಧ್ಯಮಗಳಿಗೆ ಚೋಕ್ಸಿಯನ್ನು ಭಾರತಕ್ಕೆ ವಾಪಸ್ ಕಳುಹಿಸಲು ಡೊಮಿನಿಕನ್ ಅಧಿಕಾರಿಗಳಿಗೆ “ಸ್ಪಷ್ಟ ಸೂಚನೆಗಳನ್ನು” ನೀಡಿದ್ದೇನೆ ಎಂದು ಹೇಳಿದ್ದಾರೆ.

“ಅವರನ್ನು ಆಂಟಿಗುವಾಕ್ಕೆ ವಾಪಸ್ ಕಳುಹಿಸಬಾರದು ಎಂದು ಕೇಳಿಕೊಂಡಿದ್ದೇವೆ. ಅವರು ಭಾರತಕ್ಕೆ ಮರಳಬೇಕಾಗಿದ್ದು, ಅಲ್ಲಿ ಅವರು ಅವರ ಮೇಲೆ ಹೊರಿಸಲಾಗಿರುವ ಕ್ರಿಮಿನಲ್ ಆರೋಪಗಳನ್ನು ಎದುರಿಸಬೇಕಾಗಿದೆ” ಎಂದು ಆಂಟಿಗುವಾ ನ್ಯೂಸ್‌ ರೂಮ್ ಎಂಬ ಮಾಧ್ಯಮವು ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ಪತ್ರಕರ್ತರೊಂದಿಗೆ ಬ್ರೌನ್ ನಡೆಸಿದ ಸಂವಾದವನ್ನು ಉಲ್ಲೇಖಿಸಿದೆ.

ಇದನ್ನೂ ಓದಿ: 14 ಸಾವಿರ ಕೋಟಿ ವಂಚಿಸಿ ಪರಾರಿಯಾದ ಮೆಹುಲ್ ಚೋಕ್ಸಿ ಆಂಟಿಗುವಾದಲ್ಲಿ ‘ನಾಪತ್ತೆ’ !

ಭಾತದಿಂದ ಪರಾರಿಯಾಗಿದ್ದ ಮೆಹುಲ್ ಚೋಕ್ಸಿ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ಪೌರತ್ವವನ್ನು ಹೊಂದಿದ್ದಾರೆ. ಆದರೆ ಡೊಮಿನಿಕಾದಲ್ಲಿ ಮೆಹುಲ್ ಚೋಕ್ಸಿ ಪೌರತ್ವ ಹೊಂದಿಲ್ಲ. ಆದ್ದರಿಂದ ಡೊಮಿನಿಕ ಅವರನ್ನು ನೇರವಾಗಿ ಭಾರತಕ್ಕೆ ವಾಪಸ್ ಕಳುಹಿಸುವುದು ಸುಲಭವಾಗಲಿದೆ ಎಂದು ಪ್ರಧಾನಿ ಬ್ರೌನ್‌ ತಿಳಿಸಿದ್ದಾರೆ.

ಇತ್ತೀಚೆಗೆ ಆಂಟಿಗುವಾ ಮತ್ತು ಬಾರ್ಬುಡಾದಿಂದ ಕಾಣೆಯಾಗಿದ್ದ ಚೋಕ್ಸಿ ವಿರುದ್ಧ ಇಂಟರ್ಪೋಲ್ ಯಲ್ಲೋ ನೋಟಿಸ್ ಜಾರಿಗೊಳಿಸಿತ್ತು. ಇದಾಗಿ ಅವರನ್ನು ಡೊಮಿನಿಕಾದಲ್ಲಿ ಸೆರೆಹಿಡಿಯಲಾಗಿದೆ. ಕಾಣೆಯಾದವರನ್ನು ಪತ್ತೆಹಚ್ಚಲು ಇಂಟರ್ಪೋಲ್ನಿಂದ ಯಲ್ಲೋ ನೋಟಿಸ್ ನೀಡಲಾಗುತ್ತದೆ.

ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ 13,500 ಕೋಟಿ ರೂ.ಗಳ ಸಾಲ ವಂಚನೆಯಲ್ಲಿ ಸಿಲುಕಿರುವ ಚೋಕ್ಸಿ 2018 ರಲ್ಲಿ ಭಾರತದಿಂದ ಆಂಟಿಗುವಾಕ್ಕೆ ಪರಾರಿಯಾಗಿದ್ದರು. ಅವರು 2017 ರಲ್ಲಿ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ಪೌರತ್ವ ಪಡೆದ್ದರು.

ಇದನ್ನೂ ಓದಿ: ಬಾಬಾ ರಾಮದೇವ್ ವಿರುದ್ಧ 1,000 ಕೋಟಿ ರೂ. ಮಾನನಷ್ಟ ಮೊಕದ್ದಮೆ ನೋಟಿಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...