ಮಾಜಿ ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಅನುರಾಗ್ ಠಾಕೂರ್ ಮತ್ತು ನಾರಾಯಣ ರಾಣೆ ಅವರು ಮೋದಿ 3.0 ಕ್ಯಾಬಿನೆಟ್‌ನ ಭಾಗವಾಗುವುದಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಸ್ಮೃತಿ ಇರಾನಿ ಅವರು ಉತ್ತರ ಪ್ರದೇಶದ ಅಮೇಥಿಯಿಂದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಷ್ಠಾವಂತ ಕಿಶೋರಿ ಲಾಲ್ ಶರ್ಮಾ ವಿರುದ್ಧ 1.6 ಲಕ್ಷ ಮತಗಳಿಂದ ಸೋತಿದ್ದರು. ಅವರು ಮೋದಿ ಸರ್ಕಾರದ ಎರಡನೇ ಅವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿದ್ದರು. ಐದು ವರ್ಷಗಳ ಹಿಂದೆ ಗಾಂಧಿ ಕುಟುಂಬದ ಭದ್ರಕೋಟೆಯಲ್ಲಿ ರಾಹುಲ್ ಗಾಂಧಿಯನ್ನು ಸೋಲಿಸಿದ್ದರು.
ಹಿಮಾಚಲ ಪ್ರದೇಶದ ಹಮೀರ್‌ಪುರದಿಂದ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಿರುವ ಅನುರಾಗ್ ಠಾಕೂರ್ ಅವರು ಕ್ರೀಡೆ ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆಗಳನ್ನು ಹೊಂದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಮೈತ್ರಿ ಸರ್ಕಾರದಲ್ಲಿ ಅವರು ಕೇಂದ್ರ ಸಚಿವ ಸಂಪುಟದ ಭಾಗವಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ನಾರಾಯಣ ರಾಣೆ ಅವರು ಮೋದಿ 2.0 ರಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರಾಗಿದ್ದರು. ಅವರು ಮಹಾರಾಷ್ಟ್ರದ ರತ್ನಗಿರಿ-ಸಿಂಧುದುರ್ಗದಿಂದ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದಾರೆ.
ಮೋದಿ ನೂತನ ಸಂಪುಟದ ಭಾಗವಾಗಿರುವ ಬಿಜೆಪಿ ನಾಯಕರು:
ಅಮಿತ್ ಶಾ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ಎಸ್ ಜೈಶಂಕರ್, ನಿತಿನ್ ಗಡ್ಕರಿ, ಮನ್ಸುಖ್ ಮಾಂಡವಿಯಾ, ಪಿಯೂಷ್ ಗೋಯಲ್, ಅಶ್ವಿನಿ ವೈಷ್ಣವ್, ಧರ್ಮೇಂದ್ರ ಪ್ರಧಾನ್, ಭೂಪೇಂದ್ರ ಯಾದವ್, ಪ್ರಲ್ಹಾದ್ ಜೋಶಿ, ಕಿರಣ್ ರಿಜಿಜು, ಸಿಆರ್ ಪಾಟೀಲ್, ಎಲ್ ಮುರುಗನ್, ಹರ್ದೀಪ್ ಪುರಿ, ಎಂಎಲ್ ಖಟ್ಟರ್, ಶಿವರಾಜ್ ಚೌಹಾಣ್, ಗಜೇಂದ್ರ ಶೇಖಾವತ್, ಸುರೇಶ್ ಗೋಪಿ ಮತ್ತು ಜಿತಿನ್ ಪ್ರಸಾದ್.
ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಇತರ ಪಕ್ಷಗಳ ನಾಯಕರಲ್ಲಿ ಎಚ್‌ಡಿ ಕುಮಾರಸ್ವಾಮಿ, ಜಯಂತ್ ಚೌಧರಿ, ಪ್ರತಾಪ್ ಜಾಧವ್, ರಾಮ್ ಮೋಹನ್ ನಾಯ್ಡು, ಸುದೇಶ್ ಮಹತೋ ಮತ್ತು ಲಲ್ಲನ್ ಸಿಂಗ್ ಸೇರಿದ್ದಾರೆ.
ಶಶಿ ತರೂರ್ ವಿರುದ್ಧ ತೀವ್ರ ಪೈಪೋಟಿ ನಡೆಸಿ ಸೋತಿದ್ದ ರಾಜೀವ್ ಚಂದ್ರಶೇಖರ್ ಅವರಿಗೆ ಕೂಡ ಹೊಸ ಸರ್ಕಾರದಲ್ಲಿ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆ ಇದೆ.
ಇದನ್ನೂ ಓದಿ; ಮೋದಿ ಈಗ ‘ನರೇಂದ್ರ ವಿಧ್ವಂಸಕ ಮೈತ್ರಿ’ಕೂಟದ ನಾಯಕ: ಕಾಂಗ್ರೆಸ್ ವಾಗ್ದಾಳಿ


