Homeಮುಖಪುಟಮಿಯಾ ಮುಸ್ಲಿಮರು ನಮಗೆ ಮತ ಚಲಾಯಿಸಬೇಡಿ: ಅಸ್ಸಾಂ ಬಿಜೆಪಿ ಸಚಿವ

ಮಿಯಾ ಮುಸ್ಲಿಮರು ನಮಗೆ ಮತ ಚಲಾಯಿಸಬೇಡಿ: ಅಸ್ಸಾಂ ಬಿಜೆಪಿ ಸಚಿವ

- Advertisement -
- Advertisement -

ಕೆಲವೇ ತಿಂಗಳುಗಳಲ್ಲಿ ಅಸ್ಸಾಂ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನವೇ ’ಮಿಯಾ ಮುಸ್ಲಿಮರು’ ನಮಗೆ (ಬಿಜೆಪಿ) ಮತ ಚಲಾಯಿಸಬೇಡಿ ಎಂದು ಅಸ್ಸಾಂ ಸಚಿವ ಹಿಮಂತ ಬಿಸ್ವಾ ಶರ್ಮಾ ಬಹಿರಂಗ ಹೇಳಿಕೆ ನೀಡಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

’ಮಿಯಾ ಮುಸ್ಲಿಮರು’ ನಮಗೆ (ಬಿಜೆಪಿ) ಮತ ಚಲಾಯಿಸಬೇಡಿ. ನಾನು ಇದನ್ನು ಅನುಭವದ ಆಧಾರದ ಮೇಲೆ ಹೇಳುತ್ತಿದ್ದೇನೆ. ಅವರು ಸ್ಥಳೀಯ ಪಂಚಾಯತ್ ಮತ್ತು 2014 ರ ಲೋಕಸಭಾ ಚುನಾವಣೆಯಲ್ಲಿ ನಮಗೆ ಮತ ಹಾಕಲಿಲ್ಲ. ಮಿಯಾ ಮುಸ್ಲಿಮರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ  ಬಿಜೆಪಿಗೆ ಮತ ಸಿಗುವುದಿಲ್ಲ, ಆದರೆ ಇತರ ಸ್ಥಾನಗಳು ನಮ್ಮವು ಎಂದು ಅವರು ಹೇಳಿದ್ದಾರೆ.

ಆದರೂ ಸಹ ನಾವು ನಮ್ಮ ಅಭ್ಯರ್ಥಿಗಳನ್ನು ಆ ಸ್ಥಾನಗಳಲ್ಲಿ ನಿಲ್ಲಿಸುತ್ತೇವೆ. ಇದರಿಂದ ತಮ್ಮನ್ನು ‘ಮಿಯಾ ಮುಸ್ಲಿಮರು’ ಎಂದು ಗುರುತಿಸಿಕೊಳ್ಳದ ಜನರು ಕಮಲ (ಬಿಜೆಪಿಯ ಚಿಹ್ನೆ) ಅಥವಾ ಆನೆ (ಅಸೋಮ್ ಗಣ ಪರಿಷತ್ತಿನ ಚಿಹ್ನೆ) ಗೆ ಮತ ಚಲಾಯಿಸಬಹುದು ಎಂದು ಅಸ್ಸಾಂ ಸಚಿವ ಹೇಳಿದ್ದಾರೆ.

ಇದೇ ಚುನಾವಣಾ ತಂತ್ರ ಅನುಸರಿಸಿ ಬಿಜೆಪಿ ಹಲವು ರಾಜ್ಯಗಳಲ್ಲಿ ಜಯ ಸಾಧಿಸಿದೆ. ನೇರವಾಗಿಯೇ ಮುಸ್ಲಿಮರ ಮತಗಳು ನಮಗೆ ಬೇಡ ಎಂದು ಕರ್ನಾಟಕ ಮತ್ತು ಉತ್ತರ ಪ್ರದೇಶಗಳಲ್ಲಿ ಬಿಜೆಪಿ ಮುಖಂಡರು ಘೋಷಿಸಿದ್ದರು. ಇದರಿಂದ ಇತರ ಹಿಂದೂಗಳ ಮತಗಳು ಬಿಜೆಪಿಗೆ ಧ್ರುವೀಕರಣಗೊಳ್ಳುತ್ತವೆ ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ.


ಇದನ್ನೂ ಓದಿ: ಪತ್ರಕರ್ತರ ಬಂಧನ: ದೆಹಲಿ ಪೊಲೀಸರ ವಿರುದ್ಧ ಭುಗಿಲೆದ್ದ ಪ್ರತಿಭಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಟಿಎಂಸಿಯನ್ನು ಭಷ್ಟ ಎನ್ನುವ ಮೋದಿ ಕನ್ನಡಿ ನೋಡಿಕೊಳ್ಳಬೇಕು; ಅವರ ಪಕ್ಷ ಡಕಾಯಿತರಿಂದ ತುಂಬಿದೆ: ಮಮತಾ

0
ಪಶ್ಚಿಮ ಬಂಗಾಳದಲ್ಲಿ ಕೇಂದ್ರ ತಂಡಗಳು ನಡೆಸಿರುವ ತನಿಖೆಗಳ ಕುರಿತು ಶ್ವೇತಪತ್ರ ಹೊರಡಿಸುವಂತೆ ಒತ್ತಾಯಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, "ತಮ್ಮ ಟಿಎಂಸಿ ಭ್ರಷ್ಟಾಚಾರದ ಆರೋಪ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ಕನ್ನಡಿಯಲ್ಲಿ...