Homeಕರ್ನಾಟಕಕಾಳಿ ನದಿ ಮೇಲೆ ಸಚಿವ ನಿರಾಣಿ ಸಹೋದರರ ಕಣ್ಣು!

ಕಾಳಿ ನದಿ ಮೇಲೆ ಸಚಿವ ನಿರಾಣಿ ಸಹೋದರರ ಕಣ್ಣು!

ಇದು ಮತ್ತೊಂದು ಎತ್ತಿನ ಹೊಳೆ ಯೋಜನೆಯಾಗಿ ಹಾಳಾಗುವುದರಲ್ಲಿ ಅನಮಾನವೇ ಇಲ್ಲ; ನದಿ ಹರಿವಿನ ವಿರುದ್ಧ ದಿಕ್ಕಿಗೆ ನದಿ ತಿರುಗಿಸುವ ಪ್ರಯತ್ನವೇ ಅವೈಜ್ಞಾನಿಕ ಎಂದು ಪರಿಸರ ತಜ್ಞರು ಹೇಳುತ್ತಾರೆ.

- Advertisement -
- Advertisement -

ಕಾಳಿ-ಮಲಪ್ರಭಾ-ಘಟಪ್ರಭಾ ನದಿ ಜೋಡಣೆಗೆ ಉತ್ತರ ಕನ್ನಡದಲ್ಲಿ ವಿರೋಧ ವ್ಯಕ್ತವಾಗಿದೆ. ಕಾಳಿ ನದಿ ಉತ್ತರ ಕನ್ನಡದ ಕಾರವಾರ, ಜೋಯಿಡಾ, ಹಳಿಯಾಳ ಮತ್ತು ದಾಂಡೇಲಿ ತಾಲ್ಲೂಕಿನ ಜೀವಜಾಲದ ಜೀವನ! ಈ ತಾಲೂಕಿನ ಬದುಕಿನೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಂಡಿರುವ ಕಾಳಿ ಇಲ್ಲದಿದ್ದರೆ ಎಲ್ಲವೂ ಖಾಲಿ-ಖಾಲಿ!! ಉತ್ತರ ಕರ್ನಾಟಕದ ಸಕ್ಕರೆ ಫ್ಯಾಕ್ಟರಿ ಲಾಬಿಯ ಕಣ್ಣು ಕಾಳಿ ಮೇಲೆ ಬಿದ್ದಾಗಿಂದ ಅದರ ಎರಡೂ ದಂಡೆ ಮೇಲಿರುವ ಮಂದಿ ಕಂಗಾಲಾಗಿ ಹೋಗಿದ್ದಾರೆ. ಮುರುಗೇಶ್ ನಿರಾಣಿ ಬೃಹತ್ ಕೈಗಾರಿಕಾ ಮಂತ್ರಿಯಾದಾಗೆಲ್ಲ ಕಾಳಿಯನ್ನು ಮಲಪ್ರಭಾ ಮತ್ತು ಘಟಪ್ರಭಾ ನದಿಗೆ ಜೋಡಿಸಿ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ನೀರೊದಗಿಸುವ ಕಾರ್ಯಸಾಧ್ಯವಲ್ಲದ ಹುಚ್ಚು ಯೋಜನೆ ಕಾರ್ಯಗತಗೊಳಿಸುವ ಸಂಚೊಂದು ಒಳಗೊಳಗೇ ಬಿರುಸಿಂದ ನಡೆಯುತ್ತದೆಂದು ಕಾಳಿ ನದಿ ಪಾತ್ರದ ಮಂದಿ ಆತಂಕಿತರಾಗುತ್ತಾರೆ.

ಮೊನ್ನೆ ನಿರಾಣಿ ಮತ್ತೆ ದೊಡ್ಡ ಕೈಗಾರಿಕಾ ಮಂತ್ರಿಯಾಗುತ್ತಲೇ ತಮ್ಮ ಜೀವ ನದಿಗೆ ಕುತ್ತು ಬರುವ ಭಯಕ್ಕೆ ಕಾಳಿ ಮಕ್ಕಳು ಬಿದ್ದಿದ್ದಾರೆ. 2019ರಲ್ಲಿ ನಿರಾಣಿ ಸಹೋದರರಾದ ಮಂತ್ರಿ ಮುರುಗೇಶ್, ಎಮ್‌ಎಲ್‌ಸಿ ಹನುಮಂತ ಮತ್ತು ಉದ್ಯಮಿ ಸಂಗಮೇಶ್‌ರ ನಿರಾಣಿ ಪೌಂಡೇಶನ್ ಘಟಪ್ರಭಾ-ಮಲಪ್ರಭಾ ನದಿಗಳಿಗೆ ಉತ್ತರ ಕನ್ನಡದ ಕಾಳಿ ನದಿಯ 25 ಟಿಎಮ್‌ಸಿ ನೀರನ್ನು ಹರಿಸುವ ವಿಸ್ತ್ರತ ವರದಿಯೊಂದನ್ನು ಸರಕಾಕ್ಕೆ ನೀಡಿತ್ತು. ಏತ ನೀರಾವರಿ ಯೋಜನೆಯಿಂದ ಘಟಪ್ರಭಾ ಮತ್ತು ಮಲಪ್ರಭಾಕ್ಕೆ ಕಾಳಿ ನೀರನ್ನು ತುಂಬಿದರೆ ಬೆಳಗಾವಿ, ಧಾರವಾಡ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ಸಮಗ್ರ ಕುಡಿಯುವ ನೀರು ಮತ್ತು ಸುಮಾರು 600 ಕೆರೆಗಳ ಪುನಶ್ಚೇತನ ಯೋಜನೆಗಳನ್ನು ಕೈಗೊಳ್ಳಬಹುದೆಂಬ ಆಕರ್ಷಕ ವರದಿ ನಿರಾಣಿ ಪೌಂಡೇಶನ್ ತಯಾರು ಮಾಡಿತ್ತು. ಸದ್ರಿ ಯೋಜನೆಗೆ ಒಪ್ಪಿಗೆ ಪಡೆಯಲು ಸಚಿವ ನಿರಾಣಿ ಆರು ಬಾರಿ ಕೇಂದ್ರ ಸರಕಾರದ ಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆನ್ನಲಾಗಿದೆ.

PC : Kannada News – News18, (ಮುರುಗೇಶ್ ನಿರಾಣಿ)

ಘಟಪ್ರಭಾ-ಮಲಪ್ರಭಾದಲ್ಲಿ ನೀರಿನ ಹರಿವು ಕಡಿಮೆಯಾಗಿರುವುದರಿಂದ ಈ ಯೋಜನೆ ಜಾರಿಗೆ ಬಯಲು ಸೀಮೆ ಕಡೆಯ ಕೆಲವು ಮಠಾಧೀಶರು ಮತ್ತು ರೈತ ನಾಯಕರು ಒತ್ತಾಯಿಸುತ್ತಿದ್ದಾರೆ. ಆದರೆ ಉತ್ತರ ಕನ್ನಡದಲ್ಲಿ ಸದ್ರಿ ನದಿ ತಿರುವು ಯೋಜನೆ ವಿರುದ್ಧ ದೊಡ್ಡ ಕೂಗೆದದ್ದಿದೆ. ಕಾಳಿಯ 140 ಟಿಎಮ್‌ಸಿ ನೀರು ವಿದ್ಯುತ್ ಉತ್ಪಾದನೆಯ ಬಳಿಕ ವ್ಯರ್ಥವಾಗಿ ಸಮುದ್ರ ಸೇರುತ್ತದೆಂಬುದು ನಿರಾಣಿ ಬಳಗದ ವಾದ. ಆದರೆ ಸೂಪಾ ಜಲಾಶಯದ ನೀರಿನ ಸಂಗ್ರಹದ ಸಾಮರ್ಥ್ಯವೇ 144 ಟಿಎಮ್‌ಸಿ; ನಿರಾಣಿಗಳ ವರದಿಯಲ್ಲಿ ಹೇಳಿರುವಷ್ಟು ಸುಲಭವಾಗಿ ಕಾಳಿ ನೀರನ್ನು ಬಯಲು ಸೀಮೆಯೆಡೆ ತಿರುಗಿಸಲಾಗದು. ಇದು ಮತ್ತೊಂದು ಎತ್ತಿನ ಹೊಳೆ ಯೋಜನೆಯಾಗಿ ಹಾಳಾಗುವುದರಲ್ಲಿ ಅನಮಾನವೇ ಇಲ್ಲ; ನದಿ ಹರಿವಿನ ವಿರುದ್ಧ ದಿಕ್ಕಿಗೆ ನದಿ ತಿರುಗಿಸುವ ಪ್ರಯತ್ನವೇ ಅವೈಜ್ಞಾನಿಕ ಎಂದು ಪರಿಸರ ತಜ್ಞರು ಹೇಳುತ್ತಾರೆ.

ಕಾಳಿ ಜನ್ಮ ತಳೆಯುವ ಜೋಯಿಡಾದ ಡಿಗ್ಗಿ ಗ್ರಾಮದಿಂದ ಕಾರವಾರದಲ್ಲಿ ಅರಬ್ಬಿ ಸಮುದ್ರ ಸೇರುವ ತನಕ ಐದು ಜಲ ವಿದ್ಯುತ್ ತಯಾರಿಸುವ ಆಣೆಕಟ್ಟುಗಳಿವೆ. ಈ ಜಲಾಶಯಗಳಲ್ಲಿ ಸಂಗ್ರಹವಾಗುವ ನೀರು ವಿದ್ಯುತ್ ಉತ್ಪಾದನೆ ನಂತರ ಸಮುದ್ರ ಸೇರುತ್ತದೆ. ಇದು ನಿರಾಣಿಗಳು ಹೇಳುವಂತೆ ವ್ಯರ್ಥ ನೀರಲ್ಲ. ಸಮುದ್ರದ ಲವಣಾಂಶ ಕಾಪಾಡಲು ಸಿಹಿ ನಿರು ಬೇಕು. ಆಗ ಮಾತ್ರ ಸಮುದ್ರದಲ್ಲಿರುವ ಜಲಚರಗಳು ಬದುಕಲು ಸಾಧ್ಯವೆಂದು ಅಧ್ಯಯನ ವರದಿಗಳು ಹೇಳುತ್ತವೆ. ನದಿಯ ಇಕ್ಕೆಲದಲ್ಲಿ ಕುಡಿಯುವ ನೀರಿಗಾಗಿ ಹಲವು ಚೆಕ್ ಡ್ಯಾಮ್‌ಗಳನ್ನು ನಿರ್ಮಿಸಲಾಗಿದೆ. ಕಾಳಿ ದಡದ ಮೇಲೆಯೇ ಕೈಗಾ ಅಣು ಸ್ಥಾವರವಿದ್ದು ಅದರ ಶೀಥಲೀಕರಣಕ್ಕೆ ಕಾಳಿ ನೀರನ್ನೆ ಬಳಸಲಾಗುತ್ತಿದೆ. ಹಳಿಯಾಳ ಭಾಗದ ರೈತರಿಗೆ ಅನಿವಾರ್ಯವಾದ ಕಾಳಿ ನೀರಾವರಿ ಯೋಜನೆಯಿದೆ. ಈ ನದಿ ಪಶ್ಚಿಮ ಘಟ್ಟದ ಜೀವ ವೈವಿದ್ಯತೆಯ ಮತ್ತು ತೀರಾ ಸೂಕ್ಷ್ಮಜೀವವಲಯವಾದ ಮಧ್ಯ ಪಶ್ಚಿಮ ಘಟ್ಟ ಪ್ರದೇಶದಿಂದ ಹರಿಯುತ್ತಿದೆ. ಇಂಥ ನದಿಯನ್ನು ತಿರುಗಿಸಲು ಪ್ರಯತ್ನಿಸುವುದು ಅಪಾಯಕಾರಿ ದುಸ್ಸಾಹಸವೆಂದು ಪರಿಸರ ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.

ಕಾಳಿ ನೀರು ಬಯಲು ಸೀಮೆಯೆಡೆ ತಿರುಗಿಸಿದರೆ ನದಿ ಪಾತ್ರದಲ್ಲಿ ಹರಿವು ಸೊರಗಿ ಕಣಿವೆ ಬರಡಾಗುವುದು ಖಂಡಿತ. ಅಷ್ಟೇ ಅಲ್ಲ, ನೀರು ಬಯಲು ಸೀಮೆಗೂ ತಲುಪದೆ ಯೋಜಿತ ಉದ್ದೇಶ ವಿಫಲವಾಗಲಿದೆ.

ಸ್ಥಳಿಯ ಜೀವ ಜಾಲವನ್ನು ಛಿದ್ರಗೊಳಿಸುವ ಈ ನದಿ ತಿರುವು ಯೋಜನೆಗೆ ಅವಕಾಶ ಕೊಡುವುದಿಲ್ಲವೆಂದು ಕಾಳಿ ತೀರದ ಮಂದಿ ಒಂದಾಗಿ ಒಕ್ಕೊರಳಲ್ಲಿ ಹೇಳುತ್ತಿದ್ದಾರೆ. ಕಾಳಿ ಕಣಿವೆ ಇಡೀ ಭಾರತಕ್ಕೆ ಮುಂಗಾರು ಮಳೆ ತರುವ ಪಶ್ಚಿಮ ಘಟ್ಟದ ಸೂಕ್ಷ್ಮಾತಿ ಸೂಕ್ಷ್ಮ ಪ್ರದೇಶ ಅದರಲ್ಲೂ ಜೋಯಿಡಾ ಮತ್ತು ದಾಂಡೇಲಿ ಭಾಗಗಳು ಸೂಕ್ಷ್ಮಜೀವ ವಲಯ ವ್ಯಾಪ್ತಿಯಲ್ಲಿವೆ. ಯುನೆಸ್ಕೊ ಪಶ್ಚಿಮ ಘಟ್ಟವನ್ನು ಪಾರಂಪರಿಕ ತಾಣವೆಂದು ಘೋಶಿಸಿದೆ. ಕಾಳಿ ಕಣಿವೆ ಹುಲಿ ಸಂರಕ್ಷಿತ ಪ್ರದೇಶವಾದರೆ ಜೋಯಿಡಾ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿದೆ. ಕಾಡು ಪ್ರಾಣಿಗಳಿಗೆ ಕಾಳಿ ನೀರೆ ಸಂಜೀವಿನಿ. ಇಂಥ ಜೀವ ಸಂಕುಲದ ಉಸಿರಾದ ನದಿ ನೀರನ್ನು ಬಲವಂತವಾಗಿ ತಿರುಗಿಸಿದರೆ ಇಡೀ ದೇಶದ ಪರಿಸರದ ಮೇಲೆ ದುಶ್ಪರಿಣಾಮವಾಗುತ್ತದೆಂದು ಹಲವು ಅಧ್ಯಯನಗಳು ಸ್ಪಷ್ಟವಾಗಿ ಹೇಳಿವೆ.

PC : Prajavani , (ಸಂಗಮೇಶ ನಿರಾಣಿ)

ನಿರಾಣಿ ಸಹೋದರರು ನದಿ ಜೋಡಣೆ ವರದಿ ಸಿದ್ದಪಡಿಸುವ ಮೊದಲು ಪಶ್ಚಿಮ ಘಟ್ಟದ ಪರಿಸರದ ಬಗೆಗಿನ ಮಾಧವ ಗಾಡ್ಗೀಳ್ ವರದಿ ಅಥವಾ ಕಸ್ತೂರಿ ರಂಗನ್ ವರದಿ ಓದಿದಹಾಗಿಲ್ಲ; ತಮ್ಮ ಸಕ್ಕರೆ ಉದ್ಯಮದ ಹಿತಾಸಕ್ತಿ ಒಂದನ್ನೆ ಗಮನದಲ್ಲಿಟ್ಟುಕೊಂಡು ಅವೈಜ್ಞನಿಕ ನದಿ ತಿರುವು ಯೋಜನಾವರದಿ ತಯಾರಿಸಿದ್ದಾರೆಂದು ದಾಂಡೇಲಿಯ ಪರಿಸರ ಸಂರಕ್ಷಣಾ ಸಂಸ್ಥೆಯ ಕಾರ್ಯದರ್ಶಿ ಕೀರ್ತಿ ಗಾಂವ್ಕರ್, ನಗರ ಸಭಾ ಸದಸ್ಯ ಮೋಹನ ಹಲವಾಯಿ, ದಾಂಡೇಲಿ ಪ್ರವಾಸೋದ್ಯಮ ಸಂಘದ ಸಲಹೆಗಾರ ಅನಿಲ್ ದಂಡಗಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಯಲು ಸೀಮೆಯ ಐದು ಜಿಲ್ಲೆಗಳಿಗೆ ಕುಡಿಯುವ ನೀರೊದಗಿಸು ಮತ್ತು ಕೆರೆಗಳನ್ನು ತುಂಬಿಸುವ ನೆಪದಲ್ಲಿ ಕಬ್ಬು ಬೆಳೆಯಲು ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಬೇಕಾದ ನೀರು ಪಡೆಯಲು ಸಕ್ಕರೆ ಲಾಬಿ ಕಾಳಿ ನೀರಿಗಾಗಿ ಹೊಂಚು ಹಾಕಿದೆ ಎಂಬುದು ಉತ್ತರ ಕನ್ನಡದಲ್ಲಿ ಚಾಲ್ತಿಯಲ್ಲಿರುವ ಅಭಿಪ್ರಾಯ. ಈ ಕಾರಣಕ್ಕಾಗಿಯೆ ಸಕ್ಕರೆ ಉದ್ಯಮಿಯಾದ ಸಚಿವ ನಿರಾಣಿ ನಿರಂತರವಾಗಿ ಕಾಳಿ ನೀರನ್ನು ಘಟಪ್ರಭಾ-ಮಲಪ್ರಭಾ ನದಿಗೆ ತುಂಬಿಸುವ ಪ್ರಯತ್ನ ನಡೆಸಿದ್ದಾರೆಂದು ಜಿಲ್ಲೆಯ ಪರಿಸರ ಹೋರಟಗಾರರು ನೇರವಾಗಿಯೇ ಹೇಳುತ್ತಾರೆ.


ಇದನ್ನೂ ಓದಿ: ಅಭಿವೃದ್ಧಿ ಭ್ರಮೆಯ ಮತ್ತೊಂದು ಪ್ರಯೋಗ ; ಅಘನಾಶಿನಿ ನದಿ ನೀರನ್ನು ಬಯಲುಸೀಮೆಗೊಯ್ಯುವ ಯೋಜನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...