ದೇಶದಲ್ಲಿ ಹೆಚ್ಚುತ್ತಿರುವ ಮಾರ್ಯಾದೆ ಹತ್ಯೆ, ಗುಂಪು ಹಲ್ಲೆಗಳನ್ನು ತಡೆಯುವ ಉದ್ದೇಶದಿಂದ ಕಠಿಣ ಕಾನೂನುಗಳನ್ನು ಇಂದು ರಾಜಸ್ಥಾನದ ಅಸೆಂಬ್ಲಿಯಲ್ಲಿ ಜಾರಿಗೊಳಿಸಲಾಗಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಮರ್ಯಾದೆ ಹೆಸರಿನಲ್ಲಿ ನಡೆಯುವ ಘಟನೆಗಳಿಗೆ ಜಾಮೀನು ರಹಿತ, 5 ಲಕ್ಷದವರೆಗಿನ ದಂಡ ವಿಧಿಸುವ ಮಸೂದೆಯನ್ನು ಇಂದು ಪಾಸ್ ಮಾಡಲಾಗಿದೆ. ಮಸೂದೆಯಲ್ಲಿ ಆರೋಪಿಗಳಿಗೆ ಮರಣದಂಡನೆ ವಿಧಿಸುವ ಅವಕಾಶವಿದೆ. ಮರ್ಯಾದೆ ಹೆಸರಿನ ಹಿಂಸಾಚಾರ ಮತ್ತು ಕ್ರಿಮಿನಲ್ ಬೆದರಿಕೆಗಳನ್ನು ಕಠಿಣವಾಗಿ ಶಿಕ್ಷಿಸುವುದು ಇದರ ಉದ್ದೇಶ ಎಂದಿದ್ದಾರೆ.
Bill introduced in #RajasthanAssembly today to make #HonourKilling a cognizable, non bailable and non compoundable offence with life imprisonment and fine of upto Rs 5 lakh.
— Ashok Gehlot (@ashokgehlot51) July 30, 2019
ಅದೇ ಮಾದರಿಯಲ್ಲಿ ಗುಂಪು ಹಲ್ಲೆ/ಹತ್ಯೆಗಳ (Mob lynching) ವಿರುದ್ಧದ ಮಸೂದೆಯನ್ನು ಇಂದು ಜಾರಿಗೊಳಿಸಲಾಗಿದೆ. ಅದರಂತೆ ಆರೋಪಿಗಳಿಗೆ ಜಾಮೀನು ರಹಿತ, 5 ಲಕ್ಷದವರೆಗಿನ ದಂಡದ ಜೊತೆಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಬಹುದೆಂದು ತಿಳಿಸಿದ್ದಾರೆ. ಗುಂಪು ಹಲ್ಲೆಗಳನ್ನು ತಡೆಯಲು ನೋಡಲ್ ಅಧಿಕಾರಿಗಳನ್ನು ನೇಮಿಸಲು ಈ ಮಸೂದೆಯಲ್ಲಿ ಅವಕಾಶವಿದೆ ಎಂದಿದ್ದಾರೆ.
Mob lynchings result in loss of livelihood, injuries and death of persons at the hands of mobs. The purpose of the bill is to nip the evil in the bud, and to prevent spreading of hatred or incitement to mob lynching by creating special offences against it.#Rajasthan
— Ashok Gehlot (@ashokgehlot51) July 30, 2019
ಮಾಬ್ ಲಿಂಚಿಂಗ್ ನಿಂದ ಅಮಾಯಕರು ತಮ್ಮ ಜೀವನೋಪಾಯವನ್ನೇ ಕಳೆದುಕೊಳ್ಳುತ್ತಿದ್ದಾರೆ. ಗಂಭೀರ ಹಲ್ಲೆಗಳ ಜೊತೆಗೆ ಸಮೂಹಗಳಿಂದ ವ್ಯಕ್ತಿ ಸಾಯುವ ಪರಿಸ್ಥಿತಿ ಬಂದಿದೆ. ಹಾಗಾಗಿ ಈ ಮಸೂದೆಯ ಉದ್ದೇಶ ಗುಂಪು ಹಲ್ಲೆಗಳನ್ನು ಮೊಳಕೆಯಲ್ಲಿಯೇ ಚಿವುಟುವುದಾಗಿದೆ. ದ್ವೇಷ ಹರಡುವುದನ್ನು ತಡಯುವುದಾಗಿದೆ. ಜೊತೆಗೆ ಗುಂಪು ಹಲ್ಲಗೆಳನ್ನು ಮಾಡುವುದು ಅಪರಾಧ ಎಂಬ ಎಚ್ಚರಿಕೆಯನ್ನು ಸಮೂಹಕ್ಕೆ ನೀಡುವುದಾಗಿದೆ ಎಂದು ಸಹ ಅವರು ಟ್ವೀಟ್ ಮಾಡಿದ್ದಾರೆ.


