ಮುಸ್ಲಿಂ ವ್ಯಕ್ತಿಯನ್ನು, ದಲಿತರನ್ನು, ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದು ನಾವೇ (ವಾಟ್ಸಾಪ್‌ನಲ್ಲಿ ಬಂದಿದ್ದು) ಎಂಬುದಾಗಿ ಟ್ವೀಟ್ ಮಾಡಿದ್ದ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಸಾಮಾಜಿಕ ಜಾಲತಾಣಗಳಲ್ಲಿ ವಾಟ್ಸಾಪ್ ಯೂನಿವರ್ಸಿಟಿಯ ವಿಧೇಯ ವಿದ್ಯಾರ್ಥಿ ಎಂದು ಕರೆದು ವ್ಯಂಗ್ಯವಾಡಲಾಗಿದೆ.
ಮುಸ್ಲಿಂ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದ್ದು ನಾವೇ, ದಲಿತ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದ್ದೂ ನಾವೇ, ಇಂದು ಮಹಿಳೆ ಅದೂ ಆದಿವಾಸಿ ಬುಡಕಟ್ಟು ಜನಾಂಗದ ಮಹಿಳೆಯನ್ನು ರಾಷ್ಟ್ರಪತಿ ಮಾಡುವುದು ನಾವೇ… ಏಕೆಂದರೆ ನಾವು ಜಾತಿವಾದಿಗಳಲ್ಲಾ-ರಾಷ್ಟ್ರವಾದಿಗಳು. (ವಾಟ್ಸಪ್‌ನಲ್ಲಿ ಬಂದಿದ್ದು) ಎಂದು ಮಂಗಳವಾರ ಸಚಿವರು, ವಿಧಾನಪರಿಷತ್ ಸಭಾನಾಯಕರು ಆದ ಕೋಟಾ ಶ್ರೀನಿವಾಸ ಪೂಜಾರಿಯವರು ಟ್ವೀಟ್ ಮಾಡಿದ್ದರು.
ಆ ಟ್ವೀಟ್‌ಗೆ ನೂರಾರು ಜನರು ಪ್ರತಿಕ್ರಿಯಿಸಿ ನೀವು ತಪ್ಪು ಮಾಹಿತಿ ನೀಡುತ್ತಿದ್ದೀರಿ ಎಂದಿದ್ದಾರೆ. “ಬಿಜೆಪಿಯವರೆಲ್ಲರೂ ವಾಟ್ಸಾಪ್ ಯೂನಿವರ್ಸಿಟಿಯ ವಿಧೇಯ ವಿದ್ಯಾರ್ಥಿಗಳು, ಅದೇ ಅವರ ಜ್ಞಾನದ ಮೂಲ! ಕೋಟಾ ಶ್ರೀನಿವಾಸ್ ಪೂಜಾರಿ ಅವರೇ, ವಾಟ್ಸಾಪ್ ಬಿಟ್ಟು ಪುಸ್ತಕಗಳನ್ನು ಓದಿ ಜ್ಞಾನಾರ್ಜನೆ ಮಾಡಿಕೊಳ್ಳಿ, ನೀವು ಮೊದಲಲ್ಲ, ಇವರೆಲ್ಲ ಮೊದಲೇ ರಾಷ್ಟ್ರಪತಿಗಳಾಗಿದ್ದಾರೆ. ಜಾಕಿರ್ ಹುಸೇನ್(ಮುಸ್ಲಿಂ), ಆರ್.ಕೆ ನಾರಾಯಣ್(ದಲಿತ), ಪ್ರತಿಭಾ ಪಾಟೀಲ್ ಮಹಿಳೆ” ಎಂದು ಶಿವಶೆಟ್ಟಿ ಎಂಬುವವರು ಪ್ರತಿಕ್ರಿಯೆ ನೀಡಿದ್ದಾರೆ.
ಮುಸ್ಲಿಂ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದ್ದು ನಾವೇ,
ದಲಿತ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದ್ದೂ ನಾವೇ,
ಇಂದು ಮಹಿಳೆ ಅದೂ ಆದಿವಾಸಿ ಬುಡಕಟ್ಟು ಜನಾಂಗದ ಮಹಿಳೆಯನ್ನು ರಾಷ್ಟ್ರಪತಿ ಮಾಡುವುದು ನಾವೇ…
ಏಕೆಂದರೆ ನಾವು ಜಾತಿವಾದಿಗಳಲ್ಲಾ-ರಾಷ್ಟ್ರವಾದಿಗಳು.
(ವಾಟ್ಸಪ್‌ನಲ್ಲಿ ಬಂದಿದ್ದು)— Kota Shrinivas Poojari (@KotasBJP) June 21, 2022
ಸ್ವತಂತ್ರ ಭಾರತದ ಮೊದಲ ಮುಸ್ಲಿಂ ರಾಷ್ಟ್ರಪತಿ : ಝಾಕಿರ್ ಹುಸೇನ್, ಸ್ವತಂತ್ರ ಭಾರತದ ಮೊದಲ ಸಿಖ್ ಧರ್ಮದ ರಾಷ್ಟ್ರಪತಿ : ಗ್ಯಾನಿ ಜೈಲ್ ಸಿಂಗ್, ಸ್ವತಂತ್ರ ಭಾರತದ ಮೊದಲ ದಲಿತ ರಾಷ್ಟ್ರಪತಿ : ಕೆ ಆರ್ ನಾರಾಯಣನ್, ಹಾಗೆ, ಸ್ವತಂತ್ರ ಭಾರತದ ಮೊದಲ ಮಹಿಳಾ ರಾಷ್ಟ್ರಪತಿ : ಪ್ರತಿಭಾ ಪಾಟೀಲ್ ಎಂದು ಇರ್ಷಾದ್ ಎಂಬುವವರು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಮುಖಂಡ, ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಹ ಪ್ರತಿಕ್ರಿಯೆ ನೀಡಿದ್ದು, ವಾಟ್ಸ್‌ಅಪ್‌ನಲ್ಲಿ ಬಂದಿರುವುದನ್ನು ಪೋಸ್ಟ್ ಮಾಡುವ ಮುನ್ನ ಇತಿಹಾಸ ಓದಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. “ವಾಟ್ಸ್‌ಅಪ್ ಯೂನಿವರ್ಸಿಟಿಯ ವಿಧೇಯ ವಿದ್ಯಾರ್ಥಿಗಳಾದ BJPಯವರ ಜ್ಞಾನದ ಮಟ್ಟವಿದು.ಕೋಟಾ ಶ್ರೀನಿವಾಸ ಪೂಜಾರಿಯವರೆ, “ಸಚಿವರಾಗಿದ್ದುಕೊಂಡು ವಾಟ್ಸ್‌ಅಪ್‌ನಲ್ಲಿ ಬಂದಿದನ್ನು ಯಥಾವತ್ತಾಗಿ ಪೋಸ್ಟ್ ಮಾಡುತ್ತಾರೆಂದರೆ ಅವರ ಬುದ್ದಿಗೆ ಎಷ್ಟು ಮಂಕು ಕವಿದಿರಬಹುದು? ಪೂಜಾರಿಯವರೆ ವಾಟ್ಸ್‌ಅಪ್‌ನಲ್ಲಿ ಬಂದಿರುವುದನ್ನು ಪೋಸ್ಟ್ ಮಾಡುವ ಮುನ್ನ ಇತಿಹಾಸ ಓದಿಕೊಳ್ಳಿ” ಎಂದಿದ್ದಾರೆ.
1
ವಾಟ್ಸ್‌ಅಪ್ ಯೂನಿವರ್ಸಿಟಿಯ ವಿಧೇಯ ವಿದ್ಯಾರ್ಥಿಗಳಾದ BJPಯವರ ಜ್ಞಾನದ ಮಟ್ಟವಿದು.@KotasBJP ಸಚಿವರಾಗಿದ್ದುಕೊಂಡು ವಾಟ್ಸ್‌ಅಪ್‌ನಲ್ಲಿ ಬಂದಿದನ್ನು ಯಥಾವತ್ತಾಗಿ ಪೋಸ್ಟ್ ಮಾಡುತ್ತಾರೆಂದರೆ ಅವರ ಬುದ್ದಿಗೆ ಎಷ್ಟು ಮಂಕು ಕವಿದಿರಬಹುದು?
ಪೂಜಾರಿಯವರೆ ವಾಟ್ಸ್‌ಅಪ್‌ನಲ್ಲಿ ಬಂದಿರುವುದನ್ನು ಪೋಸ್ಟ್ ಮಾಡುವ ಮುನ್ನ ಇತಿಹಾಸ ಓದಿಕೊಳ್ಳಿ. pic.twitter.com/2fVRYL4GtV— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) June 23, 2022
ರಾಷ್ಟ್ರದ ಮೊದಲ ಮುಸ್ಲಿಂ ರಾಷ್ಟ್ರಪತಿ ಕಾಂಗ್ರೆಸ್‌ನ ಕೊಡುಗೆ! ರಾಷ್ಟ್ರದ ಮೊದಲ ಸಿಖ್ ರಾಷ್ಟ್ರಪತಿ ಕಾಂಗ್ರೆಸ್‌ನ ಕೊಡುಗೆ! ರಾಷ್ಟ್ರದ ಮೊದಲ ದಲಿತ ರಾಷ್ಟ್ರಪತಿ ಕಾಂಗ್ರೆಸ್‌ನ ಕೊಡುಗೆ! ಅಷ್ಟೆ ಏಕೆ, ಮೊದಲ ಮಹಿಳಾ ರಾಷ್ಟ್ರಪತಿಯ ಕೊಡುಗೆಯೂ ಕಾಂಗ್ರೆಸ್‌ನದ್ದೆ! ಆದರೆ ಕಾಂಗ್ರೆಸ್ ಯಾವತ್ತೂ ಇದನ್ನು ಪ್ರಚಾರಕ್ಕೆ ಬಳಸಲಿಲ್ಲ. ಇದೇ ವ್ಯತ್ಯಾಸ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಅಲ್ಲದೆ ಬಹಳಷ್ಟು ಜನ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನಿಡಿದ್ದು, ದಯವಿಟ್ಟು ವಾಟ್ಸಾಪ್ ಯೂನಿವರ್ಸಿಟಿಯಿಂದ ಹೊರಬನ್ನಿ ಎಂದು ಸಲಹೆ ನೀಡಿದ್ದಾರೆ.
ರಿ ಪೂಜಾರಿ ಯವರೇ, ಒಬ್ಬ ಮಂತ್ರಿಯಾಗಿ whatsapp ನಲ್ಲಿ ಬರುವ snippets ಗಳನ್ನ ಫಾರ್ವರ್ಡ್ ಮಾಡುವದು ಸರೀನಾ?
ಸಾಧ್ಯವಾದರೆ, ನಿಮ್ಮ ಪಕ್ಷದ ವತಿಯಿಂದ ಅಧಿಕೃತ ಪ್ರಕಟಣೆ ಹೊರಡಿಸಿ.
ಧನ್ಯವಾದ.🙏— Naa.Na.He. | ನಾ.ನ.ಹೆ. (@nnhebbar) June 23, 2022
ಪುಸ್ತಕಗಳನ್ನು ಓದಿ ಮೊದಲ ಸ್ತರದ ಮಾಹಿತಿಯನ್ನು ಪಡೆಯದೆ ವಾಟ್ಸಾಪ್‌ನಲ್ಲಿ ಬಂದಿದ್ದೆಲ್ಲ ನಿಜ ಎಂದು ನಂಬಿ ವಾದಿಸುವವರನ್ನು ವಾಟ್ಸಾಪ್ ಯೂನಿವರ್ಸಿಟಿಯಿಂದ ಬಂದಿದ್ದೀರಾ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ: ಚಾಮರಾಜಪೇಟೆ ಈದ್ಗಾ ಮೈದಾನ ಬಿಬಿಎಂಪಿಗೆ ಸೇರಿಲ್ಲ: ಆಯುಕ್ತರ ಸ್ಪಷ್ಟನೆ


